ಪ್ರಾಣಿಗಳು ಚಳ್ಳೆಹಣ್ಣು ತಿನ್ನಿಸುವುದರಲ್ಲಿ ಅದೆಷ್ಟು ಪ್ರಾವೀಣ್ಯತೆ ಪಡೆದುಕೊಂಡಿರುತ್ತವೆ ಎಂದರೆ, ಮನುಷ್ಯರು ಕೂಡ ಅವುಗಳ ಮುಂದೆ ಮಂಡಿಯೂರಬೇಕು. ಅನುಕರಣೆ ಮಾಡುವುದರಲ್ಲಿ, ವಾಸನೆ, ಧ್ವನಿ ಹಾಗೂ ವರ್ತನೆ (ಉದಾಹರಣೆಗಾಗಿ ರೆಡ್‌ ಸ್ನೇಕ್‌ ಅಪಾಯಕಾರಿ ಸ್ಥಿತಿಯಲ್ಲಿ ತನ್ನ ಬಣ್ಣವನ್ನು ಅಪಾಯಕಾರಿ ಕೋರ್‌ ಸ್ನೇಕ್‌ನ ಹಾಗೂ ಕಂದುಬಣ್ಣದ ರೀತಿಯಲ್ಲಿ ಪರಿವರ್ತಿಸಿಕೊಳ್ಳುತ್ತದೆ) ವೇಷ ಬದಲಿಸಿಕೊಳ್ಳುವಿಕೆ, ಸತ್ತಂತೆ ಅಥವಾ ಗಾಯಗೊಂಡಂತೆ ನಟಿಸುವುದು, ಅಪಾಯಕಾರಿ ಭಂಗಿಯಲ್ಲಿ ಪ್ರತ್ಯಕ್ಷಗೊಳ್ಳುವುದು, ಮೌಖಿಕ ಅಥವಾ ಪೂರ್ವ ನಿಯೋಜಿತವಾಗಿ ವಂಚಿಸುವುದು ಇವನ್ನೆಲ್ಲ ಸಾಮಾನ್ಯವಾಗಿ ಪ್ರಾಣಿಗಳು ತಮಗೆ ತೀರಾ ಹಸಿವಾದಾಗ ಮಾಡುತ್ತವೆ. ಇಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳ ಬೇಕಾದ ಸಂದರ್ಭದಲ್ಲೂ ಈ ರೀತಿ ವರ್ತಿಸುತ್ತವೆ. ಒಮ್ಮೊಮ್ಮೆ ತಮ್ಮ ಈ ಕಲೆಯನ್ನು ಪ್ರಯೋಗಿಸಲು ಬಂದ ಸಾಧಾರಣ ಪ್ರಾಣಿ ಕೂಡ ಅಪಾಯಕಾರಿ ಪ್ರಾಣಿಯಂತೆ ಗೋಚರಿಸುತ್ತದೆ.

