ಫ್ರಿಝೀ ಕೂದಲು ಅಂದ್ರೆ ಡ್ರೈ, ಸಿಕ್ಕುಸಿಕ್ಕಾದ, ಹೇಗೋ ಹರಡಿದ ಒರಟು ಕೂದಲು. ಇದನ್ನು ಸಂಭಾಳಿಸುವುದು ಖಂಡಿತಾ ಸುಲಭವಲ್ಲ. ಇದಕ್ಕೆ ಕಾರಣ ಕೂದಲಿನ ಆರ್ದ್ರತೆ ಮತ್ತು ಪೋಷಣೆಯ ಕೊರತೆ, ಎಷ್ಟೋ ಸಲ ಕೂದಲಿಗೆ ಅತ್ಯಧಿಕ ಡ್ರೈಯರ್, ಬ್ಲೋಯರ್ ಗಳ ಬಳಕೆಯಿಂದಾಗಿಯೂ ಕೂದಲು ಹೀಗಾಗುತ್ತದೆ. ಇದರ ನಿವಾರಣೆ ಹೇಗೆ ಎಂದು ತಿಳಿಯೋಣವೇ?
ಉತ್ತಮ ಕ್ವಾಲಿಟಿಯ ಶ್ಯಾಂಪೂ ಆರಿಸಿ : ಶ್ಯಾಂಪೂಗಳಲ್ಲಿ ಸಲ್ಫೇಟ್ ನ ಪ್ರಾಣ ಹೆಚ್ಚಾದಷ್ಟೂ ಅದು ಕೂದಲಿನ ನೈಸರ್ಗಿಕ ಜಿಡ್ಡಿನಂಶವನ್ನು ಹೀರಿಬಿಡುತ್ತದೆ. ಆದ್ದರಿಂದ ಸದಾ ಸಲ್ಫೇಟ್ ಪ್ಯಾರಾಬೇನ್ ಫ್ರೀ ಇರುವಂಥ ಶ್ಯಾಂಪೂ ಮಾತ್ರ ಆರಿಸಬೇಕು. ಜೊತೆಗೆ ಶ್ಯಾಂಪೂನಲ್ಲಿ ಗ್ಲಿಸರಿನ್ ಪ್ರಮಾಣ ಎಷ್ಟಿದೆ ಎಂಬುದನ್ನೂ ಪರೀಕ್ಷಿಸಿ. ಗ್ಲಿಸರಿಸ್ ಕೂದಲಿನ ಫ್ರಿಝೀನೆಸ್ ತಗ್ಗಿಸಲು ಬಹಳ ಸಹಕಾರಿ. ಯಾವಾಗ ತಲೆ ಸ್ನಾನ ಮಾಡಬೇಕಿದ್ದರೂ, ಒದ್ದೆ ಕೈಗೆ ಕೆಲವು ಹನಿ ಶ್ಯಾಂಪೂ ಹಾಕಿ, ಅದಕ್ಕೆ 4-5 ಹನಿ ನೀರು ಹಾಕಿ ಬೆರೆಸಿ, ತಿಕ್ಕಿ, ತಲೆಗೆ ಹಚ್ಚಿ ಮಸಾಜ್ ಮಾಡಿ. ಈ ರೀತಿ ಶ್ಯಾಂಪೂ ಬಳಸಬೇಕು.
ನಿಯಮಿತವಾಗಿ ಹೇರ್ ಕಟ್ ಮಾಡಿಸಿ : ನಿಯಮಿತವಾಗಿ ನಿಮ್ಮ ಕೂದಲನ್ನು ಕಟ್‌ಟ್ರಿಮ್ ಮಾಡಿಸಿ. ಇದರಿಂದ ಫ್ರಿಝೀನೆಸ್ ಹಾಗೂ ಸೀಳು ತುದಿಯ ಕೂದಲ ಸಮಸ್ಯೆ ತಗ್ಗುತ್ತದೆ. ನೀವು 40-50 ದಿನಗಳಿಗೊಮ್ಮೆ ತಪ್ಪದೆ ಹೇರ್ ಕಟ್ ಮಾಡಿಸುತ್ತಿರಿ.
