ವರ್ಷದ ಅತ್ಯಂತ ಮನೋಹರ ಹವಾಮಾನ ಮಳೆಗಾಲದಲ್ಲಿ ಚಹಾ ಗುಟುಕರಿಸುತ್ತ ಮಳೆಯನ್ನು ಎಂಜಾಯ್‌ ಮಾಡುವುದು ಅತ್ಯಂತ ಖುಷಿ ನೀಡುತ್ತದೆ. ಆದರೆ ಈ ಹವಾಮಾನದಲ್ಲಿ ಕೆಲವು ಬಗೆಯ ಹಾನಿಯನ್ನೂ ಎದುರಿಸಬೇಕಾಗುತ್ತದೆ. ಆ ಹಾನಿಯುಂಟಾಗುವುದು ನಮ್ಮ ಮನೆಗಳಲ್ಲಿ. ಮಳೆಗಾಲದ ಸಮಯದಲ್ಲಿ ಮನೆಯಲ್ಲಿ ತೇವಾಂಶ ಹೆಚ್ಚುತ್ತದೆ, ಫಂಗಸ್‌ನ ಸಮಸ್ಯೆ ಕಾಡುತ್ತದೆ. ನೀರು ಸೋರಿಕೆಯೂ ಆಗುತ್ತದೆ. ಇದು ಮನೆಯಲ್ಲಿ ವಾಸಿಸುವವರಿಗೆ ಕಷ್ಟಕರವಾಗಿ ಪರಿಣಮಿಸುತ್ತದೆ.

ನಿಮ್ಮ ಸುಂದರ ಮನೆಯನ್ನು ತೇವಾಂಶದಿಂದ ಕಾಪಾಡಿಕೊಳ್ಳಲು ಮೊದಲಿನಿಂದಲೇ ಏಕೆ ಉಪಾಯ ಮಾಡಬಾರದು? ಏಕೆಂದರೆ ತೇವಾಂಶದಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ.

ತೇವಾಂಶಕ್ಕೆ ಏನು ಕಾರಣ?

ಮನೆಯ ಗೋಡೆಗಳು, ಮನೆಯ ಮೇಲ್ಛಾವಣಿಯ ಅಂಚು, ಬಾಥ್‌ರೂಮಿನಲ್ಲಿ ಕಂಡುಬರುವ ತೇವಾಂಶಕ್ಕೆ ಮಳೆಯೊಂದೇ ಕಾರಣವಲ್ಲ. ಇದಕ್ಕೆ ಬೇರೆ ಕೆಲವು ಕಾರಣಗಳೂ ಇವೆ. ಉದಾಹರಣೆಗೆ ನೆಲದಡಿಯ ನೀರು ಗೋಡೆಗುಂಟ ಮೇಲೆ ಏರುತ್ತ ಹೋಗುತ್ತದೆ. ಒಂದು ವೇಳೆ ಮನೆ ಕಟ್ಟಿಸುವಾಗ ಡ್ಯಾಂಪ್‌ ಪ್ರೂಫಿಂಗ್‌ ಕೋಡ್‌ ಅಂದರೆ ಡಿಪಿಸಿ ಮಾಡಿಸದೇ ಇದ್ದಾಗ ಈ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ.

ಅದೇ ರೀತಿ ಗೋಡೆಗಳ ಮೇಲೆ ಪ್ಲಾಸ್ಟರ್‌ ಮಾಡಿಸುವಾಗ ಬಿರುಕುಗಳು ಹಾಗೆಯೇ ಉಳಿದಿದ್ದರೆ, ಮಳೆ ನೀರು ಆ ಬಿರುಕುಗಳ ಮುಖಾಂತರ ಒಳಗೊಳಗೆ ಪಸರಿಸುತ್ತ ಹೋಗುತ್ತದೆ. ಅದೇ ಅತಿಯಾದ ತೇವಾಂಶಕ್ಕೆ ಕಾರಣವಾಗುತ್ತದೆ. ಅದೇ ರೀತಿ ಅಡುಗೆ ಮನೆ ಹಾಗೂ ಟಾಯ್ಲೆಟ್‌ ಪೈಪ್‌ಲೈನ್‌ನಲ್ಲಿ ಏನಾದರೂ ಸೋರಿಕೆ ಇದ್ದರೆ ತೇವಾಂಶದ ಸಮಸ್ಯೆ ಉಂಟಾಗುತ್ತದೆ.