ಕೆಲವು ಪ್ರಾಣಿಗಳು ತಮ್ಮ ಹಾವಭಾವವನ್ನು ಯಾವ ರೀತಿ ಬದಲಿಸಿಕೊಳ್ಳುತ್ತವೆ ಎಂದರೆ, ಅವುಗಳ ಬೇಟೆ ತಂತಾನೇ ಅವುಗಳ ಹತ್ತಿರವೇ ದುರಾಸೆಯಿಂದ ಬಂದುಬಿಡುತ್ತದೆ. ಪೇರೆಂಟ್‌ ಬರ್ಡ್‌ ಬೇಟೆಗಾರ ಹಕ್ಕಿಯಿಂದ ತನ್ನ ಮರಿಗಳನ್ನು ದೂರವಿಡಲು ಎಂತಹ ಒಂದು ನಾಟಕವನ್ನು ಮಾಡುತ್ತದೆ ಎಂದರೆ, ತನ್ನ ರೆಕ್ಕೆಗೆ ಏಟು ಬಿದ್ದು ತಾನು ನಿಸ್ಸಹಾಯಕ ಸ್ಥಿತಿಯಲ್ಲಿರುವಂತೆ ನಟಿಸುತ್ತದೆ. ಅದರ ಈ ನಡವಳಿಕೆಯಿಂದ ಬೇಟೆಗಾರ ಪಕ್ಷಿ ಮರಿಗಳನ್ನು ಬಿಟ್ಟು ತಾಯಿಯ ಕಡೆ ತನ್ನ ಗಮನಹರಿಸುತ್ತದೆ. ಕೆಲವು ಬಗೆಯ ಪತಂಗಗಳು ಬಾವಲಿಗಳನ್ನು ಮೋಸಗೊಳಿಸಲು ಒಂದು ವಿಶಿಷ್ಟ ತಂತ್ರ ಅನುಸರಿಸುತ್ತವೆ. ಬಾವಲಿಗಳು ಬರುವ ಸೂಚನೆ ಸಿಗುತ್ತಿದ್ದಂತೆಯೇ ಟೈಗರ್‌ ಪತಂಗಗಳ ಹಾಗೆ ಧ್ವನಿ ಹೊರಡಿಸಲಾರಂಭಿಸುತ್ತವೆ. ಆ ಧ್ವನಿ ನಿರಂತರವಾಗಿ ಮುಂದುವರಿಯುತ್ತದೆ. ಆ ಪತಂಗಗಳು ರುಚಿಕರವಾಗಿಲ್ಲ, ಅವು ಟೈಗರ್‌ ಪತಂಗಗಳೆಂದು ಭಾವಿಸಿ ಬಾವಲಿಗಳು ಬೇರೆ ಕಡೆಗೆ ಹೋಗಿಬಿಡುತ್ತವೆ.

ತಲೆ ಯಾವುದು ಬಾಲ ಯಾವುದು?

ಮಧ್ಯ ಆಫ್ರಿಕಾದ 2 ತಲೆಯ ಹಾವಿನ ಬಾಲ ಅದರ ತಲೆಯ ಹಾಗೆಯೇ ಕಾಣುತ್ತದೆ. ಇದು ತನ್ನ ಬಾಲವನ್ನು ಹೇಗೆ ಅಲ್ಲಾಡಿಸುತ್ತದೆ ಎಂದರೆ ಬೇರೆ ಹಾವುಗಳು ತಮ್ಮ ತಲೆಯನ್ನು ಅಲ್ಲಾಡಿಸುವ ರೀತಿಯಲ್ಲಿ. ಈ ಹಾವಿನ ಇಂಥ ವೈಶಿಷ್ಟ್ಯತೆ ವೈರಿ ಪ್ರಾಣಿಗೆ ಯಾವ ಕಡೆಯಿಂದ ದಾಳಿ ಮಾಡಬೇಕೆಂಬ ಬಗ್ಗೆ ಗೊಂದಲದಲ್ಲಿ ಕೆಡವುತ್ತದೆ.

