ವಿವೇಕ್‌ ಕಳೆದ ಅನೇಕ ದಿನಗಳಿಂದ ತನ್ನ ಹೆಂಡತಿಯ ಜೊತೆಗೆ ಅಂತರಂಗದ ಕ್ಷಣಗಳನ್ನು ಕಳೆಯಲು ಕಾತುರದಿಂದಿದ್ದ. ಆದರೆ ಹೆಂಡತಿ ಶರ್ಮಿಳಾ ಏನೇನೊ ನೆಪವೊಡ್ಡಿ ಅವನ ಆಸೆಗೆ ತಣ್ಣೀರೆರಚುತ್ತಿದ್ದಳು. ದೈನಂದಿನ ನೆಪಗಳಿಂದ ಬೇಸತ್ತುಹೋದ ವಿವೇಕ್‌ ಒಂದು ದಿನ ಕೇಳಿಯೇಬಿಟ್ಟ, “ಏನಾಗಿದೆ ನಿನಗೆ? ನಾನು ಹತ್ತಿರಕ್ಕೆ ಬಂದರೆ ನೀನು ಏನಾದರೂ ನೆಪವೊಡ್ಡಿ ನನ್ನಿಂದ ದೂರ ಇರಲು ನೋಡ್ತೀಯಾ. ನಿನಗೆ ಏನಾಗಿದೆ ಎಂದು ಕನಿಷ್ಠ ಬಾಯ್ಬಿಟ್ಟು ಹೇಳಬಾರದೆ?”

ಅವನ ಮಾತು ಕೇಳಿ ಶರ್ಮಿಳಾ ಅಳತೊಡಗಿದಳು. “ನನಗೆ ಈಗ ಅದರಲ್ಲಿ ಆಸಕ್ತಿ ಉಳಿದಿಲ್ಲ. ಹೇಗೂ ಮಗುವಾಗಿದೆ. ನಮಗೆ ಈಗ ಸಮಾಗಮದ ಅವಶ್ಯಕತೆಯಾದರೂ ಏನಿದೆ?’’

ಹೆಂಡತಿಯ ಮಾತುಗಳನ್ನು ಕೇಳಿ ವಿವೇಕನಿಗೆ ಆಶ್ಚರ್ಯವಾಯಿತು. ಅಂತರಂಗದ ಕ್ಷಣಗಳ ಬಗ್ಗೆ ಅವಳ ಆಸಕ್ತಿ ಸಂಪೂರ್ಣವಾಗಿ ಹೊರಟುಹೋಗಿತ್ತು. ಇದೆಲ್ಲ ಹೇಗಾಯ್ತು ಎಂದು ಅವನಿಗೆ ತಿಳಿಯಲೇ ಇಲ್ಲ. ಆರಂಭದಲ್ಲಿ ಅವಳು ಸಮಾಗಮದಲ್ಲಿ ಭಾರಿ ಆಸಕ್ತಿ ತೋರಿಸುತ್ತಿದ್ದಳು.

love-wallpaper

ಈ ತೊಂದರೆ ಅನುಭವಿಸುತ್ತಿರುವವರು ಕೇbಲ ವಿವೇಕ್‌ ಮಾತ್ರವೇ ಅಲ್ಲ. ಇನ್ನೂ ಅನೇಕ ಪತಿಯರು ಇದ್ದಾರೆ. ಅವರು ಮಧ್ಯ ವಯಸ್ಸಿನಲ್ಲಿ ಮಕ್ಕಳಾದ ಬಳಿಕ ತಮ್ಮ ಹೆಂಡತಿಯರ ನಿರಾಸಕ್ತಿಯಿಂದ ರೋಸಿ ಹೋಗುತ್ತಾರೆ.

ಆಸಕ್ತಿ ಕಡಿಮೆಯಾಗುವುದೇಕೆ?

ಲೈಂಗಿಕ ತಜ್ಞ ಡಾ. ಶರತ್‌ ಹೀಗೆ ಹೇಳುತ್ತಾರೆ, “ಎಷ್ಟೋ ಸಲ ಗಂಡಹೆಂಡತಿಯ ನಡುವೆ ಪ್ರೀತಿಗೆ ಕೊರತೆ ಇರುವುದಿಲ್ಲ. ಆದರೂ ಅವರ ನಡುವೆ ಸೆಕ್ಸ್ ಗೆ ಸಮಸ್ಯೆ ಉದ್ಭವಿಸುತ್ತದೆ. ವಿವಾಹವಾದ ಆರಂಭದ ವರ್ಷಗಳಲ್ಲಿ ಲೈಂಗಿಕ ಉತ್ಸಾಹ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಕ್ರಮೇಣ ಅದು ಕಡಿಮೆಯಾಗುತ್ತಾ ಹೋಗುತ್ತದೆ. ಮನೆಯ ಜವಾಬ್ದಾರಿಗಳು ಹೆಚ್ಚುತ್ತಾ ಹೋದಂತೆ ಸೆಕ್ಸ್ ಬಗೆಗೆ ಉದಾಸೀನತೆ ಉಂಟಾಗುತ್ತದೆ. ಆ ಕಾರಣದಿಂದ ಗಂಡಹೆಂಡತಿ ನಡುವೆ ಅಂತರ ಹೆಚ್ಚುತ್ತ ಹೋಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಗಂಡಹೆಂಡತಿ ತಮ್ಮ ಲೈಂಗಿಕ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬೇಕು. ತಮ್ಮ ಆಸಕ್ತಿ, ಅನಾಸಕ್ತಿಯ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬೇಕು. ಈ ಕಾರಣಗಳ ಹೊರತಾಗಿ ಸಂಗಾತಿಗೆ ಯಾವ ಕಾರಣಗಳಿಂದ ಲೈಂಗಿಕ ಆಸಕ್ತಿ ಉಂಟಾಗುತ್ತಿಲ್ಲ ಎಂಬುದರ ಬಗ್ಗೆಯೂ ಕೇಳಿ ತಿಳಿದುಕೊಳ್ಳಿ. ಬಳಿಕ ಆ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ವಿಚಾರ ಮಾಡಿ. ಅಂತಹ ಪ್ರಯತ್ನ ನಿಮ್ಮಿಂದ ನಡೆದರೆ ನಿಮ್ಮ ಲೈಂಗಿಕ ಜೀವನ ಮತ್ತೆ ಮೊದಲಿಂತಾಗಬಹುದು.”

