ವೆಡಿಂಗ್‌ ಸೀಸನ್‌ ಪ್ರಾರಂಭವಾಗಿದೆ. ನೀವು ಮದುಮಗಳಾಗಿದ್ದು, ಬ್ರೈಡಲ್ ವೇರ್‌ ಕೊಳ್ಳುವ ತಯಾರಿಯಲ್ಲಿದ್ದರೆ, ಮೊದಲು ಫ್ಯಾಷನ್‌ ಟ್ರೆಂಡ್‌ ಬಗ್ಗೆ ತಿಳಿದುಕೊಳ್ಳಿ. ಇದರಿಂದ ನಿಮ್ಮ ಉಡುಪನ್ನು ಆರಿಸುವುದು ಸುಲಭವಾಗುತ್ತದೆ. ನಾವೀಗ ನಿಮಗೆ ವೆಡಿಂಗ್‌ ವೇರ್‌ನ ಫ್ಯಾಷನ್‌ ಟ್ರೆಂಡ್‌ ಹಾಗೂ ಶೇಡ್ಸ್ ಮತ್ತು ಪ್ಯಾಟರ್ನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಿದ್ದೇವೆ. ಇದರಿಂದ ನಿಮ್ಮ ಕೆಲಸ ಇನ್ನೂ ಸುಲಭವಾಗುತ್ತದೆ.

ಮದುಮಗಳ ಮೆಚ್ಚಿನ ಲಹಂಗಾ ಚೋಲಿ

ಇಂದು ಲಹಂಗಾ ಚೋಲಿ ಮದುಮಗಳ ಮೆಚ್ಚಿನ ಆಯ್ಕೆಯಾಗಿದೆ. ದುಪಟ್ಟಾ ಸೆಟ್‌ನೊಂದಿಗೆ ಇದು ಬಹಳ ಸುಂದರವಾಗಿ ಕಾಣುತ್ತದೆ. ತಲೆಯಿಂದ ಕಾಲಿನವರೆಗೂ ಕವರ್‌ ಆಗುವ ಈ ಉಡುಪು ಮದುಮಗಳ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ.

dulhan-ka-libaas

ಫ್ಯಾಷನ್‌ ಡಿಸೈನರ್‌ ಪ್ರಕಾರ ನೀವು ಲಹಂಗಾ ಚೋಲಿ ಕೊಳ್ಳಬೇಕೆಂದಿದ್ದರೆ ನಿಮ್ಮ ಬಾಡಿ ಟೈಪ್‌ನ್ನು ಗಮನದಲ್ಲಿಟ್ಟುಕೊಂಡು ಕೊಳ್ಳಿರಿ. ನಿಮ್ಮ ಶರೀರ ಆ್ಯಪಲ್ ಶೇಪ್‌ನದಾಗಿದ್ದರೆ ಫುಲ್ ಲೇಯರ್‌ನಿಂದ ಕೂಡಿದ ತುಂಬು ಲಹಂಗಾ ಖರೀದಿಸಿ. ಆಗ ನಿಮ್ಮ ಸೊಂಟ ತೆಳುವಾಗಿ ಕಾಣುವುದು. ನಿಮ್ಮ ಹೆವಿ ಅಪ್ಪರ್‌ ಬಾಡಿ ಪಾರ್ಟ್‌ನ್ನು ಕವರ್‌ ಮಾಡಲು ಡೀಪ್‌ ಅಥವಾ ವೀ ನೆಕ್‌ ಚೋಲಿಯನ್ನು ಧರಿಸಿ. ಪೀಚ್‌ ಬಾಡಿ ಶೇಪ್‌ ಹೊಂದಿರುವವರಿಗೆ ಎ ಲೈನ್‌ ಲಹಂಗಾ ಪರ್ಫೆಕ್ಟ್ ಆಗಿರುತ್ತದೆ. ಹೆವಿ ಹಿಪ್ಸ್ ನ್ನು ಕವರ್‌ ಮಾಡಲು ಇದು ಸೂಕ್ತ. ಆದರೆ ಫಿಶ್‌ ಕಟ್‌ ಲಹಂಗಾವನ್ನು ಮಾತ್ರ ಧರಿಸಬೇಡಿ. ಅದರಿಂದ ಹಿಪ್ಸ್ ಇವನ್ನು ಹೆವಿಯಾಗಿ ತೋರಿಸುತ್ತದೆ. ಫ್ಲಾಟ್‌ ಟಮಿ ಇದ್ದರೆ ಶಾರ್ಟ್‌ ಲೆಂತ್‌ ಟಾಪ್‌ ಚೆನ್ನಾಗಿ ಹೊಂದುತ್ತದೆ. 36-24-36ರ ಬಾಡಿ ಶೇಪ್‌ಗೆ ಎಲ್ಲ ಸ್ಟೈಲ್‌ನ‌ ಲಹಂಗಾ ಚೋಲಿಯೂ ಸೂಟ್‌ ಆಗುತ್ತದೆ.

