ಸಮ್ಮರ್‌ ಅಥವಾ ಮಾನ್‌ಸೂನ್‌ ಇರಲಿ, ಶಾರ್ಟ್ಸ್ ಯಾವಾಗಲೂ ಹಾಟ್‌, ಸೆಕ್ಸಿ  ಗ್ಲಾಮರಸ್‌ ಎನಿಸುತ್ತವೆ. ಆದರೆ ಪರ್ಫೆಕ್ಸ್ ಲುಕ್ಸ್ ಗಾಗಿ ಸಮರ್ಪಕ ಶಾರ್ಟ್ಸ್ ಆಯ್ಕೆ ಬಲು ಮುಖ್ಯ. ನಿಮ್ಮ ಪರ್ಸನಾಲಿಟಿಯನ್ನು ಗಮನದಲ್ಲಿರಿಸಿಕೊಂಡು ಪರ್ಫೆಕ್ಟ್ ಶಾರ್ಟ್ಸ್ ಆರಿಸುವುದು ಹೇಗೆಂದು ತಿಳಿಯೋಣವೇ ?

ಸ್ಟ್ರೇಟ್‌ ಬಾಡಿ ಶೇಪ್‌

ಇಂಥ ದೇಹದಲ್ಲಿ ಕರ್ವ್ಸ್ ಬಹಳ ಕಡಿಮೆ ಇರುತ್ತದೆ. ಹೀಗಾಗಿ ಇಂಥವರು ಧರಿಸುವ ಶಾರ್ಟ್ಸ್, ಲೋಯರ್‌ ಬಾಡಿ ಪಾರ್ಟ್‌ಗೆ ಹೆವಿ ಲುಕ್‌ ಸಿಗುವಂತಿರಬೇಕು.

– ಬೆಲೂನ್‌ ಶೇಪ್‌ (ಬೂಬ್ಸ್‌) ಇಂಥವರಿಗೆ ಸೂಕ್ತವಾಗುತ್ತದೆ. ಆಗ ಇವರ ಲೋಯರ್‌ ಬಾಡಿ ಪಾರ್ಟ್‌ ಹೆವಿ ಲುಕ್ಸ್ ಪಡೆಯುತ್ತವೆ.

– ಫ್ರಂಟ್‌ ಪಾಕೆಟ್‌, ಪ್ಲೀಟ್ಸ್, ನಾಟ್‌ ಯಾ ಬೆಲ್ಸ್ ಇರುವಂಥ ಶಾರ್ಟ್ಸ್ ಸಹ ಪರ್ಫೆಕ್ಟ್ ಎನಿಸುತ್ತದೆ.

– ಡಿಫರೆಂಟ್‌ ಪ್ರಿಂಟ್‌ ಹಾಗೂ ಟೆಕ್ಸ್ ಚರ್‌ನ ಶಾರ್ಟ್ಸ್ ಕೂಡ ಟ್ರೈ ಮಾಡಬಹುದು.

– ಶಾರ್ಟ್ಸ್ ಜೊತೆ ಆಫ್‌ ಶೋಲ್ಡರ್‌, ಬೋಟ್‌ನೆಕ್‌, ಲೈಟ್‌ ವೀ ಯಾ ಯೂ ನೆಕ್‌ನ ಟಾಪ್‌ ಧರಿಸಿ.

– ಸೊಂಟದ ಬೆಲ್ಚ್, ನಾಟ್‌, ಚೇನ್‌ ಮುಂತಾದ ಆ್ಯಕ್ಸೆಸರೀಸ್‌ ಧರಿಸಿ, ಆಗ ಲೋಯರ್‌ ಬಾಡಿ ಪಾರ್ಟ್‌ಗೆ ಹೆವಿ ಲುಕ್‌ ಸಿಗುತ್ತದೆ.

ಪೇರ್‌ ಬಾಡಿ ಶೇಪ್‌

ಇಂಥ ಮಹಿಳೆಯರ ಲೋಯರ್‌ ಬಾಡಿ ಪಾರ್ಟ್‌ ಅಪ್ಪರ್‌ ಬಾಡಿ ಪಾರ್ಟ್‌ಗಿಂತ ಹೆಚ್ಚು ಹೆವಿ ಎನಿಸುತ್ತದೆ. ಇವರ ಹಿಪ್ಸ್ ಥೈಸ್‌ ಸಹ ಸಾಕಷ್ಟು ದಪ್ಪ ಎನಿಸುತ್ತದೆ, ಇಂಥವರು :

– ಹೈ ವೇಸ್ಟ್ ಯಾ ಸ್ಲಿಂ ಫಿಟೆಡ್‌ ಶಾರ್ಟ್ಸ್ ಧರಿಸಬೇಕು, ಆಗ ಕಾಲುಗಳು ಉದ್ದ ಕಾಣಿಸುತ್ತವೆ.

– ಲಾಂಗ್ ಶಾರ್ಟ್ಸ್ ಸಹ ಧರಿಸಬಹುದು, ಇದು ಹೆವಿ ಥೈಸ್‌ನ್ನು ಸುಲಭವಾಗಿ ಕವರ್‌ ಮಾಡುತ್ತದೆ.

