ರಾಜಶ್ರೀ ಹಾಗೂ ಹರ್ಷಿತಾ ಇಬ್ಬರೂ ಗೆಳತಿಯರು. ಇಬ್ಬರೂ ಮಧ್ಯಮ ವರ್ಗದ ಸಾಕ್ಷರ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರಿಬ್ಬರೂ ಮಿತವ್ಯಯಿಗಳು, ಜೊತೆಗೆ ಕುಟುಂಬದ ಬಗ್ಗೆ ಅಪಾರ ಕಳಕಳಿ ಹೊಂದಿದವರು.

ಇಬ್ಬರ ನಡುವೆ ಒಂದೇ ಒಂದು ವ್ಯತ್ಯಾಸ ಇದೆ. ಅದು ದೈಹಿಕ ಸಮಾಗಮದ ಕುರಿತಾದದ್ದು. ಒಂದೇ ಮನೆಯಲ್ಲಿದ್ದೂ ಕೂಡ ರಾಜಶ್ರೀ ಶಶಿಕಾಂತ್‌ ದಂಪತಿಗಳ ನಡುವೆ ದೈಹಿಕ ಸಮಾಗಮ ನಡೆಯುವುದಿಲ್ಲ. ನಡೆದರೂ ಕೂಡ ಎಂದಾದರೊಮ್ಮೆ. ಇನ್ನೊಂದೆಡೆ, ಹರ್ಷಿತಾ ಹಾಗೂ ರಾಜಶೇಖರ್‌ ದೈಹಿಕ ಸಮಾಗಮದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ವಾರದಲ್ಲಿ ಒಂದರೆಡು ಬಾರಿಯಾದರೂ ಅವರು ದೈಹಿಕ ಸಮಾಗಮ ನಡೆಸದೆ ಇರುವುದಿಲ್ಲ. ರಾಜಶ್ರೀ ಸಮಾಗಮ ಚಟುವಟಿಕೆಯನ್ನು ಹೊಲಸು ಎಂಬಂತೆ ಭಾವಿಸಿದರೆ, ಹರ್ಷಿತಾ ಮಾತ್ರ ಅದನ್ನು ಹೊಲಸು ಎಂದು ತಿಳಿಯುವುದಿಲ್ಲ.

ಇದರಲ್ಲೇನು ವ್ಯತ್ಯಾಸ ಎಂದು ನೀವು ಕೇಳಬಹುದು? ಇದು ಬಹು ದೊಡ್ಡ ವ್ಯತ್ಯಾಸ. ಇತ್ತೀಚೆಗೆ ಇದೇ ಒಂದು ವ್ಯತ್ಯಾಸ ಇಬ್ಬರು ಗೆಳತಿಯರಲ್ಲೂ ಬಹುದೊಡ್ಡ ವ್ಯತ್ಯಾಸವನ್ನೇ ಉಂಟು ಮಾಡಿತು.

ಈ ಒಂದು ವ್ಯತ್ಯಾಸದಿಂದಲೇ ರಾಜಶ್ರೀ ತನ್ನ ದೈಹಿಕ ಸ್ವಚ್ಛತೆಯ ಬಗ್ಗೆ ಗಮನಹರಿಸದಾದಳು. ಅವಳೊಬ್ಬಳೇ ಅಲ್ಲ, ಅವಳ ಪತಿಯ ಸ್ಥಿತಿಯೂ ಇದೇ ಆಗಿತ್ತು. ಅವನಿಗೆ ವ್ಯಾಪಾರ ವಹಿವಾಟಿನಲ್ಲಿ ಸಮಯವೇ ಸಿಗುತ್ತಿರಲಿಲ್ಲ. ಯಾವಾಗ ನೋಡಿದರೂ ಗುಟ್ಕಾ ಅಗಿಯುತ್ತಿದ್ದರು.