ಬಣ್ಣ ಬದಲಿಸುವ ವಿಶೇಷತೆ

ಬಹಳಷ್ಟು ಪ್ರಾಣಿಗಳು ತಮ್ಮ ದೇಹದ ಬಣ್ಣವನ್ನು ವಾತಾವರಣಕ್ಕೆ ತಕ್ಕಂತೆ ಬದಲಿಸಿಕೊಳ್ಳುವ (ಕೆಮೋಫ್ಲೇಜ್‌) ಸಾಮರ್ಥ್ಯವನ್ನು ಪಡೆದಿರುತ್ತವೆ. ಏಕೆಂದರೆ ಬೇಟೆಗಾರ ಪ್ರಾಣಿಗೆ ಅದರ ಸುಳಿವು ಕೂಡ ಸಿಗಬಾರದು ಎಂಬುದಾಗಿರುತ್ತದೆ. ಯೂರೊಪ್ಲೆಟಸ್‌ ಎಂಬ ಹಲ್ಲಿಗೆ ಪರಿಪೂರ್ಣವಾಗಿ ಮಾಯವಾಗುವ ಕಲೆ ಕರಗತಾಗಿಬಿಟ್ಟಿದೆ. ಕೆಟಿಟಡ್‌ ಎಂಬ ಪತಂಗ ತನ್ನ ಬಣ್ಣ ಹಾಗೂ ಆಕಾರವನ್ನು ಬಗೆಬಗೆಯ ರೀತಿಯಲ್ಲಿ ಪರಿವರ್ತಿಸಿಕೊಳ್ಳುತ್ತದೆ. ಪರಿಪೂರ್ಣ ಎಲೆಯ ಆಕಾರದಲ್ಲಿ, ಅರ್ಧ ತಿಂದ ಎಲೆಯ ಆಕಾರದಲ್ಲಿ ತನ್ನನ್ನು ಬಿಂಬಿಸುತ್ತದೆ. ಗೋಸುಂಬೆ ಅಥವಾ ಊಸರವಳ್ಳಿ ಬೇರೆ ಬೇರೆಯ ಜಾತಿಯಲ್ಲಿ ನೇರಳೆ, ಕೇಸರಿ, ಹಸಿರು, ಕಂದು, ಹಳದಿ, ಬದನೆ, ನೀಲಿ, ಕೆಂಪು ಮಿಶ್ರಿತ ಬಣ್ಣದಲ್ಲಿ ತನ್ನ ದೇಹವನ್ನು ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಕೆಲವು ಆಕ್ಟೋಪಸ್‌ಗಳು ತಮ್ಮ ಚರ್ಮದ ಮಾಂಸಖಂಡಗಳನ್ನು ಬಳಸಿಕೊಂಡು ಬಣ್ಣ ಹಾಗೂ ಹಾವಭಾವ ಎರಡನ್ನೂ ಬದಲಿಸಿ ಸಮುದ್ರ ಪಾಚಿಯಂತೆ ರೂಪಧಾರಣೆ ಮಾಡುತ್ತವೆ. ಅಷ್ಟೇ ಅಲ್ಲ, ಸಮುದ್ರ ಬಂಡೆಯಂತಹ ಒರಟು, ಕ್ರೂರ ರೂಪವನ್ನು ಧರಿಸಬಲ್ಲದು. ಈ ರೀತಿಯ ವಿಶೇಷತೆಯುಳ್ಳ ಆಕ್ಟೋಪಸ್‌ ತನ್ನ ಫ್ಲೆಕ್ಸಿಬಲ್ ದೇಹ ಹಾಗೂ ಬಣ್ಣ ಬದಲಿಸುವ ಸಾಮರ್ಥ್ಯವುಳ್ಳ ಅವು ಒಮ್ಮೊಮ್ಮೆ ಅಪಾಯಕಾರಿ ಜೀವಿ, ಲಯನ್‌ ಫಿಶ್‌, ಸಮುದ್ರ ಹಾವಿನ ರೂಪ ಸಹ ಪಡೆದುಕೊಳ್ಳಬಲ್ಲದು.

ಆಹಾರಕ್ಕಾಗಿ ಮೋಸ

ಈ ರೀತಿ ಪೂರ್ವ ನಿಯೋಜಿತವಾಗಿ ಮೋಸಗೊಳಿಸುವುದರಲ್ಲಿ ಪ್ರಾಣಿಗಳು ಬಹಳ ಚಾಕಚಕ್ಯತೆ ಮೆರೆಯುತ್ತವೆ. ಇದಕ್ಕೊಂದು ಸೂಕ್ತ ಉದಾಹರಣೆ ಚಿಂಪಾಂಜಿ. ಅದರ ಮೇಲೆ ಎದುರಾಳಿ ಹಿಂದಿನಿಂದ ದಾಳಿ ಮಾಡಲು ಪ್ರಯತ್ನ ಮಾಡುತ್ತವೆ. ಇಂತಹ ಸ್ಥಿತಿಯಲ್ಲಿ ಚಿಂಪಾಂಜಿ ತನ್ನ ತುಟಿಗಳಿಗೆ ಬೇರೆ ಬೇರೆ ಆಕಾರ ಕೊಡುತ್ತದೆ. ಏಕೆಂದರೆ ಭಯಮುಕ್ತನಾಗಿ ಹಿಂತಿರುಗಿ ವೈರಿಯನ್ನು ಎದುರಿಸಲು ಸಾಧ್ಯವಾಗಬೇಕು.

