ಮಾನ್‌ಸೂನ್‌ ಸೀಸನ್‌ನಲ್ಲಿ ಬೆವರು ಮತ್ತು ಮಳೆ ನೀರು ಮೇಕಪ್‌ನ್ನು ಕೆಡಿಸಿಬಿಡುತ್ತದೆ. ಹೀಗಾಗಿ ಮೇಕಪ್‌ ಸುಂದರ ರೂಪವನ್ನು  ಕೊಡುವುದರ ಬದಲು ಮುಖವನ್ನು ಅಂದಗೆಡಿಸುತ್ತದೆ. ಮೇಕಪ್‌ ಕ್ಷೇತ್ರದಲ್ಲಿ ಇದೀಗ ವಾಟರ್‌ಪ್ರೂಫ್‌ ಮೇಕಪ್‌ ಪ್ರಾಡಕ್ಟ್ಸ್ ಬಂದಿರಲಾಗಿ ಮಾನ್‌ಸೂನ್‌ನಲ್ಲಿ ಮೇಕಪ್‌ಗೆ ಸಂಬಂಧಿಸಿದ ತೊಂದರೆಗಳು ಇಲ್ಲವಾಗಿವೆ.

ವಾಟರ್‌ಪ್ರೂಫ್‌ ಮೇಕಪ್‌ನ ವೈಶಿಷ್ಟ್ಯವೆಂದರೆ ಮಳೆ ನೀರಿನಿಂದ ಅದು ಹಾಳಾಗುವುದಿಲ್ಲ. ಅಲ್ಲದೆ ರೇನ್‌ ಡ್ಯಾನ್ಸ್ ಮತ್ತು ಸ್ವಿಮ್ಮಿಂಗ್‌ ಪೂಲ್‌ನಲ್ಲಿಯೂ ವಾಟರ್‌ಪ್ರೂಫ್‌ ಮೇಕಪ್‌ ಬೆರಗುಗೊಳಿಸುತ್ತದೆ. ಸಾಮಾನ್ಯವಾಗಿ, ಬೆವರಿದಾಗ ಮೇಕಪ್‌ ಕರಗಿ ಚರ್ಮರಂಧ್ರಗಳೊಳಗೆ ಹೋಗುವುದರಿಂದ ಅದು ಕೆಟ್ಟದಾಗಿ ಕಾಣಿಸುತ್ತದೆ. ವಾಟರ್‌ಪ್ರೂಫ್‌ ಮೇಕಪ್‌ನಲ್ಲಿ ಅದು ಚರ್ಮದೊಳಗೆ ಹೋಗದಂತೆ ಮಾಡಲಾಗುತ್ತದೆ.

ಮಾನ್‌ಸೂನ್‌ನಲ್ಲಿ ವಾಟರ್‌ಪ್ರೂಫ್‌ ಮೇಕಪ್‌ ಪ್ರಾಡಕ್ಟ್ ಬಳಸುವುದು ಒಳ್ಳೆಯದು. ಕಾಂಪ್ಯಾಕ್ಟ್ ಪೌಡರ್‌ ಮತ್ತು ಫೌಂಡೇಶನ್‌ನ್ನು ಬೇಕಾದರೆ ಉಪಯೋಗಿಸಬಹುದು. ಇದನ್ನು ಒಣ ಅಥವಾ ಒದ್ದೆಯಾದ ತೆಳುವಾದ ಸ್ಪಾಂಜಿನಿಂದ ಹಚ್ಚಿಕೊಳ್ಳಬಹುದು. ಲಿಪ್‌ಸ್ಟಿಕ್‌, ಮಸ್ಕರಾ ಮತ್ತು ಲೈನರ್‌ಗಳ 2 ಕೋಟ್‌ ಹಚ್ಚಿ. ಆಗ ಅವುಗಳು ಹೆಚ್ಚು ಹೊತ್ತು ಉಳಿದಿರುತ್ತವೆ. ಅವುಗಳನ್ನು ಕೊಳ್ಳುವಾಗ ಅವು ವಾಟರ್‌ಪ್ರೂಫ್‌ ಹೌದೇ ಎಂಬುದನ್ನು ಓದಿ ಖಚಿತಪಡಿಸಿಕೊಳ್ಳಿ.

ಬ್ಲಶರ್‌ : ಪೌಡರ್‌ ಬ್ಲಶ್‌ ಬದಲು ನೀವು ಕ್ರೀಮ್ ಬ್ಲಶ್‌ ಬಳಸಬಹುದು. ಕಲರ್‌ ಮತ್ತಷ್ಟು ಎದ್ದು ಕಾಣಬೇಕೆನಿಸಿದರೆ ಕ್ರೀಮ್ ಬ್ಲಶ್‌ ಮೇಲೆ ಪೌಡರ್‌ ಬ್ಲಶ್‌ ಹಚ್ಚಿ. ಆಗ ಅದು ಮತ್ತಷ್ಟು ಹೆಚ್ಚು ಸಮಯ ನಿಮ್ಮ ಕೆನ್ನೆಗಳ ಮೇಲೆ ಉಳಿದಿರುತ್ತದೆ. ಇದು ನಿಮ್ಮ ಮುಖಕ್ಕೆ ಹೊಳಪು ಮತ್ತು ರಂಗನ್ನು ತರುವುದರೊಂದಿಗೆ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