ಸ್ವಚ್ಛತೆ ಕಲಿಸುವ ಸಮಾಗಮ

ಹರ್ಷಿತಾ ಅಡಿಯಿಂದ ಮುಡಿಯವರೆಗೂ ಸದಾ ಜಾಗೃತಳಾಗಿರುತ್ತಿದ್ದಳು. ಉತ್ತಮ ಹೊಂದಾಣಿಕೆ, ಪ್ರೀತಿ ಹಾಗೂ ನಿಯಮಿತ ಸಮಾಗಮದ ಚಟುವಟಿಕೆಯಿಂದ ಹರ್ಷಿತಾಳಿಗೆ ಪತಿ ತನ್ನನ್ನು ಯಾವಾಗ ಬೇಕಾದರೂ ಬಾಹುಬಂಧನದಲ್ಲಿ ಬಂಧಿಸಬಹುದು ಎಂದು ಅನಿಸುತ್ತಿತ್ತು. ಇದರ ಹಿಂದಿನ ಕಾರಣವೆಂದರೆ ಆಕೆ ಆಂತರಿಕ ಸ್ವಚ್ಛತೆಯ ಬಗ್ಗೆ ಆದ್ಯತೆ ಕೊಡುತ್ತಿದ್ದಳು.

ಈ ಒಂದು ವ್ಯತ್ಯಾಸದಿಂದಾಗಿಯೇ ರಾಜಶ್ರೀ ತನ್ನ ದೇಹ ಹಾಗೂ ಆಹಾರ ವಿಹಾರದ ಬಗ್ಗೆ ನಿರ್ಲಕ್ಷ್ಯ ತೋರಿಸಲಾರಂಭಿಸಿದ್ದಳು. ಮದುವೆಯ ಬಳಿಕ ತನ್ನ ದೇಹವನ್ನು ಆನಂದಿಸದೆ, ತನ್ನ ದೇಹವನ್ನು ಹೊಗಳುವವರು ಯಾರೂ ಇಲ್ಲದೇ ಇದ್ದಾಗ ಇದೇ ರೀತಿಯ ಸ್ಥಿತಿ ಬರುತ್ತದೆ. ರಾಜಶ್ರೀ ಇದಕ್ಕೊಂದು ಸ್ಪಷ್ಟ ಉದಾಹರಣೆ. ಕಾಲಕ್ರಮೇಣ ಅವಳ ದೇಹದಲ್ಲಿ ಹಲವು ಪದರು ಬೊಜ್ಜು ಸೇರಿಕೊಂಡಿತ್ತು. ಇನ್ನೊಂದೆಡೆ ಹರ್ಷಿತಾ ತನ್ನ ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಳು. ಹೀಗಾಗಿ ಅವಳು ಸ್ಲಿಮ್ ಆಗಿ ಕಾಣುತ್ತಿದ್ದಳು.

ಈ ಒಂದು ವ್ಯತ್ಯಾಸದ ಕಾರಣದಿಂದ ರಾಜಶ್ರೀ ಒಂದು ದಿನ ವೈದ್ಯರ ಮುಂದೆ ಹೋಗಿ ಕುಳಿತಿದ್ದಳು. ಹರ್ಷಿತಾ ಕೂಡ ಜೊತೆಗಿದ್ದಳು. ರಾಜಶ್ರೀಯ ಗುಪ್ತಾಂಗದಲ್ಲಿ ನೋವಿನ ಸಮಸ್ಯೆ ಇತ್ತು. ಅದು ಕಳೆದ ಅನೇಕ ದಿನಗಳಿಂದ ಇರುವಂತಹ ಸಮಸ್ಯೆ. ವೈದ್ಯರು ಆಕೆಗೆ ಇನ್‌ಫೆಕ್ಷನ್‌ ಆಗಿದೆ ಎಂದು ಹೇಳಿದರು. ಇನ್‌ಫೆಕ್ಷನ್‌ಗೆ ಮುಖ್ಯ ಕಾರಣ ಸ್ವಚ್ಛತೆಯ ಬಗ್ಗೆ ಗಮನ ಕೊಡದೇ ಇರುವುದಾಗಿದೆ. ಆ ಕಾರಣದಿಂದ ಸಮಸ್ಯೆ ಇನ್ನಷ್ಟು ಗಂಭೀರ ರೂಪ ತಳೆದಿದೆ ಎಂದು ಆಕೆಗೆ ವಿವರಿಸಿದರು.

