ಹೆಡ್ ಟು ಟೋ ಬ್ಯೂಟಿ ಬಗ್ಗೆ ಮಾತನಾಡುತ್ತಿರುವಾಗ ಮೊದಲು ಹೆಡ್ನಿಂದಲೇ ಶುರು ಮಾಡೋಣ. ಹೆಣ್ಣಿನ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡುವ ತಲೆಗೂದಲಿನ ಆರೈಕೆ ಕಡೆ ಗಮನಹರಿಸೋಣ.
– ಸ್ವಸ್ಥ, ಹೊಳೆಯುವ ಕೂದಲು ಇಡೀ ರೂಪಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ. ಇದರ ಹೊಳಪನ್ನು ಕಾಪಿಡಲು ಪ್ರತಿ ವಾರ ಹೆಡ್ ಮಸಾಜ್ ಮಾಡಿಸಬೇಕು. ಇದರಲ್ಲಿ ಬಳಸಲಾಗುವ ಆಯಿಲ್ನಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ಜೊತೆಗೆ ಮಸಾಜ್ ಸ್ಟ್ರೋಕ್ಸ್ ನಿಂದ ರಿಲ್ಯಾಕ್ಸ್ ಆಗುತ್ತದೆ.
– ಓವರ್ಆಲ್ ಲುಕ್ನಲ್ಲಿ ಚೇಂಜ್ ತರಲು ಹೇರ್ ಕಲರಿಂಗ್ ಸಹ ಮಾಡಿಸಬಹುದು. ಇದರಿಂದ ಲುಕ್ಸ್ ಗಾರ್ಜಿಯಸ್ ಎನಿಸುತ್ತದೆ. ಆದರೆ ಹೇರ್ ಕಲರ್ ಸ್ಕಿನ್ ಮತ್ತು ಕಂಗಳ ಕಲರ್ಗೆ ತಕ್ಕಂತಿರಬೇಕು, ಏಕೆಂದರೆ ನಿಮ್ಮ ಸ್ಕಿನ್ ಟೋನ್ಗೆ ತಕ್ಕಂತೆ ಮಾತ್ರ ಹೇರ್ ಕಲರಿಂಗ್ ಮಾಡಿಸುವುದರಿಂದ ನೀವು ನಿಮ್ಮ ರೂಪ ಬದಲಾಯಿಸುವಂತೆ ಆಗಬಾರದು. ಆದರೆ ಮದುವೆಗೆ 15 ದಿನಗಳ ಹಿಂದೆ ಮಾತ್ರ ಕೂದಲಿಗೆ ಕಲರಿಂಗ್ ಮಾಡಿಸಬೇಕು.
ಫೇಸ್ : ಆರೋಗ್ಯಕರ ಚರ್ಮ ಮತ್ತು ಬ್ಯೂಟಿಫುಲ್ ಫೀಚರ್ಸ್ನಿಂದ ಮುಖದ ಅಂದಚೆಂದ ಹೆಚ್ಚುತ್ತದೆ. ಹೀಗಾಗಿ ಮದುವೆಯ ದಿನ ಕರೆಕ್ಟಿವ್ ಮೇಕಪ್ ಮೂಲಕ ಫೀಚರ್ಸ್ನ್ನು ಬ್ಯೂಟಿಫುಲ್ ಮಾಡಬಹುದು. ಆದರೆ ಸ್ಕಿನ್ಗೆ ಫ್ಲಾಲೆಸ್ ಟೆಕ್ಸ್ ಚರ್ ನೀಡಲು ಪ್ರೀಬ್ರೈಡಲ್ ಪ್ಯಾಕೇಜ್ನಲ್ಲಿ ಈ ವಿಷಯಗಳು ಅನಿವಾರ್ಯ ಆಗಿವೆ :
– ನಿಮಗೆ ಸ್ಕಿನ್ ಪ್ರಾಬ್ಲಮ್ಸ್ ಇದ್ದರೆ ಅದರಿಂದ ಮುಕ್ತಿ ಪಡೆಯಲು ಯಾವುದಾದರೂ ನುರಿತ ಕಾಸ್ಮೆಟಿಕ್ ಕ್ಲಿನಿಕ್ನಿಂದ ಪ್ರೀಬ್ರೈಡಲ್ ಟ್ರೀಟ್ಮೆಂಟ್ ಪಡೆಯಿರಿ. ಆಗ ಅವರು ನಿಮ್ಮ ಚರ್ಮದ ಸೂಕ್ತ ಆರೈಕೆ ಮಾಡಲು ಸಾಧ್ಯ. ಸಕಾಲದಲ್ಲಿ ಈ ಚಿಕಿತ್ಸೆ ಆರಂಭಿಸಬೇಕು. ಮದುವೆ ಹೊತ್ತಿಗೆ ಈ ಸಮಸ್ಯೆಗಳು ದೂರಾಗಿರುತ್ತವೆ.
