ಬಂತಿದೋ ಅಚ್ಛೇ ದಿನ್!
ಯಾರು ಹೊಸ ಫ್ಲಾಟುಗಳನ್ನು ಖರೀದಿಸಿ, ಇನ್ನೇನು ನಮಗೆ ಒಳ್ಳೆಯ ದಿನಗಳು ಬಂದೇಬಿಟ್ಟವು ಎಂದು ಸಂಭ್ರಮಿಸುತ್ತಿದ್ದಾರೋ, ತಮ್ಮ ಹೂಡಿಕೆಯ ಹಣ ಹೆಚ್ಚಲಿದೆ ಅದು ಎರಡು ನಾಲ್ಕು ಪಟ್ಟು ಹಣ ತಂದುಕೊಡಲಿದೆ ಎಂದು ಹಿಗ್ಗುತ್ತಿದ್ದರೆ, ಅದೆಲ್ಲ ಮರೆತುಬಿಡಿ! ನಮ್ಮ ದೇಶದಲ್ಲಿ ಮನೆಗಳ ಬೆಲೆ ದಿನೇದಿನೇ ಎಷ್ಟು ಕುಗ್ಗುತ್ತಿದೆ ಎಂದರೆ, ಎದುರೆದುರಿಗೆ ಬಾಯಿಮಾತಿನಲ್ಲಿ ಅದರ ಕುಗ್ಗುತ್ತಿರುವ ಬೆಲೆ ಗಮನಿಸಬಹುದು. ಇದು ಪ್ರಗತಿಯ ನೆಗೆಟಿವೆ ಗ್ರೋಥ್ ಅಂದ್ರೆ ಪತನದ ಸಂಕೇತ ಎಂದೇ ಹೇಳಬಹುದು. ಯಾರಿಗೆ ಮನೆ ಇಲ್ಲವೋ ಅವರು ಮನೆ ಖರೀದಿಸುವಷ್ಟು ಹಣ ಹೊಂದಿಸುವ ಗೊಡವೆಗೇ ಹೋಗುತ್ತಿಲ್ಲ.
ಮನೆಗಳ ಸೆಕ್ಟರ್ ಸುಧಾರಿಸುವ ನೆಪದಲ್ಲಿ ರಿಯಲ್ ಎಸ್ಟೇಟ್ ಕಾನೂನು ಮತ್ತು ರೆಜಿಸ್ಚ್ರೇಷನ್ ಸಹ ಶುರುವಾಗಿದೆ. ಮತ್ತೊಂದೆಡೆ ನೋಟ್ ಬಂದ್ ಹಗರಣ ಇದ್ದೇ ಇದೆ. ಈ ಗೇಮ್ ನಲ್ಲಿ ಈಗ ಹಣ ಹೂಡುವವರೇ ಇಲ್ಲ, ಯಾರೂ ಹೂಡಿದ್ದಾರೋ ಅವರು ಕೆಟ್ಟರೆಂದೇ ಅರ್ಥ. ದೆಹಲಿಯ ಹತ್ತಿರದ ಕಾರ್ಯನಿರತ ಸಮೂಹ ಈಗಾಗಲೇ ದಿವಾಳಿ ಎದ್ದಿದೆ. ಆಮ್ರಪಾಲಿ ಗ್ರೂಪ್ ಸಹ ಮುಳುಗಿದೆ ಎಂದೇ ಅರ್ಥ.
ಬ್ಯಾಂಕುಗಳಂತೂ ಈ ಕ್ಷೇತ್ರಕ್ಕೆ ಸಾಲ ಕೊಡುವುದನ್ನೇ ನಿಲ್ಲಿಸಿಬಿಟ್ಟಿವೆ. ಯಾರಿಗೆ ಕೊಟ್ಟಿವೆಯೋ ಅವರಿಂದ ವಸೂಲಿಗೆ ಸತತ ದುಡಿಯುತ್ತಿವೆ. ಈ ಕ್ಷೇತ್ರದಲ್ಲಿ ಕನ್‌ಸ್ಟ್ರಕ್ಷನ್ ಸ್ಥಿತಿಯಲ್ಲಿರುವ ಫ್ಲಾಟುಗಳಿಗೆ ಲಕ್ಷಾಂತರ ಜನ ತಮ್ಮ ಜೀವಮಾನದ ಬಂಡವಾಳವನ್ನು ಹೂಡಿದ್ದಾರೆ. ಅವರೆಲ್ಲರೂ ಈಗ ಪ್ರಗತಿಯ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗಲು ಬಯಸುತ್ತಿದ್ದಾರೆ, ಆದರೆ ಅವರ ಬಂಡವಾಳವೇ ಕೊಚ್ಚಿಹೋಗುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನ್ಯಾಷನಲ್ ಬ್ಯಾಂಕಿಂಗ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರಜನೀಶ್ ಕುಮಾರ್ ಮಾತನಾಡಿ, ಸಾಲ ಕೊಡುವ ಬ್ಯಾಂಕ್ ನಮ್ಮ ನಷ್ಟ ಭರಿಸುತ್ತದೆ. ಫ್ಲಾಟುಗಳಿಗೆ ಹಣ ಹೂಡುವ ಸಾಮಾನ್ಯ ನಾಗರಿಕರ ಹಣ ಸುರಕ್ಷಿತವಾಗಿರುತ್ತದೆ ಎಂಬುದು ಕೇವಲ ಭ್ರಮೆ, ನಷ್ಟ ಇಬ್ಬರಿಗೂ ಆಗುತ್ತದೆ, ಎಂದು ಸ್ಪಷ್ಟಪಡಿಸಿದರು.