ರಾಜಶ್ರೀಯ ಸಮಸ್ಯೆ ಹರ್ಷಿತಾಳ ಗಂಡನ ಕಿವಿಗೂ ಬಿದ್ದಿತು. ಹರ್ಷಿತಾ ಹಾಗೂ ಅವಳ ಗಂಡನ ಮಧ್ಯೆ ಯಾವುದೇ ವಿಷಯ ಪರಸ್ಪರ ವಿನಿಮಯವಾಗುತ್ತಿತ್ತು. ಅವರು ಯಾವುದೇ ವಿಷಯದ ಬಗೆಗಾದರೂ ಚರ್ಚೆ ಮಾಡುತ್ತಿದ್ದರು. ಹರ್ಷಿತಾ ರಾತ್ರಿ ಗಂಡನ ಮುಂದೆ ಗೆಳತಿಗೆ ವೈದ್ಯರು ಹೇಳಿದ ವಿಷಯವನ್ನು ತಿಳಿಸಿದಳು. ಹೆಂಡತಿಯ ಮಾತು ಕೇಳಿ ರಾಜಶೇಖರ್‌ ಹೇಳಿದ, “ನೀನು ನಿನ್ನ ಗೆಳತಿಗೆ ಸಮಾಗಮ ಕ್ರಿಯೆ ಹೊಲಸು ಚಟುವಟಿಕೆ ಅಲ್ಲ ಎಂಬುದನ್ನು ತಿಳಿಸಿ ಹೇಳಬೇಕು. ಸಮಾಗಮ ಚಟುವಟಿಕೆ ನಡೆಸದ ದಂಪತಿಗಳು ದೇಹದ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯತೆ ವಹಿಸುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ ಒಂದು ಸಂಗತಿಯನ್ನು ಅತ್ಯಂತ ಸ್ಪಷ್ಟವಾಗಿ ಹೇಳಬಲ್ಲೆ, ಅದೇನೆಂದರೆ, ಗಂಡಹೆಂಡತಿ ನಿಯಮಿತವಾಗಿ ಸಮಾಗಮ ನಡೆಸಿದರೆ, ಅವರು ಸ್ವಚ್ಛತೆಯ ಬಗ್ಗೆ ಯಾವುದೇ ನಿರ್ಲಕ್ಷ್ಯ ತೋರಿಸಲು ಸಾಧ್ಯವೇ ಇಲ್ಲ. ಅಂದರೆ ಯಾರು ಸಮಾಗಮದ ಆನಂದ ಪಡೆಯುತ್ತಾರೋ, ಅವರು ಹೆಚ್ಚು ಆರೋಗ್ಯದಿಂದಿರುತ್ತಾರೆ ಹಾಗೂ ನೈರ್ಮಲ್ಯದಿಂದಲೂ ಕೂಡಿರುತ್ತಾರೆ.”

ಸಮಾಗಮ ಔಷಧಿಯಂತೆ

ರಾಜಶೇಖರ್‌ ಹೇಳಿದ್ದು ಸರಿಯಾಗೇ ಇದೆ. ಗಂಡ-ಹೆಂಡತಿ ಪರಸ್ಪರರನ್ನು ಅತಿಯಾಗಿ ಪ್ರೀತಿಸುತ್ತಿದ್ದರೆ, ಆಗಾಗ ದೈಹಿಕವಾಗಿ ಒಂದಾಗಬೇಕಿದ್ದರೆ ಅವರು ತಮ್ಮ ದೈಹಿಕ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಇದರಿಂದ ಕೇವಲ ಅವರ ವ್ಯಕ್ತಿತ್ವವಷ್ಟೇ ಮೆರುಗು ಪಡೆಯುವುದಿಲ್ಲ. ಇಬ್ಬರ ನಡುವಿನ ಪ್ರೀತಿಯೂ ಹೆಚ್ಚುತ್ತದೆ. ಅನೇಕ ರೋಗಗಳು ಅವರಿಂದ ದೂರ ಓಡುತ್ತವೆ. ಇದರ ತದ್ವಿರುದ್ಧ ಎಂಬಂತೆ ಯಾವ ದಂಪತಿಗಳು ದೈಹಿಕ ಸಮಾಗಮದ ಬಗ್ಗೆ ಉದಾಸೀನರಾಗಿರುತ್ತಾರೋ, ಅವರು ತಮ್ಮ ನೈರ್ಮಲ್ಯದ ಬಗೆಗೂ ನಿರ್ಲಕ್ಷ್ಯ ತೋರುತ್ತಾರೆ.