ಆಹಾರವನ್ನು ಉಳಿಸಲು ಹಾಗೂ ಸುರಕ್ಷಿತವಾಗಿಡಲು ಬೇರೆ ಉಪಾಯಗಳೆಂಬಂತೆ ಚಿಂಪಾಂಜಿಗಳ ಗುಂಪಿನಲ್ಲಿ ಬ್ರೇವ್ಲಿ ಹೆಸರಿನ ಸದಸ್ಯ ಇರುತ್ತದೆ. ಅದಕ್ಕೆ ಮಾತ್ರ ಆಹಾರ ಸಂಗ್ರಹದ ಬಗ್ಗೆ ಗೊತ್ತಿರುತ್ತದೆ. ಅದೇ ಚಿಂಪಾಂಜಿ ಬೇರೆ ಚಿಂಪಾಂಜಿಗಳನ್ನು ಆಹಾರವಿರುವ ಜಾಗದ ಕಡೆ ಕರೆದುಕೊಂಡು ಹೋಗುತ್ತದೆ. ಆಗ ರಾಕ್‌ ಹೆಸರಿನ ಚಿಂಪಾಂಜಿಯೊಂದು ಆಹಾರ ವಿತರಣೆಯ ಬಗ್ಗೆ ಅಡ್ಡಿಯನ್ನುಂಟು ಮಾಡುತ್ತದೆ. ಆಗ ಬ್ರೇವ್ಲಿ ತನ್ನ ರೀತಿನೀತಿಗಳನ್ನು ಬದಲಿಸಿಕೊಳ್ಳುತ್ತದೆ. ರಾಕ್‌ ಅಲ್ಲಿಂದ ದೂರ ಹೋಗುವ ತನಕ ಅದು ಆಹಾರದ ಮೇಲೆಯೇ ಕುಳಿತುಕೊಂಡಿರುತ್ತದೆ. ರಾಕ್‌ ಹೊರಟ ಬಳಿಕವೇ ಅದು ಆಹಾರ ಸೇವನೆ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಬಹುಬೇಗನೇ ಶುರು ಮಾಡಲು ಅತ್ತಇತ್ತ ನೋಡುವ ನೆಪ ಮಾಡುತ್ತದೆ. ಏಕೆಂದರೆ ಬ್ರೇವ್ಲಿ ಆಹಾರ ಸೇವನೆ ಪ್ರಕ್ರಿಯೆಯನ್ನು ಆರಂಭಿಸಬೇಕಿರುತ್ತದೆ. ಎಷ್ಟೋ ಸಲ ರಾಕ್‌ ಹೋದಂತೆ ನಾಟಕ ಮಾಡುತ್ತದೆ. ಬ್ರೇವ್ಲಿ ತಿನ್ನಲು ಶುರು ಮಾಡುತ್ತಿದ್ದಂತೆ ರಾಕ್‌ ಒಮ್ಮೆಲೆ ಅಲ್ಲಿ ಪ್ರತ್ಯಕ್ಷವಾಗಿ ಬಿಡುತ್ತದೆ.

