ಇಂದಿನ ಆಧುನಿಕ ಕಾಲದಲ್ಲಿ ಸೆಲ್ಫಿ ತೆಗೆದುಕೊಳ್ಳದವರೇ ಇಲ್ಲ. ಹಾಗಿರುವಾಗ ಪರ್ಫೆಕ್ಟ್ ಸೆಲ್ಫಿಗೆ ಸೂಕ್ತ ಮೇಕಪ್ ಯಾವುದು ಎಂದು ವಿವರವಾಗಿ ತಿಳಿಯೋಣವೇ……..?

ಬ್ಯೂಟಿ ಕ್ವೀನ್‌ ಆಗುವ ಬಯಕೆ ಈಗ ತುಸು ಹಳೆಯ ಕಾಲದ ಕಾನ್‌ಸೆಪ್ಟ್ ಆಯಿತು. ಈಗ ಪ್ರತಿ ಕಿಶೋರಿಯ ಕಂಗಳಲ್ಲಿ ಸುಳಿದಾಡುತ್ತಿರುವ ಹೊಸ ಕನಸೆಂದರೆ, ಸೆಲ್ಛಿ ಕ್ವೀನ್‌ ಎಂದು ಪಟ್ಟ ಧರಿಸುವ ಆಸೆ!

ಸೆಲ್ಛಿ ತೆಗೆದು, ಅಪ್‌ಲೋಡ್‌ ಮಾಡಿ ನಂತರ ಫೇಸ್‌ಬುಕ್‌, ಟ್ವಿಟರ್‌ಗಳಿಗೆ ತಲುಪಿಸಿ ಎಷ್ಟು ಲೈಕ್ಸ್ ಬಂದಿವೆಯೋ ಎಂದೆಣಿಸುವುದೇ ಅವರ ಜೀವನದ ಪರಮ ಗುರಿಯಾಗಿದೆ. ಇದು ಕೇವಲ ಟೀನೇಜರ್ಸ್‌ ಬಯಕೆ ಎಂದು ಭಾವಿಸದಿರಿ, ಗೃಹಿಣಿ ಹಾಗೂ ಉದ್ಯೋಗಸ್ಥ ವನಿತೆಯರೂ ಸಹ ಸೆಲ್ಛಿ ಕ್ರೇಝ್ಗೆ ಬಲಿಯಾಗಿದ್ದಾರೆ. ಆದರೆ ಸೆಲ್ಛಿ ಕ್ಲಿಕ್‌ ಮಾಡುವುದು ಎಷ್ಟು ಸುಲಭವೋ, ಪರ್ಫೆಕ್ಟ್ ಸೆಲ್ಛಿ ಕ್ಲಿಕ್ಕಿಸುವುದು ಅಷ್ಟೇ ಕಷ್ಟಕರ! ಮೇಕಪ್‌, ಕ್ಯಾಮೆರಾ ಆ್ಯಂಗಲ್, ಬ್ಯಾಕ್‌ಗ್ರೌಂಡ್‌…..

ಹೀಗೆ ಹತ್ತು ಹಲವು ವಿಷಯಗಳನ್ನು ಗಮನದಲ್ಲಿಡಬೇಕು, ಆಗ ಮಾತ್ರವೇ ನೀವು ಒಂದು ಮ್ಯಾಜಿಕ್‌ ಪರ್ಫೆಕ್ಟ್ ಸೆಲ್ಛಿ ಕ್ಲಿಕ್ಕಿಸಲು ಸಾಧ್ಯ. ಇದಕ್ಕಾಗಿ ಅನುಸರಿಸಬೇಕಾದ ಸಲಹೆಗಳು :