ಬ್ಯಾಂಗ್ಸ್ : ಬ್ಯಾಂಗ್ಸ್ ಅಂದರೆ ಹಣೆಯ ಮೇಲೆ ಹರಡುವ ಕೂದಲು ಮಹಿಳೆಯರಿಗೆ ಬಲು ಇಷ್ಟ. ಆದರೆ ಇದು ಮುಖದ ಚರ್ಮವನ್ನು ಮುಚ್ಚುವುದರಿಂದ ಗಾಳಿಯಾಡಲು ಆಸ್ಪದವಿಲ್ಲದೆ ಮುಖ ಬೆವರತೊಡಗುತ್ತದೆ. ಇದರಿಂದ ಕೂದಲು ಅಂಟಾಗುತ್ತದೆ. ಜೊತೆಗೆ ಬೆವರಿನಿಂದಾಗಿ ಮೊಡವೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಕಾಜಲ್ : ಕಾಜಲ್ ನಿಂದ ಸಿಂಗಾರಗೊಂಡ ಕಣ್ಣುಗಳು ನೋಡಲು ಅಂದವಾಗಿರುತ್ತವೆ. ಆದರೆ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಾಗ ಕಾಜಲ್ ಹರಡಿಕೊಳ್ಳಬಹುದು. ಅದರಿಂದ ಕಣ್ಣು ಸುಂದರವಾಗಿ ಕಾಣುವುದರ ಬದಲು ಡಾರ್ಕ್‌ ಸರ್ಕಲ್ ಇರುವಂತೆ ತೋರುತ್ತದೆ. ಅದನ್ನು ತಪ್ಪಿಸಲು ವಾಟರ್‌ಪ್ರೂಫ್‌ ಲಿಕ್ವಿಡ್‌ ಲೈನರ್‌ ಬಳಸಿ.

ಮಸ್ಕರಾ : ಮಳೆಗಾಲದಲ್ಲಿ ವಾಟರ್‌ಪ್ರೂಫ್‌ ಮಸ್ಕರಾವನ್ನೇ ಬಳಸಿ. ಕ್ಲಿಯರ್‌ ಮಸ್ಕರಾ ಸಹ ಉತ್ತಮವಾಗಿರುತ್ತದೆ.

ಲಿಕ್ವಿಡ್‌ ಫೌಂಡೇಶನ್‌ : ಒದ್ದೆಯ ವಾತಾರಣವಿರುವಾಗ ಲಿಕ್ವಿಡ್‌ ಫೌಂಡೇಶನ್‌ ಮುಖದ ಮೇಲೆ ಕರಗತೊಡಗುತ್ತದೆ. ಏಕಪ್ರಕಾರವಾದ ಬಣ್ಣ ಮತ್ತು ಬೇಸ್‌ಗಾಗಿ ಬೇಬಿ ಕ್ರೀಮ್ ಅಥವಾ ಆಯಿಲ್‌ ಫ್ರೀ ಕುಶನ್‌ ಫೌಂಡೇಶನ್‌ ಬಳಸಿ.

ಕ್ರೀಮೀ ಕನ್ಸೀಲರ್‌ : ಮಾನ್‌ಸೂನ್‌ನಲ್ಲಿ ಬೆವರಿನಿಂದಾಗಿ ಕನ್ಸೀಲರ್‌ ಮುಖದ ಮೇಲೆ ಉಳಿಯುವುದು ಕಷ್ಟ. ಆದ್ದರಿಂದ ಈ ಕಾಲದಲ್ಲಿ  ಕನ್ಸೀಲರ್‌ ಬಳಸದಿರುವುದು ಉತ್ತಮ. ಒಂದು ವೇಳೆ ಕನ್ಸೀಲರ್‌ನ ಅಗತ್ಯವಿದ್ದರೆ, ಕ್ರೀಮೀ ಕನ್ಸೀಲರ್‌ನ್ನು ಆರಿಸಿಕೊಳ್ಳಬಹುದು.

ಗ್ಲಿಟರ್‌ ಐ ಶ್ಯಾಡೋ :  ಕೆಲವು ಮಹಿಳೆಯರಿಗೆ ಗ್ಲಿಟರ್‌ ಐ ಶ್ಯಾಡೊ ಬಹಳ ಮೆಚ್ಚುಗೆ. ಆದರೆ ಮಾನ್‌ಸೂನ್‌ನಲ್ಲಿ ಇದನ್ನು  ಬಳಸಿದಾಗ ಭಯಾನಕವಾಗಿ ಕಾಣಬಹುದು. ಗಾಳಿಯಲ್ಲಿನ ಆರ್ದ್ರತೆಯಿಂದಾಗಿ ಗ್ಲಿಟರ್‌ ಮುಖದ ಮೇಲೆ ಅಂಟು ಮತ್ತು ಕಲೆಯನ್ನು  ಮೂಡಿಸಬಹುದು ಮತ್ತು ಮಳೆಯಲ್ಲಿ ಅಂತೂ ಐ ಶ್ಯಾಡೋ ನಿಮ್ಮ ಕೆನ್ನೆಯ ಮೇಲೆ ಹೊಳಪಿನಿಂದ ಕೂಡಿದ ಕಲೆ ಉಂಟು ಮಾಡುತ್ತದೆ. ಅಲ್ಲದೆ, ಅದು ಮಳೆ ನೀರಿನೊಂದಿಗೆ ಸೇರಿ ಕಣ್ಣಿಗೂ ಹೋಗಬಹುದು. ಅದರಿಂದ ಕಣ್ಣಿನ ತೊಂದರೆ ಪ್ರಾರಂಭವಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