ಎರಡನೇ ಮಗುವಿನ ಆಗಮನ ಹತ್ತು ಹಲವು ಖುಷಿಗಳನ್ನು ತರುತ್ತದೆ ಅದರ ಜೊತೆ ಜೊತೆಗೆ ಅದು ಅನೇಕ ಜವಾಬ್ದಾರಿಗಳನ್ನೂ  ಹೊತ್ತುಕೊಂಡು ಬರುತ್ತದೆ. ಹೀಗಾಗಿ ಎರಡನೇ ಮಗು ಮನೆಗೆ ಬಂದ ಬಳಿಕ ಏನೇನು ಬದಲಾವಣೆ ಆಗಬಹುದು ಎಂದು ಮೊದಲ ಮಗುವಿಗೆ ತಿಳಿ ಹೇಳುವುದು ಅತ್ಯವಶ್ಯಕ. ನಿಮ್ಮ ಕ್ರಮದಿಂದ ತಮ್ಮನೇ ಬರಲಿ, ತಂಗಿಯೇ ಬರಲಿ ಅದು ತನ್ನನ್ನು ತಾನು ಏಕಾಂಗಿ ಎಂದು ಭಾವಿಸುವುದು. ಆದರೆ ಅದರ ಜೊತೆ ಜೊತೆಗೆ ಪ್ರೀತಿಯನ್ನೂ ಹಂಚಬೇಕಾಗುತ್ತದೆ. ಸಮಯ ಹೊಂದಿಸಬೇಕಾಗುತ್ತದೆ. ಗಮನ ಕೇಂದ್ರೀಕರಿಸಬೇಕಾಗುತ್ತದೆ. ಈ ಎಲ್ಲ ಸಂಗತಿಗಳಿಗಾಗಿ ಮಗುವನ್ನು ಮೊದಲು ಸನ್ನದ್ದುಗೊಳಿಸಬೇಕಾಗುತ್ತದೆ.

ಸಿದ್ಧತೆಯ ಆರಂಭ ಹೇಗೆ? : ಎಷ್ಟೋ ಸಲ ಮಕ್ಕಳು ಮಾನಸಿಕವಾಗಿ ಅದಕ್ಕೆ ಸಿದ್ಧರಾಗುವುದಿಲ್ಲ. ಇಷ್ಟು ದಿನ ದೊರೆಯುತ್ತಿದ್ದ ಪ್ರೀತಿ ಹಾಗೂ ಅಟೆನ್ಶನ್‌ಗೇ ಇನ್ನು ಮುಂದೆ ಪಾಲುದಾರರೊಬ್ಬರು ಬರುತ್ತಾರೆಂದರೆ ಅದಕ್ಕೆ ಸಹಿಸಿಕೊಳ್ಳಲು ಆಗುವುದಿಲ್ಲ. ಇಂತಹ ಸಂದರ್ಭಲ್ಲಿ ಮಗುವನ್ನು ಭಾವನಾತ್ಮಕವಾಗಿ ನಿರ್ವಹಣೆ ಮಾಡಬೇಕು. ಏಕೆಂದರೆ ನೀವು ಮಗುವನ್ನು ಆ ಹಂತದಲ್ಲಿ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅವರ ಕೋಮಲ ಮನಸ್ಸು ಘಾಸಿಗೊಳ್ಳುತ್ತದೆ. ಇನ್ನೊಂದು ಮಗು ಬರುವುದು ಅದಕ್ಕೆ ಇಷ್ಟ ಇಲ್ಲದೆ ಇರಬಹುದು ಅಥವಾ ತನ್ನ ಪೋಷಕರು ಹಾಗೂ ಬರಲಿರುವ ಮಗುವಿನ ಬಗ್ಗೆ ಅದಕ್ಕೆ ಅತೃಪ್ತಿ ಹೆಚ್ಚುತ್ತಾ ಹೋಗಬಹುದು.