ಅಸಲಿಗೆ ನೇರವಾಗಿ ಮನೆ ಕೊಂಡವರಿಗೇ ಹೆಚ್ಚು ನಷ್ಟ. ಇವರು ಯಾರದೋ ಮಾತು ಕೇಳಿಕೊಂಡು ಅಥವಾ ಜಾಹೀರಾತಿನ ಜಾಲಕ್ಕೆ ಸಿಲುಕಿ ಹೀಗೆ ಹಣ ಹೂಡಿರುತ್ತಾರೆ. ಸರ್ಕಾರದ ಹದಗೆಟ್ಟ ಆರ್ಥಿಕ ವ್ಯವಸ್ಥೆ ಹಾಗೂ ಅದರ ನೀತಿ ನಿಯಮಾವಳಿಗಳು ಹೀಗೆ ಅತಿ ದುರ್ಬಲಗೊಂಡು ತಮ್ಮ ಬುಡಕ್ಕೇ ಕಿಚ್ಚಿಡುತ್ತದೆ ಎಂದು ಈ ಮುಗ್ಧರಿಗೆ ತಿಳಿಯಬೇಕು ಹೇಗೆ? ರಿಯಲ್ ಎಸ್ಟೇಟ್‌ನ ಕುಸಿತದಿಂದಾಗಿ ಹೂಡಿಕೆದಾರರಿಗೆ ಈ ಗತಿ ಬಂದಿದೆ.
ಬಿಲ್ಡರ್ ಮಹಾಶಯರು ಬೇಕಾದಷ್ಟು ಲಾಭ ಗಿಟ್ಟಿಸಿಕೊಂಡಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದರೆ ಅದಕ್ಕಾಗಿ ಅವರು ತೆಗೆದುಕೊಂಡಿರುವ ರಿಸ್ಕ್ ಸಹ ಅಷ್ಟೇ ಭಾರಿ ಇದೆ. ಅಂಥವರು ಲಾಭ ಬಿಟ್ಟಾರೆಯೇ? ಹೀಗಾಗಿಯೇ ಎಲ್ಲಾ ಬ್ಯಾಂಕುಗಳೂ ಬಿಲ್ಡರ್ಸ್‌ಗೆ ತುಂಬಿ ತುಂಬಿ ಸಾಲ ನೀಡಿದವು, ಹಾಗೆಯೇ ಇಂಥ ಫ್ಲಾಟ್ ಗ್ರಾಹಕರಿಗೂ ಮಾಸಿಕ ವೇತನದ ಆಧಾರದಿಂದ ಕಂತುಗಳಲ್ಲಿ ಚುಕ್ತಾ ಮಾಡಲು ಧಾರಾಳ ಸಾಲ ನೀಡಿತು. ಈ ದಂಧೆಯಲ್ಲಿ ಮೂಲಭೂತ ಕೊರತೆ ಇದ್ದಿದ್ದರೆ, ಲಕ್ಷಾಂತರ ಜನ ಇಂದು ಫ್ಲಾಟುಗಳಲ್ಲಿ ಸುಖವಾಗಿ ವಾಸಿಸಲು ಸಾಧ್ಯವಿರುತ್ತಿರಲಿಲ್ಲ.
