ವೆಡಿಂಗ್‌ ಸೀಸನ್‌ ಪ್ರಾರಂಭವಾಗಿದೆ. ನೀವು ಮದುಮಗಳಾಗಿದ್ದು, ಬ್ರೈಡಲ್ ವೇರ್‌ ಕೊಳ್ಳುವ ತಯಾರಿಯಲ್ಲಿದ್ದರೆ, ಮೊದಲು ಫ್ಯಾಷನ್‌ ಟ್ರೆಂಡ್‌ ಬಗ್ಗೆ ತಿಳಿದುಕೊಳ್ಳಿ. ಇದರಿಂದ ನಿಮ್ಮ ಉಡುಪನ್ನು ಆರಿಸುವುದು ಸುಲಭವಾಗುತ್ತದೆ. ನಾವೀಗ ನಿಮಗೆ ವೆಡಿಂಗ್‌ ವೇರ್‌ನ ಫ್ಯಾಷನ್‌ ಟ್ರೆಂಡ್‌ ಹಾಗೂ ಶೇಡ್ಸ್ ಮತ್ತು ಪ್ಯಾಟರ್ನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಿದ್ದೇವೆ. ಇದರಿಂದ ನಿಮ್ಮ ಕೆಲಸ ಇನ್ನೂ ಸುಲಭವಾಗುತ್ತದೆ.

ಮದುಮಗಳ ಮೆಚ್ಚಿನ ಲಹಂಗಾ ಚೋಲಿ

ಇಂದು ಲಹಂಗಾ ಚೋಲಿ ಮದುಮಗಳ ಮೆಚ್ಚಿನ ಆಯ್ಕೆಯಾಗಿದೆ. ದುಪಟ್ಟಾ ಸೆಟ್‌ನೊಂದಿಗೆ ಇದು ಬಹಳ ಸುಂದರವಾಗಿ ಕಾಣುತ್ತದೆ. ತಲೆಯಿಂದ ಕಾಲಿನವರೆಗೂ ಕವರ್‌ ಆಗುವ ಈ ಉಡುಪು ಮದುಮಗಳ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ.

dulhan-ka-libaas

ಫ್ಯಾಷನ್‌ ಡಿಸೈನರ್‌ ಪ್ರಕಾರ ನೀವು ಲಹಂಗಾ ಚೋಲಿ ಕೊಳ್ಳಬೇಕೆಂದಿದ್ದರೆ ನಿಮ್ಮ ಬಾಡಿ ಟೈಪ್‌ನ್ನು ಗಮನದಲ್ಲಿಟ್ಟುಕೊಂಡು ಕೊಳ್ಳಿರಿ. ನಿಮ್ಮ ಶರೀರ ಆ್ಯಪಲ್ ಶೇಪ್‌ನದಾಗಿದ್ದರೆ ಫುಲ್ ಲೇಯರ್‌ನಿಂದ ಕೂಡಿದ ತುಂಬು ಲಹಂಗಾ ಖರೀದಿಸಿ. ಆಗ ನಿಮ್ಮ ಸೊಂಟ ತೆಳುವಾಗಿ ಕಾಣುವುದು. ನಿಮ್ಮ ಹೆವಿ ಅಪ್ಪರ್‌ ಬಾಡಿ ಪಾರ್ಟ್‌ನ್ನು ಕವರ್‌ ಮಾಡಲು ಡೀಪ್‌ ಅಥವಾ ವೀ ನೆಕ್‌ ಚೋಲಿಯನ್ನು ಧರಿಸಿ. ಪೀಚ್‌ ಬಾಡಿ ಶೇಪ್‌ ಹೊಂದಿರುವವರಿಗೆ ಎ ಲೈನ್‌ ಲಹಂಗಾ ಪರ್ಫೆಕ್ಟ್ ಆಗಿರುತ್ತದೆ. ಹೆವಿ ಹಿಪ್ಸ್ ನ್ನು ಕವರ್‌ ಮಾಡಲು ಇದು ಸೂಕ್ತ. ಆದರೆ ಫಿಶ್‌ ಕಟ್‌ ಲಹಂಗಾವನ್ನು ಮಾತ್ರ ಧರಿಸಬೇಡಿ. ಅದರಿಂದ ಹಿಪ್ಸ್ ಇವನ್ನು ಹೆವಿಯಾಗಿ ತೋರಿಸುತ್ತದೆ. ಫ್ಲಾಟ್‌ ಟಮಿ ಇದ್ದರೆ ಶಾರ್ಟ್‌ ಲೆಂತ್‌ ಟಾಪ್‌ ಚೆನ್ನಾಗಿ ಹೊಂದುತ್ತದೆ. 36-24-36ರ ಬಾಡಿ ಶೇಪ್‌ಗೆ ಎಲ್ಲ ಸ್ಟೈಲ್‌ನ‌ ಲಹಂಗಾ ಚೋಲಿಯೂ ಸೂಟ್‌ ಆಗುತ್ತದೆ.

