ಔಟ್‌ಫಿಟ್ ಮಾತ್ರವಲ್ಲ, ಆ್ಯಕ್ಸೆಸರೀಸ್‌ನ್ನೂ ಸಹ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ನ್ನಾಗಿ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಅವುಗಳನ್ನು ಆರಿಸುವಾಗ ನಿಮ್ಮ ಔಟ್‌ಫಿಟ್ ಮತ್ತು ಪರ್ಸನಾಲಿಟಿಯನ್ನು ಗಮನದಲ್ಲಿರಿಸಿಕೊಳ್ಳಿ.
ಬಾಲಿವುಡ್‌ನ ಅನೇಕ ನಾಯಕಿಯರು ಇಂತಹ ಆ್ಯಕ್ಸೆಸರೀಸ್ ಧರಿಸಿ ಮೋಹಕವಾಗಿ ಕಂಗೊಳಿಸುತ್ತಾರೆ. ನಿಮಗಾಗಿ ಆ್ಯಕ್ಸೆಸರೀಸ್ ಕೊಳ್ಳುವಾಗ ಈ ಅಂಶಗಳನ್ನು ಗಮನದಲ್ಲಿಡಿ :
ನೆಕ್‌ಪೀಸ್
ನಿಮ್ಮ ಜ್ಯೂವೆಲರಿ ಬಾಕ್ಸ್ ನಲ್ಲಿ ಬೇರೆ ಬೇರೆ ಸ್ಟೈಲ್ ಮತ್ತು ಶೇಪ್‌ನ ನೆಕ್‌ಪೀಸ್‌ಗಳನ್ನು ಇರಿಸಿಕೊಳ್ಳಿ. ಇವನ್ನು ಧರಿಸಿದ ಕೂಡಲೇ ನಿಮಗೆ ಸ್ಟೈಲಿಶ್ ಲುಕ್ಸ್ ಸಿಗುತ್ತದೆ.
– ಬ್ಲೌಸ್ ಮತ್ತು ಟೀಶರ್ಟ್ ಜೊತೆಗೆ ಲಾಂಗ್ ಲೆಂತ್ ನೆಕ್‌ಪೀಸ್ ಧರಿಸಿ.
– ಕಾಲರ್‌ವುಳ್ಳ ಔಟ್‌ಫಿಟ್‌ನೊಂದಿಗೆ ಮುತ್ತಿನ ನೆಕ್‌ಪೀಸ್ ಧರಿಸಿ. ಇದು ಗ್ಲಾಮರಸ್ ಲುಕ್ಸ್ ನೀಡುತ್ತದೆ.
– ಎಲಿಗೆಂಟ್ ಲುಕ್ಸ್ ಗಾಗಿ ಸ್ಪಾರ್ಕ್‌ಲಿಂಗ್ ನೆಕ್‌ಲೇಸ್ ಸೆಟ್ ಖರೀದಿಸಿ. ಇದು ಗೌನ್, ಒನ್‌ಪೀಸ್ ಮತ್ತು ಆಫ್‌ಶೋಲ್ಡರ್ ಡ್ರೆಸ್ ಜೊತೆಗೆ ಚೆನ್ನಾಗಿ ಒಪ್ಪುತ್ತದೆ.
– ಈಚಿನ ದಿನಗಳಲ್ಲಿ ಟ್ರೈಬಲ್ ನೆಕ್‌ಪೀಸ್ ಫ್ಯಾಷನ್‌ನಲ್ಲಿದೆ. ನೀವು ಅದನ್ನೂ ಧರಿಸಿ ನೋಡಬಹುದು.
– ಕಾಲೇಜ್ ಹುಡುಗಿಯ ಕಣ್ಸೆಳೆಯುವ ಲುಕ್ಸ್ ಗಾಗಿ 3-4 ನೆಕ್‌ಪೀಸ್‌ಗಳನ್ನು ಒಟ್ಟಿಗೆ ಧರಿಸಬಹುದು.
– ಫ್ಯಾಶನ್ ವೇರ್‌ನಲ್ಲಿ ಗಾರ್ಜಿಯಸ್ ಲುಕ್ಸ್ ಗಾಗಿ ಟೆಂಪಲ್ ಜ್ಯೂವೆಲರಿಯ ನೆಕ್‌ಪೀಸ್ ಧರಿಸಿ.