ವೆಡಿಂಗ್‌ ಸ್ಯಾರಿಯ ವೈಶಿಷ್ಟ್ಯ

ಮುಹೂರ್ತದ ದಿನಕ್ಕೆ ಸೀರೆಯೇ ಆಗಬೇಕಲ್ಲವೇ…..? ಬಾಡಿ ಕರ್ವ್ ನ್ನು ಹೈಲೈಟ್‌ ಮಾಡಲು ಸೀರೆಗಿಂತ ಉತ್ತಮ ಉಡುಗೆ ಬೇರೊಂದಿಲ್ಲ. ಈಗೆಲ್ಲ ಹೆಚ್ಚು ತೂಕದ ಉತ್ತಮ ಗುಣಮಟ್ಟದ ಕಂಚಿ ಸೀರೆಗಳಿಂದ ಹಿಡಿದು ಲೈಟ್‌ ವೇಟ್‌ನ ಬಗೆಬಗೆಯ ಮದುವೆ ಸೀರೆಗಳು ಹೇರಳವಾಗಿ ದೊರೆಯುತ್ತವೆ. ವೆಡಿಂಗ್‌ ಸ್ಯಾರಿಯ ಬಗ್ಗೆ ಫ್ಯಾಷನ್‌ ಡಿಸೈನರ್‌ ನಳಿನಾ ಹೀಗೆ ಹೇಳುತ್ತಾರೆ. “ನಿಮಗೆ ಇಷ್ಟವಾದ ಸೀರೆಯನ್ನು ಆರಿಸಿದ ಬಳಿಕ ಬ್ಲೌಸ್‌ನ ಫಿಟಿಂಗ್‌ ಮತ್ತು ಡಿಸೈನ್‌ ಬಗ್ಗೆ ವಿಶೇಷ ಗಮನ ನೀಡಿ. ಪರ್ಫೆಕ್ಟ್ ಬ್ಲೌಸ್‌ನಿಂದ ಸೀರೆಯ ಸೊಬಗು ಹೆಚ್ಚುತ್ತದೆ. ಜೊತೆಗೆ ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತದೆ. ನಿಮ್ಮ ಟಮಿ ಹೊರ ಬಂದಿದ್ದರೆ ಫುಲ್ ಲೆಂತ್‌ ಬ್ಲೌಸ್‌ ಧರಿಸಿ. ಮುಹೂರ್ತವಲ್ಲದೆ, ಇತರೆ ಸಮಯಗಳಲ್ಲಿ ಹಾಟ್‌ ಲುಕ್‌ಗಾಗಿ ಸ್ಲೀವ್ ಲೆ‌ಸ್‌ ಬ್ಲೌಸ್‌ನ್ನೂ ಟ್ರೈ ಮಾಡಬಹುದು. ಡಿಫರೆಂಟ್‌ ಲುಕ್‌ಗಾಗಿ ವಿಭಿನ್ನ ರೀತಿಯಲ್ಲಿ ಸೀರೆ ಉಡಬಹುದು. ಉದಾ : ಗುಜರಾತಿ ಸ್ಟೈಲ್‌, ಕೂರ್ಗಿ ಸ್ಟೈಲ್ ಇತ್ಯಾದಿ.

