ಆಧುನಿಕ ಮಹಿಳೆಯರು ತಮ್ಮ ಇತರ ಉಡುಗೆಗಳಿಗೆ ಕೊಡುವಂತೆ ಇನ್ನರ್ವೇರ್ ಕೊಳ್ಳುವಾಗ ಮಹತ್ವ ನೀಡುವುದಿಲ್ಲ. ಆದರೆ ಲಾಂಜರಿ ಕೊಳ್ಳುವಾಗ ಯಾವ ಬಗೆಯ ಎಚ್ಚರಿಕೆ ವಹಿಸಬೇಕು ಎಂಬುದನ್ನು ವಿವರವಾಗಿ ಗಮನಿಸೋಣವೇ…….?
ಆಧುನಿಕ ಮಹಿಳೆಯರು ತಮ್ಮ ಡ್ರೆಸ್, ಫುಟ್ವೇರ್, ಮೇಕಪ್, ಆ್ಯಕ್ಸೆಸರೀಸ್ ಇತ್ಯಾದಿಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಎಲ್ಲವನ್ನೂ ಮ್ಯಾಚ್ ಮಾಡಿ ಖರೀದಿಸುತ್ತಾರೆ. ಆದರೆ ಇನ್ನರ್ವೇರ್ ಅಥವಾ ಲಾಂಜರಿ ಕೊಳ್ಳುವಾಗ, ಯಾವುದಾದರೇನು…..
ಅವು ಒಳವಸ್ತ್ರವಾದ್ದರಿಂದ ಯಾರು ಗಮನಿಸುತ್ತಾರೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಅದು ಸರಿಯಲ್ಲ. ನಿಮ್ಮ ವ್ಯಕ್ತಿತ್ವ ಒಟ್ಟಾರೆ ಇದರಿಂದ ಹೆಚ್ಚು ಕಳೆಗಟ್ಟುತ್ತದೆ. ಹೀಗಾಗಿ ಸಮರ್ಪಕ ಲಾಂಜರಿ ಆರಿಸಿ.
ಇಂಥ ತಪ್ಪು ಬೇಡ
ಸಾಮಾನ್ಯವಾಗಿ ಮಹಿಳೆಯರು ಒಳವಸ್ತ್ರಗಳು ಪೂರ್ತಿ ಹರಿದು ವಿಕಾರ ಆಗುವವರೆಗೂ ಅವನ್ನು ಬಳಸುತ್ತಲೇ ಇರುತ್ತಾರೆ. ಇದು ತಪ್ಪು. ಹರಿಯುವವರೆಗೂ ಕಾಯದೆ, ಒಂದು ಹಂತದ ನಂತರ ಒಳವಸ್ತ್ರ ಬದಲಾಯಿಸುವುದೇ ಸರಿ.
– ಎಷ್ಟೋ ಹೆಂಗಸರಿಗೆ ತಮ್ಮ ಬ್ರಾದ ಕಪ್ ಸೈಜ್ ಗೊತ್ತಿರವುದಿಲ್ಲ. ಆಗ ಅವರು ತಮ್ಮ ಸೈಜ್ಗಿಂತ ದೊಡ್ಡದು ಅಥವಾ ಚಿಕ್ಕದು ಖರೀದಿಸುತ್ತಾರೆ.
– ಎಲ್ಲಾ ಬಗೆಯ ಡ್ರೆಸ್ಗಳಿಗೂ ಒಂದೇ ಬಗೆಯ ಬ್ರಾ ಧರಿಸುವುದು ಸಹ ಲಾಂಜರಿ ಮಿಸ್ಟೇಕ್ ಆಗುತ್ತದೆ. ಈ ಕಾರಣ ಎಷ್ಟೋ ಸಲ ಸಮಾರಂಭಗಳಲ್ಲಿ ಎಲ್ಲರೆದುರು ಸಂಕೋಚಕ್ಕೆ ಸಂದಿಗ್ಧಕ್ಕೆ ಸಿಕ್ಕಿಕೊಳ್ಳಬೇಕಾಗುತ್ತದೆ. ಉದಾ : ಟೈಟ್ ಫಿಟೆಡ್ ಡ್ರೆಸ್ ಯಾ ಟ್ರೌಸರ್ಸ್ನಿಂದ ಪ್ಯಾಂಟಿ ಲೈನ್ ಹೊರಗೆ ಇಣುಕುವುದು, ಬ್ಲ್ಯಾಕ್ ಡ್ರೆಸ್ ಒಳಗಿಂದ ಲೈಟ್ ಬ್ರಾ ಕಾಣಿಸುವುದು ಇತ್ಯಾದಿ.