– ಟ್ಯಾನ್ಡ್ ಫೇಸ್ನಲ್ಲಿ ಹೊಳಪು ಹೊಮ್ಮಿಸಲು ಅಗತ್ಯ ಬ್ಲೀಚ್ ಮಾಡಿಸಿ. ಸಾಧ್ಯವಾದಷ್ಟೂ ಮುಖಕ್ಕೆ ಮೈಲ್ಡ್ ಬ್ಲೀಚ್ ಮಾಡಿಸಿ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಮೈಲ್ಡ್ ಬ್ಲೀಚ್ಗಳು ಲಭ್ಯ. ಅಂದರೆ ಮಿಕ್ಸ್ ಬ್ಲೀಚ್, ಪ್ರೋಟೀನ್ ಬ್ಲೀಚ್ ಇತ್ಯಾದಿ. ಇದರ ಬಳಕೆಯಿಂದ ಟ್ಯಾನಿಂಗ್ ದೂರ ಆಗುತ್ತದೆ, ಜೊತೆಗೆ ಸ್ಕಿನ್ ಸಹ ಸಾಫ್ಟ್ ಆಗುತ್ತದೆ.
– ಡೆಡ್ ಸ್ಕಿನ್ ರಿಮೂವ್ ಮಾಡಲು ಪ್ರತಿ 15 ದಿನಗಳಿಗೊಮ್ಮೆ ಉತ್ತಮ ಬ್ಯೂಟಿಪಾರ್ಲರ್ನಲ್ಲಿ ವೆಜ್ ಯಾ ಫ್ರೂಟ್ ಪೀಲಿಂಗ್ ಮಾಡಿಸಿ. ಪೀಲಿಂಗ್ನಿಂದ ಬ್ಲ್ಯಾಕ್ ಹೆಡ್ಸ್ ತೊಲಗುತ್ತವೆ, ಆ್ಯಕ್ನೆಗಳೂ ದೂರಾಗುತ್ತವೆ.
– ಗ್ಲೋಯಿಂಗ್ ಸ್ಕಿನ್ ರಿಲ್ಯಾಕ್ಸೇಷನ್ಗಾಗಿ ಫೇಶಿಯಲ್ ಮಾಡಿಸಬಹುದು. ನಿಮ್ಮ ಪ್ರಾಬ್ಲಮ್ ಅನುಸಾರ ಫೇಶಿಯಲ್ ಆರಿಸಿ. ಉದಾ: ಡ್ರೈ ಸ್ಕಿನ್ ಇದ್ದರೆ ಕಕೂನ್, ಡಲ್ ಆಗಿದ್ದರೆ ಸೂಪರ್ ಗೋಲ್ಡ್ ಯಾ ವೈನ್, ಶ್ಯಾಮಲ ವರ್ಣವಾದರೆ ಸ್ನೋ ಲೈಟ್ ಫೇಶಿಯಲ್ ಮಾಡಿಸಬಹುದು. ಡಾರ್ಕ್ ಲಿಪ್ಸ್ ಯಾ ಅಂಡರ್ ಡಾರ್ಕ್ ಸರ್ಕಲ್ ಸಮಸ್ಯೆ ಇದ್ದರೆ, ಸ್ಪೆಷಲ್ ಪೀಲ್ ನೆರವಿನಿಂದ ಈ ಸಮಸ್ಯೆ ನಿವಾರಿಸಬಹುದು.
– ನೀವು ತೊನ್ನು (ವೈಟ್ ಪ್ಯಾಚೆಸ್) ಸಮಸ್ಯೆಗೆ ಈಡಾಗಿದ್ದರೆ, ಪರ್ಮನೆಂಟ್ ಕಲರಿಂಗ್ ಮಾಡಿಸಬಹುದು. ಇದರ ಮೂಲಕ ಸ್ಕಿನ್ಗೆ ಹೊಂದುವ ಕಲರ್ನ್ನು ತ್ವಚೆಯ ಡರ್ಮಿಸ್ ಲೇಯರ್ವರೆಗೂ ತಲುಪಿಸಬಹುದು. ಅದರಿಂದ ವೈಟ್ ಪ್ಯಾಚೆಸ್ ಮರೆಯಾಗುತ್ತವೆ. ಪರ್ಮನೆಂಟ್ ಕಲರಿಂಗ್ನ ಪರಿಣಾಮ 2-5 ವರ್ಷಗಳವರೆಗೂ ಉಳಿಯುತ್ತದೆ.