– ಎವರ್‌ಗ್ರೀನ್ ಬ್ಲ್ಯಾಕ್ ನೆಕ್‌ಪೀಸ್ ಎಲ್ಲ ಬಗೆಯ ಔಟ್‌ಫಿಟ್‌ಗಳಿಗೂ ಹೊಂದುತ್ತದೆ. ಇದನ್ನು ಕೊಳ್ಳಲು ಮರೆಯದಿರಿ.
– ನಿಯಾನ್ ಶೇಪ್‌ನ ನೆಕ್‌ಪೀಸ್ ಫ್ರೆಶ್‌ಲುಕ್ ನೀಡುತ್ತದೆ. ಇದರ ಕಲೆಕ್ಷನ್ ಸಹ ನಿಮ್ಮಲ್ಲಿರಲಿ.
ಇಯರ್‌ರಿಂಗ್ಸ್
ನಿಮಗೆ ನೆಕ್‌ಪೀಸ್ ಬೇಡವೆನಿಸಿದರೆ, ಕೇವಲ ಇಯರ್‌ರಿಂಗ್ಸ್ ಧರಿಸಿಯೂ ನೀವು ಸ್ಟೈಲಿಶ್ ಆಗಿ ಕಾಣಬಲ್ಲಿರಿ.
– ಬೋಲ್ಡ್ ಲುಕ್‌ಗಾಗಿ ದೊಡ್ಡದಾದ ಇಯರ್‌ರಿಂಗ್ಸ್ ಆರಿಸಿ.
– ಗೌನ್, ಡ್ರೆಸ್ ಮುಂತಾದವುಗಳ ಜೊತೆಗೆ ಡೈಮಂಡ್ ಅಥವಾ ಪರ್ಲ್ ಯ ದೊಡ್ಡ ಟಾಪ್ಸ್ ಧರಿಸಿ.
– ದಿನನಿತ್ಯದ ಉಡುಪಿನ ಜೊತೆ ಸಾಧಾರಣ ಅಳತೆಯ ಹ್ಯಾಂಗಿಂಗ್ ಇಯರ್‌ರಿಂಗ್ಸ್ ಧರಿಸಿ. ಇವು ಸ್ಟೈಲಿಶ್ ಆಗಿ ಕಾಣುತ್ತವೆ.
– ಶೋಲ್ಡರ್ ಲೆಂತ್ ಇಯರ್‌ರಿಂಗ್ಸ್ ತೊಟ್ಟಾಗ ನೀವು ಮೋಹಕವಾಗಿ ಕಾಣಬಲ್ಲಿರಿ.
– ಮಿಸ್‌ಮ್ಯಾಚ್ ಲುಕ್ಸ್ ಗಾಗಿ ವೆಸ್ಟರ್ನ್‌ವೇರ್ ಜೊತೆ ದೊಡ್ಡ ಝುಮುಕಿಗಳನ್ನು ಧರಿಸಿ.
– ಸೂಪರ್ ಸ್ಟೈಲಿಶ್ ಲುಕ್ಸ್ ಗಾಗಿ ಒಂದೇ ಕಿವಿಗೆ ಎಕ್ಸ್ ಟ್ರೀಮ್ ಲೆಂತ್ (ಭುಜದವರೆಗಿನ) ಇಯರ್‌ರಿಂಗ್ ಧರಿಸಿ.
– ಆಕರ್ಷಕ ಲುಕ್ಸ್ ಗಾಗಿ ಹಣ್ಣು, ಹೂವು ಅಥವಾ ಪ್ರಾಣಿಯ ಆಕಾರವುಳ್ಳ ಇಯರ್‌ರಿಂಗ್ ಧರಿಸಿ.
ಬ್ರೇಸ್‌ಲೆಟ್ (ಕಫ್)
ಕೈಗಳ ಸೌಂದರ್ಯವನ್ನು ಹೆಚ್ಚಿಸುವುದರ ಮೂಲಕ ನಿಮ್ಮ ಪರ್ಸನಾಲಿಟಿಗೂ ಮೆರುಗು ನೀಡಬಹುದು. ಇದಕ್ಕಾಗಿ ನಿಮ್ಮ ಜ್ಯೂವೆಲರಿ ಬಾಕ್ಸ್ ನಲ್ಲಿ ಬ್ರೇಸ್‌ಲೆಟ್‌ಗಳಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಿಕೊಡಿ.