ಎಲ್ಲರಿಗೂ ತಿಳಿದಿರುವಂತೆ ವೈವಾಹಿಕ ಜೀವನದಲ್ಲಿ ದೈಹಿಕ ಸಂಬಂಧಕ್ಕೆ ಎರಡು ಪ್ರಮುಖ ಉದ್ದೇಶಗಳಿರುತ್ತವೆ. ಮೊದಲನೆಯದು ಸಂತಾನೋತ್ಪತ್ತಿ, ಎರಡನೆಯದು ದೈಹಿಕ ತೃಪ್ತಿ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಅದರಿಂದ ಮೂರನೆಯದೊಂದು ಉದ್ದೇಶವನ್ನು ಸೃಷ್ಟಿಸಬಹುದು. ಅಂದಹಾಗೆ ಸಮಾಗಮದಿಂದ ಗಂಡ-ಹೆಂಡತಿ ಇಬ್ಬರೂ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಗಂಡ-ಹೆಂಡತಿಯ ನಡುವಿನ ಸಮಾಗಮ ಹಲವು ಅಡ್ಡಿ ಆತಂಕಗಳನ್ನು ನಿವಾರಿಸುವ ಔಷಧಿ ಎಂದು ಹೇಳಲಾಗುತ್ತದೆ. ಸೆಕ್ಸ್ ಗೆ ಸಂಬಂಧಪಟ್ಟಂತೆ ಜಗತ್ತಿನಾದ್ಯಾಂತ ಅನೇಕ ಸಂಶೋಧನೆಗಳು ನಡೆದಿವೆ ಹಾಗೂ ಈಗಲೂ ನಡೆಯುತ್ತಲೇ ಇವೆ. ಸಮಾಗಮದಿಂದಾಗುವ ಲಾಭಗಳ ಬಗೆಗೆ ತಜ್ಞರು ಏನೇನು ಹೇಳಿದ್ದಾರೆ ನೋಡಿ :

– ಗಂಡ-ಹೆಂಡತಿ ನಿಯಮಿತ ಅವಧಿಯಲ್ಲಿ ದೈಹಿಕ ಸಂಪರ್ಕ ಹೊಂದುತ್ತಿದ್ದರೆ, ಒತ್ತಡ ಹಾಗೂ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ದೈಹಿಕ ಒತ್ತಡ ಕಡಿಮೆಯಾದರೆ ಇತರೆ ರೋಗಗಳೂ ಹತ್ತಿರ ಸುಳಿಯುವುದಿಲ್ಲ.

– ವಾರದಲ್ಲಿ 1-2 ಬಾರಿಯ ಸಮಾಗಮದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

– ಸಮಾಗಮ ಕೂಡ ಒಂದು ವ್ಯಾಯಾಮವೇ ಹೌದು. ತಜ್ಞರ ಪ್ರಕಾರ, ಅರ್ಧ ಗಂಟೆಯ ಸಮಾಗಮ ಪ್ರಕ್ರಿಯೆ 90 ಕ್ಯಾಲೋರಿ ಕಡಿಮೆ ಮಾಡುತ್ತದೆ. ಸಮಾಗಮ ಚಟುವಟಿಕೆ ತೂಕ ಕೂಡ ಕಡಿಮೆಗೊಳಿಸಲು ನೆರವಾಗುತ್ತದೆ.