– ಐ ಬ್ರೋಸ್ನ್ನು ನಿಯಮಿತವಾಗಿ ಟ್ರಿಮ್ ಮಾಡಿಸಿ. ಮುಖದಲ್ಲಿನ ಅನಗತ್ಯ ಕೂದಲನ್ನು ರೆಡ್ ವ್ಯಾಕ್ಸ್ ಯಾ ಥ್ರೆಡಿಂಗ್ನಿಂದ ರಿಮೂವ್ ಮಾಡಿ. ಆದರೆ ಇವು ಶಾಶ್ವತ ಪರಿಹಾರವಲ್ಲ. ಮುಖದಲ್ಲಿನ ಅನಗತ್ಯ ಕೂದಲನ್ನು ಶಾಶ್ವತವಾಗಿ ತೆಗೆಯಲು ಲೇಸರ್ ಟ್ರೀಟ್ಮೆಂಟ್ ಬೆಸ್ಟ್. ಇದರಿಂದ 80%ನಷ್ಟು ಅನಗತ್ಯ ಕೂದಲು ಹೋಗುತ್ತದೆ. ಉಳಿದ ಕೂದಲು ಬಹುತೇಕ ಕಣ್ಮರೆ ಆಗುತ್ತದೆ. ಬಾಡಿ : ಮುಖದ ಅಂದ ಮಾತ್ರ ಇಡೀ ವ್ಯಕ್ತಿತ್ವದ ಸೌಂದರ್ಯ ಆಗಲಾರದು, ಅದು ಇಡೀ ಪರ್ಸನಾಲಿಟಿಯಿಂದ ಗೋಚರಿಸಬೇಕು. ಅದನ್ನು ಉನ್ನತಗೊಳಿಸಲು ಹೀಗೆ ಮಾಡಿ :
– ಬಾಡಿಯನ್ನು ಟ್ಯಾನ್ಫ್ರೀ ರಿಲ್ಯಾಕ್ಸ್ ಗೊಳಿಸಲು ಇಡೀ ದೇಹಕ್ಕೆ ಲೇಪನ ಅಥವಾ ಪಾಲಿಶಿಂಗ್ ಮಾಡಿಸಬೇಕು. ಲೇಪನದಿಂದ ಚರ್ಮದ ಮೃತಕೋಶಗಳು ದೂರಾಗುತ್ತವೆ. ಜೊತೆಗೆ ಟ್ಯಾನಿಂಗ್ ಸಹ. ಇದರಿಂದ ಚರ್ಮದ ಕೋಮಲತೆ ಹಾಗೂ ಹೊಳಪು ಹೆಚ್ಚುತ್ತದೆ. ಅಲ್ಲದೆ, ಮಸಾಜ್ನಿಂದ ನೀವು ಸ್ಟ್ರೆಸ್ ಫ್ರೀ ಆಗುವಿರಿ. ಇದನ್ನು ತಿಂಗಳಲ್ಲಿ ಕನಿಷ್ಠ 2 ಸಲ ಮಾಡಿಸಿ. ನಿಮ್ಮ ದೇಹದಲ್ಲಿ ಟ್ಯಾನಿಂಗ್ ಅಂಶ ಹೆಚ್ಚಿದ್ದರೆ ಇದನ್ನು ತಿಂಗಳಿಗೆ 4 ಸಲ ಮಾಡಿಸಿ.
– ಮದುವೆ ಹೊತ್ತಿಗೆ ನಿಮ್ಮ ದೇಹದ ಕಣಕಣದಲ್ಲೂ ಸುಗಂಧದ ಪರಿಮಳ ಹೆಚ್ಚಿಸಲು, 2 ವಾರಗಳಲ್ಲಿ ಆ್ಯರೋಮ್ಯಾಟಿಕ್ ಆಯಿಲ್ನಿಂದ ಮಸಾಜ್ ಮಾಡಿಸಿ. ಇದು ನಿಮ್ಮ ದೇಹಕ್ಕೆ ಮಾತ್ರವಲ್ಲದೆ, ಮನಸ್ಸಿಗೂ ರಿಲ್ಯಾಕ್ಸೇಷನ್ ನೀಡುತ್ತದೆ.