– ಥೈಸ್‌ ತುಂಬಾ ಹೆವಿ ಎನಿಸಿದರೆ, ಶಾರ್ಟ್‌ ಶಾರ್ಟ್ಸ್ ಧರಿಸಲೇಬೇಡಿ. ಬದಲಿಗೆ ಮಿಡಲ್ ಲೆಂಥ್‌ ಶಾರ್ಟ್ಸ್, ಥ್ರೀ ಫೋರ್ತ್‌ ಟ್ರೈ ಮಾಡಿ.

-ನಾಟ್ಸ್ ವುಳ್ಳ ಶಾರ್ಟ್ಸ್ ಬೇಡ.

– ಬಾಡೀಗೆ ಬ್ಯಾಲೆನ್ಸ್ಡ್ ಲುಕ್‌ ನೀಡಲು ಶಾರ್ಟ್ಸ್ ಜೊತೆ ಲಾಂಗ್‌ ಟಾಪ್‌ ಧರಿಸಿರಿ.

ಅವರ್‌ ಗ್ಲಾಸ್‌ ಬಾಡಿ ಶೇಪ್‌

ನಿಮ್ಮ ಬಾಡಿ ಶೇಪ್‌ ಅವರ್‌ ಗ್ಲಾಸ್‌ (8ರ ಆಕಾರ) ತರಹವಿದ್ದರೆ, ನಿಮ್ಮ ಬ್ರೆಸ್ಟ್ ಲೈನ್‌  ಹಿಪ್ಸ್ ಏರಿಯಾ ಎರಡೂ ಹೆವಿ ಆಗುವುದರಿಂದ ಬಾಡೀಗೆ ಬ್ಸಾಲೆನ್ಸ್ಡ್ ಲುಕ್‌ ಸಿಗುತ್ತದೆ.

– ಇಂಥವರು ಎಲ್ಲಾ ಬಗೆಯ ಶಾರ್ಟ್ಸ್ ಧರಿಸಬಹುದು. ಮಿಡಲ್ ವೆಯ್ಸ್ಟ್, ಹೈ ವೆಯ್ಸ್ಟ್ಚ್, ಲೋ ವೆಯ್ಸ್ಟ್ ಇತ್ಯಾದಿ.

– ನಿಮ್ಮ ಹೊಟ್ಟೆ ಒಳಭಾಗಕ್ಕೆ ಸಪಾಟಾಗಿದ್ದರೆ, ಶಾರ್ಟ್ಸ್ ಜೊತೆ ಕ್ರಾಪ್‌ ಟಾಪ್‌ ಧರಿಸಿರಿ. ಇದು ಹಾಟ್‌ ಲುಕ್ಸ್ ನೀಡುತ್ತದೆ.

– ನಿಮ್ಮ ತೊಡೆಗಳು ಭಾರಿ ಇದ್ದರೆ, ಮಿಡಲ್ ಯಾ ನೀ ಲೆಂಥ್‌  ಶಾರ್ಟ್ಸ್ ಧರಿಸಿರಿ.

– ಶಾರ್ಟ್ಸ್ ಜೊತೆ ಹೆವಿ ಯಾ ಪ್ರಿಂಟೆಡ್‌ ಟಾಪ್‌ ಧರಿಸುವ ಬದಲು ಲೈಟ್‌ ವೆಯ್ಟ್ ಟೀಶರ್ಟ್‌ ಧರಿಸಿರಿ.

– ಶಾರ್ಟ್ಸ್ ಗೆ  ಬೆಲ್ಟ್ ಅತ್ಯಗತ್ಯ ಎನಿಸಿದರೆ, ಸ್ಕಿನೀ ಬೆಲ್ಟ್ ಧರಿಸಿರಿ.

– ಸೆಕ್ಸೀ ಲುಕ್ಸ್ ಗಾಗಿ ಶಾರ್ಟ್ಸ್ ಜೊತೆ ಸ್ಲೀವ್ ಲೆ‌ಸ್‌ ಯಾ ಸ್ಪೆಗೆಟಿ ಟಾಪ್‌ ಟ್ರೈ ಮಾಡಿ.

ಓವಲ್ ಬಾಡಿ ಶೇಪ್

ಇಂಥವರ ಬಸ್ಟ್ ಲೈನ್‌ನಿಂದ ಹಿಡಿದು ಥೈಸ್‌ವರೆಗೂ ಪಾರ್ಟ್‌ ಹೆವಿ ಇರುತ್ತದೆ. ಇಂಥವರು ತಮ್ಮ ಹೆವಿ ಲೋಯರ್‌ ಬಾಡಿ ಪಾರ್ಟ್‌ನ್ನು ಮಿನಿಮೈಸ್‌ ಮಾಡುವಂಥ ಶಾರ್ಟ್ಸ್ ನ್ನೇ ಕೊಳ್ಳಬೇಕು.

