ತಾರುಣ್ಯವಿರಲಿ, ಪ್ರೌಢರಾಗಿರಲಿ ಲಿಪ್‌ಸ್ಟಿಕ್‌ ಬಳಿದಾಗ ಮಾತ್ರ ಮುಖಕ್ಕೆ ಹೊಸ ಕಾಂತಿ ಮೂಡುತ್ತದೆ. ಇತ್ತೀಚೆಗಂತೂ ಇದರ ಕ್ರೇಝ್ ಇಲ್ಲದವರೇ ಇಲ್ಲ. ಹೀಗಾಗಿ ಕಾಸ್ಮೆಟಿಕ್ಸ್ ಕಂಪನಿಗಳು ತುಟಿಗಳ ರಂಗೇರಿಸಲು ವಿವಿಧ ಬಗೆಯ ಬಣ್ಣಗಳನ್ನು ಹೊರತರುತ್ತಿವೆ. ಆದರೆ ನೀವು ಲಿಪ್‌ಸ್ಟಿಕ್‌ನ್ನು ಸರಿಯಾಗಿ ತೀಡದಿದ್ದರೆ, ನಿಮ್ಮ ಸೌಂದರ್ಯ ಹೆಚ್ಚುವ ಬದಲು ಇದ್ದದ್ದೂ ಕೆಟ್ಟುಹೋಗುತ್ತದೆ. ಕೆಲವು ಮಹಿಳೆಯರ ಲಿಪ್‌ಸ್ಟಿಕ್‌ ಬಣ್ಣ ಢಾಳಾಗಿ ಹಲ್ಲಿಗೆ ಮೆತ್ತಿಕೊಂಡಿರುತ್ತದೆ. ಇದನ್ನು ಹೀಗೆ ಯಾರ ಮುಂದಾದರೂ ಪ್ರದರ್ಶಿಸಲಿಕ್ಕೆ ಅಸಹ್ಯ ಎನಿಸುತ್ತದೆ. ಜೊತೆಗೆ ಲಿಪ್‌ಸ್ಟಿಕ್‌ನ್ನು ನಿಮ್ಮ ಡ್ರೆಸ್‌ ಮತ್ತು ಅದನ್ನು ಧರಿಸುವ ಸಂದರ್ಭ ನೋಡಿಕೊಂಡು ಆರಿಸಬೇಕಾಗುತ್ತದೆ. ಲಿಪ್‌ಸ್ಟಿಕ್‌ ತೀಡುವ ಮೊದಲು ಅನುಸರಿಸಬೇಕಾದ ಸಲಹೆಗಳೇನು? ಬನ್ನಿ, ವಿವರವಾಗಿ ನೋಡೋಣ :

- ಒಂದು ಇಯರ್‌ ಬಡ್‌ನ್ನು ಮೇಕಪ್‌ ರಿಮೂವರ್‌ನಲ್ಲಿ ಅದ್ದಿ, ಅದರ ನೆರವಿನಿಂದ ನಿಮ್ಮ ತುಟಿಗಳನ್ನು ಶುಚಿಗೊಳಿಸಿ. ನೀವು ಡಾರ್ಕ್‌ ಲಿಪ್‌ಸ್ಟಿಕ್‌ ನಂತರ ಲೈಟ್‌ ಕಲರ್‌ ಪ್ರಿಫರ್‌ ಮಾಡಿದರೆ, ಆಗ ತುಟಿಗಳ ಮೇಲಿನ ಡಾರ್ಕ್‌ ಕಲರ್‌ ಸಂಪೂರ್ಣ ಹೋಗಬೇಕಾದುದು ಅನಿವಾರ್ಯ. ಗಾಢ ಬಣ್ಣ ಅದರಲ್ಲೂ ಕೆಂಪಾಗಿದ್ದರೆ, ತುಟಿಗಳ ತುಸು ಕೆಳಭಾಗದವರೆಗೂ ಹರಡಿರುತ್ತದೆ. ಅದನ್ನು ಶುಚಿಗೊಳಿಸಿ ನಂತರ ಲೈಟ್‌ ಬಣ್ಣ ಗಮನಿಸಬೇಕಾಗುತ್ತದೆ.