dulhan-ka-libaas-3

ಇಂಡೊವೆಸ್ಟರ್ನ್‌ ಬ್ರೈಡಲ್ ವೇರ್‌ ಟ್ರೆಂಡ್‌

ನೀವು ಟಿಪಿಕಲ್ ಭಾರತೀಯ ಮದುಮಗಳಾಗಬೇಕಿಲ್ಲದಿದ್ದರೆ ಇಂದು ಹೆಚ್ಚು ಬಳಕೆಯಲ್ಲಿರುವ ಸೀರೆ ಮತ್ತು ಲಹಂಗಾ ಚೋಲಿಯನ್ನು ಬಿಟ್ಟು ಇಂಡೋ ವೆಸ್ಟರ್ನ್‌ ಬ್ರೈಡಲ್ ವೇರ್‌ನ್ನು ಟ್ರೈ ಮಾಡಬಹುದು. ಇದರ ಲುಕ್‌ ಪೂರ್ತಿ ಟ್ರೆಡಿಶನಲ್ ಆಗಿರುವುದಿಲ್ಲ ಮತ್ತು ಪೂರ್ತಿ ವೆಸ್ಟರ್ನ್‌ ಸಹ ಆಗಿರುವುದಿಲ್ಲ. ಇಂಡೊ ವೆಸ್ಟರ್ನ್‌ ಪ್ಯಾಟರ್ನ್‌ ನಿಮಗೆ ಸೆಮಿ ಇಂಡಿಯನ್‌ ಮತ್ತು ಸೆಮಿ ವೆಸ್ಟರ್ನ್‌ ಲುಕ್‌ ಒದಗಿಸುತ್ತದೆ.

ನಳಿನಾ ಹೇಳುತ್ತಾರೆ, “ಇಂಡೋ ವೆಸ್ಟರ್ನ್‌ವೇರ್‌ನಲ್ಲಿ ಬಹಳಷ್ಟು ವೆರೈಟಿಗಳಿರುತ್ತವೆ. ಬ್ರೈಡಲ್ ಡ್ರೆಸ್‌ನಿಂದ ಹಿಡಿದು ಬ್ರೈಡಲ್ ಗೌನ್‌ವರೆಗೆ ಸ್ಯಾರಿ ಗೌನ್‌, ಲಹಂಗಾ ಗೌನ್‌ನಂತಹ ವಿವಿಧ ಬಗೆಯ ಗೌನ್‌ಗಳು ದೊರೆಯುತ್ತವೆ. ಹಾಗೆಯೇ ಅನಾರ್ಕಲಿ ಲಹಂಗಾ ವಿತ್‌ ಜ್ಯಾಕೆಟ್‌ ಮತ್ತು ಇಂಡೋ ವೆಸ್ಟರ್ನ್‌ ಸೂಟ್‌ ಸಹ ಟ್ರೆಂಡ್‌ನಲ್ಲಿವೆ. ಇದರಲ್ಲಿ ಸ್ಟೈಲಿಶ್‌ ಲುಕ್‌ಗಾಗಿ ಲಹಂಗಾ ವಿತ್‌ ಕ್ರಾಪ್‌ ಟಾಪ್‌ ಮತ್ತು ದುಪಟ್ಟಾ, ಬ್ರೈಡಲ್ ಟ್ರೌಷರ್‌ ವಿತ್‌ ಚೋಲಿ ಅಂಡ್‌ ದುಪಟ್ಟಾ ಸಹ ಟ್ರೈ ಮಾಡಬಹುದು.

