ಹೆಡ್‌ ಟು ಟೋ ಬ್ಯೂಟಿ ಬಗ್ಗೆ ಮಾತನಾಡುತ್ತಿರುವಾಗ ಮೊದಲು ಹೆಡ್‌ನಿಂದಲೇ ಶುರು ಮಾಡೋಣ. ಹೆಣ್ಣಿನ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡುವ ತಲೆಗೂದಲಿನ ಆರೈಕೆ ಕಡೆ ಗಮನಹರಿಸೋಣ.

- ಸ್ವಸ್ಥ, ಹೊಳೆಯುವ ಕೂದಲು ಇಡೀ ರೂಪಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ. ಇದರ ಹೊಳಪನ್ನು ಕಾಪಿಡಲು ಪ್ರತಿ ವಾರ ಹೆಡ್‌ ಮಸಾಜ್‌ ಮಾಡಿಸಬೇಕು. ಇದರಲ್ಲಿ ಬಳಸಲಾಗುವ ಆಯಿಲ್‌ನಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ಜೊತೆಗೆ ಮಸಾಜ್‌ ಸ್ಟ್ರೋಕ್ಸ್ ನಿಂದ ರಿಲ್ಯಾಕ್ಸ್ ಆಗುತ್ತದೆ.

- ಓವರ್‌ಆಲ್ ಲುಕ್‌ನಲ್ಲಿ ಚೇಂಜ್‌ ತರಲು ಹೇರ್‌ ಕಲರಿಂಗ್‌ ಸಹ ಮಾಡಿಸಬಹುದು. ಇದರಿಂದ ಲುಕ್ಸ್ ಗಾರ್ಜಿಯಸ್‌ ಎನಿಸುತ್ತದೆ.  ಆದರೆ ಹೇರ್‌ ಕಲರ್‌ ಸ್ಕಿನ್‌ ಮತ್ತು ಕಂಗಳ ಕಲರ್‌ಗೆ ತಕ್ಕಂತಿರಬೇಕು, ಏಕೆಂದರೆ ನಿಮ್ಮ ಸ್ಕಿನ್‌ ಟೋನ್‌ಗೆ ತಕ್ಕಂತೆ ಮಾತ್ರ ಹೇರ್‌ ಕಲರಿಂಗ್‌ ಮಾಡಿಸುವುದರಿಂದ ನೀವು ನಿಮ್ಮ ರೂಪ ಬದಲಾಯಿಸುವಂತೆ ಆಗಬಾರದು. ಆದರೆ ಮದುವೆಗೆ 15 ದಿನಗಳ ಹಿಂದೆ ಮಾತ್ರ ಕೂದಲಿಗೆ ಕಲರಿಂಗ್‌ ಮಾಡಿಸಬೇಕು.

ಫೇಸ್‌ : ಆರೋಗ್ಯಕರ ಚರ್ಮ ಮತ್ತು ಬ್ಯೂಟಿಫುಲ್ ಫೀಚರ್ಸ್‌ನಿಂದ ಮುಖದ ಅಂದಚೆಂದ ಹೆಚ್ಚುತ್ತದೆ. ಹೀಗಾಗಿ ಮದುವೆಯ ದಿನ ಕರೆಕ್ಟಿವ್‌ ಮೇಕಪ್‌ ಮೂಲಕ ಫೀಚರ್ಸ್‌ನ್ನು ಬ್ಯೂಟಿಫುಲ್ ಮಾಡಬಹುದು. ಆದರೆ ಸ್ಕಿನ್‌ಗೆ ಫ್ಲಾಲೆಸ್‌ ಟೆಕ್ಸ್ ಚರ್‌ ನೀಡಲು ಪ್ರೀಬ್ರೈಡಲ್ ಪ್ಯಾಕೇಜ್‌ನಲ್ಲಿ ಈ ವಿಷಯಗಳು ಅನಿವಾರ್ಯ ಆಗಿವೆ :

- ನಿಮಗೆ ಸ್ಕಿನ್‌ ಪ್ರಾಬ್ಲಮ್ಸ್ ಇದ್ದರೆ ಅದರಿಂದ ಮುಕ್ತಿ ಪಡೆಯಲು ಯಾವುದಾದರೂ ನುರಿತ ಕಾಸ್ಮೆಟಿಕ್‌ ಕ್ಲಿನಿಕ್‌ನಿಂದ ಪ್ರೀಬ್ರೈಡಲ್ ಟ್ರೀಟ್‌ಮೆಂಟ್‌ ಪಡೆಯಿರಿ. ಆಗ ಅವರು ನಿಮ್ಮ ಚರ್ಮದ ಸೂಕ್ತ ಆರೈಕೆ ಮಾಡಲು ಸಾಧ್ಯ. ಸಕಾಲದಲ್ಲಿ ಈ ಚಿಕಿತ್ಸೆ ಆರಂಭಿಸಬೇಕು. ಮದುವೆ ಹೊತ್ತಿಗೆ ಈ ಸಮಸ್ಯೆಗಳು ದೂರಾಗಿರುತ್ತವೆ.