ಮೋಸದ ಇತರೆ ವಿಧಾನಗಳು

ಹಲ್ಲಿ, ಪಕ್ಷಿ, ಇಲಿ, ನವಿಲು, ಶಾರ್ಕ್‌ ಮೀನುಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕ ಆಡುತ್ತವೆ. ಏಕೆಂದರೆ ಹೆಚ್ಚಿನ ಬೇಟೆ ಪ್ರಾಣಿಗಳು ಜೀವಂತ ಪ್ರಾಣಿಗಳನ್ನಷ್ಟೇ ಬೇಟೆಯಾಡುತ್ತವೆ. ಸತ್ತ ಪ್ರಾಣಿಗಳನ್ನು ಅವು ಮೂಸಿ ಕೂಡ ನೋಡುವುದಿಲ್ಲ. ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಗಂಡು ಜೇಡ ಸತ್ತಂತೆ ನಾಟಕವಾಡುತ್ತದೆ. ಏಕೆಂದರೆ ಹೆಣ್ಣು ಜೇಡ ತನ್ನನ್ನು ಭಕ್ಷಿಸದೇ ಇರಲಿ ಎಂದು.

ಎಷ್ಟೋ ಪ್ರಾಣಿಗಳು ತಮ್ಮ ವಾಸ್ತವ ರೂಪಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಕಂಡುಬರುತ್ತವೆ. ಮಾಂಟಿಸ್‌ ಎಂಬ ಬಸವನ ಹುಳುವಿನ ದೇಹದ ಮುಂಭಾಗದಲ್ಲಿ ಲಿಂಬ್‌ಗಳು ಇರುತ್ತವೆ. ದಾಳಿ ಮಾಡಲು ಅದು ಅವನ್ನು ಬಳಸಿಕೊಳ್ಳುತ್ತದೆ. ಪುಟ್ಟ ಮಾಂಟಿಸ್‌ ತನ್ನ ವೈರಿಯನ್ನು ವಂಚಿಸಲು ತನ್ನ ಪಾದಗಳನ್ನು ದೂರ ಬಹುದೂರದ ತನಕ ವಿಸ್ತರಿಸಿಕೊಳ್ಳುತ್ತದೆ. ತನ್ನ ಮೃದು ದೇಹದ ಪಾದಗಳನ್ನು ಅದು ಅಪಾಯದ ಸ್ಥಿತಿ ಬರುವ ತನಕ ಬದಲಿಸಿಕೊಳ್ಳವುದು.

ಕಟ್‌ ಫಿಶ್‌ ಅಂತೂ ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇದೆ. ಕಟ್‌ ಫಿಶ್‌, ಎರಡು ಕಡೆಯ ವೈರಿಗಳಿಗೆ ತನ್ನ ಬಗೆಬಗೆಯ ರೂಪ ತೋರಿಸಿ ಚಾಣಾಕ್ಷತನ ಮೆರೆಯುತ್ತದೆ. ಅದರ ಮೇಲ್‌ ಪ್ಯಾಟರ್ನ್‌ ಫೀಮೇಲ್ ನತ್ತ ಇರುತ್ತದೆ ಹಾಗೂ ಫೀಮೇಲ್‌ ಪ್ಯಾಟರ್ನ್‌ ಆಗಿ ಅತ್ತ ಕಡೆ ಅದು ಗಂಡು ಕಟ್‌ ಫಿಶ್‌ಗಳಿಗೂ ವಂಚಿಸುತ್ತದೆ. ಫೀಮೇಲ್ ಮಾರ್ಶ್‌ ಹ್ಯಾರಿಯರ್‌ ಎಂಬ ಗಂಡು ಹಕ್ಕಿಯು ಸಂಗ್ರಹ ಮಾಡಿದ ಕಾಳುಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಅದನ್ನು ತನ್ನತ್ತ ಒಲಿಸಿಕೊಳ್ಳಲು ಬಗೆಬಗೆಯ ನಾಟಕ ಆಡುತ್ತದೆ. ಅಮೆರಿಕದಲ್ಲಿ ಕಂಡುಬರುವ ಕೋತಿಯ ಜಾತಿಯೊಂದು ಪೂರ್ವನಿಯೋಜಿತವಾಗಿ ಮೋಸಗೊಳಿಸಲು ಧ್ವನಿಯನ್ನು ಬಳಸಿಕೊಳ್ಳುತ್ತದೆ. ತನಗಿಂತ ಬಲಶಾಲಿಯಾದ ಕೋತಿಯೊಂದು ಆಹಾರಕ್ಕಾಗಿ ಸಂಘರ್ಷಕ್ಕಿಳಿದಾಗ ಹೀಗೆ ಮಾಡುತ್ತದೆ.