– ಡೀಸೆಂಟ್ ಲುಕ್ಸ್ ಗೆ ಡೈಮಂಡ್ ಬ್ರೇಸ್‌ಲೆಟ್ ಧರಿಸಿ.
– ಡೆನಿಮ್ ಜೊತೆಗೆ ಲೆದರ್‌ನ ಕಫ್ ಬ್ರೇಸ್‌ಲೆಟ್ ಧರಿಸಬಹುದು.
– ಫ್ಪೆಶ್ ಲುಕ್ಸ್ ಗಾಗಿ ಬ್ರೈಟ್ ಶೇಡ್‌ನ ಬೀಡೆಡ್ ಬ್ರೇಸ್‌ಲೆಟ್ ಧರಿಸಿ.
– 3-4 ಬ್ರೇಸ್‌ಲೆಟ್‌ಗಳನ್ನು ಒಟ್ಟಿಗೆ ಧರಿಸುವುದರಿಂದಲೂ ಸ್ಟೈಲಿಶ್ ಲುಕ್ ಪಡೆಯಬಹುದು.
– ಗೋಲ್ಡ್ ಮತ್ತು ಸಿಲ್ವರ್ ಶೇಡ್‌ನ ಬ್ರೇಸ್‌ಲೆಟ್‌ಗಳು ನಿಮ್ಮ ಕಲೆಕ್ಷನ್‌ನಲ್ಲಿರಲಿ. ಇವು ಯಾವುದೇ ಡ್ರೆಸ್‌ನೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ.
– ಫ್ಯಾನ್ಸಿ ಲುಕ್ಸ್ ಗಾಗಿ ಬ್ಯಾಂಡ್ ಮಾದರಿಯ ಕಫ್‌ನ್ನು ಧರಿಸಬುಹುದು.
– ರಾಪ್ ಕಫ್‌ಗಳು ಡೆನಿಮ್ ಔಟ್‌ಫಿಟ್‌ನೊಂದಿಗೆ ಸುಂದರವಾಗಿ ತೋರುತ್ತವೆ.
ರಿಂಗ್ಸ್ ಬ್ರೇಸ್‌ಲೆಟ್ ಮಾತ್ರವಲ್ಲ, ಫಿಂಗರ್ ರಿಂಗ್ಸ್ ಅಂದರೆ ಉಂಗುರುಗಳೂ ಕೂಡ ನಿಮ್ಮ ಸೌಂದರ್ಯಕ್ಕೆ ಮೆರುಗು ನೀಡುತ್ತವೆ.
– ಬೋಲ್ಡ್ ಲುಕ್ಸ್ ಗಾಗಿ ಅತಿ ದೊಡ್ಡ ಅಳತೆಯ ಉಂಗುರ ಕೊಳ್ಳಿರಿ.
– ಫ್ಯಾಷನೆಬಲ್ ಲುಕ್ಸ್ ಗೆ ಡಬಲ್ ಫಿಂಗರ್‌ರಿಂಗ್ ಹಾಕಿಕೊಳ್ಳಿ.
– ಆಕರ್ಷಣೆಯ ಕೇಂದ್ರಬಿಂದುವಾಗಲು ಚೇನ್‌ರಿಂಗ್‌ನ್ನು ಹಾಕಿಕೊಳ್ಳಬಹುದು.
– ಸ್ಟೈಲಿಶ್ ಲುಕ್‌ಗೆ ಫುಲ್ ಫಿಂಗರ್ ರಿಂಗ್ ಉತ್ತಮ ಆಯ್ಕೆ.
– ಪೇರ್ ಫಿಂಗರ್ ರಿಂಗ್ ಮತ್ತು ಮಿಡಲ್ ಫಿಂಗರ್ ರಿಂಗ್‌ಗಳು ಈಚಿನ ದಿನಗಳಲ್ಲಿ ಫ್ಯಾಷನ್ ಆಗಿವೆ. ಅವುಗಳನ್ನು ಹಾಕಿ ನೋಡಬಹುದು.
– ನೇಲ್ ಆರ್ಟ್ ಮಾಡಲು ಸಮಯವಿಲ್ಲದಿದ್ದರೆ ನೇಲ್ ಆರ್ಟ್ ರಿಂಗ್‌ನ್ನೇ ಹಾಕಿಕೊಳ್ಳಿ.