ರೆಡ್‌ ಬದಲು ಪಿಂಕ್‌ ಶೇಡ್ಸ್ ಟ್ರೈ ಮಾಡಿ

ಬ್ರೈಡಲ್ ವೇರ್‌ನಲ್ಲಿ ಮದುಮಗಳಿಗೆ ರೆಡ್‌ ಶೇಡ್‌ ಎಂದೂ ಔಟ್‌ಡೇಟೆಡ್‌ ಅಥವಾ ಔಟ್‌ ಆಫ್‌ ಫ್ಯಾಷನ್‌ ಆಗುವುದಿಲ್ಲ. ಇದನ್ನು ಯಾವುದೇ ಸೀಸನ್‌ನಲ್ಲೂ ಆಯ್ಕೆ ಮಾಡಿಕೊಳ್ಳಬಹುದು. ರೆಡ್‌ನ ಬೇರೆ ಬೇರೆ ಶೇಡ್‌ಗಳಾದ ವೈಟ್‌ ರೆಡ್‌, ಡೀಪ್‌ ರೆಡ್‌, ಟೊಮೇಟೊ ರೆಡ್‌, ಆರೆಂಜ್‌ ರೆಡ್‌, ಮೆರೂನ್‌ ರೆಡ್‌ ಮುಂತಾದವುಗಳಲ್ಲಿ ನಿಮ್ಮ ಸ್ಕಿನ್‌ಟೋನ್‌ಗೆ ಸರಿಹೊಂದುವ ರೆಡ್‌ ಶೇಡ್‌ನ್ನು ಆರಿಸಿಕೊಳ್ಳಿ. ರೆಡ್‌ ಕಲರ್‌ನ ವೆಡಿಂಗ್‌ ಸ್ಯಾರಿ, ಲಹಂಗಾ ಚೋಲಿ, ಬ್ರೈಡಲ್ ಗೌನ್‌ಗಳನ್ನು ಕೊಳ್ಳಬಹುದು. ನಿಮಗೆ ಟಿಪಿಕಲ್ ರೆಡ್‌ ಡ್ರೆಸ್‌ ಇಷ್ಟವಿಲ್ಲದಿದ್ದರೆ ರೆಡ್‌ ಬದಲು ಪಿಂಕ್‌ ಶೇಡ್‌ನ  ಬ್ರೈಡಲ್ ವೇರ್‌ ಧರಿಸಬಹುದು.

ಪಿಂಕ್‌ನ ಹಲವು ಶೇಡ್‌ಗಳಾದ ಬ್ರೈಟ್‌ ಪಿಂಕ್‌, ವೈಟ್‌ ಪಿಂಕ್‌, ಪೀಚ್‌ ಪಿಂಕ್‌, ಕೋರಲ್ ಪಿಂಕ್‌, ನಿಯಾನ್‌ ಪಿಂಕ್‌, ಪೇಸ್ಟಲ್ ಪಿಂಕ್‌, ರಾಣಿ ಪಿಂಕ್‌…. ಇತ್ಯಾದಿಗಳೆಲ್ಲ ಮದುಮಗಳಿಗೆ ಪರ್ಫೆಕ್ಟ್ ಆಗಿ ಶೋಭಿಸುತ್ತವೆ. ಬೇಕಿದ್ದರೆ ನೀವು ಪಿಂಕ್‌ ಜೊತೆಗೆ ಕಾಂಬಿನೇಷನ್‌ನ್ನೂ ಟ್ರೈ ಮಾಡಬಹುದು. ಉದಾ : ಪಿಂಕ್‌ ಬೇಜ್‌, ಪಿಂಕ್‌ ಐವರಿ, ಪಿಂಕ್‌ ಸಿಲ್ವರ್‌, ಪಿಂಕ್‌ ರೆಡ್‌, ಪಿಂಕ್‌ ರಾಯಲ್ ಬ್ಲೂ…. ಇತ್ಯಾದಿ.