ಬಿಲ್ಡರ್‌ಗಳಿಗೆ ಸರ್ಕಾರ ದಿನೇದಿನೇ ಹೊಸ ಹೊಸ ಕಾನೂನು ಕಾಯಿದೆ ಮಾಡುತ್ತಾ, ಹೊಸ ಹೊಸ ಅನುಮತಿ ಪಡೆಯಬೇಕೆಂಬ ಜಾಲದಲ್ಲಿ ಸಿಗಿಸುತ್ತಿದೆ. ಹೀಗಾಗಿ ಆಯಾ ವಿಭಾಗದ ಗೇಟ್ ಕಾಯುವ ಸೆಕ್ಯುರಿಟಿಯಿಂದ, ಒಳಗಿನ ಮಂತ್ರಿ ಮಹೋದಯರವರೆಗೆ ಎಲ್ಲರೂ ನುಂಗಣ್ಣರೇ ಆಗಿದ್ದಾರೆ! ಸೈಟು ಪ್ರಜೆಗಳದು, ಅದರ ಕಷ್ಟನಷ್ಟಗಳು ಪ್ರಜೆಗಳದು, ಹಣ ಪ್ರಜೆಗಳದು…. ಆದರೆ `ಬೇಕೋ ಬೇಡವೋ ಅತಿಥಿಯಾಗಿ ಬಂದಿದ್ದೇನೆ ಆದರಿಸಿ’ ಎಂಬ ಅಭ್ಯಾಗತನಂತೆ ನಡುವೆ ಮೂಗು ತೂರಿಸಿ ವರ್ತಿಸುತ್ತಿದೆ ಸರ್ಕಾರ.
ಇದೀಗ ಕಪ್ಪು ಹಣವನ್ನು ಸಂಪೂರ್ಣ ಉಚ್ಚಾಟಿಸುವ ಹುಮ್ಮಸ್ಸಿನಲ್ಲಿ ಹಣದ ಬೇರನ್ನೇ ಕಿತ್ತು ಹಾಕಲಾಗುತ್ತಿದೆ. ಬೀಜ ಬಿತ್ತಬೇಕಾದ ರೈತನೇ ಅದನ್ನು ಬೇಯಿಸಿ ತಿಂದರೆ, ಬರ ಬರದೆ ಇದ್ದೀತೇ? ಬಿಲ್ಡರ್ ಕ್ಷೇತ್ರದಲ್ಲಿ ಈಗಾಗಲೇ ಇದು ಬಂದುಬಿಟ್ಟಿದೆ. ಇದೀಗ ಮನೆಗಳು ಬಿಕರಿ ಇಲ್ಲದೆ ನಿಲ್ಲಬೇಕಾದ ಸ್ಥಿತಿ ಬಂದಿದೆ. ಮನೆ ಇದೆ….. ಕೊಳ್ಳುವವರಿಲ್ಲ ಎಂದಾಗಿದೆ. ಛಾವಣಿ ಇದ್ದರೂ ಜನ ಮಾತ್ರ ಸೂರಿಲ್ಲದೆ ಬೀದಿ ಪಾಲಾಗಿದ್ದಾರೆ.
ಇದೇ ಕಾರಣದಿಂದ ಇತ್ತೀಚೆಗೆ ಪ್ರಕಟಿಸಲಾದ ಒಂದು ಸರ್ವೆಯಲ್ಲಿ, ದೇಶದ ಅಧಿಕಾಂಶ ಜನತೆ ಬಳಿ ಕೈದಿಗಳ ಬಳಿ ಇರುವಷ್ಟೂ ತಲೆಯ ಮೇಲೆ ಸೂರಿಲ್ಲವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅಚ್ಚುಕಟ್ಟಾಗಿ ತಯಾರಾಗುತ್ತಿದ್ದ ಮನೆಗಳು ಉತ್ತಮ ವಿಕಾಸ ಹಾಗೂ ಸುವ್ಯವಸ್ಥಿತ ಆಡಳಿತದ ಹೊಳೆಯಲ್ಲಿ ಕೊಚ್ಚಿಹೋಗುತ್ತಿವೆ.