– ದೇಹದ ಬಣ್ಣವನ್ನು ಏಕಸಮಾನವಾಗಿ ತೋರ್ಪಡಿಸಲು ಅಗತ್ಯ ಬ್ಲೀಚ್ ಮಾಡಿಸಿ. ಮುಖದ ಹಾಗೆಯೇ ದೇಹಕ್ಕೂ ಯಾವುದಾದರೂ ಮೈಲ್ಡ್ ಬ್ಲೀಚ್ ಬಳಸಿಕೊಳ್ಳಿ. ಆಗ ಚರ್ಮದಲ್ಲಿ ಹೊಳಪಿನ ಜೊತೆ ಸೌಮ್ಯತೆಯೂ ಹೆಚ್ಚುತ್ತದೆ. ನಿಮ್ಮ ಅಗತ್ಯಕ್ಕೆ ಅನುಸಾರ ಯಾವಾಗ ಬೇಕಾದರೂ ಬ್ಲೀಚ್ ಮಾಡಿಸಬಹುದು. ಆದರೆ ಮದುವೆಗೆ 2-3 ದಿನ ಮೊದಲೇ ಮಾಡಿಸಬೇಕು.
– ಇಡೀ ದೇಹದಲ್ಲಿ ರೇಷ್ಮೆಯ ಅನುಭೂತಿ ಮೂಡಿಸಲು ಫ್ಲೇವರ್ಡ್ ಮಾಡಿಸಬಹುದು. ಅನಗತ್ಯ ಕೂದಲನ್ನು ತೊಲಗಿಸಲು ಪ್ಸ್ ವೈಟ್ ಟ್ರೀಟ್ಮೆಂಟ್ನ ನೆರವು ಪಡೆಯಿರಿ. ಇದರಿಂದ ದೇಹದ ಯಾವುದೇ ಭಾಗ ಅಂದರೆ ಮೂಗು, ಮೇಲ್ದುಟಿ, ಗಲ್ಲ, ಕಿವಿ, ಕಂಕುಳು, ಪಾದ, ಬಿಕಿನಿ ಲೈನ್ಗಳ ಕೂದಲು ನಿವಾರಣೆಯಾಗುತ್ತವೆ. ಆಗ ನಿಮ್ಮ ರೇಷ್ಮೆಯಂಥ ಚರ್ಮ ಹೊಂದುವ ಕನಸು ನನಸಾಗಲಿದೆ.
ಹೆಡ್ ಟೋ : ಕೈಕಾಲುಗಳ ಸೌಂದರ್ಯ ಉಳಿಸಿಕೊಳ್ಳಲು ಕೆಳಗಿನ ವಿಷಯಗಳನ್ನು ನೆನಪಿಡಿ :
– ಮದುವೆಯ ಹಲವು ಸಮಾರಂಭಗಳಾದ ಎಂಗೇಜ್ಮೆಂಟ್, ಸಂಗೀತ್, ಮೆಹಂದಿ, ಮುಹೂರ್ತ, ಆರತಕ್ಷತೆ ಇತ್ಯಾದಿಗಳಿಗೆ ನಿಮ್ಮ ಕೈಕಾಲುಗಳ ಅಂದಚೆಂದ ಎದ್ದು ಕಾಣುವಂತಿರಬೇಕು. ಹೀಗಾಗಿ ಪ್ರತಿ 15 ದಿನಗಳಿಗೊಮ್ಮೆ ಮೆನಿಕ್ಯೂರ್-ಪೆಡಿಕ್ಯೂರ್ ಮಾಡಿಸುತ್ತಿರಿ. ಇದರಿಂದ ನಿಮ್ಮ ಕೈಕಾಲುಗಳ ಬಣ್ಣ ತೇಲುವುದಲ್ಲದೆ, ಅದು ಸಾಫ್ಟ್ ಸಹ ಆಗುತ್ತದೆ. ಆಗ ಮೆಹಂದಿಯ ಹೊಳಪೂ ಹೆಚ್ಚುತ್ತದೆ.
– ಎಂಗೇಜ್ಮೆಂಟ್ನಲ್ಲಿ ಕೈಕೈ ಹಿಡಿದು ಓಡಾಡಬೇಕಾದ ಸಂದರ್ಭ ಇರುತ್ತದೆ. ಹೀಗಿರುವಾಗ ನಿಮ್ಮ ಕೈಗಳನ್ನು ಮತ್ತಷ್ಟು ಬ್ಯೂಟಿಫುಲ್ ಆಗಿಸಲು ಮೆನಿಕ್ಯೂರ್ ಜೊತೆ ಪ್ಯಾರಾಫಿನ್ ವ್ಯಾಕ್ಸ್ ಸಹ ಬಳಸುತ್ತಿರಿ. ಆಗ ನಿಮ್ಮ ಚರ್ಮಕ್ಕೆ ಆಂತರಿಕ ಪೋಷಣೆಯೂ ಸಿಗುತ್ತದೆ.
– ಭಾರತಿ ಹೆಗಡೆ