ಬೇಸಿಗೆಯ ದಿನಗಳು ಆರಂಭವಾಗುತ್ತಿದ್ದಂತೆಯೇ ಮಹಿಳೆಯರು ಹಾಗೂ ಯುವತಿಯರಲ್ಲಿ ಚರ್ಮಕ್ಕೆ ಸಂಬಂಧ ಪಟ್ಟ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಆ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಏನು ಉಪಾಯ ಕೈಗೊಳ್ಳಬೇಕೆಂದು ಅವರಿಗೆ ಗೊಂದಲವಿರುತ್ತದೆ. ಅಂದಹಾಗೆ ಈ ಸಮಸ್ಯೆಗಳಿಂದ ಮುಕ್ತಿ ಕಂಡುಕೊಳ್ಳಲು ಕೆಲವು ಮನೆ ಮದ್ದುಗಳನ್ನು ಕಂಡುಕೊಳ್ಳುವುದು ಅತ್ಯವಶ್ಯ. ಅವುಗಳ ಮುಖಾಂತರ ನೀವು ಮನೆಯಲ್ಲಿ ಕುಳಿತುಕೊಂಡೇ ನಿಮ್ಮ ಚರ್ಮದ ಯೋಗಕ್ಷೇಮ ಕೈಗೊಳ್ಳಬಹುದಾಗಿದೆ.

ಚರ್ಮದಲ್ಲಿ ತುರಿಕೆ ಮತ್ತು ಎಳೆತ

ಚರ್ಮದಲ್ಲಿ ತುರಿಕೆ ಅಥವಾ ಎಳೆತದಿಂದಾಗಿಯೂ ಶುಷ್ಕತನದ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ಪ್ರತಿದಿನ ರಾತ್ರಿ ಮಲಗು 1 ಗಂಟೆ ಮುಂಚೆ 1 ಚಿಕ್ಕ ಚಮಚ ಕೆನೆ, ಒಂದೆರಡು ಹನಿ ಗ್ಲಿಸರಿನ್‌ ಅಥವಾ ಔಡಲೆಣ್ಣೆ ಮತ್ತು ರೋಸ್‌ ವಾಟರ್‌ ಮಿಶ್ರಣ ಮಾಡಿಕೊಂಡು ಕತ್ತು ಹಾಗೂ ಕೈಗಳ ಮೇಲೆ ಚೆನ್ನಾಗಿ ಲೇಪಿಸಿಕೊಳ್ಳಿ. ಅದು ರಾತ್ರಿಯಿಡೀ ಹಾಗೆಯೇ ಇರಲಿ. ಮುಂಜಾನೆ ಎದ್ದ ತಕ್ಷಣ ತಣ್ಣೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ಚರ್ಮದ ಎಳೆತ ಮತ್ತು ತುರಿಕೆ ಕೊನೆಗೊಳ್ಳುತ್ತದೆ. ಇದರಿಂದ ಚರ್ಮ ಮೃದುವಾಗಿ ಹೊಳಪು ಪಡೆದುಕೊಳ್ಳುತ್ತದೆ.

ಒಡೆದ ತುಟಿ

ಒಡೆದ ತುಟಿಗಳಿಗೆ ಗುಲಾಬಿ ಎಸಳುಗಳನ್ನು ಅರೆದುಕೊಂಡು ಬಳಿಕ ಅದರಲ್ಲಿ ಬೆಣ್ಣೆಯನ್ನು ಮಿಶ್ರಣ ಮಾಡಿಕೊಂಡು ಮಲಗುವ ಮುಂಚೆ ತುಟಿಗಳಿಗೆ ಲೇಪಿಸಿಕೊಳ್ಳಿ. ಮುಂಜಾನೆ ಎದ್ದ ಬಳಿಕ ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ತುಟಿಗಳು ಗುಲಾಬಿ ವರ್ಣ ಪಡೆಯುತ್ತಲ್ಲದೆ, ಮೃದುವಾಗಿಯೂ ಇರುತ್ತವೆ.