ಪ್ರೈವೆಸಿ ಮೇಲೆ ಸರ್ಕಾರದ ಕಾವಲು
ಹಿಂದೆಲ್ಲ ರಾಜರು ತಮ್ಮ ಗುಪ್ತಚರರ ಮೇಲೆ ಅವಲಂಬಿತರಾಗಿದ್ದರು. ಅವರ ಮೂಲಕ ತಮ್ಮ ಆಡಳಿತ ಕ್ಷೇತ್ರದ ನಾಗರಿಕರ ಕುರಿತಾಗಿ ಬೇಕಾದ ಮಾಹಿತಿ ಸಂಗ್ರಹಿಸುತ್ತಿದ್ದರು. ಇಂದು ಕಂಪ್ಯೂಟರ್ ಬಂದು ಆಧುನಿಕ ಜೀವನವನ್ನು ಸಾಕಷ್ಟು ಸರಳಗೊಳಿಸಿದೆ. ಅದುವೇ ಈಗ ಗುಪ್ತಚರರ ಸ್ಥಾನ ಆಕ್ರಮಿಸಿದೆ. ಕಂಪ್ಯೂಟರ್ ಮೂಲಕ ಇಂದಿನ ರಾಜ ಅಂದ್ರೆ ಸರ್ಕಾರ ಪ್ರತಿ ನಾಗರಿಕರ ಮೇಲೆ ನಿಗಾ ಇರಿಸಬಹುದಾಗಿದೆ. ಇಂದಿನ ಟೆಕ್ನಿಕ್ ಹೇಗಾಗಿದೆ ಎಂದರೆ, ಏನೇ ಇರಲಿ, ಕಂಪ್ಯೂಟರ್ ಇಲ್ಲದೆ ಯಾವುದೂ ಸಾಧ್ಯವೇ ಇಲ್ಲ ಎಂದಾಗಿದೆ. ಹೀಗಾಗಿಯೇ ಸರ್ಕಾರ ಇದರ ಲಾಭ ಪಡೆಯಲೆಂದೇ, ಪ್ರತಿ ಮಾಹಿತಿಯನ್ನೂ ಇಂಟರ್‌ನೆಟ್ ಕಂಪ್ಯೂಟರ್ ಮೂಲಕ ಪಡೆಯಲು ಆರಂಭಿಸಿದೆ.
ಕಂಪ್ಯೂಟರ್‌ಗೆ ಮೋಸ ಮಾಡುವುದು ಸುಲಭವೇನಲ್ಲ. ಏಕೆಂದರೆ ಇದು ಲಕ್ಷಾಂತರ ರೆಕಾರ್ಡ್ಸ್ ಮಧ್ಯೆ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಹುಡುಕಿ ತೆಗೆಯಬಲ್ಲದು. ಈ ಕ್ಷೇತ್ರದಲ್ಲಿ ಹೊಸ ಹೊಸ ಟೆಕ್ನಿಕ್ಸ್ ವಿಕಾಸಗೊಳ್ಳುತ್ತಿವೆ. ಯಾವ ನಾಗರಿಕನೇ ಇರಲಿ, ತನ್ನ ಮಾಹಿತಿಯನ್ನು ಸರ್ಕಾರಕ್ಕೆ ಅಥವಾ ಬೇರಾರಿಗೋ ಕೊಟ್ಟಿರಲಿ ಅಥವಾ ತನ್ನ ಕಂಪ್ಯೂಟರ್‌ನಲ್ಲೇ ಇರಲಿ, ಅದನ್ನು ಬೇಕಾದಾಗ ಸರ್ಕಾರ ತೆಗೆಸಿಕೊಳ್ಳಬಹುದು.
ಆಧಾರ್ ನಂಬರ್ ಕುರಿತಾದ ವಾದವಿವಾದದ ಕಾರಣ ಸರ್ವೋಚ್ಚ ನ್ಯಾಯಾಲಯ ಸಾಮಾನ್ಯ ರೀತಿಯಲ್ಲಿ ಹೇಗೆ ನಂಬಿದೆ ಎಂದರೆ, ಸರ್ಕಾರದ ಬಳಿಯ ಈ ಮಾಹಿತಿಯಿಂದ ಜನಹಿತ ಮತ್ತು ಉತ್ತಮ ಆಡಳಿತಕ್ಕಾಗಿ ಅಗತ್ಯ ಬೇಕು, ಅದನ್ನು ಹೇಗಾದರೂ ಬಳಸಿಕೊಳ್ಳುವ ಸಾಧ್ಯತೆಗಳಿದ್ದರೂ ಸಹ ಎಂಬುದು ಗಮನಾರ್ಹ. ಸರ್ಕಾರವೇನೋ ಸತತ ಹೇಳುತ್ತಲೇ ಇದೆ, ಆಧಾರ್ ನಂಬರ್ ಮಾಧ್ಯಮದಿಂದ ಕೇವಲ ಅಪ್ರಾಮಾಣಿಕರು, ಬ್ಲ್ಯಾಕ್ ಮಾರ್ಕೆಟ್‌ನವರು, ತೆರಿಗೆ ವಂಚಕರು, ಭಯೋತ್ಪಾದಕರು ಮುಂತಾದವರನ್ನು ಸುಲಭವಾಗಿ ತನ್ನ ಕೈಗೆ ತೆಗೆದುಕೊಳ್ಳಬಹುದು ಎನ್ನುತ್ತದೆ. ಆದರೆ…. ಯಾರ ಮಾಹಿತಿಯೇ ಇರಲಿ, ಅವರೇನಾದರೂ ಸರ್ಕಾರದ ವಿರುದ್ಧ ಸೊಲ್ಲೆತ್ತಿದರೆ ಅವರನ್ನು ಕಳ್ಳರೆನ್ನುವುದು ಈಗ ಸರ್ಕಾರಕ್ಕೆ ಸುಲಭ.