SPF ಇರುವಂಥ ಪ್ರಾಡಕ್ಟ್ಸ್ ಬೇಡ : ಸನ್‌ಸ್ಕ್ರೀನ್‌ ಕ್ರೀಂ, ಲೋಶನ್‌ ಹಚ್ಚಿಕೊಂಡು ಸೆಲ್ಛಿ ತೆಗೆಸಿಕೊಂಡರೆ ಮುಖ ಎಣ್ಣೆಣ್ಣೆಯಾಗಿ ಕಾಣಿಸಬಹುದು. ಏಕೆಂದರೆ ಬ್ಯೂಟಿ ಪ್ರಾಡಕ್ಟ್ಸ್ ನಲ್ಲಿ ಬಳಸಲಾಗುವ SPF, ಮುಖಕ್ಕೆ  ಒಂದು ಲೇಯರ್‌ ಆಫ್‌ ಶೈನ್‌ ಆಗಿಬಿಡುತ್ತದೆ. ಆಗ ಮಾತ್ರ ಸನ್‌ಲೈಟ್‌ ರಿಫ್ಲೆಕ್ಟ್ ಆಗಿ, ನೀವು ಸನ್‌ಟ್ಯಾನಿಂಗ್‌ನಿಂದ ಬಚಾವಾಗಬಹುದು.

ಮ್ಯಾಟ್‌ ಪ್ರೈಮರ್‌ ಬಳಸಲು ಮರೆಯದಿರಿ : ಮ್ಯಾಟ್‌ ಪ್ರೈಮರ್‌ ಬಳಸಿ ನೀವು ನಿಮ್ಮ ಟೀ ಝೋನ್‌ ಹೊಳೆಯದೆ ಇರುವಂತೆ ಮಾಡಬಹುದು. ಇದರಿಂದ ನಿಮ್ಮ ಸ್ಕಿನ್‌ ಆಯ್ಲಿ ಪ್ಯಾಚಿ ಆಗಿ ಕಾಣುವುದಿಲ್ಲ. ಪ್ರೈಮರ್‌ನ ಮತ್ತೊಂದು ಮುಖ್ಯ ಲಾಭವೆಂದರೆ ಮುಖದ ಎಲ್ಲಾ ಪ್ಯಾಚೆಸ್‌ ಮುಚ್ಚಿಹೋಗುತ್ತವೆ ಹಾಗೂ ಫಿಲ್ಟರ್‌ ಬಳಸದೆಯೇ ನಿಮ್ಮ ಸೆಲ್ಛಿ ಫ್ರೆಶ್‌, ಬ್ಯೂಟಿಫುಲ್ ಮತ್ತು ಯಂಗ್‌ ಆಗಿ ಕಾಣಿಸುತ್ತದೆ.

ಮಸ್ಕರಾ ಸದಾ ಬ್ಲ್ಯಾಕ್ ಇರಲಿ : ಸೆಲ್ಛಿ ತೆಗೆದುಕೊಳ್ಳುವಾಗ ಅಗತ್ಯವಾಗಿ ಮಸ್ಕರಾ ಹಚ್ಚಿಕೊಳ್ಳಿ. ಇದು ಕಂಗಳನ್ನು ಪೂರ್ತಿ ಅರಳಿದಂತೆ ತೋರಿಸುತ್ತದೆ. ದೊಡ್ಡದಾದ ಕಾಡಿಗೆ ತೀಡಿದ ಕಂಗಳ ಹೆಣ್ಣಿನ ಮೊಗದ ಸೌಂದರ್ಯ ಹೆಚ್ಚಿಸುತ್ತದೆ. ಮಸ್ಕರಾ ಕಣ್ಣೆವೆಗಳನ್ನಷ್ಟೇ ದೊಡ್ಡದಾಗಿ, ಉದ್ದಕ್ಕೆ ತೋರಿಸುವುದಲ್ಲ, ಬದಲಿಗೆ ಅದರ ಪರ್ಫೆಕ್ಟ್ ಶೇಪ್‌ನ್ನೂ ಹೈಲೈಟ್‌ ಮಾಡುತ್ತದೆ. ಸೆಲ್ಛಿ ತೆಗೆದುಕೊಳ್ಳುವಾಗ ಕೇವಲ ಬ್ಲ್ಯಾಕ್‌ ಮಸ್ಕರಾವನ್ನೇ ಆರಿಸಿಕೊಳ್ಳಬೇಕು ಎಂಬುದು ಬಲು ಮುಖ್ಯ. ನಿಮ್ಮ ಡ್ರೆಸ್‌ಗೆ ತಕ್ಕಂತೆ ಬ್ಲೂ, ಗ್ರೀನ್‌, ಬ್ರೌನ್‌ ಮಸ್ಕರಾ ಆರಿಸಬೇಡಿ. ಏಕೆಂದರೆ ಸೆಲ್ಛಿಗೆ ಬ್ಲ್ಯಾಕ್‌ ಮಸ್ಕರಾನೇ ಬೆಸ್ಟ್.