ಮೊಣಕೈ ಕಪ್ಪು ಹೋಗಾಡಿಸಲು

ಮೊಣಕೈ ಭಾಗದಲ್ಲಿರುವ ಕಪ್ಪು ಬಣ್ಣವನ್ನು ಹೋಗಲಾಡಿಸಲು ಒಂದು ಚಿಟಕಿಯಷ್ಟು ಅರಿಶಿನ, 1 ಚಮಚ ಹಾಲಿನ ಪೌಡರ್‌, 2 ಚಮಚ ಜೇನುತುಪ್ಪ, ನಿಂಬೆರಸ ಅರ್ಧ ಚಮಚ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮೊಣಕೈ  ಭಾಗದಲ್ಲಿ ಲೇಪಿಸಿ. ಅದು ಒಣಗಿದ ಬಳಿಕ ತೊಳೆಯಿರಿ. ಇದರಿಂದ ಆ ಭಾಗದ ಕಪ್ಪು ಕ್ರಮೇಣ ಹೊರಟುಹೋಗುತ್ತದೆ.

rose_petals_85

ಚರ್ಮದ ಸರಿಯಾದ ಕಾಳಜಿ

ಬೇಸಿಗೆಯ ದಿನಗಳಲ್ಲಿ ಚರ್ಮದ ಆರೋಗ್ಯ ಹಾಗೂ ಅದರ ಹೊಳಪು ಕಾಯ್ದುಕೊಂಡು ಹೋಗಲು ಮನೆಯಲ್ಲೇ ಫೇಸ್‌ ಪ್ಯಾಕ್ ಸಿದ್ಧಪಡಿಸಿಕೊಳ್ಳಬೇಕು. ಅದಕ್ಕಾಗಿ ಪಕ್ವಗೊಂಡ ಬಾಳೆಹಣ್ಣು ಅಥವಾ ಕಲ್ಲಂಗಡಿಯನ್ನು ಚೆನ್ನಾಗಿ ನುಣ್ಣಗೆ ಮಾಡಿಟ್ಟುಕೊಳ್ಳಬೇಕು. ಅದರಲ್ಲಿ ಒಂದು ಚಮಚ ಹಾಲಿನ ಪುಡಿ ಮತ್ತು ಕಾಲು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ. 20 ನಿಮಿಷದ ಬಳಿಕ ಅದನ್ನು ಸ್ವಚ್ಛಗೊಳಿಸಿಕೊಳ್ಳಿ.

ಕೆ. ಕವಿತಾ

ಸೌಂದರ್ಯ ತಜ್ಞೆಯ ಸಲಹೆ

ಚರ್ಮದ ಬಗ್ಗೆ ಕಾಳಜಿ ವಹಿಸುವುದನ್ನು ನಿಮ್ಮ ದಿನಚರಿಯಾಗಿಸಿಕೊಳ್ಳಿ. ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ಮುಂತಾದುವನ್ನು ದಿನಕ್ಕೆರಡು ಸಲ ಮಾಡಿಕೊಳ್ಳಿ. ಇದರಿಂದ ಚರ್ಮ ಆರೋಗ್ಯಕರವಾಗಿ ನಳನಳಿಸುತ್ತದೆ. ದಿನದ ಆರಂಭವನ್ನು ಯಾವುದಾದರೂ ನೈಸರ್ಗಿಕ ಕ್ಲೆನ್ಸರ್‌ನಿಂದ ಆರಂಭಿಸಿ. ಚರ್ಮವನ್ನು ಹೈಡ್ರೇಟೆಡ್‌ ಆಗಿರಿಸಲು ಟೋನರ್‌ನಿಂದ ಟೋನ್‌ ಮಾಡಿ ಕೊನೆಯಲ್ಲಿ ಮಾಯಿಶ್ಚರೈಸರ್‌ ಲೇಪಿಸಿ.

ಕೋಕೋನಟ್‌ ಯುಕ್ತ ಮಾಯಿಶ್ಚರೈಸರ್‌ ಲೇಪಿಸುವುದು ಉಪಯುಕ್ತ. ಏಕೆಂದರೆ ತೆಂಗಿನಕಾಯಿಯಲ್ಲಿ ಎಲ್ಲ ಬಗೆಯ ಪೋಷಕಾಂಶಗಳು ಇರುತ್ತವೆ. ಅದು ಬಹುಬೇಗ ಚರ್ಮದಲ್ಲಿ ಬೆರೆಯುತ್ತದೆ. ಅದರಿಂದ ಚರ್ಮಕ್ಕೆ ಪೋಷಣೆ ದೊರೆಯುತ್ತದೆ. ಅಷ್ಟೇ ಅಲ್ಲ, ಕಳೆದುಹೋದ ತೇವಾಂಶ ಮರಳಿ ದೊರೆಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