ಕಂಪ್ಯೂಟರ್‌ನ ದೆಸೆಯಿಂದ ಸರ್ಕಾರ ಸಾಮಾನ್ಯ ನಾಗರಿಕರ ಮೇಲೆ ತನ್ನ ಹಿಡಿತವನ್ನು ಎಷ್ಟೋ ಪಟ್ಟು ಬಲಪಡಿಸಿಕೊಳ್ಳಬಹುದಾಗಿದೆ. ಸರ್ಕಾರಕ್ಕೆ ಈಗ ಗುಪ್ತಚರರ ಬದಲಿಗೆ, ಟೆಕ್‌ಸೇವಿಗಳ ಅಗತ್ಯವಿದೆ. ಇವರು ಸರ್ಕಾರಕ್ಕೆ ಬೇಕುಬೇಕಾದ ಸೇವೆ ಒದಗಿಸಬಲ್ಲರು. ಹೀಗಾಗಿ ಈಗ ಪ್ರತಿ ನಾಗರಿಕರೂ ಸರ್ಕಾರದ ಹದ್ದಿನ ಕಣ್ಣಿನಡಿ! ಇಂತಿಪ್ಪ ಸರ್ಕಾರ ಹಿಟ್ಲರ್‌ಗಿರಿ ರೂಢಿಸಿಕೊಂಡರೆ ಅದನ್ನು ತಡೆಯಬಲ್ಲವರಾರು? ಇದಕ್ಕಂತೂ ಸರ್ಕಾರಕ್ಕೆ ಬಂದೂಕಿನ ನೆರವು ಬೇಕಿಲ್ಲ, ಕೇವಲ ಗಣಕ ಯಂತ್ರಗಳಿದ್ದರೆ ಸಾಕು.
ಸರ್ಕಾರ ಈಗ ಆಧಾರ್ ನಂಬರ್‌ನ್ನು ಪ್ಯಾನ್ ಕಾರ್ಡಿನೊಂದಿಗೂ ಗಂಟು ಹಾಕಿದೆ, ಪ್ಯಾನ್ ನಂಬರ್‌ನ್ನು ಜೊತೆ….. ಹೀಗಾಗಿ ಪ್ರತಿ ಹಣಕಾಸಿನ ವ್ಯವಹಾರವನ್ನೂ ಸರ್ಕಾರ ಕಂಟ್ರೋಲ್ ಮಾಡಬಲ್ಲದು. ಇದರಿಂದ ತೆರಿಗೆ ವಂಚಕರ ಮೇಲೆ ಲಗಾಮಿನ ಬಿಗಿತ ಹೆಚ್ಚುತ್ತದೆ, ದೇಶ ಪ್ರಗತಿಯತ್ತ ದಾಪುಗಾಲು ಹಾಕಲಿದೆ ಎಂಬುದೆಲ್ಲ ಬರೀ ಮಾತುಗಳು! ತೆರಿಗೆ ವಂಚನೆಗೂ, ದೇಶದ ಪ್ರಗತಿಗೂ ದೊಡ್ಡ ಸಂಬಂಧವಿಲ್ಲ. ದೇಶದಲ್ಲಿ ಉತ್ಪಾದನೆ ಹೆಚ್ಚುತ್ತಿದ್ದರೆ ಹಾಗೂ ಜನರಿಗೆ ಹೊಸದಾಗಿ ಯೋಚಿಸುವ, ಮಾಡಬಹುದಾದ ಸ್ವಾತಂತ್ರ್ಯವಿದ್ದರೆ ಮಾತ್ರ, ದೇಶ ಪ್ರಗತಿ ಕಾಣಲು ಸಾಧ್ಯ.