ಇದು ಕೂಡ ಒಂದು ಕಾರಣ

ವಯಸ್ಸು ಹೆಚ್ಚು ಹೋದಂತೆ ಒಬ್ಬ ಮಹಿಳೆ ಮೊದಲಿನ ಹಾಗೆ ಸಮಾಗಮದಲ್ಲಿ ಏಕೆ ಆಸಕ್ತಿ ತೋರಿಸುವುದಿಲ್ಲ? ಅಮೆರಿಕದಲ್ಲಿ ವೈದ್ಯರು ಹಾಗೂ ಸಂಶೋಧಕರ ಒಂದು ತಂಡ ಈ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ನಿರತವಾಯಿತು. ಇದರಿಂದ ಒಂದು ಮುಖ್ಯ ಮಾಹಿತಿ ಬಹಿರಂಗಗೊಂಡಿತು. ಅದು ನಿಶ್ಚಿತಾಗಿಯೂ ಮಹಿಳೆಯೊಬ್ಬಳ ಲೈಂಗಿಕ ಆಸಕ್ತಿಯ ಬಗ್ಗೆ ಪರಿಶೀಲನೆ ಮಾಡುತ್ತದೆ. ಎಷ್ಟೋ ಜನರು ಮಹಿಳೊಬ್ಬಳ ವಯಸ್ಸು ಅವಳ ಲೈಂಗಿಕ ಆಸಕ್ತಿಯ ಮೇಲೆ ಸಾಕಷ್ಟು ಮಟ್ಟಿಗೆ ಪರಿಣಾಮ ಬೀರುತ್ತದೆಂದು ಹೇಳುತ್ತಾರೆ. ಇದೇ ಕಾರಣದಿಂದ ವಯಸ್ಸು ಹೆಚ್ಚುತ್ತಾ ಹೋದಂತೆ ಒಬ್ಬ ಮಹಿಳೆಗೆ ಲೈಂಗಿಕತೆಯಲ್ಲಿ ಮೊದಲಿನ ಆಸಕ್ತಿ ಉಳಿದಿರುವುದಿಲ್ಲ. ಸಂಶೋಧನೆಯಿಂದ ಸ್ಪಷ್ಟವಾದ ಒಂದು ಸಂಗತಿಯಿಂದರೆ, ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಸಮಾಗಮದ ಆಸಕ್ತಿ ಕುಂದಲು ಕೇವಲ ಹೆಚ್ಚುತ್ತಿರುವ ವಯಸ್ಸೊಂದೇ ಕಾರಣವಲ್ಲ, ಅದು ಇನ್ನೊಂದು ಸಂಗತಿಯನ್ನು ಕೂಡ ಅಲಂಬಿಸಿರುತ್ತದೆ. ಅದೇನೆಂದರೆ, ಸಂಗಾತಿ. ಆರೋಗ್ಯ ಹೇಗಿದೆ ಹಾಗೂ ಆ ಸಂಗಾತಿ ಲೈಂಗಿಕ ಚಟುವಟಿಕೆಯಲ್ಲಿ ಎಷ್ಟರಮಟ್ಟಿಗೆ ಆಸಕ್ತಿ ತೋರಿಸುತ್ತಾನೆ/ಳೆ ಎಂಬುದೂ ಮುಖ್ಯವಾಗುತ್ತದೆ.

ಭಾವನಾತ್ಮಕ ಕಾರಣಗಳು

ಸಾಮಾನ್ಯ ಧೋರಣೆಗೆ ವಿಪರೀತ ಎಂಬಂತೆ ಮಧ್ಯ ವಯಸ್ಸಿನಲ್ಲೂ ಕೂಡ ಮಹಿಳೆಯರು ಕೇವಲ ಸಕ್ರಿಯರಾಗಿ ಅಷ್ಟೇ ಇರುವುದಿಲ್ಲ. ಅನೇಕ ಪ್ರಕರಣಗಳಲ್ಲಿ ಅವರ ಆಸಕ್ತಿ ಇನ್ನೂ ಹೆಚ್ಚಿಗೆ ಇರುವುದು ಕಂಡು ಬಂದಿದೆ. ಯಾವ ಮಹಿಳೆಯರು ಲೈಂಗಿಕವಾಗಿ ಸಕ್ರಿಯರಾಗಿರಲಿಲ್ಲವೋ ಅವರ ಅನಾಸಕ್ತಿಗೆ ಏನು ಕಾರಣ ಎಂದು ತಿಳಿದುಕೊಳ್ಳಲು ಪ್ರಯತ್ನಿಸಲಾಯಿತು. ಭಾವನಾತ್ಮಕ ಕಾರಣಗಳಿಂದ ಅವರಿಗೆ ಸಂಗಾತಿಯಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಿರುವುದು ಗೊತ್ತಾಯಿತು. ಸಂಗಾತಿಯಲ್ಲಿ ಆಸಕ್ತಿ ಕಡಿಮೆಯಾಗಿರುವುದು ಅಥವಾ ಯಾವುದೇ ಬಗೆಯ ಅಸಾಮರ್ಥ್ಯದ ಪರಿಣಾಮ ಮಹಿಳೆಯ ಮೇಲೆ ಉಂಟಾಗುತ್ತದೆ. ಬೇರೆ ಕೆಲವು ಕಾರಣಗಳಿಂದಲೂ ಅನೇಕ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ.