ರಕ್ಷಣೆಯ ಉಪಾಯಗಳು

- ಎಲ್ಲಕ್ಕೂ ಮುಂಚೆ ತೇವಾಂಶದ ಕಾರಣಗಳನ್ನು ಪತ್ತೆ ಹಚ್ಚಬೇಕು. ಏಕೆಂದರೆ ನಿಖರ ಜಾಗದಲ್ಲಿ ಅದನ್ನು ತಡೆಯಲು ಸಾಧ್ಯವಾಗ ಬೇಕು. ಸೋರಿಕೆಯನ್ನು ಕಂಡುಹಿಡಿಯಲು 2 ವಿಧಾನ. ಮೊದಲನೆಯದು, ವಾಟರ್‌ ಟ್ಯಾಂಕ್‌ನಲ್ಲಿ ಒಂದಷ್ಟು ನೀರು ಭರ್ತಿ ಮಾಡಿ, ಅದರಲ್ಲಿ ಬಟ್ಟೆಗೆ ಹಾಕುವ ನೀಲಿ ಬೆರೆಸಿ, 2 ದಿನಗಳ ಕಾಲ ಪೈಪ್‌ ಮೂಲಕ ಬಿಡಬೇಕು. ಟ್ಯಾಂಕ್‌ ನೀರು ಪೈಪ್‌ಗಳ ಮೂಲಕ ಬಂದಾಗ ನೀಲಿ ಗುರುತು ಹೊರಗೆ ಕಂಡುಬಂದರೆ, ಅಲ್ಲಿ ಸೋರಿಕೆಯಾಗುತ್ತಿದೆ ಎಂದರ್ಥ. ಒಂದು ವೇಳೆ ಮಳೆ ನೀರು ಸೋರಿಕೆಯಾಗುತ್ತಿದ್ದರೆ, ಅದು ಗೋಡೆಗಳ ಮೂಲಕ ಪ್ರತ್ಯಕ್ಷಗೊಳ್ಳುತ್ತದೆ.

- ವಾಟರ್‌ ಪ್ರೂಫಿಂಗ್‌ ಪ್ರಾಡಕ್ಟ್ ತೇವಾಂಶವನ್ನು ತಡೆಗಟ್ಟಲು ಸಹಾಯಕವಾಗಿದೆ. ಇವುಗಳಲ್ಲೂ ಕೂಡ 3 ರೇಂಜ್‌ಗಳಿವೆ. ಒಂದನೆಯದು, ಅದನ್ನು ನೇರವಾಗಿ ಪೇಂಟ್‌ನ ರೀತಿಯಲ್ಲಿ ಲಗತ್ತಿಸಬಹುದು. ಎರಡನೆಯದು, LW ಪ್ಲಾಸ್ಟೊ, ಇದನ್ನು ಸಿಮೆಂಟ್‌ನೊಳಗೆ ಮಿಶ್ರಣಗೊಳಿಸಲಾಗುತ್ತದೆ. ಮೂರನೆಯದು ಎಪಾಕ್ಸಿ. ಅದರ ಬಳಕೆಯಿಂದ ಬಿರುಕುಗಳನ್ನು ತಡೆಯಬಹುದು ಹಾಗೂ ತೇವಾಂಶ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