ಕಾಂಟ್ರಾಸ್ಟ್ ಶೇಡ್‌ನ ಕ್ರೇಜ್‌

ಸಿಂಗಲ್ ಶೇಡ್‌ ಬದಲು ಕಾಂಟ್ರಾಸ್ಟ್ ಶೇಡ್‌ನ ಬ್ರೈಡಲ್ ವೇರ್‌ನ್ನೂ ಆರಿಸಿಕೊಳ್ಳಬಹುದು. ಇವು ನೋಡಲು ಆಕರ್ಷಕವಾಗಿ ಕಾಣುತ್ತವೆ. ಕಾಂಟ್ರಾಸ್ಟ್ ಶೇಡ್‌ಗಾಗಿ ಪಿಂಕ್‌ ಆರೆಂಜ್‌, ಯೆಲ್ಲೋ ಬ್ಲೂ, ರೆಡ್‌ ಗ್ರೀನ್‌, ಪಿಂಕ್‌ ಬ್ಲೂ,  ಆರೆಂಜ್‌ ಯೆಲ್ಲೋ, ಪಿಂಕ್‌ ಪರ್ಪಲ್, ಗ್ರೀನ್‌ ಆರೆಂಜ್‌, ಕ್ರೀಮ್ ಬ್ರೌನ್‌ ಇಂತಹ ಕಲರ್‌ ಕಾಂಬಿನೇಷನ್‌ ಸೂಕ್ತವಾಗಿರುತ್ತವೆ. ಹಾಗೆಯೇ ಲೈಟ್‌ ಅಂಡ್‌ ಡಾರ್ಕ್‌ ಶೇಡ್‌ನ ಕಾಂಬಿನೇಶನ್‌ ಬಳಸಿ ಸಿದ್ಧಪಡಿಸಿರುವ ಬ್ರೈಡಲ್ ವೇರ್‌ ಅಂದರೆ ಸ್ಕೈ ಬ್ಲೂ ಜೊತೆಗೆ ಡಾರ್ಕ್‌ ಬ್ಲೂ. ಸೀ ಗ್ರೀನ್‌ ಜೊತೆಗೆ ಡಾರ್ಕ್‌ ಗ್ರೀನ್‌, ಬೇಬಿ ಪಿಂಕ್‌ ಜೊತೆಗೆ ಡಾರ್ಕ್‌ ಪಿಂಕ್‌…. ಇತ್ಯಾದಿಗಳನ್ನು ಆಯ್ಕೆ ಮಾಡಬಹುದು.

ಕಾಂಟ್ರಾಸ್ಟ್ ಶೇಡ್ಸ್ ಬಳಸುವ ಇತರೆ ವಿಧಾನಗಳಾವುವು? ಬೇರೆ ಬೇರೆ ಬಣ್ಣದ ಸೀರೆ ಬ್ಲೌಸ್‌, ಲಹಂಗಾ ಚೋಲಿ ದುಪಟ್ಟಾ ಅಥವಾ ಕಾಂಟ್ರಾಸ್ಟ್ ಕಲರ್‌ ಬಳಸಿ ಸಿದ್ಧಪಡಿಸಲಾದ ಬ್ಲೌಸ್‌ ಅಥವಾ ಲಹಂಗಾ ಚೋಲಿಗಳನ್ನು ಧರಿಸಬಹುದು.

ಫ್ಯಾಷನೆಬಲ್ ಪೇಸ್ಟಲ್ ಶೇಡ್ಸ್

ನೀವು ಡಾರ್ಕ್‌ ಕಲರ್‌ ಬ್ರೈಡಲ್ ವೇರ್‌ಗಳಾದ ಟಿಪಿಕಲ್ ರೆಡ್‌, ಬ್ಲೂ, ಗ್ರೀನ್‌ ನಂತಹ ಬ್ರೈಡಲ್ ಡ್ರೆಸ್‌ಗಳನ್ನು ಧರಿಸಲು ಇಷ್ಟಪಡದಿದ್ದರೆ, ಪೇಸ್ಟ್‌ ಶೇಡ್‌ಗಳನ್ನು ಆರಿಸಿಕೊಳ್ಳಬಹುದು. ಇವು ಬಹಳ ಫ್ಯಾಷನೆಬಲ್ ಆಗಿದ್ದು ಪರ್ಫೆಕ್ಟ್ ವೆಡಿಂಗ್‌ ವೇರ್‌ ಆಗಿವೆ ಮತ್ತು ಈಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಲ್ಲಿವೆ. ಇವುಗಳ ತಿಳಿ ಬಣ್ಣ ಮನಸ್ಸಿಗೆ ಹಿತವಾಗಿರುತ್ತವೆ. ಪೇಸ್ಟ್‌ ಶೇಡ್‌ ಬ್ರೈಡಲ್ ವೇರ್‌ನಲ್ಲಿ ಮದುಮಗಳ ಆಭರಣ ಮತ್ತು ಇತರೆ ಅಲಂಕಾರ ಎದ್ದು ತೋರುತ್ತದೆ.

– ಪಿ. ಪೂರ್ಣಿಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