ವಯಸ್ಸು ಅಡ್ಡಿಯಾಗದು

ಈ ಸಂಶೋಧನೆಯಲ್ಲಿ ಪ್ರತಿಯೊಂದು ವಯೋಮಾನದವರ ಸೆಕ್ಸ್ ಗೆ ಸಂಬಂಧಪಟ್ಟ ಆಸಕ್ತಿಯನ್ನು ಸೇರ್ಪಡೆ ಮಾಡಲಾಗಿತ್ತು. ಅದರಲ್ಲಿ ಹಸ್ತಮೈಥುನ ಕೂಡ ಸೇರಿತ್ತು. ಈ ಸಂಶೋಧನೆಯ ಸಂದರ್ಭದಲ್ಲಿ ಮಹಿಳೆಯರ ಒಂದು ದೊಡ್ಡ ಗುಂಪು ಲೈಂಗಿಕ ಚಟುವಟಿಕೆಯಲ್ಲಿ ವಯಸ್ಸು ಹೆಚ್ಚಿದ್ದರೂ ಕೂಡ ಹೆಚ್ಚು ಸಕ್ರಿಯಾಗಿರುವುದು ತಿಳಿದುಬಂತು. ಸಂಶೋಧನೆಯಿಂದ ಸ್ಪಷ್ಟವಾದ ಮತ್ತೊಂದು ಸಂಗತಿಯೆಂದರೆ, ಒಬ್ಬ ಮಹಿಳೆಯ ವಯಸ್ಸಿಗೂ ಅವಳ ಲೈಂಗಿಕ ಸಕ್ರಿಯತೆಗೂ ಯಾವುದೇ ಸಂಬಂಧವಿಲ್ಲ. ಈ ಆಧಾರದ ಮೇಲೆ ಮನೋತಜ್ಞರು ಹಾಗೂ ಲೈಂಗಿಕ ಸಲಹೆಗಾರರು ಕೆಲವು ಕಾರಣ ಹಾಗೂ ಸಲಹೆಗಳನ್ನು ಕೊಟ್ಟಿದ್ದಾರೆ.

– ಯಾವುದಾದರೂ ಔಷಧಿಯ ದುಷ್ಪರಿಣಾಮದಿಂದ ನಿಮ್ಮ ಸಂಗಾತಿ ಲೈಂಗಿಕ ಆಸಕ್ತಿ ಕಳೆದುಕೊಳ್ಳಬಹುದು. ನಿಮ್ಮ ಸಮಸ್ಯೆ ಇದೇ ಆಗಿದ್ದರೆ, ವೈದ್ಯರನ್ನು ಭೇಟಿಯಾಗಿ.

– ಕೆಲವು ಮಹಿಳೆಯರು ಮಾನಸಿಕ ಒತ್ತಡದ ಕಾರಣದಿಂದಲೂ ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಾರೆ.

– ಮಕ್ಕಳಲ್ಲಿ ಹೆಚ್ಚು ವ್ಯಸ್ತರಾಗುವುದರಿಂದ ಮತ್ತು ಸಾಮಾಜಿಕ ನಂಬಿಕೆಗಳಿಂದಾಗಿ ಕೆಲವು ಮಹಿಳೆಯರಿಗೆ ತಾವು ಲೈಂಗಿಕತೆಯಲ್ಲಿ ಹೆಚ್ಚು ಆಸಕ್ತಿ ತೋರಿಸುವುದು ಸೂಕ್ತವಲ್ಲ ಎನಿಸುತ್ತದೆ.

– ಮಗು  ಹುಟ್ಟಿದ ಬಳಿಕ ಎಷ್ಟೋ ಮಹಿಳೆಯರು ತಮ್ಮ ದೇಹದ ಕುರಿತಂತೆ ಅಸಹಜತೆಯ ಭಾವ ತಾಳುತ್ತಾರೆ. ಅವರಲ್ಲಿ ಕೀಳರಿಮೆ ಮನೆ ಮಾಡುತ್ತದೆ. ಈ ಕಾರಣದಿಂದಲೂ ಅವರು ಸೆಕ್ಸ್ ಎಂದರೆ ಮೂಗು ಮುರಿಯುತ್ತಾರೆ.

– ಹೆಚ್ಚುತ್ತಿರುವ ವಯಸ್ಸಿನಲ್ಲಿ ಕೌಟುಂಬಿಕ ಮತ್ತು ಉದ್ಯೋಗದ ಹೆಚ್ಚುತ್ತಿರುವ ಹೊಣೆಗಾರಿಕೆಯಿಂದಲೂ ಅವರು ಸುಸ್ತಾಗಿ ಹೋಗುತ್ತಾರೆ. ಸಮಾಗಮಕ್ಕೆ ಅವರ ಬಳಿ ಸಾಕಷ್ಟು ಎನರ್ಜಿಯೂ ಉಳಿದಿರುವುದಿಲ್ಲ.

– ಎಷ್ಟೋ ಮಹಿಳೆಯರು ತಮ್ಮ ಪತಿಯ ಜೊತೆ ಏಕಾಂತ ಬಯಸುತ್ತಾರೆ. ಈ ಅವಕಾಶ ಸಿಗದಿದ್ದಾಗ ಅವರಲ್ಲಿ ಲೈಂಗಿಕತೆಯ ಬಗೆಗಿನ ಆಸಕ್ತಿ ಕುಗ್ಗುತ್ತದೆ.

– ಗಂಡಹೆಂಡತಿಯ ನಡುವೆ ಒತ್ತಡದಿಂದ ಕೂಡಿದ ಸಂಬಂಧವಿದ್ದರೆ, ಸಂಬಂಧ ಸರಿಯಾಗಿ ಇರದಿದ್ದರೆ ಅದು ಕೂಡ ಅವರ ಲೈಂಗಿಕ ಜೀವನದ ಮೇಲೂ ದುಷ್ಪರಿಣಾಮ ಬೀರಬಹುದಾಗಿದೆ.