– ಉತ್ತಮ ಗುಣಮಟ್ಟದ ಲಾಂಜರಿ ಕೊಳ್ಳದೆ ಹೋದರೆ, ಅದರ ಎಲಾಸ್ಟಿಕ್ನಿಂದ ಹಲವು ತರಹದ ತೊಂದರೆ ಆಗಬಹುದು. ಅಂದರೆ ಚರ್ಮದ ಮೇಲೆ ಗುರುತು ಮೂಡುವುದು, ಸಣ್ಣಪುಟ್ಟ ಗುಳ್ಳೆ, ನೋವು, ಉರಿ, ರಾಶೆಸ್ ಇತ್ಯಾದಿ.
– ಮತ್ತೊಂದು ಪ್ರಮುಖ ಮಿಸ್ಟೇಕ್ ಎಂದರೆ ಈ ಒಳವಸ್ತ್ರಗಳನ್ನು ಸರಿಯಾಗಿ ಒಗೆಯದೆ ಇರುವುದು. ಅವಸರದಲ್ಲಿ ಹೇಗೋ ಒಮ್ಮೆ ಕಸಕಿ, ನೀರಲ್ಲಿ ಜಾಲಾಡಿಸಿ ಒಣಗಿಸಿದರೆ ಆಗಿಹೋಯ್ತು. ಹಾಗಲ್ಲ…. ಇನ್ನೂ ಗಮನವಿಟ್ಟು ಶುಚಿಗೊಳಿಸಬೇಕು. ಏಕೆಂದರೆ ಇದು ನೇರವಾಗಿ ಚರ್ಮದ ಸಂಪರ್ಕದಲ್ಲಿರುತ್ತದೆ, ಹಾಗಾಗಿ ಬೆವರನ್ನು ಹೆಚ್ಚು ಹೀರಿಕೊಳ್ಳುತ್ತದೆ. ಸರಿಯಾಗಿ ಶುಚಿಗೊಳಿಸದಿದ್ದರೆ ಸೋಂಕು ಆಗುವ ಸಾಧ್ಯತೆಗಳಿವೆ.
ಲಾಂಜರಿ ಫ್ಯಾಷನ್ ಇನ್ ಔಟ್ಸ್
ಇತ್ತೀಚೆಗೆ ಸಿಂಪಲ್ ಬ್ಲ್ಯಾಕ್ ಲೈಟ್ ಮತ್ತು ಸ್ಕಿನ್ ಕಲರ್ ಲಾಂಜರಿ ಬದಲು ಬಣ್ಣಬಣ್ಣದ ಒಳವಸ್ತ್ರಗಳಿಗೇ ಹೆಚ್ಚಿನ ಮಹತ್ವ.
– ಇಂದು ಬ್ರಾಗೆ ಸ್ಟೈಲಿಶ್ ಲುಕ್ಸ್ ನೀಡಲು ಹೊಸ ಎಕ್ಸಪೆರಿಮೆಂಟ್ ಕ್ರಾಸ್ ಬ್ಯಾಕ್ ಬ್ರಾ ರೂಪದಲ್ಲಿ ಲಭ್ಯವಿದೆ. ಇದರಲ್ಲಿ ಮುಂಭಾಗ ನಾರ್ಮಲ್ ಬ್ರಾ ಟೈಪ್ ಇದ್ದು, ಹಿಂಭಾಗದ ಸ್ಟ್ರಾಪ್ಸ್ ಕ್ರಾಸ್ ಸ್ಟೈಲ್ನಲ್ಲಿರುತ್ತದೆ.
