ಬ್ಲಶರ್‌ ನಿಮ್ಮ ಲುಕ್ಸ್ ನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆಂದು ನಿಮಗೆ ಗೊತ್ತೇ? ಪಾರ್ಟಿ, ಫಂಕ್ಷನ್‌ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಬ್ಲಶರ್‌ನ್ನು ಸುಲಭವಾಗಿ ಕ್ಯಾರಿ ಮಾಡಬಹುದು. ಹೇಗೆಂದು ತಿಳಿಯೋಣ ಬನ್ನಿ.

ಬ್ಲಶರ್‌ ಒಂದು ರೀತಿಯ ಹೈಲೈಟರ್‌ ಆಗಿದ್ದು ಅದು ಫೀಚರ್ಸ್‌ಗಳಿಗೆ ಬ್ರೈಟ್‌ ಲುಕ್‌ ಕೊಡುತ್ತದೆ. ಹಗಲಿನ ಪಾರ್ಟಿ ಅಥವಾ ರಾತ್ರಿಯ ಫಂಕ್ಷನ್‌ ಯಾವುದೇ ಇರಲಿ, ಇದು ನಿಮ್ಮ ಲುಕ್ಸ್ ಗೆ ಹೊಸ ಕಳೆ ಕೊಡುತ್ತದೆ. ಬ್ಲಶರ್‌ ಹಚ್ಚುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ.

ಮುಖಕ್ಕೆ ತಕ್ಕಂತೆ ಬ್ಲಶರ್

ಒಂದುವೇಳೆ ನಿಮ್ಮ ಮುಖ ಉದ್ದವಾಗಿದ್ದರೆ ಕೆನ್ನೆಯಿಂದ ಕಿವಿಯವರೆಗೆ ಎಳೆಯುತ್ತಾ ಬ್ಲಶರ್‌ನ್ನು ತೆಳುವಾಗಿ ಹಚ್ಚಿ. ಚೌಕಾಕಾರದ ಮುಖಕ್ಕೆ ಬ್ಲಶರ್‌ನ್ನು ಕೆನ್ನೆಯಿಂದ ಕೆಳಗೆ ಒಯ್ಯುತ್ತಾ ಮತ್ತೆ ಮೇಲಿನ ಕಡೆಗೆ ಹಚ್ಚಿ. ಮುಖ ಗುಂಡಾಗಿದ್ದರೆ ಬ್ಲಶರ್‌ನ್ನು ಕೆನ್ನೆಗಳ ಮೇಲುಭಾಗಕ್ಕೆ ಎಳೆಯುತ್ತಾ ಹಚ್ಚಿ. ಮೊದಲು ಗಾಢ ಬಣ್ಣದ ಫೌಂಡೇಶನ್‌ ಹಚ್ಚಿದ ನಂತರ ಬ್ಲಶರ್‌ ಹಚ್ಚಿದರೆ ಕೆನ್ನೆ ಕೊಂಚ ಉಬ್ಬಿದಂತೆ ಕಾಣುತ್ತದೆ. ನಿಮ್ಮ ಚೀಕ್‌ ಬೋನ್‌ನ್ನು ಹೈಲೈಟ್‌ ಮಾಡಲು ಬಯಸಿದರೆ ಚೀಕ್‌ ಬೋನ್‌ ಕೆಳಗಿನಿಂದ ಕಿವಿಯವರೆಗೆ ಬ್ಲಶರ್‌ ಹಚ್ಚಿ.

ಹವಾಮಾನವನ್ನು ಗಮನಿಸಿ

ಚಳಿಗಾಲ ಚರ್ಮದಿಂದ ಆರ್ದ್ರತೆಯನ್ನು ಹೀರಿಕೊಳ್ಳುವುದರಿಂದ ಬ್ಲಶರ್‌ನೊಂದಿಗೆ ಪೌಡರ್‌ ಬ್ಲಶರ್‌ ಕೂಡ ಹಚ್ಚಿ. ಕ್ರೀಮ್ ಬ್ಲಶರ್ ವಿಶೇಷವಾಗಿ ಮೆಚ್ಯೂರ್ಡ್‌ ಸ್ಕಿನ್‌ಗೆ ಚೆನ್ನಾಗಿರುತ್ತದೆ. ಅದು ಮುಖದ ಮೇಲೆ ಸುಲಭವಾಗಿ ಬೆರೆತುಕೊಳ್ಳುತ್ತದೆ. ಬೇಸಿಗೆಯಲ್ಲಿ ವಿಶೇಷವಾಗಿ ಪೌಡರ್‌ ಬೇಸ್ಡ್ ಬ್ಲಶರ್‌ನ್ನೇ ಉಪಯೋಗಿಸಿ. ಅದರಿಂದ ನಿಮ್ಮ ಮುಖ ತಾಜಾ ಹಾಗೂ ಸ್ವಚವಾಗಿ ಕಾಣುತ್ತದೆ. ಕ್ರೀಮ್ ಬ್ಲಶರ್‌ ಉಪಯೋಗಿಸಿದರೆ ನಿಮ್ಮ ಮುಖ ಆಯ್ಲಿ ಆಗಬಹುದು.