ಸ್ತ್ರೀರೋಗ ತಜ್ಞೆ ಡಾ. ಅಂಜಲಿ ಅವರ ಪ್ರಕಾರ, ಕೆಲವು ರೋಗಗಳ ಕಾರಣದಿಂದಲೂ ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಮಾದಕ ದ್ರವ್ಯಗಳು, ಮದ್ಯಪಾನ ಹಾಗೂ ಧೂಮಪಾನದಿಂದಾಗಿ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮಧುಮೇಹ ಮಹಿಳೆಯರ ಲೈಂಗಿಕ ಆಸಕ್ತಿಗೆ ಕಡಿವಾಣ ಹಾಕುತ್ತದೆ. ಗರ್ಭಾವಸ್ಥೆ ಹಾಗೂ ಆ ಬಳಿಕ ಹಾರ್ಮೋನ್‌ ವ್ಯತ್ಯಾಸದ ಕಾರಣದಿಂದಾಗಿಯೂ ಮಹಿಳೆಯರ ಕಾಮಾಸಕ್ತಿಗೆ ಬ್ರೇಕ್‌ ಬೀಳುತ್ತದೆ.

ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಆ ಮಹಿಳೆ ಯಾವಾಗಲೂ ಏನೋ ಕಳೆದುಕೊಂಡ ರೀತಿಯಲ್ಲಿ ಇರುತ್ತಾಳೆ. ಅವಳು ಏನೇ ಯೋಚಿಸಿದರೂ ತದ್ವಿರುದ್ಧವಾಗಿ ಯೋಚಿಸುತ್ತಾಳೆ. ಅದರಲ್ಲಿಯೇ ತನ್ನೆಲ್ಲ ಎನರ್ಜಿಯನ್ನು ಕಳೆದುಕೊಳ್ಳುತ್ತಾಳೆ. ಸೆಕ್ಸ್ ಬಗ್ಗೆ ಯೋಚಿಸಲು ಕೂಡ ಆಕೆಯ ಬಳಿ ಸಮಯವಿರುವುದಿಲ್ಲ.

ಎಷ್ಟೋ ಮಹಿಳೆಯರು ಮದುವೆಯ ಅನೇಕ ವರ್ಷಗಳ ಬಳಿಕ ಸಾಕಷ್ಟು ದಪ್ಪಗಾಗಿ ಬಿಡುತ್ತಾರೆ. ಅದು ಕೂಡ ಅವರ ಲೈಂಗಿಕ ಆಸಕ್ತಿ ಕುಗ್ಗಲು ಕಾರಣವಾಗುತ್ತದೆ.

ಔಷಧಿಗಳೂ ಕೂಡ ಕಾರಣ

ಮನೋತಜ್ಞರ ಪ್ರಕಾರ, ಅದೆಷ್ಟೋ ಔಷಧಿಗಳು ಲೈಂಗಿಕ ಆಸಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಸೆಕ್ಸ್ ಗಾಗಿ ಅಗತ್ಯ ಹಾರ್ಮೋನುಗಳು ಹಾಗೂ ಆ ಸಂದೇಶವನ್ನು ಮೆದುಳಿಗೆ ತಲುಪಿಸಲು ನೆರವಾಗುವ ಡೋಪಾಮೈನ್‌ ಮತ್ತು ಸೆರೊಟೋಮಿನ್‌ ಹಾಗೂ ಲೈಂಗಿಕ ಅಂಗಗಳ ನಡುವೆ ಸೂಕ್ತ ಸಮತೋಲನ ಇರಬೇಕು. ಡೋಪಾಮೈನ್‌ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸುತ್ತದೆಯಾದರೆ, ಸೆರೋಟೊನಿನ್‌ ಆ ಕ್ರಿಯೆಯನ್ನು ಕುಗ್ಗಿಸುವ ಕೆಲಸ ಮಾಡುತ್ತದೆ. ಕೆಲವು ಔಷಧಿಗಳು ಈ ಹಾರ್ಮೋನುಗಳ ಮಟ್ಟದ ಮೇಲೆ ದುಷ್ಪರಿಣಾಮ ಬೀರಿದರೆ ಲೈಂಗಿಕಾಸಕ್ತಿ ಕುಗ್ಗುತ್ತದೆ. ನೋವು ನಿವಾರಕಗಳು, ಆಸ್ತಮಾ, ಅಲ್ಸರ್‌ನ ಔಷಧಿಗಳು ರಕ್ತದೊತ್ತಡ ಹಾಗೂ ಹಾರ್ಮೋನಿಗೆ ಸಂಬಂಧಪಟ್ಟ ಔಷಧಿಗಳು ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.

ಸೆಕ್ಸ್ ಆಸಕ್ತಿ ಹೆಚ್ಚಳ ಹೇಗೆ?

ಮಸಾಜ್‌ : ಸಂಗಾತಿಯ ಕೆಲವು ಅಂಗಗಳ ಮೇಲೆ ನಿಧಾನವಾಗಿ ಆಲಿವ್‌ ಆಯಿಲ್‌ ಮಸಾಜ್‌ ಮಾಡಿದರೆ, ಲೈಂಗಿಕ ಚಟುವಟಿಕೆಗಾಗಿ ಉತ್ಸಾಹ ತೋರಬಹುದು. ಆಲಿವ್‌ ಆಯಿಲ್‌ ನಿಮ್ಮಿಬ್ಬರ ಸಾಮೀಪ್ಯ ಹೆಚ್ಚಿಸುತ್ತದೆ. ಅದರಿಂದ ಪ್ರೀತಿಯ ಉನ್ಮಾದ ಹೆಚ್ಚುತ್ತದೆ. ಮಸಾಜ್‌ ಎಂತಹ ಒಂದು ಥೆರಪಿಯೆಂದರೆ, ಅದರಿಂದ ಕೇವಲ ದೇಹಕ್ಕಷ್ಟೇ ನಿರಾಳತೆ ದೊರೆಯುವುದಿಲ್ಲ. ನಿಮ್ಮಿಬ್ಬರ ನಡುವಿನ ಬೋರಿಂಗ್‌ ಸೆಕ್ಸ್ ಲೈಫ್‌ಗೆ ಹೊಸ ಹುರುಪು ದೊರೆಯುತ್ತದೆ. ನಿಮ್ಮ ಬೋರಿಂಗ್‌ ಲೈಫ್‌ಗೆ ಹೊಸ ಚೈತನ್ಯ ಲಭಿಸುತ್ತದೆ.

