ರೆಡ್ ಕಲರ್, ಪ್ರೀತಿ ಪ್ರೇಮದ ಪ್ರತೀಕ ಎಂಬುದೇನೋ ನಿಜ. ಹಾಗೆಂದು ಇತರೆ ಬಣ್ಣಗಳನ್ನು ಉಪೇಕ್ಷಿಸುವುದು ಸರಿಯಲ್ಲ. ಈ ಬಾರಿಯ ವ್ಯಾಲೆಂಟೈನ್ ಡೇಗಾಗಿ ನಿಮ್ಮ ಪರ್ಸನಾಲಿಟಿಯನ್ನು ಆಕರ್ಷಕಗೊಳಿಸಲು ಬಣ್ಣಗಳ ಜಾದೂವಿನಿಂದ ನಿಮ್ಮ ಕೂದಲಿಗೆ ಮೆರುಗು ನೀಡಬಹುದು. ಇದು ಹೇಗೆಂದು ತಿಳಿಯೋಣವೇ? :
ವೇವಿ ಮಿಂಟ್ ಗ್ರೀನ್ ಹೇರ್ : ಗ್ರೀನರಿ ಈ ವರ್ಷದ ಪೆಂಟೊನ್ಮೆಂಟ್ ಕಲರ್ ಆಗಿದೆ ಮತ್ತು ಅದರ ಛಾಯೆಯನ್ನು ಕೂದಲಿನಲ್ಲೂ ಕಾಣಬಹುದಾಗಿದೆ. ಈ ಪೇಸ್ಟಲ್ ಗ್ರೀನ್ ಶೇಡ್ ನಿಮಗೆ ಗರ್ಲಿಶ್ ಲುಕ್ ನೀಡುತ್ತದೆ. ಕೂದಲಿನ ಅಲೆಗಳಲ್ಲಿ ಶೋಭಿಸುವ ಮಿಂಟ್‌ಗ್ರೀನ್ ಲುಕ್ ನಿಮಗೆ ಬಾರ್ಬಿ ಡಾಲ್‌ನಂತಹ ಸೌಂದರ್ಯ ಒದಗಿಸುವುದು ಖಂಡಿತ.
ರಾನ್ ಹೇರ್ ವಿತ್ ಹೈಲೈಟ್ಸ್ : ಎಂ.ಟಿ.ವಿಯ ವೀಡಿಯೋ ಮ್ಯೂಸಿಕ್ ಅವಾರ್ಡ್‌ಗಾಗಿ ಮಾಡಿಕೊಂಡ ಕ್ವಾಲಿಟಿ ಪ್ಯಾರಿಯ ಈ ಹೇರ್ ಕಲರ್ ಸ್ಟೈಲ್ ಈ ವರ್ಷ ಚಾಲ್ತಿಯಲ್ಲಿರುತ್ತದೆ. ಕೂದಲಿಗೆ ರಾನ್ ಅಂದರೆ ಗ್ಲಾಸಿ ಬ್ಲ್ಯಾಕ್ ಕಲರ್‌ನೊಂದಿಗೆ ಪಿಂಕ್, ಪರ್ಪಲ್ ಮತ್ತು ಬ್ಲೂ ಶೇಡ್‌ನ ಸ್ಟ್ರೀಕ್ಸ್ ನೀಡಲಾಗುತ್ತದೆ. ವೈಬ್ರೆಂಟ್ ಕಲರ್ ಶೇಡ್ಸ್ ನ ಇಂತಹ ಕಾಂಬಿನೇಶನ್ ಮತ್ತು ಕಾಂಟ್ರಾಸ್ಟ್ ಸ್ಟೈಲ್ ಒಂದು ಯುನಿಕ್ ಲುಕ್‌ನಿಂದ ಶೋಭಿಸುತ್ತದೆ.