ಹಳ್ಳಿಗಳಲ್ಲಂತೂ ತೆರಿಗೆ ವಂಚನೆ ಇಲ್ಲವೆಂದೇ ಹೇಳಬಹುದು. ಏಕೆಂದರೆ ಇಂದಿಗೂ ಕೃಷಿ ಉತ್ಪನ್ನಗಳಿಗೆ ತೆರಿಗೆ ಇಲ್ಲ. ಆದರೆ ಹಳ್ಳಿಗಳು ಪ್ರಗತಿ ಪಥದಲ್ಲಿವೆಯೇ? ಒಂದು ವಿಧದಲ್ಲಿ ಅಲ್ಲಿ ತೆರಿಗೆ ಕಳ್ಳರು ಇಲ್ಲವೇ ಇಲ್ಲ. ಆದರೆ ಇಂದಿಗೂ ಹಳ್ಳಿಗಳು ಹೇಗಿದ್ದವೋ ಹಾಗೇ 18ನೇ ಶತಮಾನಕ್ಕೆ ಜೋತುಬಿದ್ದಿವೆ.
ನಗರಗಳಲ್ಲಿ ಕೆಲವರು ದೊಡ್ಡ ಮನೆ, ಬಂಗಲೆ, ಉದ್ಯಮ ಮಾಡಿಕೊಂಡಿದ್ದರೂ, ಅವರಲ್ಲಿ 10-15% ತೆರಿಗೆ ಹಣದಲ್ಲಿ ವಂಚಿಸಬಹುದು. ಜನ ಹೆಚ್ಚಾಗಿ ರಾಮನ ಲೆಕ್ಕದಲ್ಲೇ ವ್ಯವಹರಿಸಲು ಬಯಸುತ್ತಾರೆ, ಕೃಷ್ಣನ ಲೆಕ್ಕದಲ್ಲಲ್ಲ. ಲಂಚಕೋರರೂ ಸಹ ತಮ್ಮ ಬಳಿ ಹಣದ ಕುರಿತಾಗಿಯೇ ಜಂಭ ಪಡುತ್ತಾರೆ, ಕಪ್ಪು ಹಣದ್ದಲ್ಲ. ತೆರಿಗೆ ವಂಚಕರನ್ನು ಹಿಡಿದು ಹಾಕುವ ನೆಪದಲ್ಲಿ ಜನತೆಯನ್ನು ಕಂಪ್ಯೂಟರ್‌ನಿಂದ ಕಟ್ಟಿಹಾಕುವುದು ಅಸಲಿಗೆ ನಾಗರಿಕರನ್ನು ಸರ್ಕಾರದ ಗುಲಾಮರನ್ನಾಗಿಸುವ ಕಥೆಯಾಗಿದೆ. ಮೊದಲಿನಿಂದಲೂ ಧರ್ಮದ ಗುಲಾಮರಾಗಿರುವ ಜನ ಇದೀಗ ಸರ್ಕಾರಿ ಗುಲಾಮರೂ ಆಗುತ್ತಿದ್ದಾರೆ. ಹಿಂದೆ ಮಂತ್ರದ ವಶದಲ್ಲಿದ್ದರು, ಇದೀಗ ಯಂತ್ರದ ವಶ!
ಧರ್ಮದ ಗುತ್ತಿಗೆದಾರರ ಹೊಸ ಷಡ್ಯಂತ್ರ
ಉ. ಭಾರತದಲ್ಲಿ ಹಲವಾರು ಕಡೆ ರಾತ್ರಿ ಮಲಗಿರುವ ಹೊತ್ತಿನಲ್ಲಿ ಮಹಿಳೆಯರ ಜಡೆಗಳಿಗೆ ಯಾವುದೋ ಅಲೌಕಿಕ ಸಾಧನೆಗಾಗಿ ಕತ್ತರಿ ಬೀಳುತ್ತಿರುವ ಪ್ರಕರಣದ ಕುರಿತು ಏನೇ ಹೇಳಿದರೂ ವ್ಯರ್ಥ ಎನಿಸುತ್ತದೆ. 21ನೇ ಶತಮಾನದಲ್ಲೂ ನಮ್ಮ ದೇಶ ಶಿಲಾಯುಗದತ್ತ ವಾಲುತ್ತಿರುವುದು ನಿಜಕ್ಕೂ ವಿಡಂಬನೆಯೇ ಸರಿ. ತರ್ಕ, ವಿಜ್ಞಾನ, ಸಹಜ ಸ್ವಾಭಾವಿಕ ವಿಚಾರ, ಸಂಭವನೀಯ ಸತ್ಯಾಂಶ ಇತ್ಯಾದಿಗಳೆಲ್ಲವನ್ನೂ ಬದಿಗೊತ್ತಿ ಛದ್ಮ ಇತಿಹಾಸ, ಪವಾಡಗಳು, ಮೂಢನಂಬಿಕೆ, ಪೂಜೆಪುನಸ್ಕಾರ, ಹವನಹೋಮ, ದಾನದಕ್ಷಿಣೆ, ಪಾಪಪುಣ್ಯಗಳೆಂದು ಇನ್ನೂ ಕೂಪಮಂಡೂಕಗಳಾಗಿಯೇ ಉಳಿದುಬಿಟ್ಟಿದ್ದಾರೆ.