ಎಕ್ಸ್ ಪೆರಿಮೆಂಟ್‌ ಮಾಡಿ : ನಿಮ್ಮ ಸಂಗಾತಿ ಸೆಕ್ಶುಯಲ್‌ ಎಕ್ಸ್ ಪೆರಿಮೆಂಟ್‌ ಮಾಡದೇ ಇದ್ದರೆ ಅಥವಾ ಮಾಡಲು ಹೆದರುತ್ತಿದ್ದರೆ ಫ್ಯಾಂಟಸಿ ಲೋಕಕ್ಕೆ ನಿಮಗೆ ಸ್ವಾಗತ. ನೀವು ಸೆಕ್ಸ್ ಕುರಿತಂತೆ ಚೆನ್ನಾಗಿ ಫ್ಯಾಂಟಸಿ ಮಾಡಲು ಬಲ್ಲವರಾಗಿದ್ದರೆ, ನೀವು ಸಂಗಾತಿಯ ಜೊತೆಗೆ ಕಾಡಿಗೆ ಹೋಗದೆಯೂ ಕಾಡಿನ ಅದ್ಭುತ ಅನುಭವ ಮಾಡಿಕೊಳ್ಳಬಹುದು. ಇದರಿಂದ ಸಂಗಾತಿಯ ಬಗೆಗಿನ ಎಲ್ಲ ದೂರುಗಳೂ ನಿವಾರಣೆಯಾಗುವವು.

ಆಗಾಗ ಹನಿಮೂನ್‌ : ಸೆಕ್ಸ್ ಸಂಬಂಧದಲ್ಲಿ ಬೇಸರ ಅನಿಸದಿರಲು ಗಂಡಹೆಂಡತಿ ಪ್ರತಿವರ್ಷ ಹನಿಮೂನ್‌ ಪ್ರವಾಸ ಹಾಕಬೇಕು. ಇದಕ್ಕೆ ಮಾಮೂಲು ಪ್ರವಾಸ ಎಂದು ಹೇಳಿಕೊಳ್ಳದೆ ಹನಿಮೂನ್‌ಗೆ ಹೋಗುತ್ತಿದ್ದೇವೆ ಎಂದು ಹೇಳಿಕೊಳ್ಳಿ. ಇದರಿಂದ ಅವರಲ್ಲಿ ಒಂದು ಬಗೆಯ ಕಾತುರತೆ ಮೂಡುತ್ತದೆ. ಹನಿಮೂನ್‌ಗೆ ಹೋದಾಗ ಪರಸ್ಪರ ಮೊದಲ ಬಾರಿ ಕಳೆದ ರೊಮಾಂಚಕ ಕ್ಷಣಗಳನ್ನು ನೆನಪಿಸಿಕೊಳ್ಳಿ. ಈ ರೀತಿಯಾಗಿ ಸುತ್ತಾಟದಿಂದ ಹಾಗೂ ಹನಿಮೂನ್‌ ಬಗ್ಗೆ ಮಾತುಕತೆ ನಡೆಸುವುದರಿಂದ ಸೆಕ್ಸ್ ಸಂಬಂಧದ ನೆನಪು ತಾಜಾ ಆಗುತ್ತದೆ.

ಹೊಸತನ ರೂಢಿಸಿಕೊಳ್ಳಿ : ಸಮಾಗಮದ ಏಕತಾನತೆಯಿಂದ ನಿಮಗೆ ಬೋರ್‌ ಆಗಿದ್ದರೆ, ಹೊಸದೊಂದು ಬಗೆಯ ವಿಧಾನ ಅನುಸರಿಸಿ. ಸೆಕ್ಸ್ ಲೈಫ್‌ಗೆ ಹೊಸದೊಂದು ವ್ಯಾಖ್ಯಾನ ಬರೆಯಬಹುದು. ದಂಪತಿಗಳು ಪರಸ್ಪರ ಚರ್ಚಿಸಿ ಹೊಸ ಹೊಸ ಆಸನಗಳನ್ನು ಅನುಸರಿಸುವುದರಿಂದ ಸೆಕ್ಸ್ ಲೈಫ್‌ ನವೀಕರಣಗೊಳ್ಳುತ್ತದೆ.