– ಇದು ಶಾರ್ಟ್‌, ಮೀಡಿಯಂ, ಲಾಂಗ್‌ ಹೀಗೆ ಬೇಕಾದ ಲೆಂಥ್‌ನಲ್ಲಿ ಸಿಗುವಂಥ ಶಾರ್ಟ್ಸ್.

– ಪ್ರಿಂಟ್‌, ಕಲರ್‌ಫುಲ್ ಶಾರ್ಟ್ಸ್ ಬದಲಿಗೆ ಕ್ಲೀನ್‌ ಯಾ ಪ್ಲೇನ್‌ ಶಾರ್ಟ್ಸ್ ಧರಿಸಿರಿ. ಇದರಿಂದ ನಿಮ್ಮ ಲೋಯರ್‌ ಬಾಡಿ ಪಾರ್ಟ್‌ಗೆ ಸ್ಲಿಂ ಲುಕ್‌ ಸಿಗುತ್ತದೆ.

– ಇಂಥವರು ಪಾಕೆಟ್‌, ಪ್ಲೀಟ್ಸ್, ನಾಟ್‌ವುಳ್ಳ ಶಾರ್ಟ್ಸ್ ಧರಿಸಲೇಬಾರದು.

– ಶಾರ್ಟ್ಸ್ ಜೊತೆ ವೀನೆಕ್‌ ಲೈನ್‌ವುಳ್ಳ ಟಾಪ್‌ ಧರಿಸಿರಿ.

ಆ್ಯಪಲ್ ಬಾಡಿ ಶೇಪ್

ಈ ಬಾಡಿ ಶೇಪ್‌ವುಳ್ಳ ಮಹಿಳೆಯರ ಅಪ್ಪರ್‌ ಬಾಡಿ ಪಾರ್ಟ್‌ ಮತ್ತು ಟಮ್ಮಿ ಏರಿಯಾ ಲೋಯರ್‌ ಬಾಡಿ ಪಾರ್ಟ್‌ಗಿಂತ ಹೆಚ್ಚು ಹೆವಿ ಎನಿಸುತ್ತದೆ. ಶಾರ್ಟ್ಸ್ ಕೊಳ್ಳುವಾಗ ಇಂಥವರು ಈ ಕೆಳಗಿನ ವಿಷಯಗಳತ್ತ ಗಮನಹರಿಸಬೇಕು :

– ಹೈ ವೆಯ್ಟ್ಸ್ ಶಾರ್ಟ್ಸ್ (ಕಡಿಮೆ ಲೆಂಥ್‌ ನದು) ಇಂಥವರಿಗೆ ಸೂಕ್ತವಾಗಿರುತ್ತದೆ.

– ಶಾರ್ಟ್ಸ್ ಜೊತೆ ಮಫಿನ್‌ ಬಾಕ್ಸ್ ಧರಿಸಬೇಕು. ಇದರಿಂದ ಟಮ್ಮಿ ಏರಿಯಾ ಈಝಿಯಾಗಿ ಕವರ್‌ ಆಗುತ್ತದೆ.

– ಬ್ಯಾಕ್‌ ಪಾಕೆಟ್‌ ಶಾರ್ಟ್ಸ್ ಸಹ ಇವರಿಗೆ ಬೆಸ್ಟ್ ಅನಿಸುತ್ತದೆ. ಫಿಟೆಡ್‌ ಶಾರ್ಟ್ಸ್ ಯಾ ಬೆಲ್ಟ್ ಇರುವ ಶಾರ್ಟ್ಸ್ ಧರಿಸಬಾರದು.

– ಶಾರ್ಟ್ಸ್ ಜೊತೆ ಲೂಸ್‌ ಟಾಪ್‌ ಬೇಡ.

ಕುಳ್ಳಿಯರಿಗೂ ಶಾರ್ಟ್ಸ್!

ಸಾಮಾನ್ಯವಾಗಿ ಕುಳ್ಳಿಯರು ಶಾರ್ಟ್ಸ್ ಧರಿಸಲು ಹಿಂಜರಿಯುತ್ತಾರೆ. ಶಾರ್ಟ್ಸ್ ಧರಿಸಿದಾಗ ತಾವಿನ್ನೂ ಗಿಡ್ಡಕ್ಕೆ ಕಾಣಿಸುತ್ತೇವೆಂದು ಭಾವಿಸುತ್ತಾರೆ. ಆದರೆ ಕೆಲವೊಂದು ಅಂಶಗಳನ್ನು ಗಮದಲ್ಲಿಟ್ಟುಕೊಂಡು ಇಂಥವರೂ ಶಾರ್ಟ್ಸ್ ಕೊಳ್ಳಬಹುದು. ಇವರುಗಳು ಕಡಿಮೆ ಲೆಂಥ್‌ನ ಶಾರ್ಟ್ಸ್ ಧರಿಸಬೇಕು. ಇದರಿಂದ ಇವರ ಕಾಲುಗಳು ಉದ್ದಕ್ಕಿರುವಂತೆ ಕಂಡುಬರುತ್ತವೆ.

– ಪ್ರೇಮಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