- ಯಾವಾಗ ಲಿಪ್‌ಸ್ಟಿಕ್‌ ಬಳಸಿದರೂ, ಅದು ನಿಮ್ಮ ಬಟ್ಟೆಗೆ ತಗುಲಬಾರದು ಎಂದು ಗಮನಿಸಿ. ಓಂಬ್ರೆ ಇತ್ತೀಚೆಗೆ ಹೆಚ್ಚು ಫ್ಯಾಷನ್‌ನಲ್ಲಿದೆ. ನೀವು ಯಂಗ್‌  ಆಗಿದ್ದರೆ ಆಗ 2 ಅಥವಾ 3 ಬಣ್ಣಗಳ ಲಿಪ್‌ಸ್ಟಿಕ್‌ ಲೇಯರ್‌ ಹೊಂದಿಸಬಹುದು. ಇದು ಯಾವುದೇ ಬಗೆಯ ಬಣ್ಣದ ಬಟ್ಟೆಗೂ ಹೊಂದುತ್ತದೆ. ನೀವು ಗ್ಲಾಸಿ ರೆಡ್‌ ಲಿಪ್‌ಸ್ಟಿಕ್‌ ಬಳಸಿದ್ದರೆ, ಅದು ಅಧಿಕ ಹರಡದಂತೆ ಅಲರ್ಟ್‌ ಆಗಿರಿ. ಅದರ ಒಂದು ಪದರ ಹರಡಿದ ನಂತರ, ಸ್ವಲ್ಪ ಹೊತ್ತು ಹಾಗೇ ಬಿಡಿ. ಅದಾದ ಮೇಲೆ ಎರಡನೇ ಲೇಯರ್‌ ಹಚ್ಚಬೇಕು. ಇದರಿಂದ ಲಿಪ್‌ಸ್ಟಿಕ್‌ ಬಹಳ ಹೊತ್ತು ಬಾಳಿಕೆ ಬರುತ್ತದೆ. ತುಟಿಗಳ ಮಧ್ಯದಿಂದ ತುಂಬುತ್ತಾ ಅದರ ತುದಿವರೆಗೂ ಬನ್ನಿ.

- ಲಿಪ್‌ಸ್ಟಿಕ್‌ ಹಚ್ಚಿದ ನಂತರ ಇಯರ್‌ಬಡ್‌ನಿಂದ ಅಕ್ಕಪಕ್ಕ ಹರಡಿರುವ ಹೆಚ್ಚುವರಿ  ಲಿಪ್‌ಸ್ಟಿಕ್‌ ತೆಗೆದುಬಿಡಿ, ಆಗ ಮುಖದಲ್ಲಿನ ಕಳೆ ಏಕರೂಪವಾಗಿ ಉಳಿದುಕೊಳ್ಳುತ್ತದೆ.

- ಯಾವ ಋತುವಿನಲ್ಲಿ ಎಂಥ ಬಣ್ಣ ಬಳಸಬೇಕು ಎಂಬುದು ನಿಮ್ಮ ಮೂಡ್‌ನ್ನು ಅವಲಂಬಿಸಿದೆ. ಹಾಗಿರುವಾಗ ಹಗಲಿನಲ್ಲಿ ಲೈಟ್‌ ಮತ್ತು ರಾತ್ರಿ ಹೊತ್ತು ಡಾರ್ಕ್‌ ಕಲರ್‌ ಹೆಚ್ಚು ಶೋಭಿಸುತ್ತದೆ. ಇತ್ತೀಚೆಗೆ ದೀರ್ಘ ಬಾಳಿಕೆಯ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇಂಥವಕ್ಕೆ ಮತ್ತೆ ಮತ್ತೆ ಟಚ್‌ಅಪ್‌ ಕೊಡಬೇಕಾದ ಅಗತ್ಯವಿಲ್ಲ. ಸದಾ ಬ್ರಾಂಡೆಡ್‌ ಲಿಪ್‌ಸ್ಟಿಕ್‌ನ್ನೇ ಬಳಸಿರಿ, ಆಗ ನಿಮ್ಮ ಚರ್ಮಕ್ಕೆ ಯಾವುದೇ ಹಾನಿ ಆಗುವುದಿಲ್ಲ.

- ಮಳೆಗಾಲದಲ್ಲಿ ಅಧಿಕವಾಗಿ ಡಾರ್ಕ್‌ ಕಲರ್‌ನ್ನೇ ಪ್ರಿಫರ್‌ ಮಾಡುತ್ತಾರೆ. ಇದು ಸೀಸನ್ನಿನ ಡಲ್‌ನೆಸ್‌ಗೆ ಜೀವ ತುಂಬುತ್ತದೆ. ಈ ಸಂದರ್ಭದಲ್ಲಿ ಲಿಪ್‌ಸ್ಟಿಕ್‌ ಜೊತೆ ಲಿಪ್‌ಲೈನರ್‌ನ್ನೂ ಬಳಸಿರಿ.

- ಲಿಪ್‌ಸ್ಟಿಕ್‌ ಬಳಸುವ ಮುನ್ನ ಟಿಂಟೆಡ್‌ ಬಾಮ್ ಬಳಸಬೇಕು, ಅದಾದ ಮೇಲೆ ಲಿಪ್‌ಸ್ಟಿಕ್‌ ಹಚ್ಚಿರಿ. ಇದರಿಂದ ಬಣ್ಣ ಅಧಿಕ ಫ್ರೆಶ್‌ ಅನಿಸುತ್ತದೆ. ಲಿಪ್‌ಸ್ಟಿಕ್‌ ಹಚ್ಚಿದ ನಂತರ ತುಟಿಗಳನ್ನು ಚೆನ್ನಾಗಿ ಸ್ಮಜ್‌ ಮಾಡಿ,  ಆಗ ಬಾಮ್ ಚೆನ್ನಾಗಿ ಹರಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