ಅನಾದಿಯ ಆ್ಯಡಮ್ ಕಾಲದಿಂದಲೂ ಮಾನವ ತರ್ಕ ಮತ್ತು ಲಭ್ಯವಿದ್ದ ಮಾಹಿತಿಯ ಅನುಸಾರ ಜೀವಿಸುತ್ತಾ ಬಂದಿದ್ದಾನೆ. ಅದೇ ಆಧಾರದಿಂದ ಅವನು ತನ್ನ ಆಹಾರ, ವಾಸಗಳಿಗೆ ಅನಕೂಲ ಹುಡುಕಿದ. ಸಾಕುಪ್ರಾಣಿಗಳನ್ನು ಕೈವಶ ಮಾಡಿಕೊಂಡು ಬದುಕು ಹಸನಾಗಿಸಲು ಪ್ರಕೃತಿಯೊಂದಿಗೆ ಹೋರಾಡತೊಡಗಿದ. ಆದರೆ…. ಇದನ್ನೆಲ್ಲ ಮರೆತ ಇಂದಿನ ಆಧುನಿಕರು ತಿಳಿವಳಿಕೆಯನ್ನು ಬದಿಗೊತ್ತಿ ಮೂಢನಂಬಿಕೆ ಬೆಂಬಲಿಸುತ್ತಿದ್ದಾರೆ. ರಾಷ್ಟ್ರಪತಿಯಿಂದ ಹಿಡಿದು ಅನಕ್ಷರಸ್ಥರವರೆಗೂ ಜನ ಈ ಕೂಪದಲ್ಲಿ ಮುಳುಗಿಹೋಗಿದ್ದಾರೆ. ವಿಜ್ಞಾನ, ತರ್ಕಗಳು ಯಾರಿಗೂ ಬೇಕಿಲ್ಲ.
ಜಡೆ ಕತ್ತರಿಸುವ ಪ್ರಸಂಗ, ಗಣೇಶ ಹಾಲು ಕುಡಿದ ಎಂಬಂತೆಯೇ ಇದೆ. ಅಂಥದೇ ಹುಚ್ಚಿನಲ್ಲಿ ಲಕ್ಷಾಂತರ ಜನರನ್ನು ಮರುಳು ಮಾಡಲಾಗಿದೆ. ಯಾವುದಕ್ಕೋ ದುಷ್ಟ ಆತ್ಮದ ಹೆಸರನ್ನಿಟ್ಟು, ಧರ್ಮದ ಗುತ್ತಿಗೆದಾರರು ಹವನಹೋಮ, ಪೂಜೆ ಪುನಸ್ಕಾರ, ಮಂತ್ರತಂತ್ರಗಳ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬೆಚ್ಚಿಬೀಳುವ ಅಂಶ ಎಂದರೆ ದೇಶದ ಉಚ್ಚ ಶಿಕ್ಷಣ ಪಡೆದ ಜನರೂ ಇದಕ್ಕೆ ಬಲಿ ಆಗುತ್ತಿರುವುದು.
ಚಂದ್ರಯಾನಕ್ಕೆ ರಾಕೆಟ್ ಕಳುಹಿಸುವ ಇಸ್ರೋದ ಮುಖ್ಯ ಅಧಿಕಾರಿಗಳು ತಿರುಪತಿಯಲ್ಲಿ ಆಶೀರ್ವಾದ ಪಡೆಯಲು ಹೊರಟರೆ, ಗಣೇಶನಿಗೆ ಬಂದಿರುವ ಆನೆ ಮೊಗವನ್ನು ಆಧುನಿಕ ಪ್ಲಾಸ್ಟಿಕ್ ಸರ್ಜರಿಗೆ ಹೋಲಿಸಿದರೆ, ನದಿಯ ಮೇಲಿನ ಕೋಟ್ಯಂತರ ರೂ.ಗಳ ಸೇತುವೆಯನ್ನು ವಾಸ್ತು ಪ್ರಕಾರ ಕಟ್ಟಿಸುವಿಕೆ, 2 ಕೋಟಿ ರೂ.ಗಳ ಕಾರಿನ ಸುರಕ್ಷತೆಗಾಗಿ ಹಿಂದೆ 2 ನಿಂಬೆ, ಹಸಿಮೆಣಸಿನಕಾಯಿ ಕಟ್ಟಿ ತೂಗುಬಿಟ್ಟರೆ, ಅಂಥ ದೇಶದಲ್ಲಿ ಯಾರೋ ಬಂದು ಜಡೆ ಕತ್ತರಿಸುತ್ತಾರೆಂದರೆ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ.