ಐಬ್ರೋಸ್‌ : ಐಬ್ರೋಸ್‌ ಪರ್ಫೆಕ್ಟ್ ಶೇಪ್‌ ಹೊಂದುವುದರಿಂದ ಮುಖಕ್ಕೆ ನೀಟ್‌ ಕ್ಲೀನ್‌ ಲುಕ್‌ ಸಿಗುತ್ತದೆ. ಜೊತೆಗೆ ನೀವು ಐಬ್ರೋಸ್‌ ಗ್ಯಾಪ್‌ನ್ನು ಐಬ್ರೋ ಪೆನ್ಸಿಲ್‌ನಿಂದ ಚೆನ್ನಾಗಿ ತುಂಬಿಸಿ, ಇಲ್ಲದಿದ್ದರೆ ಐಬ್ರೋಸ್‌ ಸೆಲ್ಛಿಯಲ್ಲಿ ಲೈಟ್‌ ಆಗಿ ಉಳಿಯುತ್ತದೆ ಅಥವಾ ಕಾಣಿಸುವುದೇ ಇಲ್ಲ. ಹೀಗಾಗಿ ಇವನ್ನು ಡಾರ್ಕ್‌ ಕಾಂಪ್ಯಾಕ್ಟ್ ಆಗಿರಿಸಿ. ತೆಳು ಹಾಗೂ ಲೈಟ್‌ ಆಗಿರುವ ಐಬ್ರೋಸ್‌ನಿಂದ ಕಂಗಳು ಕುಗ್ಗಿದಂತೆ, ವಯಸ್ಸು ಹೆಚ್ಚಿದಂತೆ ಕಾಣಿಸುತ್ತದೆ.

ಐಲ್ಯಾಶೆಸ್‌ : ಇವನ್ನು ಉದ್ದಕ್ಕೆ, ದಟ್ಟವಾಗಿ ತೋರಿಸಲು ಕ್ರೆಯಾನ್‌ ಬೇಸ್ಡ್ ಕಾಡಿಗೆ ಪೆನ್ಸಿಲ್‌ ಬಳಸಿರಿ.

ತುಟಿಗಳು : ತುಟಿಗಳು ತುಂಬಿಕೊಂಡಂತೆ ಕಾಣಿಸಬೇಕೇ? ಇದಕ್ಕಾಗಿ ಕ್ಯುಪಿಡ್‌ ಬೋ ಮೇಲೆ ಹೈಲೈಟರ್‌ ಬಳಸಿರಿ. ಪರ್ಫೆಕ್ಟ್ ಪೌಟ್‌ ಲುಕ್ಸ್ ಗಾಗಿ ಸೆನ್ಶುಯಸ್‌ ಲಿಪ್‌ಗ್ಲಾಸ್‌ ಹಚ್ಚಿರಿ. ಕ್ಲಾಸಿಕ್‌ ಫಿನಿಶ್‌ ಬೇಕಿದ್ದರೆ ಮ್ಯಾಟ್‌ ಲಿಪ್‌ಸ್ಟಿಕ್‌ ತೀಡಿರಿ. ಪ್ರೌಢ ಮಹಿಳೆಯರು ಡಾರ್ಕ್‌ ಕಲರ್‌ ಬಳಸಿದಷ್ಟೂ ತುಟಿಗಳು ಮುದುರಿದಂತೆ ಕಾಣುತ್ತವೆ. ಹೀಗಾಗಿ ಅವರು ಇನ್ನಷ್ಟು ವಯಸ್ಸಾದವರಂತೆ ಕಾಣುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ, ನಿಮ್ಮ ತುಟಿಗಳೇ ನಿಮ್ಮ ಮುಖದ ಪ್ರಮುಖ ಆಕರ್ಷಣೆ ಎನಿಸಿದರೆ, ಬಿಂದಾಸ್‌ ಆಗಿ ಬೋಲ್ಡ್ ಲಿಪ್‌ಸ್ಟಿಕ್‌ ವಿತ್‌ ಲಿಪ್‌ಗ್ಲಾಸ್‌ ಹಚ್ಚಿರಿ. ನಂತರ ಸೂಕ್ತ ಫಿಲ್ಟರ್‌ ಬಳಸಿ ತುಟಿಗಳನ್ನು ಹೈಲೈಟ್‌ ಮಾಡಿ.