– ಈ ಸ್ಟ್ರಾಪ್ಸ್ ಟ್ರಾನ್ಸ್ ಪರೆಂಟ್ ಕಲರ್ಫುಲ್ ಎರಡೂ ಜನಪ್ರಿಯತೆ ಗಳಿಸಿವೆ.
– ಅನ್ಲೈನ್ಡ್ ಮತ್ತು ನಾನ್ವೈರ್ ಬ್ರಾಗಳೂ ಫ್ಯಾಷನ್ನಲ್ಲಿವೆ.
– ಲಾಂಜರಿ ಫ್ಯಾಷನ್ನಲ್ಲಿ ವೆಲ್ವಟ್, ಸಿಲ್ಕ್, ಶಿಫಾನ್, ಸ್ಯಾಟಿನ್ ಫ್ಯಾಬ್ರಿಕ್ ಟ್ರೆಂಡ್ನಲ್ಲಿವೆ.
– ಲೇಸ್ ನೆಟೆಡ್ ಬ್ರಾ ವಿಶೇಷ ಆಯ್ಕೆಗಳೆನಿಸಿದೆ. ಲೇಸ್ನಲ್ಲಿ ಪ್ಲೇರ್ಗೆ ಹೆಚ್ಚಿನ ಬೇಡಿಕೆ ಇದೆ.
– ಬ್ರೇಕ್ಸ್ ಬ್ರಾ, ಸೆಕ್ಸಿ ಲೇಸ್ ನ್ಯೂಡ್ ಬ್ರಾ ಇತ್ಯಾದಿ ಇಂದು ಫ್ಯಾಷನ್ ಎನಿಸಿವೆ.
ಸ್ಟೈಲ್ ಯುವರ್ ಬ್ಯೂಟಿ
ನಾವು ನಮ್ಮ ಬಾಹ್ಯ ಸೌಂದರ್ಯದ ಕುರಿತಾಗಿ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದಿದ್ದಾಗ, ಆಂತರಿಕ ಸೌಂದರ್ಯವನ್ನು ನಿರ್ಲಕ್ಷಿಸುವುದು ಹೇಗೆ? ಒಳಗಿನಿಂದ ಬ್ಯೂಟಿಫುಲ್ ಕಾನ್ಛಿಡೆಂಟ್ ಎನಿಸಿದಾಗ ಮಾತ್ರ ಬಾಹ್ಯ ಪರ್ಸನಾಲಿಟಿ ಆಕರ್ಷಕ ಎನಿಸಲು ಸಾಧ್ಯ. ಇಂದು ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳು ನಾನಾ ಬಗೆಯ, ಚಿತ್ರವಿಚಿತ್ರ ವಿನ್ಯಾಸಗಳಲ್ಲಿ ಇವನ್ನು ಪ್ರಸ್ತುತಪಡಿಸುತ್ತಿವೆ. ಇದರಲ್ಲಿ ನಿಮ್ಮ ದೇಹ, ಮನಸ್ಸಿಗೊಪ್ಪುವ ಸ್ಟೈಲ್, ಕಲರ್, ಲೇಟೆಸ್ಟ್ ಟ್ರೆಂಡ್, ಪರ್ಫೆಕ್ಟ್ ಸೈಜ್ ಇತ್ಯಾದಿ ಎಲ್ಲದರ ಕುರಿತೂ ವಿಚಾರಿಸಿ. ಹೀಗಾಗಿ ನೇರವಾಗಿ ಮಾಲ್ ಶಾಪಿಂಗ್ ಮಾಡುತ್ತೀರೋ ಅಥವಾ ಆನ್ಲೈನ್ ಆರಿಸುತ್ತೀರೋ ನೀವೇ ಯೋಚಿಸಿ.
– ಎನ್. ಅಂಕಿತಾ