ಸಂಗಾತಿಗೆ ಸಮಯ ಕೊಡಿ : ಮದುವೆಯಾದ ಕೆಲವು ವರ್ಷಗಳ ಬಳಿಕ ಕೆಲವು ದಂಪತಿಗಳಿಗೆ ಸಮಾಗಮದ ಬಗ್ಗೆ ತಮ್ಮ ಆಸಕ್ತಿ ಕುಗ್ಗಿದೆ ಎಂದು ಅನಿಸಲಾರಂಭಿಸುತ್ತದೆ. ಸಮಾಗಮದಲ್ಲಿ ಪಾಲ್ಗೊಳ್ಳುವುದು ಒಂದು ದೈನಂದಿನ ಕ್ರಿಯೆ ಎಂಬಂತೆ ಭಾಸವಾಗುತ್ತದೆ. ಹೀಗಾಗಿ ಅದನ್ನು ದೈನಂದಿನ ಕ್ರಿಯೆ ಎಂಬಂತೆ ಭಾವಿಸದೆ, ಅದನ್ನೊಂದು ವಿಶೇಷ ಎಂಬಂತೆ ಭಾವಿಸಿ. ನಿಮ್ಮ ಸಮಾಗಮ ಚಟುವಟಿಕೆ ವಾರಕ್ಕೆರಡು ಅಥವಾ ಒಂದೇ ಬಾರಿ ಆಗಿದ್ದರೂ ಅದನ್ನು ಮುಕ್ತವಾಗಿ ಆನಂದಿಸಿ. ನೀನು ನನ್ನ ಜೊತೆಗಿರುವುದು ಒಂದು ವಿಶೇಷ ಅನುಭೂತಿ ನೀಡುತ್ತದೆ ಎಂದು ಸಂಗಾತಿಗೆ ಹೇಳಿ.

ಇಬ್ಬರೂ ಎಂಜಾಯ್‌ ಮಾಡಿ : ಸಮಾಗಮ ಎನ್ನುವುದು ಕೇವಲ ಒಬ್ಬರ ಖುಷಿಯಲ್ಲ, ಅದು ಇಬ್ಬರಿಗೂ ಸೇರಿದ್ದು. ಹೀಗಾಗಿ ಒಬ್ಬರು ಮಾತ್ರ ತಮ್ಮ ಮನದ ಬಯಕೆಯನ್ನು ಆಸೆ, ಆಕಾಂಕ್ಷೆಗಳನ್ನು ಸಂಗಾತಿಯ ಮೇಲೆ ಹೇರಬಾರದು. ಸಂಗಾತಿ ಏನು ಹೇಳುತ್ತಾನೆ/ಳೆ ಎಂಬುದನ್ನು ಕೂಡ ಗಮನಿಸಬೇಕು. ಇಬ್ಬರೂ ಕೂಡಿಯೇ ಸಮಾಗಮದ ಸುಖವನ್ನು ಅನುಭವಿಸಬೇಕು.

ನಿಯಮಿತ ಸಮಾಗಮ : ಒತ್ತಡ ಮತ್ತು ದಣಿವು ಸಮಾಗಮದ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸತ್ಯ. ಅದೇ ರೀತಿ ಸಮಾಗಮ ಚಟುವಟಿಕೆ

ನಿಮ್ಮ ಜೀವನದಲ್ಲಿ ಉದ್ಭವಿಸುವ ಒತ್ತಡ ಮತ್ತು ತೊಂದರೆಗಳನ್ನು ನಿಭಾಯಿಸುವ ಶಕ್ತಿ ನೀಡುವ ಟಾನಿಕ್‌ನಂತೆ ಕೆಲಸ ಮಾಡುತ್ತದೆ ಎಂಬುದು ಕೂಡ ಅಷ್ಟೇ ಸತ್ಯ. ವಾರದಲ್ಲಿ ಕನಿಷ್ಠ 2-3 ಬಾರಿಯಾದರೂ ಸಮಾಗಮದ ಆನಂದ ಪಡೆಯಲು ಪ್ರಯತ್ನಿಸಿ. ಇದರಿಂದ ಲೈಂಗಿಕ ಜೀವನಕ್ಕೆ ಹೊಸದೊಂದು ಮಾಧುರ್ಯ ದೊರೆಯುತ್ತದೆ.

ಪರಸ್ಪರರ ಪ್ರೀತಿಯನ್ನು ಹೆಚ್ಚಿಸಿ : ಮದುವೆಯಾದ 1-2 ವರ್ಷಗಳ ತನಕ ಹೆಚ್ಚಿನ ಜೋಡಿಗಳ ಸಂಬಂಧ ಚೆನ್ನಾಗಿಯೇ ಇರುತ್ತದೆ. ಆದರೆ ಕಾಲಕ್ರಮೇಣ ಅವರ ಸಂಬಂಧದಲ್ಲಿ ಮೊದಲಿನ ಮಾಧುರ್ಯ ಉಳಿಯುವುದಿಲ್ಲ. ಇದಕ್ಕೆ ಕೆಲಸ ಕಾರ್ಯಗಳು ಹಾಗೂ ಇತರೆ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಇದರಿಂದಾಗಿ ಅವರಲ್ಲಿ ನಿಕಟರಾಗುವ ಅವಕಾಶಗಳು ಕಾರಣವಾಗಬಹುದು. ಸೆಕ್ಸ್ ಸಂಬಂಧದಲ್ಲಿ ವಿರಸ ಉಂಟಾಗಬಹುದು. ವೈವಾಹಿಕ  ಜೀವನದಲ್ಲಿ ಉದ್ಭವಿಸಿದ ಈ ತೆರನಾದ ಸಮಸ್ಯೆಗಳಿಂದ ಪಾರಾಗಲು ಗಂಡಹೆಂಡತಿ ಪರಸ್ಪರ ಮಾತುಕತೆ ನಡೆಸಲು ಸ್ವಲ್ಪ ಹೊತ್ತು ಮೀಸಲಿಟ್ಟುಕೊಳ್ಳಿ. ಆ ಸಮಯದಲ್ಲಿ ಪರಸ್ಪರರು ತಮ್ಮ ಮನದಿಚ್ಛೆಯನ್ನು ಹೇಳಿಕೊಳ್ಳಬೇಕು. ಅದರಲ್ಲಿ ದೂರುಗಳು ಏನಾದರೂ ಇದ್ದರೆ ಅವನ್ನು ನಿವಾರಿಸಲು ನಿಮ್ಮದೇ ಆದ ಪ್ರಯತ್ನ ಮಾಡಿ. ಪರಸ್ಪರರನ್ನು ಗೌರವಿಸಿ. ಇದರಿಂದ ಸೆಕ್ಸ್ ಲೈಫ್‌ ಮತ್ತಷ್ಟು ಉತ್ತಮಗೊಳ್ಳುತ್ತದೆ.