ಬ್ಲಶ್‌ಆನ್‌ : ಪಿಕ್ಚರ್‌ ಪರ್ಫೆಕ್ಟ್ ಸೆಲ್ಛಿಗಾಗಿ ಹೈ ಚೀಕ್‌ ಬೋನ್ಸ್ ಅತ್ಯಗತ್ಯ. ಹೀಗಾಗಿ ನಿಮ್ಮ ಚೀಕ್‌ಬೋನ್ಸ್ ನ್ನು ಪೀಚ್‌/ಪಿಂಕ್‌ ಬ್ಲಶರ್‌ನಿಂದ ಹೈಲೈಟ್‌ ಮಾಡಿ.

ಇಲ್ಯುಮಿನೇಟರ್‌ ಟ್ರಿಕ್‌ : ಯಂಗ್‌ ಗ್ಲೋಯಿಂಗ್‌ ಸ್ಕಿನ್‌ ಪಡೆಯಲು ಲಿಕ್ವಿಡ್‌ ಇಲ್ಯುಮಿನೈಸರ್‌ ಬಳಸಿರಿ. ನಿಮ್ಮ ಚೀಕ್‌ಬೋನ್ಸ್ ಎದ್ದು ತೋರುತ್ತಿಲ್ಲ ಎಂದರೆ, ಇಲ್ಯುಮಿನೇಟರ್‌ ನೆರವಿನಿಂದ ಹೈಚೀಕ್‌ ಬೋನ್ಸ್ ಭ್ರಮೆ ಹುಟ್ಟಿಸಿ, ಮ್ಯಾಜಿಕ್‌ ಸೆಲ್ಛಿ ಪಡೆಯಬಹುದು.

ಭ್ರಾಂಝರ್‌ : ಸನ್‌ ಕಿಸ್ಡ್ ಪಡೆಯ ಬಯಸಿದರೆ ಬ್ರಾಂಝರ್‌ ಅಪ್ಲೈ ಮಾಡಿ. ಆದರೆ ಇದನ್ನು ಆರಿಸುವಾಗ ಎಚ್ಚರಿಕೆ ಇರಲಿ. ಒಂದು ವಿಷಯ ನೆನಪಿಡಿ, ಶಿಮರಿ ಬ್ರಾಂಝರ್‌ ಎದುರಿನಿಂದ ಚೆನ್ನಾಗಿ ಕಾಣಿಸುತ್ತದೆ, ಆದರೆ ಸೆಲ್ಛಿಯಲ್ಲಿ ಅಂಟಂಟಾಗಿ ಕಿರಿಕಿರಿ ಎನಿಸಬಹುದು. ಸೆಲ್ಛಿ ತೆಗೆದುಕೊಳ್ಳುವಾಗ ಮ್ಯಾಟ್‌ ಬ್ರಾಂಝರ್‌ ಬಳಸುವುದೇ ಸೂಕ್ತ.

ಸ್ಮೈಲ್ : ಸೆಲ್ಛಿಯಲ್ಲಿ ಪೌಟಿ ಫೇಸ್‌ ಇರಿಸಿಕೊಳ್ಳುವುದು ಒಂದು ರೊಟೀನ್‌ ಬೋರಿಂಗ್‌ ಪೋಸ್‌ ಆಗಿದೆ. ಬದಲಾವಣೆಗಾಗಿ, ಎಲ್ಲರ ಮನಸೂರೆಗೊಳ್ಳುವಂಥ ಕನಿಷ್ಠ 500 ಲೈಕ್ಸ್ ಬರುವಂಥ ಮೋಹಕ ಸ್ಮೈಲ್‌ ಇರುವಂತೆ ಸೆಲ್ಛಿ ತೆಗೆದುಕೊಳ್ಳಿ.