ಯೂನಿಕಾರ್ನ್ ಹೇರ್ : ಗಾರ್ಜಿಯಸ್ ಮತ್ತು ಮ್ಯೂಝಿಕ್ ಅಪೀಲ್ ನೀಡುವ ಗ್ರೇ ಅಥವಾ ಪರ್ಪಲ್ ಕಲರ್‌ನ ಸ್ಟ್ರಾಂಡ್ಸ್ ಕೂಡ ಹೆಚ್ಚು ಇಷ್ಟಪಡುವ ಬಣ್ಣಗಳಾಗಿರುತ್ತವೆ. ಈ ಗ್ರೇ ಸ್ಟ್ರಾಂಡ್‌ಗಳು ನಿಮ್ಮ ಗ್ರೇ ಡ್ರೆಸ್‌ನೊಂದಿಗೆ ಮಾತ್ರವಲ್ಲದೆ, ಪೇಸ್ಟಲ್ ಮತ್ತು ಡಾರ್ಕ್ ಶೇಡ್ಸ್ ನ ಔಟ್‌ಫಿಟ್‌ಗಳೊಂದಿಗೂ ಸುಂದರವಾಗಿ ಕಾಣುತ್ತದೆ.
ಡೆನಿಮ್ ಬ್ಲೂ ಹೇರ್ ಕಲರ್ : ಹೆಸರಿನಿಂದಲೇ ತಿಳಿಯುವಂತೆ ಹೇರ್ ಕಲರಿಂಗ್‌ನ ಈ ಹೊಸ ಬಗೆಯ ಕೂಲ್ ಪ್ಯಾಟರ್ನ್ ಡೆನಿಮ್ ಜೀನ್ಸ್ ನಿಂದ ಪ್ರೇರಿತವಾಗಿರುತ್ತದೆ. ಈ ಸಲ ಸಿಲ್ವರಿಶ್ ಬ್ಲೂ ಹೇರ್‌ನ ಟ್ರೆಂಡ್ ಸಾಕಷ್ಟು ಹಾಟ್ ಲುಕ್ ನೀಡುತ್ತದೆ. ಇದು ನ್ಯಾಚುರಲ್ ಕಲರ್ ಆಗಿಲ್ಲವಾದುದರಿಂದ ಅದನ್ನು ಬ್ಯಾಲೆನ್ಸ್ ಮಾಡಲು ನೀವು ನಿಮ್ಮ ಓವರ್ ಆಲ್ ಲುಕ್ಸ್ ಕಡೆ ಗಮನವಿರಿಸಬೇಕಾಗುತ್ತದೆ.
ರೇನ್ ಬೋ ಹೇರ್ : ಮಲ್ಟಿಪಲ್ ಕಲರ್ಸ್ ನ ಬಳಕೆಯ ಮೂಲಕ ನೀವು ಕೂದಲಿಗೆ ರೇನ್ ಬೋ ಲುಕ್ ತರಬಹುದು. ಇದು ನಿಮಗೆ ಡಿಫೆರೆಂಟ್ ಲುಕ್ ನೀಡುವುದರೊಂದಿಗೆ ನಿಮ್ಮ ಪರ್ಸನಾಲಿಟಿಯನ್ನು ಬೋಲ್ಡ್ ಅಂಡ್ ಸ್ಮಾರ್ಟ್ ಆಗಿ ತೋರಿಸುತ್ತದೆ.
ಟರ್ಕಾಯಿಸ್ ಬ್ಲ್ಯಾಕ್ ಹೇರ್ : ಟರ್ಕಾಯಿಸ್ ಮತ್ತು ಬ್ಲ್ಯಾಕ್ ಕಲರ್ ಕಾಂಬಿನೇಶನ್ ಬಹಳ ಸುಂದರವಾಗಿರುತ್ತದೆ. ಈ ಹೇರ್ ಕಲರ್ ಕಾಂಬಿನೇಶನ್ ಲಾಂಗ್ ಸ್ಟ್ರಾಂಡ್ಸ್ ನ ಜೊತೆಗಿರುವಾಗ ಇನ್ನೂ ಚೆನ್ನಾಗಿ ಕಾಣುತ್ತದೆ. ಇದರ ಉತ್ತಮ ರಿಸಲ್ಟ್ ಗಾಗಿ ನಿಮ್ಮ ಅರ್ಧ ಭಾಗ ಕೂದಲನ್ನು ಟ್ವಿಸ್ಟ್ ಮಾಡಿ ಕ್ಲಚರ್‌ನಿಂದ ಬಿಗಿಯಿರಿ ಮತ್ತು ಉಳಿದ ಕೂದಲನ್ನು ಹಾಗೇ ಬಿಟ್ಟುಬಿಡಿ.
- ಗಿರಿಜಾ ಗೌಡ