– ಒಂದು ಅಧ್ಯಯನದ ಪ್ರಕಾರ, ಯಾವ ದಂಪತಿಗಳು ವಾರದಲ್ಲಿ 1 ಅಥವಾ 2 ಬಾರಿ ಸಮಾಗಮ ಚಟುವಟಿಕೆ ನಡೆಸುತ್ತಾರೊ, ಅವರಲ್ಲಿ ಹೃದಯಾಘಾತದ ಸಾಧ್ಯತೆ ಶೇ.50ರಷ್ಟು ಕಡಿಮೆಯಾಗುತ್ತದೆ. ಹೀಗಾಗಲು ಮುಖ್ಯ ಕಾರಣವೇನೆಂದರೆ, ದೈಹಿಕ ಪ್ರೀತಿ ಒಂದು ರೀತಿಯಲ್ಲಿ ಭಾವನಾತ್ಮಕ ಪ್ರೀತಿಯ ಬಾಹ್ಯ ರೂಪವೇ ಆಗಿದೆ. ಯಾವಾಗ ನಾವು ದೈಹಿಕ ಪ್ರೀತಿಯಲ್ಲಿ ತೊಡಗಿರುತ್ತೇವೋ ಆಗ ನಮ್ಮ ಭಾವನೆಗಳ ಮನೆಯಂತಿರುವ ಹೃದಯ ಆರೋಗ್ಯದಿಂದಿರುತ್ತದೆ.

– ವಿಜ್ಞಾನಿಗಳ ಪ್ರಕಾರ, ಸಮಾಗಮ ಕ್ರಿಯೆ `ಫೀಲ್ ಗುಡ್‌’ ಅನುಭೂತಿಯ ಜೊತೆ ಜೊತೆಗೆ ಆತ್ಮಗೌರವ ಹೆಚ್ಚಿಸಲು ಕೂಡ ಸಹಾಯಕವಾಗಿದೆ.

– ದೈಹಿಕ ಸಂಬಂಧ ಪ್ರೀತಿಯ ಹಾರ್ಮೋನು `ಆ್ಯಕ್ಸಿಟೋಸಿನ್‌’ನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

– ಸಮಾಗಮ ಪ್ರಕ್ರಿಯೆ ದೇಹದೊಳಗಿನ ನೈಸರ್ಗಿಕ ಪೇನ್‌ಕಿಲ್ಲರ್‌ `ಎಂಡಾರ್ಫಿನ್‌’ನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅದರಿಂದ ಸಮಾಗಮದ ಬಳಿಕ ತಲೆನೋವು, ಮೈಗ್ರೇನ್‌ ಅಷ್ಟೇ ಏಕೆ, ಕೀಲುಗಳ ನೋವು ಕೂಡ ಅಷ್ಟಿಷ್ಟು ಕಡಿಮೆಯಾಗುತ್ತದೆ.

– ವಿಜ್ಞಾನಿಗಳ ಪ್ರಕಾರ, ಯಾವ ಪುರುಷರಿಗೆ ನಿಯಮಿತ ಅಂತರದಲ್ಲಿ ಸ್ಖಲನ ಆಗುತ್ತಿರುತ್ತದೋ ಅವರಿಗೆ ವಯಸ್ಸಾದಾಗ ಪ್ರೊಸ್ಟೇಟ್‌ ಸಮಸ್ಯೆ ಅಥವಾ ಪ್ರೊಸ್ಟೇಟ್‌ ಕ್ಯಾನ್ಸರ್‌ನ ಸಾಧ್ಯತೆ ಕಡಿಮೆಯಾಗುತ್ತದೆ.

– ಸಮಾಗಮ ಚಟುವಟಿಕೆ ನಿದ್ರೆ ಬರದಿರುವ ಸಮಸ್ಯೆಯನ್ನೂ ತೊಡೆದುಹಾಕುತ್ತದೆ. ಏಕೆಂದರೆ ಸಮಾಗಮದ ಬಳಿಕ ಚೆನ್ನಾಗಿ ನಿದ್ರೆ ಬರುತ್ತದೆ. ಸಮಾಗಮ ಚಟುವಟಿಕೆ ಒಂದು ಔಷಧಿಯಂತೆ ಕೆಲಸ ಮಾಡುತ್ತದೆ. ಅದೂ ಎಂತಹ ಒಂದು ಔಷಧಿಯೆಂದರೆ, ಅದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಹೀಗಾಗಿ ಗಂಡ-ಹೆಂಡತಿ ಆರೋಗ್ಯದಿಂದಿರಲು ಈ ಔಷಧಿ ಸೇವನೆಯನ್ನು ನಿಯಮಿತವಾಗಿ ಮಾಡಿ.

– ಸರಳಾ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