ವಿವೇಕ್‌ ಕಳೆದ ಅನೇಕ ದಿನಗಳಿಂದ ತನ್ನ ಹೆಂಡತಿಯ ಜೊತೆಗೆ ಅಂತರಂಗದ ಕ್ಷಣಗಳನ್ನು ಕಳೆಯಲು ಕಾತುರದಿಂದಿದ್ದ. ಆದರೆ ಹೆಂಡತಿ ಶರ್ಮಿಳಾ ಏನೇನೊ ನೆಪವೊಡ್ಡಿ ಅವನ ಆಸೆಗೆ ತಣ್ಣೀರೆರಚುತ್ತಿದ್ದಳು. ದೈನಂದಿನ ನೆಪಗಳಿಂದ ಬೇಸತ್ತುಹೋದ ವಿವೇಕ್‌ ಒಂದು ದಿನ ಕೇಳಿಯೇಬಿಟ್ಟ, ``ಏನಾಗಿದೆ ನಿನಗೆ? ನಾನು ಹತ್ತಿರಕ್ಕೆ ಬಂದರೆ ನೀನು ಏನಾದರೂ ನೆಪವೊಡ್ಡಿ ನನ್ನಿಂದ ದೂರ ಇರಲು ನೋಡ್ತೀಯಾ. ನಿನಗೆ ಏನಾಗಿದೆ ಎಂದು ಕನಿಷ್ಠ ಬಾಯ್ಬಿಟ್ಟು ಹೇಳಬಾರದೆ?''

ಅವನ ಮಾತು ಕೇಳಿ ಶರ್ಮಿಳಾ ಅಳತೊಡಗಿದಳು. ``ನನಗೆ ಈಗ ಅದರಲ್ಲಿ ಆಸಕ್ತಿ ಉಳಿದಿಲ್ಲ. ಹೇಗೂ ಮಗುವಾಗಿದೆ. ನಮಗೆ ಈಗ ಸಮಾಗಮದ ಅವಶ್ಯಕತೆಯಾದರೂ ಏನಿದೆ?’’

ಹೆಂಡತಿಯ ಮಾತುಗಳನ್ನು ಕೇಳಿ ವಿವೇಕನಿಗೆ ಆಶ್ಚರ್ಯವಾಯಿತು. ಅಂತರಂಗದ ಕ್ಷಣಗಳ ಬಗ್ಗೆ ಅವಳ ಆಸಕ್ತಿ ಸಂಪೂರ್ಣವಾಗಿ ಹೊರಟುಹೋಗಿತ್ತು. ಇದೆಲ್ಲ ಹೇಗಾಯ್ತು ಎಂದು ಅವನಿಗೆ ತಿಳಿಯಲೇ ಇಲ್ಲ. ಆರಂಭದಲ್ಲಿ ಅವಳು ಸಮಾಗಮದಲ್ಲಿ ಭಾರಿ ಆಸಕ್ತಿ ತೋರಿಸುತ್ತಿದ್ದಳು.

love-wallpaper

ಈ ತೊಂದರೆ ಅನುಭವಿಸುತ್ತಿರುವವರು ಕೇbಲ ವಿವೇಕ್‌ ಮಾತ್ರವೇ ಅಲ್ಲ. ಇನ್ನೂ ಅನೇಕ ಪತಿಯರು ಇದ್ದಾರೆ. ಅವರು ಮಧ್ಯ ವಯಸ್ಸಿನಲ್ಲಿ ಮಕ್ಕಳಾದ ಬಳಿಕ ತಮ್ಮ ಹೆಂಡತಿಯರ ನಿರಾಸಕ್ತಿಯಿಂದ ರೋಸಿ ಹೋಗುತ್ತಾರೆ.

ಆಸಕ್ತಿ ಕಡಿಮೆಯಾಗುವುದೇಕೆ?