- ಟ್ಯಾನ್ಡ್ ಫೇಸ್‌ನಲ್ಲಿ ಹೊಳಪು ಹೊಮ್ಮಿಸಲು ಅಗತ್ಯ ಬ್ಲೀಚ್‌ ಮಾಡಿಸಿ. ಸಾಧ್ಯವಾದಷ್ಟೂ ಮುಖಕ್ಕೆ ಮೈಲ್ಡ್ ಬ್ಲೀಚ್‌ ಮಾಡಿಸಿ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಮೈಲ್ಡ್ ಬ್ಲೀಚ್‌ಗಳು ಲಭ್ಯ. ಅಂದರೆ ಮಿಕ್ಸ್ ಬ್ಲೀಚ್‌, ಪ್ರೋಟೀನ್‌ ಬ್ಲೀಚ್‌ ಇತ್ಯಾದಿ. ಇದರ ಬಳಕೆಯಿಂದ ಟ್ಯಾನಿಂಗ್‌ ದೂರ ಆಗುತ್ತದೆ, ಜೊತೆಗೆ ಸ್ಕಿನ್‌ ಸಹ ಸಾಫ್ಟ್ ಆಗುತ್ತದೆ.

- ಡೆಡ್‌ ಸ್ಕಿನ್‌ ರಿಮೂವ್‌ ಮಾಡಲು ಪ್ರತಿ 15 ದಿನಗಳಿಗೊಮ್ಮೆ ಉತ್ತಮ ಬ್ಯೂಟಿಪಾರ್ಲರ್‌ನಲ್ಲಿ ವೆಜ್‌ ಯಾ ಫ್ರೂಟ್‌ ಪೀಲಿಂಗ್‌ ಮಾಡಿಸಿ. ಪೀಲಿಂಗ್‌ನಿಂದ ಬ್ಲ್ಯಾಕ್‌ ಹೆಡ್ಸ್ ತೊಲಗುತ್ತವೆ, ಆ್ಯಕ್ನೆಗಳೂ ದೂರಾಗುತ್ತವೆ.

- ಗ್ಲೋಯಿಂಗ್‌ ಸ್ಕಿನ್‌  ರಿಲ್ಯಾಕ್ಸೇಷನ್‌ಗಾಗಿ ಫೇಶಿಯಲ್ ಮಾಡಿಸಬಹುದು. ನಿಮ್ಮ ಪ್ರಾಬ್ಲಮ್ ಅನುಸಾರ ಫೇಶಿಯಲ್ ಆರಿಸಿ. ಉದಾ: ಡ್ರೈ ಸ್ಕಿನ್‌ ಇದ್ದರೆ ಕಕೂನ್‌, ಡಲ್ ಆಗಿದ್ದರೆ ಸೂಪರ್‌ ಗೋಲ್ಡ್ ಯಾ ವೈನ್‌, ಶ್ಯಾಮಲ ವರ್ಣವಾದರೆ ಸ್ನೋ ಲೈಟ್‌ ಫೇಶಿಯಲ್ ಮಾಡಿಸಬಹುದು. ಡಾರ್ಕ್‌ ಲಿಪ್ಸ್ ಯಾ ಅಂಡರ್‌ ಡಾರ್ಕ್‌ ಸರ್ಕಲ್ ಸಮಸ್ಯೆ ಇದ್ದರೆ, ಸ್ಪೆಷಲ್ ಪೀಲ್ ನೆರವಿನಿಂದ ಈ ಸಮಸ್ಯೆ ನಿವಾರಿಸಬಹುದು.

- ನೀವು ತೊನ್ನು (ವೈಟ್‌ ಪ್ಯಾಚೆಸ್‌) ಸಮಸ್ಯೆಗೆ ಈಡಾಗಿದ್ದರೆ, ಪರ್ಮನೆಂಟ್‌ ಕಲರಿಂಗ್‌ ಮಾಡಿಸಬಹುದು. ಇದರ ಮೂಲಕ ಸ್ಕಿನ್‌ಗೆ ಹೊಂದುವ ಕಲರ್‌ನ್ನು ತ್ವಚೆಯ ಡರ್ಮಿಸ್‌ ಲೇಯರ್‌ವರೆಗೂ ತಲುಪಿಸಬಹುದು. ಅದರಿಂದ ವೈಟ್‌ ಪ್ಯಾಚೆಸ್‌ ಮರೆಯಾಗುತ್ತವೆ. ಪರ್ಮನೆಂಟ್‌ ಕಲರಿಂಗ್‌ನ ಪರಿಣಾಮ 2-5 ವರ್ಷಗಳವರೆಗೂ ಉಳಿಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