ನೀವೇ ಮುಂದುವರಿಯಿರಿ : ಸಾಮಾನ್ಯವಾಗಿ ಮಹಿಳೆಯರು ಸಮಾಗಮ ಚಟುವಟಿಕೆ ಆರಂಭಿಸಲು ಹಿಂದೇಟು ಹಾಕುತ್ತಾರೆ. ನೀವೇ ಮುಂದುವರಿಯಲು ತಪ್ಪೇನಿಲ್ಲ. ಹಾಗೆ ಮಾಡುವುದರಿಂದ ನೀವು ಖುಷಿಯ ಅನುಭೂತಿಯಲ್ಲಿ ತೇಲುವಂತೆ ಮಾಡುತ್ತದೆ. ಮಗು ಚಿಕ್ಕದಾಗಿದ್ದರೆ ಸೆಕ್ಸ್ ಲೈಫ್‌ನಲ್ಲಿ ಅಷ್ಟಿಷ್ಟು ತೊಂದರೆ ಅನಿಸುವುದು ಸಹಜವೇ ಸರಿ. ಅಂತಹ ಸಂದರ್ಭದಲ್ಲಿ ಮಗು ಮಲಗುವುದನ್ನು ಕಾಯುವ ಬದಲು ಅವಕಾಶ ಸಿಕ್ಕಾಗ ಪ್ರೀತಿಯಲ್ಲಿ ಮುಳುಗಿ.

ಫಿಟ್‌ನೆಸ್‌ ಬಗ್ಗೆಯೂ ಗಮನಹರಿಸಿ : ಒಳ್ಳೆಯ ಸೆಕ್ಸ್ ಲೈಫ್‌ಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್‌ ಆಗಿರುವುದು ಅತ್ಯವಶ್ಯ. ಅದಕ್ಕಾಗಿ ಸಮತೋಲನ ಆಹಾರ ಸೇವನೆ ಮಾಡಬೇಕು. ಅಷ್ಟಿಷ್ಟು ವ್ಯಾಯಾಮ ಕೂಡ ಮಾಡಿ. ಚೆನ್ನಾದಿ ನಿದ್ರೆ  ಮಾಡಿ. ಮದ್ಯ, ಸಿಗರೇಟು ಇವುಗಳಿಂದ ದೂರ ಇರಿ.

ಕಲ್ಪನೆ ಮಾಡಿಕೊಳ್ಳಿ : ಸಮಾಗಮದ ಸಮಯದಲ್ಲಿ ಯಾರನ್ನಾದರೂ ಕಲ್ಪಿಸಿಕೊಳ್ಳುವುದು ಖುಷಿ ನೀಡುತ್ತದೆ ಎಂದಾದರೆ ಹಾಗೆ ಮಾಡುವುದರಲ್ಲಿ ತಪ್ಪೇನಿಲ್ಲ. ಇದು ನಿಮ್ಮ ಸೆಕ್ಸ್ ನ ಆನಂದವನ್ನು ಹೆಚ್ಚಿಸುತ್ತದೆ. ಹೀಗೆ ಮಾಡುವಾಗ ಅಪರಾಧಿಪ್ರಜ್ಞೆ ತಾಳಬೇಡಿ.

ಫ್ರೆಶ್‌ ಮೂಡ್‌ನಲ್ಲಿ ಆನಂದ ಅನುಭವಿಸಿ : ದಂಪತಿಗಳಿಬ್ಬರೂ ಉದ್ಯೋಗಿಗಳಾಗಿದ್ದರೆ, ರಾತ್ರಿ ತಡವಾಗಿ ಮನೆಗೆ ಬರುವವರಾಗಿದ್ದರೆ ನಿಮ್ಮ ಸೆಕ್ಸ್ ಲೈಫ್‌ ಹೆಚ್ಚು ಕಡಿಮೆ ಇಲ್ಲವೇ ಇಲ್ಲ ಎಂದು ಹೇಳಬಹುದು. ನಿಮ್ಮ ಸಂಗಾತಿ ದಣಿದಿದ್ದರೆ ಸಮಾಗಮಕ್ಕೆ ಒತ್ತಡ ಹೇರಬೇಡಿ. ಹಾಗೇನಾದರೂ ಒತ್ತಡ ತಂದರೆ ಅವರು ಅದನ್ನು ಹೊರೆ ಎಂದು ಭಾವಿಸಬಹುದು.

ಒಂದಿಷ್ಟು ಡರ್ಟಿಟಾಕ್‌ : ಸೆಕ್ಸ್ ನ ಮೂಡ್‌ ಬರಲು ಏನು ಬೇಕಾದರೂ ಮಾಡಬಹುದು. `ಡರ್ಟಿ ಟಾಕ್ಸ್’ ಅಂದರೆ ಕೆಲವು ಪೋಲಿ ಮಾತುಗಳು ಕೂಡ ನಿಮಗೆ ಮೂಡ್‌ ಬರಲು ಕಾರಣವಾಗಬಹುದು. ಅವೇ ಮಾತುಗಳನ್ನು ಬಹಿರಂಗವಾಗಿ ಹೇಳಿಕೊಂಡರೆ ತಪ್ಪು. ಆದರೆ ಗಂಡ-ಹೆಂಡತಿ ಪರಸ್ಪರ ಹೇಳಿಕೊಂಡರೆ ತಪ್ಪೇನಿಲ್ಲ. ಗಂಡನಿಂದ ಅಂತಹ ಪೋಲಿ ಮಾತುಗಳನ್ನು ಕೇಳಿಸಿಕೊಳ್ಳಲು ಹೆಂಡತಿಯರು ಬಹಳ ಉತ್ಸುಕರಾಗಿರುತ್ತಾರೆ. ಆ ಮಾತುಗಳೇ ಅವರಿಗೆ ಮೂಡ್‌ ತರಲು ಸಹಾಯ ಮಾಡುತ್ತವೆ.