ಮೊದಲ ಮಗುವಿಗೆ ಹೆಚ್ಚು ಕಾಳಜಿ : ಎರಡನೇ ಮಗು ಅಂದರೆ ಈಗ ಹುಟ್ಟಿದ ಮಗು ಚಿಕ್ಕದಾಗಿರುವುದರಿಂದ ಆ ಮಗುವಿಗೆ ಹೆಚ್ಚಿನ ಕಾಳಜಿ ತೋರಿಸುವ ಅಗತ್ಯವಿಲ್ಲ. ಆದರೆ ಎರಡನೇ ಮಗುವಿನ ಜೊತೆ ಮೊದಲ ಮಗುವಿನ ಸಂಬಂಧ ಚೆನ್ನಾಗಿರಲು ನೀವು ಮೊದಲ ಮಗುವಿನ ಬಗ್ಗೆ ಅದಕ್ಕೆ ಅತೃಪ್ತಿ ಹೆಚ್ಚುತ್ತದೆ. ಹೀಗಾಗಿ ಇನ್ನೊಂದು ಮಗು ಬರುವ ಮುನ್ಸೂಚನೆ ದೊರೆಯುತ್ತಿದ್ದಂತೆ ಮೊದಲ ಮಗುವನ್ನು ಸನ್ನದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು. ಮಗು ಹುಟ್ಟುತ್ತಿದ್ದಂತೆಯೇ ಅದರ ಜೊತೆಗೆ ಒಡನಾಟ ಹೆಚ್ಚುವಂತೆ ನೋಡಿಕೊಳ್ಳಿ. ಸ್ತ್ರೀರೋಗ ತಜ್ಞೆ ಡಾ. ಪೂಜಾರ ಪ್ರಕಾರ ಮೊದಲ ಹಾಗೂ ಎರಡನೇ ಮಗುವಿನ ನಡುವೆ ವಯಸ್ಸಿನ ಅಂತರ ಹೆಚ್ಚಿಗೆ ಇರುವುದಿಲ್ಲ. ಆದಾಗ್ಯೂ ಮೊದಲ ಮಗು ತಿಳಿವಳಿಕೆಯುಳ್ಳದ್ದಾಗಿರುತ್ತದೆ. ಅವು ಎಲ್ಲ ಸಂಗತಿಗಳ ಬಗ್ಗೆ ಅನುಭೂತಿ ಮಾಡಿಕೊಳ್ಳುತ್ತಿರುತ್ತದೆ. ಹೀಗಾಗಿ ಅದು ಎರಡನೇ ಮಗುವನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸಲಾರದು ಹಾಗೂ ಕಿರಿಯ ಮಗುವಿನ ಜೊತೆ ತನ್ನ ನಿಕಟತೆ ಬೆಳೆಸಿಕೊಳ್ಳಬೇಕು ಎಂಬ ರೀತಿಯಲ್ಲಿ ನೀವು ಮೊದಲ ಮಗುವಿನ ಬಗ್ಗೆ ಕಾಳಜಿ ವಹಿಸಬೇಕು. ಮೊದಲ ಮಗು ಹೆರಿಗೆ ಹಾಗೂ ನಂತರದ ಬೆಳವಣಿಗೆಗಳನ್ನು ಗಮನಿಸುತ್ತಿರುತ್ತದೆ. ಹೀಗಾಗಿ ಎರಡನೇ ಮಗುವಿನ ಬಗ್ಗೆ ಪ್ರತಿಯೊಂದು ಆಗುಹೋಗುಗಳ ಸಂದರ್ಭದಲ್ಲಿ ಮೊದಲ ಮಗುವನ್ನು ಜೊತೆಗೇ ಇರಿಸಿಕೊಳ್ಳಿ.

ಗರ್ಭಾವಸ್ಥೆಯ ಸಂದರ್ಭದಲ್ಲಿ ಅಥವಾ ಹೆರಿಗೆಯ ಸಂರ್ಭದಲ್ಲಿ ಎರಡನೇ ಮಗುವಿಗಾಗಿ ಬಟ್ಟೆ ಅಥವಾ ಯಾವುದೇ ಸಲಕರಣೆಗಳನ್ನು ಖರೀದಿಸುವುದಿದ್ದರೆ, ಮೊದಲ ಮಗುವಿನ ಅಭಿಪ್ರಾಯ ಕೇಳಿ ಅಥವಾ ಅದರ ಆಸಕ್ತಿಗನುಗುಣವಾಗಿಯೇ ಖರೀದಿಸಿ. ಇದರಿಂದ ಅದರ ಮನಸ್ಸಿನಲ್ಲಿ ಅಸೂಯೆಯ ಭಾವ ಮೂಡದು. ಒಳ್ಳೆಯ ನಿಕಟತೆ ಬೆಳೆಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