- ಈ ಹವಾಮಾನದಲ್ಲಿ ಹೊರಗಿನ ಗೋಡೆಗಳ ಪ್ಲಾಸ್ಟರ್‌ನ್ನು ಪರಿಶೀಲಿಸಿ. ಒಂದು ವೇಳೆ ಅಲ್ಲಿ ಬಿರುಕುಗಳು ಕಾಣಿಸಿಕೊಂಡರೆ ಮತ್ತೊಮ್ಮೆ ಪ್ಲಾಸ್ಟರ್‌ ಮಾಡಿಸಿ. ಪ್ಲಾಸ್ಟರ್‌ಗೂ ಮುನ್ನ ವಾಲ್‌ಪುಟೀ ಲೇಪಿಸಿ. ಪ್ಲಾಸ್ಟರ್‌ ಮಾಡಿಸುವಾಗ ಅವಶ್ಯವಾಗಿ ವಾಟರ್‌ಪ್ರೂಫಿಂಗ್‌ ಕಾಂಪೌಂಡ್‌ ಸೇರಿಸಿ.

- ನೀವು ಪೇಂಟ್‌ ಮಾಡುವ ಮುನ್ನ ಗೋಡೆಯ ಪ್ಲಾಸ್ಟರ್‌ ಗಮನಿಸಿ. ಅಲ್ಲಿನ ಬಿರುಕುಗಳನ್ನು ತುಂಬಿದ ಬಳಿಕವೇ ಪೇಂಟ್‌ ಮಾಡಿಸಿ. ಪೇಂಟಿಂಗ್‌ಗೆ ಸೂಕ್ತ ಸಮಯ ವರ್ಷದ ಯಾವುದೇ ತಿಂಗಳಿನಲ್ಲಿ ಪೇಂಟ್‌ ಮಾಡಿಸಬಹುದು. ಆದರೆ ಎಲ್ಲದಕ್ಕೂ ಸೂಕ್ತ ಸಮಯವೆಂದರೆ, ಅದು ಬೇಸಿಗೆ ಕಾಲ. ಏಕೆಂದರೆ ಪೇಂಟ್‌ನ್ನು 3 ಪದರ ಅಂದರೆ 3 ಲೇಯರ್‌ನಲ್ಲಿ ಮಾಡಿಸಬೇಕಾಗುತ್ತದೆ. ಅದಕ್ಕೂ ಮೊದಲು ವಾಲ್‌ಪುಟೀ ಕೂಡ ಲೇಪಿಸಬಹುದು. ಅದು ಬೇಸಿಗೆ ಕಾಲದಲ್ಲಿ ಬಹುಬೇಗ ಒಣಗುತ್ತದೆ. ಕೆಲಸಗಾರರು ಸಮಯ ಉಳಿಸಲು ಒಂದು ಪದರ ಬಣ್ಣ ಲೇಪಿಸಿದ ಬಳಿಕ ಬಹುಬೇಗನೇ ಮತ್ತೊಂದು ಪದರ ಲೇಪಿಸಿಬಿಡುತ್ತಾರೆ. ಒಂದು ಪದರ ಬಣ್ಣ ಒಣಗು ಮೊದಲೇ ಅದರ ಮೇಲೆ ಇನ್ನೊಂದು ಲೇಯರ್‌ ಬಳಿದರೆ ಅಲ್ಲಿ ಬಿರುಕುಗಳು ಉಂಟಾಗುವ ಅಪಾಯ ಇರುತ್ತದೆ. ಆದರೆ ಹೀಗಾಗುವುದು ಮಳಿಗಾಲದ ಸಮಯದಲ್ಲಿ. ಏಕೆಂದರೆ ಆಗ ಪೇಂಟ್‌ ಹಾಗೂ ಪಾಲಿಶ್‌ನಲ್ಲಿ ತೇವಾಂಶ ಹಾಗೆಯೇ ಉಳಿದುಬಿಡುತ್ತದೆ. ಅದರಿಂದಾಗಿ ಆ ಬಳಿಕ ಗೋಡೆಯಲ್ಲಿ ತೇವಾಂಶ ಕೂಡ ಹಾಗೆಯೇ ಉಳಿಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