ಲೈಂಗಿಕ ತಜ್ಞ ಡಾ. ಶರತ್‌ ಹೀಗೆ ಹೇಳುತ್ತಾರೆ, ``ಎಷ್ಟೋ ಸಲ ಗಂಡಹೆಂಡತಿಯ ನಡುವೆ ಪ್ರೀತಿಗೆ ಕೊರತೆ ಇರುವುದಿಲ್ಲ. ಆದರೂ ಅವರ ನಡುವೆ ಸೆಕ್ಸ್ ಗೆ ಸಮಸ್ಯೆ ಉದ್ಭವಿಸುತ್ತದೆ. ವಿವಾಹವಾದ ಆರಂಭದ ವರ್ಷಗಳಲ್ಲಿ ಲೈಂಗಿಕ ಉತ್ಸಾಹ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಕ್ರಮೇಣ ಅದು ಕಡಿಮೆಯಾಗುತ್ತಾ ಹೋಗುತ್ತದೆ. ಮನೆಯ ಜವಾಬ್ದಾರಿಗಳು ಹೆಚ್ಚುತ್ತಾ ಹೋದಂತೆ ಸೆಕ್ಸ್ ಬಗೆಗೆ ಉದಾಸೀನತೆ ಉಂಟಾಗುತ್ತದೆ. ಆ ಕಾರಣದಿಂದ ಗಂಡಹೆಂಡತಿ ನಡುವೆ ಅಂತರ ಹೆಚ್ಚುತ್ತ ಹೋಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಗಂಡಹೆಂಡತಿ ತಮ್ಮ ಲೈಂಗಿಕ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬೇಕು. ತಮ್ಮ ಆಸಕ್ತಿ, ಅನಾಸಕ್ತಿಯ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬೇಕು. ಈ ಕಾರಣಗಳ ಹೊರತಾಗಿ ಸಂಗಾತಿಗೆ ಯಾವ ಕಾರಣಗಳಿಂದ ಲೈಂಗಿಕ ಆಸಕ್ತಿ ಉಂಟಾಗುತ್ತಿಲ್ಲ ಎಂಬುದರ ಬಗ್ಗೆಯೂ ಕೇಳಿ ತಿಳಿದುಕೊಳ್ಳಿ. ಬಳಿಕ ಆ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ವಿಚಾರ ಮಾಡಿ. ಅಂತಹ ಪ್ರಯತ್ನ ನಿಮ್ಮಿಂದ ನಡೆದರೆ ನಿಮ್ಮ ಲೈಂಗಿಕ ಜೀವನ ಮತ್ತೆ ಮೊದಲಿಂತಾಗಬಹುದು.''

ಇದು ಕೂಡ ಒಂದು ಕಾರಣ

ವಯಸ್ಸು ಹೆಚ್ಚು ಹೋದಂತೆ ಒಬ್ಬ ಮಹಿಳೆ ಮೊದಲಿನ ಹಾಗೆ ಸಮಾಗಮದಲ್ಲಿ ಏಕೆ ಆಸಕ್ತಿ ತೋರಿಸುವುದಿಲ್ಲ? ಅಮೆರಿಕದಲ್ಲಿ ವೈದ್ಯರು ಹಾಗೂ ಸಂಶೋಧಕರ ಒಂದು ತಂಡ ಈ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ನಿರತವಾಯಿತು. ಇದರಿಂದ ಒಂದು ಮುಖ್ಯ ಮಾಹಿತಿ ಬಹಿರಂಗಗೊಂಡಿತು. ಅದು ನಿಶ್ಚಿತಾಗಿಯೂ ಮಹಿಳೆಯೊಬ್ಬಳ ಲೈಂಗಿಕ ಆಸಕ್ತಿಯ ಬಗ್ಗೆ ಪರಿಶೀಲನೆ ಮಾಡುತ್ತದೆ. ಎಷ್ಟೋ ಜನರು ಮಹಿಳೊಬ್ಬಳ ವಯಸ್ಸು ಅವಳ ಲೈಂಗಿಕ ಆಸಕ್ತಿಯ ಮೇಲೆ ಸಾಕಷ್ಟು ಮಟ್ಟಿಗೆ ಪರಿಣಾಮ ಬೀರುತ್ತದೆಂದು ಹೇಳುತ್ತಾರೆ. ಇದೇ ಕಾರಣದಿಂದ ವಯಸ್ಸು ಹೆಚ್ಚುತ್ತಾ ಹೋದಂತೆ ಒಬ್ಬ ಮಹಿಳೆಗೆ ಲೈಂಗಿಕತೆಯಲ್ಲಿ ಮೊದಲಿನ ಆಸಕ್ತಿ ಉಳಿದಿರುವುದಿಲ್ಲ. ಸಂಶೋಧನೆಯಿಂದ ಸ್ಪಷ್ಟವಾದ ಒಂದು ಸಂಗತಿಯಿಂದರೆ, ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಸಮಾಗಮದ ಆಸಕ್ತಿ ಕುಂದಲು ಕೇವಲ ಹೆಚ್ಚುತ್ತಿರುವ ವಯಸ್ಸೊಂದೇ ಕಾರಣವಲ್ಲ, ಅದು ಇನ್ನೊಂದು ಸಂಗತಿಯನ್ನು ಕೂಡ ಅಲಂಬಿಸಿರುತ್ತದೆ. ಅದೇನೆಂದರೆ, ಸಂಗಾತಿ. ಆರೋಗ್ಯ ಹೇಗಿದೆ ಹಾಗೂ ಆ ಸಂಗಾತಿ ಲೈಂಗಿಕ ಚಟುವಟಿಕೆಯಲ್ಲಿ ಎಷ್ಟರಮಟ್ಟಿಗೆ ಆಸಕ್ತಿ ತೋರಿಸುತ್ತಾನೆ/ಳೆ ಎಂಬುದೂ ಮುಖ್ಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