ಒಂದು ಬಗೆಯ ಕೋತಿ ವೈರಿಗಳು ಬಂದಾಗ ಹೊರಡಿಸುವ ರೀತಿಯಲ್ಲಿ ಧ್ವನಿ ಹೊರಡಿಸಿ, ಇತರೆ ಕೋತಿಗಳು ಅತ್ತಿತ್ತ ಚೆಲ್ಲಾಪಿಲ್ಲಿಯಾಗಿ ಹೋಗುವಂತೆ ಮಾಡುತ್ತದೆ. ಬಳಿಕ ಇತರೆ ಕೋತಿಗಳ ಆಹಾರವನ್ನು ಅದು ಕದ್ದುಕೊಂಡು ಪಲಾಯನ ಮಾಡುತ್ತದೆ.

ಅದೇ ರೀತಿ ಆಸ್ಟ್ರೇಲಿಯನ್‌ ಜೇಡವೊಂದು ಇರುವೆಗಳ ರೀತಿಯಲ್ಲಿ ವರ್ತಿಸುತ್ತದೆ. ಅವುಗಳ ಹಾಗೆಯೇ ವಾಸನೆಯನ್ನು ಹೊರಹೊಮ್ಮಿಸುತ್ತದೆ. ಕೆಲವಂತೂ ಈ ಕಲೆಯಲ್ಲಿ ಅದೆಷ್ಟು ನೈಪುಣ್ಯತೆ ಪಡೆದುಕೊಂಡಿರುತ್ತದೆ ಎಂದರೆ, ಇರುವೆಗಳು ಅವುಗಳಿಗೆ ಖಾಯಂ ಆಗಿಯೇ ತಮ್ಮ ಬಿಲದಲ್ಲಿ ವಾಸಿಸಲು ಅವಕಾಶ ಕೊಡುತ್ತವೆ. ಬಳಿಕ ಆ ಜೇಡ ಇರುವೆಗಳನ್ನು ಭಕ್ಷಿಸುತ್ತಾ ಹೋಗುತ್ತದೆ. ಆದರೆ ಅದು ಒಮ್ಮೆಲೆ ಎಲ್ಲ ಇರುವೆಗಳನ್ನು ತಿಂದು ಹಾಕುವುದಿಲ್ಲ. ಒಂದೊಂದಾಗಿ ಎಲ್ಲವನ್ನೂ ತಿಂದು ಹಾಕುತ್ತದೆ.

ವಿಶಾಲ ಜಿಯೊಮೀಟರ್‌  ಮೋಥ್‌ ಕ್ಯಾಟರ್‌ಪಿಲ್ಲರ್‌ ತನ್ನ ವೇಷ ಬದಲಿಸುವ ಒಂದು ವಿಭಿನ್ನ ರೀತಿಯನ್ನು ಪ್ರದರ್ಶಿಸುತ್ತದೆ. ಅದು ತನ್ನ ದೇಹದಲ್ಲಿ ಪ್ರತಿಯೊಂದು ಬಗೆಯ ಮರದ ಅಂಶವನ್ನು ಸೇರ್ಪಡೆಗೊಳಿಸುತ್ತದೆ. ಅದು ಯಾವ ಮರದ ಅಂಶವನ್ನು ಸೇವಿಸುತ್ತದೋ  ಅದೇ ಮರದ ವಾಸನೆಯನ್ನು ಹೊರಸೂಸುತ್ತದೆ. ಈ ರೀತಿ ಅದು ಹಸಿವಿನಿಂದ ಕಂಗಾಲಾದ ಇರುವೆಗಳನ್ನು ವಂಚಿಸುತ್ತದೆ. ಇರುವೆಗಳು ಇದರ ಮೇಲಿನಿಂದಲೇ ಸಾಗುತ್ತವೆ. ಆದರೆ ಇರುವೆಗಳಿಗೆ ಒಂದಿಷ್ಟೂ ಸುಳಿವು ದೊರಕುವುದಿಲ್ಲ. ಒಂದು ವೇಳೆ ಕ್ಯಾಟರ್‌ಪಿಲ್ಲರ್‌ ಯಾವ ಮರದ ಮೇಲೆ ಕುಳಿತುಕೊಂಡಿರುತ್ತದೊ, ಆ ಮರದ ಅಂಶವನ್ನು ಸೇರ್ಪಡೆ ಮಾಡಿಕೊಂಡಿರದೇ ಇದ್ದರೆ ಇರುವೆಗಳು ಅದರ ವಾಸನೆಯನ್ನು ಗ್ರಹಿಸಿ ದಾಳಿ ಮಾಡಿಬಿಡುತ್ತವೆ.