ನಮ್ಮ ದೇಶ ಸದಾ ಮೂಢನಂಬಿಕೆಯತ್ತ ವೇಗದಿಂದ ದೌಡಾಯಿಸುತ್ತಿದೆ. ಈ ಬಾರಿ ಕಾಡಿ ಹೊರುವವರಿಗೆ ಕೇಸರಿ ತ್ರಿಕೋನದ ಧ್ವಜ ಹಾರಿಸಬಾರದೆಂದು ಆದೇಶಿಸಲಾಗಿದೆ. ಬದಲಿಗೆ ರಾಷ್ಟ್ರೀಯ ತ್ರಿವರ್ಣ ಧ್ವಜ ಹಾರಿಸಲು ಹೇಳಿದೆ, ಅಂದರೆ ಭಾರತ ಇಸ್ಲಾಮಿಕ್ ಸ್ಟೇಟ್‌ನ ಕಪ್ಪು ಧ್ವಜದಡಿ ಬರುವುದಿಲ್ಲ, ತ್ರಿವರ್ಣ ಧ್ವಜದ ಭಗವಾ ದೇಶವೆಂಬುದಾಗಿದೆ. ಈ ದೇಶದಲ್ಲಿ ಯಾರೇ ಆಗಲಿ ಭಗವಾಗಿಂತ ವಿಭಿನ್ನ ವಿಚಾರಧಾರೆ ಉಳ್ಳವರಾಗಿದ್ದರೆ ಅವರು ದ್ರೇಶದ್ರೋಹಿಗಳು!
ಇಂಥ ವಾತಾವರಣದಲ್ಲಿ ಜಡೆ ಕತ್ತರಿಸುವ ಪ್ರಕರಣವನ್ನು ಉನ್ಮಾದಕಾರಿಯಾಗಿ ಎಲ್ಲೆಡೆ ಹರಡುವ ಕೆಲಸವನ್ನು ಬಲು ಚಾಣಾಕ್ಷ ರೀತಿಯಲ್ಲಿ ಮಾಡಲಾಗಿದೆ. ಇದರ ಹೆಸರಿನಲ್ಲಿ ಹವನಕರ್ತರು, ಮಂದಿರಗಳ ಗುತ್ತಿಗೆದಾರರು ಸದಾ ಮುಂದಿರುತ್ತಾರೆ. ಇಂಥ ಪಾಖಂಡಿ, ಮೂಢನಂಬಿಕೆಗಳೇ ಇಂದು ರಾಜಕೀಯಕ್ಕೆ ವಿಟಮಿನ್ ಆಗಿವೆ. ಗೋರಕ್ಷೆಯೂ ಸಹ ಒಂದು ವಿಧದಲ್ಲಿ ಜಡೆ ಕತ್ತರಿಸುವ ಪ್ರಕರಣವೇ ಆಗಿದೆ. ಆ ಕಾರಣ ಮಹಿಳೆಯರ ಹೆಸರಿಗೆ ಗಲ್ಲಿಗಲ್ಲಿ, ಹಳ್ಳಿಹಳ್ಳಿಗಳಲ್ಲೂ ಆತಂಕದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಜನತೆಗೆ ಮಾಡುವ ದ್ರೋಹವಾಗಿದೆ. ಆದರೆ ಇದನ್ನು ರಾಷ್ಟ್ರಭಕ್ತಿ, ದೇಶಭಕ್ತಿ, ಧರ್ಮಭಕ್ತಿಗಳಂಥ ಗೋಲ್ಡನ್ ಫಾಯಿಲ್‌ಗಳಲ್ಲಿ ಸುತ್ತಿ ಪ್ರಸ್ತುತಪಡಿಸಲಾಗುತ್ತಿದೆ. ಪರಿಣಾಮ ಮೂಢನಂಬಿಕೆ ಮತ್ತು ಅಪಕ್ವ ಸರಕಾರದ ಕೊಡುಗೆಗಳು.