ಸ್ಕಿನ್‌ ಟೋನ್‌ಗೆ ತಕ್ಕಂತೆ ಶೇಡ್ಸ್ ಆರಿಸಿ

ಫೇರ್‌ ಸ್ಕಿನ್‌ಗಾಗಿ ಪಿಂಕ್‌ ಮತ್ತು ಪೀಚ್‌ ಬೇಸ್‌ ಸೂಟೆಬಲ್ ಶೇಡ್ಸ್ ಆಗಿರುತ್ತವೆ. ವಿಶೇಷವಾಗಿ ನೀವು ಯಾವುದಾದರೂ ಸಂಜೆಯ ಪಾರ್ಟಿಗೆ ಸಿದ್ಧರಾಗುತ್ತಿದ್ದರೆ ಹನಿ ಟೋನ್ಡ್ ನಿಮಗೆ ಬೆಸ್ಟ್ ಚಾಯ್ಸ್ ಆಗಿರುತ್ತದೆ. ಮೀಡಿಯಂ ಸ್ಕಿನ್‌ಗೆ ವೈಟ್‌ ಪಿಂಕ್‌, ಗೋಲ್ಡನ್ ಪೀಚ್‌ ಮತ್ತು ಮೋವ್ ‌ಟೋನ್ಡ್ ಸ್ಕಿನ್‌ ಟೋನ್‌ ಉಪಯುಕ್ತ. ನೀವು ಹೆಚ್ಚು ಗ್ಲೋ ಬಯಸಿದರೆ ಗೋಲ್ಡನ್‌ ಬ್ರಾಂಝ್ ಬ್ಲಶರ್‌ ಹಚ್ಚಿ. ಅದರಿಂದ ನೀವು ಹೆಚ್ಚು ಸುಂದರವಾಗಿ ಕಾಣುತ್ತೀರಿ. ಇದನ್ನು ಸನ್‌ ಕಿಸ್ಡ್ ಗ್ಲೋ ಎಂದೂ ಹೇಳುತ್ತಾರೆ.

ನಿಮ್ಮ ಸ್ಕಿನ್‌ ಟೋನ್‌ ಡಾರ್ಕ್‌ ಆಗಿದ್ದರೆ ನಿಮ್ಮ ಕಾಂಪ್ಲೆಕ್ಷನ್‌ನ್ನು ಹೆಚ್ಚಿಸುವಂತಹ ಬ್ಲಶರ್‌ನ್ನು ಆರಿಸಿ. ಪ್ಲಮ್ ಮತ್ತು ಬ್ರಾಂಝ್ ಬ್ಲಶರ್‌ ನಿಮಗೆ ಚೆನ್ನಾಗಿರುತ್ತದೆ. ಪೇಲ್ ‌ಪೇಸ್ಟ್‌ ಶೇಡ್ಸ್ ಉಪಯೋಗಿಸಬೇಡಿ. ಅವು ನಿಮ್ಮ ಕಾಂಪ್ಲೆಕ್ಷನ್‌ನ್ನು ಇನ್ನೂ ಹೆಚ್ಚು ಡಲ್ ಮಾಡಿಬಿಡುತ್ತವೆ. ಪಾರ್ಟಿ, ಫಂಕ್ಷನ್‌ಗಳಿಗಾಗಿ ವಿಶೇಷವಾಗಿ ಗ್ಲಾಸಿ ಬ್ಲಶರ್‌ನ್ನೇ ಆರಿಸಿ. ಅದರಿಂದ ನಿಮ್ಮ ಮುಖ ಹೊಳೆಯುತ್ತದೆ.

ಆಲ್ ಟೈಂ ಟ್ರೆಂಡಿ ಶಿಮ್ಮರ್

ಬ್ಲಶರ್‌ ಯಾವುದೇ ಸೀಸನ್‌ಗೆ ಸೂಟೆಬಲ್ ಆಗಿರುತ್ತದೆ. ಇದನ್ನು ಶಿಮ್ಮರ್‌ ಲುಕ್ಸ್ ಎಂದೂ ಕರೆಯುತ್ತಾರೆ. ಚಳಿಗಾಲದಲ್ಲಿ ಕ್ರೀಂ ಬ್ಲಶರ್‌ ಮತ್ತು ಶಿಮ್ಮರ್‌ ಹೈಲೈಟರ್‌ ಹಚ್ಚುವುದರಿಂದ ಮುಖದ ಮಾಯಿಶ್ಚರ್‌ ಲೆವೆಲ್ ಬ್ಯಾಲೆನ್ಸ್ಡ್ಆಗಿರುತ್ತದೆ, ಡ್ರೈ ಹಾಗೂ ಡಲ್ ಅನ್ನಿಸುವುದಿಲ್ಲ. ಬೇಸಿಗೆಯಲ್ಲಿ ಕಾಂಪ್ಲೆಕ್ಷನ್‌ನಲ್ಲಿ ಗ್ಲೋ ತುಂಬಿರಲು ಬ್ಲಶರ್‌ನ ಮೇಲೆ ಹನಿ ಟೋನ್ಡ್ ಶಿಮ್ಮರ್‌ ಅಗತ್ಯವಾಗಿ ಹಚ್ಚಿ. ಆಗ ನಿಮ್ಮ ಮುಖ ಬ್ರೈಟ್‌ ಆಗಿ ನೀವು ಚಿಕ್ಕವರಂತೆ ಕಾಣುತ್ತೀರಿ.

– ವಿನುತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