ಹಾವೆಂಕಿನ್‌ ಫೈಲ್ ಫಿಶ್ ಹಿಂದೂ ಮಹಾಸಾಗರದ ಹವಳದ ದಿಬ್ಬಗಳ ನಡುವೆ ವಾಸಿಸುತ್ತದೆ. ಇದು ಎಕ್ರೊಪೊರಾ ಹವಳಗಳ ರೀತಿಯಲ್ಲಿ ತಿಂದು ಅದೇ ರೀತಿಯ ವಾಸನೆ ಹೊರಹೊಮ್ಮಿಸಿ ಬೇಟೆಗಾರ ಜಲಚರಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಈ ರೀತಿ ಹವಳದ ದಿಬ್ಬಗಳ ನಡುವೆ ವಾಸಿಸುವ ಏಡಿಗಳು, ಬೇಟೆ ಮೀನುಗಳು, ಹವಳಗಳನ್ನು ಸೇವಿಸುವ ಫೈಲ್ ‌ಫಿಶ್‌ ಮತ್ತು ಹವಳದ ವಾಸನೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲಾರ.

ವಂಚನೆಯ ಪ್ರಯೋಗವನ್ನು ಈ ಜೀವಜಂತುಗಳು ಕೇವಲ ತಮ್ಮ ಪ್ರಾಣವನ್ನಷ್ಟೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಡುವುದಿಲ್ಲ. ಕೆಲವು ಹೆದರುಪುಕ್ಕಲ ಪತಂಗಗಳು ಏಷ್ಯನ್‌ ಮೇಲ್‌ ಕಾರ್ನ್‌ ಬೋರರ್ಸ್‌ ಬಾವಲಿಗಳಂತೆ ಧ್ವನಿ ಹೊರಡಿಸಿ ಹೆಣ್ಣು ಪತಂಗಗಳನ್ನು ಹೆದರಿಸುತ್ತವೆ. ಈ ಅವಕಾಶದ ಲಾಭ ಪಡೆದುಕೊಂಡು ಗಂಡು ಪತಂಗಗಳು ಸಮಾಗಮ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಗಂಡು ಪತಂಗಗಳು ಸಂಭೋಗ ಕ್ರಿಯೆಯಲ್ಲಿ ಅಸಮರ್ಥವಾಗಿರುತ್ತವೆ. ಹೀಗಾಗಿ ಈ ತಂತ್ರ ಅನುಸರಿಸುತ್ತವೆ. ಮೇಲ್ ಯೋ ಪೀಚ್‌ ಪತಂಗಗಳು ಇದಕ್ಕೂ ದೊಡ್ಡ ತಂತ್ರ ಅನುಸರಿಸುತ್ತವೆ. ಅವು ಕೂಡ ಹೆಣ್ಣು ಸಂಗಾತಿಯ ಶೋಧ ಮಾಡುವಾಗ ಇದೇ ತೆರನಾಗಿ ಧ್ವನಿ ಹೊರಡಿಸುತ್ತವೆ.

– ಮೇನಕಾ ಗಾಂಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