ವಾಚ್
ನೀವು ಕೈಗೆ ಕಟ್ಟಿರುವ ಗಡಿಯಾರ ಸಮಯವನ್ನು ತಿಳಿಸುವುದರ ಜೊತೆಗೆ ನಿಮ್ಮ ವ್ಯಕ್ತಿತ್ವವನ್ನೂ ಪ್ರದರ್ಶಿಸುತ್ತವೆ. ಸ್ಟೈಲಿಶ್ ಲುಕ್ಸ್ ಗಾಗಿ ತಪ್ಪದೆ ವಾಚ್‌ನ್ನು ಕೊಳ್ಳಿರಿ.
– ಡಿಫರೆಂಟ್ ಲುಕ್ಸ್ ಗಾಗಿ ಕಾಲೇಜು ಕನ್ಯೆಯರು ಬ್ರೇಸ್‌ಲೆಟ್ ವಾಚ್ ಧರಿಸಬಹುದು.
– ಲೆದರ್ ಬೆಲ್ಟ್ ಹೊಂದಿರುವ ಗಡಿಯಾರ ಡೀಸೆಂಟ್ ಲುಕ್ಸ್ ನೀಡುತ್ತದೆ.
– ವೆಸ್ಟರ್ನ್ ವೇರ್‌ನೊಂದಿಗೆ ಕಫ್ ವಾಚ್ ಚೆನ್ನಾಗಿ ಹೊಂದಿಕೊಳ್ಳುತ್ತದೆ.
– ಸ್ಪೋರ್ಟ್ಸ್ ಲುಕ್ಸ್ ಗಾಗಿ ಸ್ಪೋರ್ಟ್ ವಾಚ್ ಉತ್ತಮ ಆಯ್ಕೆ.
– ದಿನನಿತ್ಯದ ಬಳಕೆಗೆ ಮೆಟಲ್ ವಾಚ್ ಖರೀದಿಸಿ.
– ಪಾರ್ಟಿ ಮುಂತಾದ ಸಮಾರಂಭಗಳಿಗೆ ಜ್ಯೊಡಿಯಾಕ್ ವಾಚ್ ಶೋಭೆ ನೀಡುತ್ತದೆ.
– ಫ್ರೆಶ್ ಲುಕ್ಸ್ ಗಾಗಿ ಔಟ್‌ಫಿಟ್‌ಗೆ ಹೊಂದುವಂತಹ ಬಣ್ಣಬಣ್ಣದ ಗಡಿಯಾರಗಳನ್ನು ಕಟ್ಟಿಕೊಳ್ಳಬಹುದು.
– ಜಿ. ಪವಿತ್ರಾ
ಸ್ಟೈಲ್ ಅಲರ್ಟ್
– ಎಲ್ಲ ಬಗೆಯ ಆ್ಯಕ್ಸೆಸರೀಸ್‌ನ್ನು ಒಟ್ಟಿಗೆ ಹಾಕಿಕೊಳ್ಳುವ ತಪ್ಪು ಮಾಡಬೇಡಿ. ಇದರಿಂದ ನಿಮ್ಮ ವ್ಯಕ್ತಿತ್ವ ಗಾಡಿಯಾಗಿ ಕಾಣಬಹುದು.
ಲಾಂಗ್ ನೆಕ್‌ಪೀಸ್ ಮತ್ತು ಹ್ಯಾಂಗಿಂಗ್ ಇಯರ್‌ರಿಂಗ್ಸ್ ಎರಡನ್ನೂ ಒಟ್ಟಿಗೆ ಹಾಕಿಕೊಳ್ಳಬೇಡಿ. ಎರಡರಲ್ಲಿ ಯಾವುದಾದರೂ ಒಂದನ್ನು ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಮಾಡಿಕೊಳ್ಳಿ.
– ಬ್ರೇಸ್‌ಲೆಟ್ ಜೊತೆಗೆ ವಾಚ್‌ನ್ನೂ ಕಟ್ಟಿಕೊಳ್ಳುವ ತಪ್ಪು ಮಾಡಬೇಡಿ. ಬ್ರೇಸ್‌ಲೆಟ್ ಹಾಕಿಕೊಳ್ಳಿ ಅಥವಾ ವಾಚ್.