ಡಯೆಟ್ : ನೀವು ಏನನ್ನೇ ಸೇವಿಸಿದರೂ ಅದು ನಿಮ್ಮ ದೇಹಕ್ಕೆ ಹೇಗೆ ಪೋಷಣೆ ಒದಗಿಸುತ್ತದೋ ಕೂದಲಿಗೂ ಹಾಗೆ ಒದಗಿಸುತ್ತದೆ. ನಿಮ್ಮ ಆಹಾರದಲ್ಲಿ ಸದಾ ಪ್ರೋಟೀನ್ ಬೆರೆತಿರಲಿ. ಸಂಜೆಯ ತಿಂಡಿಗಾಗಿ ಡ್ರೈಫ್ರೂಟ್ಸ್, ಗ್ರೀನ್ ಟೀ ಸೇವಿಸಿ. ಜೊತೆಗೆ ಹಸಿ ಟೊಮೇಟೋ, ಅಗಸೆಬೀಜ, ತಾಜಾ ಹಸಿರು ತರಕಾರಿ, ಹಣ್ಣು, ಪನೀರ್, ಕಡಲೆಕಾಳು ಸೇವಿಸಬೇಕು.
ಶವರ್ ಆದ ನಂತರ ಕೂದಲಿನ ಬ್ರಶ್ಶಿಂಗ್ ಮಾಡಿ : ಇಂಥ ಫ್ರಿಝೀ ಕೂದಲು ಉಳ್ಳವರು, ತಲೆ ಸ್ನಾನದ ನಂತರವೇ ಕೂದಲನ್ನು ಒಣಗಿಸಿ ನಂತರ ಬ್ರಶ್ಶಿಂಗ್ ಮಾಡಬೇಕು. ಶವರ್ ನಂತರ, ಒದ್ದೆ ಕೂದಲನ್ನು ಕೆಳಭಾಗದಿಂದ ಮೇಲಕ್ಕೆ ಬ್ರಶ್ಶಿಂಗ್ ಮಾಡಿದರೂ ಸರಿ.
ಹೀಟಿಂಗ್ ಟೂಲ್ಸ್ ಬಳಸದಿರಿ : ಡ್ರೈಯರ್, ಬ್ಲೋಯರ್ ನಂಥ ಕೂದಲನ್ನು ತಕ್ಷಣ ಒಣಗಿಸುವ ಹೀಟಿಂಗ್ ಟೂಲ್ಸ್ ನಿಂದ ಆದಷ್ಟೂ ದೂರವಿರಿ. ಇದು ನಮ್ಮ ಕೂದಲಿನ ಎಲ್ಲಾ ಮಾಯಿಶ್ಚರ್ ಎಳೆದುಬಿಡುತ್ತದೆ. ಇಂಥ ಟೂಲ್ಸ್ ನಿಮ್ಮ ಕೂದಲನ್ನು ನಿರ್ಜೀವ, ಶುಷ್ಕಗೊಳಿಸುತ್ತದೆ. ಯಾವುದೇ ಸಮಾರಂಭಕ್ಕೆ ಹೋಗುವುದಿದ್ದರೆ, ನೀವು ಕೂದಲನ್ನು ಸ್ಟ್ರೇಟ್, ಕರ್ಲ್ ಮಾಡಲೇಬೇಕಿದ್ದರೆ, ಅದರ ಸೆಟ್ಟಿಂಗ್ಸ್ ನ್ನು ಕೂಲ್ ಮೋಡ್ ಗೆ ಇರಿಸಿ, ಸದಾ ಲೋ ಮೋಡ್ ನಲ್ಲೇ ಆನ್ ಮಾಡಿ.
ಸರಿಯಾದ ಬಾಚಣಿಗೆ : ಇಂಥ ಫ್ರಿಝೀ ಕೂದಲಿಗಾಗಿ ಬ್ರಾಂಡ್ ಬ್ರಿಸಲ್ಸ್ ಹೇರ್ ಬ್ರಶ್ ಯಾ ಕೋಂಬ್ ಉತ್ತಮ ಆಯ್ಕೆ. ಇದರ ಜೊತೆಗೆ ಒದ್ದೆ ಕೂದಲನ್ನು ಬಾಚಬೇಕಾದಲ್ಲಿ, ವೈಡ್ ಬ್ರಶ್ ಬಳಸಲು ಮರೆಯದಿರಿ.