ವೆಡಿಂಗ್‌ ಸ್ಯಾರಿಯ ವೈಶಿಷ್ಟ್ಯ

ಮುಹೂರ್ತದ ದಿನಕ್ಕೆ ಸೀರೆಯೇ ಆಗಬೇಕಲ್ಲವೇ.....? ಬಾಡಿ ಕರ್ವ್ ನ್ನು ಹೈಲೈಟ್‌ ಮಾಡಲು ಸೀರೆಗಿಂತ ಉತ್ತಮ ಉಡುಗೆ ಬೇರೊಂದಿಲ್ಲ. ಈಗೆಲ್ಲ ಹೆಚ್ಚು ತೂಕದ ಉತ್ತಮ ಗುಣಮಟ್ಟದ ಕಂಚಿ ಸೀರೆಗಳಿಂದ ಹಿಡಿದು ಲೈಟ್‌ ವೇಟ್‌ನ ಬಗೆಬಗೆಯ ಮದುವೆ ಸೀರೆಗಳು ಹೇರಳವಾಗಿ ದೊರೆಯುತ್ತವೆ. ವೆಡಿಂಗ್‌ ಸ್ಯಾರಿಯ ಬಗ್ಗೆ ಫ್ಯಾಷನ್‌ ಡಿಸೈನರ್‌ ನಳಿನಾ ಹೀಗೆ ಹೇಳುತ್ತಾರೆ. ``ನಿಮಗೆ ಇಷ್ಟವಾದ ಸೀರೆಯನ್ನು ಆರಿಸಿದ ಬಳಿಕ ಬ್ಲೌಸ್‌ನ ಫಿಟಿಂಗ್‌ ಮತ್ತು ಡಿಸೈನ್‌ ಬಗ್ಗೆ ವಿಶೇಷ ಗಮನ ನೀಡಿ. ಪರ್ಫೆಕ್ಟ್ ಬ್ಲೌಸ್‌ನಿಂದ ಸೀರೆಯ ಸೊಬಗು ಹೆಚ್ಚುತ್ತದೆ. ಜೊತೆಗೆ ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತದೆ. ನಿಮ್ಮ ಟಮಿ ಹೊರ ಬಂದಿದ್ದರೆ ಫುಲ್ ಲೆಂತ್‌ ಬ್ಲೌಸ್‌ ಧರಿಸಿ. ಮುಹೂರ್ತವಲ್ಲದೆ, ಇತರೆ ಸಮಯಗಳಲ್ಲಿ ಹಾಟ್‌ ಲುಕ್‌ಗಾಗಿ ಸ್ಲೀವ್ ಲೆ‌ಸ್‌ ಬ್ಲೌಸ್‌ನ್ನೂ ಟ್ರೈ ಮಾಡಬಹುದು. ಡಿಫರೆಂಟ್‌ ಲುಕ್‌ಗಾಗಿ ವಿಭಿನ್ನ ರೀತಿಯಲ್ಲಿ ಸೀರೆ ಉಡಬಹುದು. ಉದಾ : ಗುಜರಾತಿ ಸ್ಟೈಲ್‌, ಕೂರ್ಗಿ ಸ್ಟೈಲ್ ಇತ್ಯಾದಿ.

dulhan-ka-libaas-3

ಇಂಡೊವೆಸ್ಟರ್ನ್‌ ಬ್ರೈಡಲ್ ವೇರ್‌ ಟ್ರೆಂಡ್‌

ನೀವು ಟಿಪಿಕಲ್ ಭಾರತೀಯ ಮದುಮಗಳಾಗಬೇಕಿಲ್ಲದಿದ್ದರೆ ಇಂದು ಹೆಚ್ಚು ಬಳಕೆಯಲ್ಲಿರುವ ಸೀರೆ ಮತ್ತು ಲಹಂಗಾ ಚೋಲಿಯನ್ನು ಬಿಟ್ಟು ಇಂಡೋ ವೆಸ್ಟರ್ನ್‌ ಬ್ರೈಡಲ್ ವೇರ್‌ನ್ನು ಟ್ರೈ ಮಾಡಬಹುದು. ಇದರ ಲುಕ್‌ ಪೂರ್ತಿ ಟ್ರೆಡಿಶನಲ್ ಆಗಿರುವುದಿಲ್ಲ ಮತ್ತು ಪೂರ್ತಿ ವೆಸ್ಟರ್ನ್‌ ಸಹ ಆಗಿರುವುದಿಲ್ಲ. ಇಂಡೊ ವೆಸ್ಟರ್ನ್‌ ಪ್ಯಾಟರ್ನ್‌ ನಿಮಗೆ ಸೆಮಿ ಇಂಡಿಯನ್‌ ಮತ್ತು ಸೆಮಿ ವೆಸ್ಟರ್ನ್‌ ಲುಕ್‌ ಒದಗಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