– ಶೀಲಾ ಜೈನ್‌

ಮಗು ಬಳಿಕ ಸೆಕ್ಸ್ ಅಂತ್ಯವಾಗುವುದಿಲ್ಲ. ಮಗು ಹುಟ್ಟಿದ ನಂತರ ಸೆಕ್ಸ್ ಕೊನೆಗೊಳ್ಳುತ್ತದೆಂದು ನೀವು ಭಾವಿಸುತ್ತೀರಾ? ಜಗತ್ತಿನಾದ್ಯಂತ ಈ ಕುರಿತಂತೆ ನಡೆದ ಅಧ್ಯಯನಗಳ ಪ್ರಕಾರ, ತಾಯಿಯಾದ ಕೆಲವೇ ತಿಂಗಳುಗಳ ಬಳಿಕ ಲೈಂಗಿಕ ಇಚ್ಛೆ ಸ್ವಾಭಾವಿಕವಾಗಿ ಮರುಕಳಿಸುತ್ತದೆ. ತಾಯಿಯಾದ 2-3 ತಿಂಗಳ ಬಳಿಕ ಸಮಾಗಮದಲ್ಲಿ ಪಾಲ್ಗೊಳ್ಳಬಹುದೆಂದು ವೈದ್ಯರು ಹೇಳುತ್ತಾರೆ.

ಆದರೆ ಇಷ್ಟು ಅವಧಿಯ ಬಳಿಕ ಕೆಲವು ಮಹಿಳೆಯರು ಸಹಜವಾಗಿ ಪಾಲ್ಗೊಳ್ಳಲು ಆಗುವುದಿಲ್ಲ.

ಇವನ್ನು ಕೆಲವು ಮಹಿಳೆಯರಂತೂ ಅದಕ್ಕಾಗಿ ಒಂದು ವರ್ಷಕ್ಕೂ ಮೇಲ್ಪಟ್ಟ ಅವಧಿ ತೆಗೆದುಕೊಳ್ಳುತ್ತಾರೆ. ಆರಂಭದಲ್ಲಿ ಅಂತರಂಗದ ಕ್ಷಣಗಳಿಗಾಗಿ ಸಮಯ ಹೊಂದಿಸುವುದು ಕಷ್ಟವಾಗುತ್ತದೆ. ಕ್ರಮೇಣ ಗಾಡಿ ಟ್ರ್ಯಾಕ್‌ಗೆ ಬರಲಾರಂಭಿಸುತ್ತದೆ. ಮಗುವಾದ ಬಳಿಕ ಲೈಂಗಿಕ ಇಚ್ಛೆಗೆ ಪೂರ್ಣವಿರಾಮ ಎನ್ನುವುದು ಸುಳ್ಳು. ಅಲ್ಲಿಂದ ಹೊಸ ಆರಂಭ ಎಂದುಕೊಂಡು ಶುರುಮಾಡಬೇಕು.

ಸಂಶೋಧನೆ ಪ್ರಕಾರ, ಮಗುವಿನ ಜನನದ ಬಳಿಕ ಕ್ಲೈಮ್ಯಾಕ್ಸ್ ತೀವ್ರತೆ ಹೆಚ್ಚುತ್ತದೆ. ಇದಕ್ಕೆ ಕಾರಣವೇನೆಂದರೆ ನರ್ವ್ ಎಂಡಿಂಗ್‌ಗಳು ಹೆಚ್ಚು ಸೆನ್ಸಿಟಿವ್‌ ಆಗಿರುತ್ತವೆ.

ಹೆಂಡತಿಯ ಮೂಡ್‌ ಹೀಗೆ ಹೆಚ್ಚಿಸಿ

ಮಹಿಳೆಯ ಬೆನ್ನು ಬಹಲ ಸೆನ್ಸಿಟಿವ್ ಆಗಿರುತ್ತದೆ. ಅಷ್ಟಿಷ್ಟು ಕತ್ತಲಿರಲಿ. ಮ್ಯೂಸಿಕ್‌ ಹಾಕಿ ಬಳಿಕ ಆಕೆಯ ಬೆನ್ನ ಮೇಲೆ ನಿಧಾನವಾಗಿ ಮಸಾಜ್‌ ಮಾಡಿ. ಮುಂದಿನ ಚಮತ್ಕಾರ ನಿಮಗೆ ಗೊತ್ತಾಗುತ್ತೆ.

ಆಕೆಯ ಕಿವಿಗಳ ಜೊತೆ ಆಟ ಆಡಿ. ಕಿವಿಯಲ್ಲಿ ಪ್ರೀತಿಯ ಮಾತುಗಳನ್ನು ಆಡಿ, ನಿಮ್ಮ ಮೂಡ್‌ ಬಗ್ಗೆ ಉಲ್ಲೇಖಿಸಲು ಮರೆಯಬೇಡಿ.

ಕೊರಳಿನಲ್ಲಿ ಕಚಗುಳಿ ಇಡಿ. ಇದು ಅವಳನ್ನು ಮೂಡ್‌ಗೆ ತರಲು ಸಹಾಯ ಮಾಡುತ್ತದೆ.

ಹೆಂಡತಿಯ ಪಾದಗಳ ಮಸಾಜ್‌ ಮಾಡಿ. ನಾನು ನಿನ್ನನ್ನು ಅದೆಷ್ಟು ಪ್ರೀತಿಸ್ತೀನಿ ಎನ್ನುವುದನ್ನು ಆಕೆಯ ಕಿವಿಯಲ್ಲಿ ಉಸುರಿ. ಆಕೆ ಮೂಡ್‌ ನಿಮಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