ಹೇರ್‌ಡೂ : ಕೂದಲನ್ನು ಅನಗತ್ಯವಾಗಿ ಕ್ರೌನಿಂಗ್‌ ಗ್ಲೋರಿ ಎಂದಿಲ್ಲ. ಪರ್ಫೆಕ್ಟ್ ಹೇರ್‌ಸ್ಟೈಲ್ ಲುಕ್ಸ್ ನಲ್ಲಿ ಬಾನು-ಭೂಮಿಯ ಅಂತರ ಬರುತ್ತದೆ. ಸೆಲ್ಛಿಗಾಗಿ ಫ್ಯಾನ್ಸಿ ಬನ್‌ ಹೇರ್‌ಡೂ ಆರಿಸಿ. ಅಥವಾ ಕೂದಲಿನಲ್ಲಿ ಲೇಯರ್ಸ್, ಕಲರ್ಸ್‌ ಬಳಸಿರಿ. ಪಿಕ್‌ನಿಕ್‌ ಗೆಟ್‌ಟುಗೆದರ್‌ ಪರ್ವತ ಪ್ರದೇಶ ಅಥವಾ ಸಮುದ್ರ ತಟದಲ್ಲೇ ಇರಲಿ, ಸೆಲ್ಛಿ ಅಂತೂ ಮಸ್ಟ್ ಆಗಿರುತ್ತದೆ. ಆದರೆ ಜೋರಾದ ಗಾಳಿ ಸೆಲ್ಛಿಯ ಮಜಾ ಕೆಡಿಸುವಂತೆ ಆಗಬಾರದು.

ಲೈಟಿಂಗ್‌ : ಪರ್ಫೆಕ್ಟ್ ಸೆಲ್ಛಿಯಲ್ಲಿ ಲೈಟ್‌ ಎಫೆಕ್ಟ್ ಸದಾ ಪ್ರಾಪರ್‌ ಆಗಿರಬೇಕು. ಅದರಲ್ಲಿ ನೆರಳು ಬೀಳುವಂತೆ ಆಗಬಾರದು. ಸೆಲ್ಛಿ ತೆಗೆದುಕೊಳ್ಳುವಾಗ ನಿಮ್ಮ ಕೈ ಕಡೆ ಅಥವಾ ಲೈಟ್‌ ಸೋರ್ಸ್‌ ಕಡೆ ನೆರಳು ಬೀಳದಂತೆ ಎಚ್ಚರವಹಿಸಿ. ಆದಷ್ಟೂ ನೈಸರ್ಗಿಕ ಬೆಳಕಿನಲ್ಲೇ ಸೆಲ್ಛಿ ಕ್ಲಿಕ್ಕಿಸಿ. ಮನೆಯ ಒಳಗೇ ತೆಗೆದರೂ ಸಹ, ಕಿಟಕಿಯ ಹತ್ತಿರ ನಿಂತುಕೊಳ್ಳಿ. ಆಗ ಸೂರ್ಯ ರಶ್ಮಿಯ ನ್ಯಾಚುರಲ್ ಗ್ಲೋ ಪಡೆಯಬಹುದು.

ಕೈಗಳನ್ನು ಸ್ಥಿರವಾಗಿಡಿ : ಸೆಲ್ಛಿ ಕ್ಲಿಕ್ಕಿಸುವಾಗ ಕೈಗಳು ಶೇಕ್‌ ಆದರೆ, ಅದು ಕ್ಲಿಯರ್‌ ಆಗಿ ಬರುವುದಿಲ್ಲ. ಆದ್ದರಿಂದ ನೀವು ಎರಡೂ ಕೈಗಳನ್ನು ಬಳಸಿ ಸೆಲ್ಛಿ ಕ್ಲಿಕ್ಕಿಸಿದರೆ ಉತ್ತಮ. ಕೆಲವು ಸ್ಮಾರ್ಟ್‌ ಫೋನ್‌ಗಳಲ್ಲಿ ಆ್ಯಂಟಿಶೇಕ್‌ ಫೀಚರ್ಸ್‌ ಇರುತ್ತವೆ, ಅದರಿಂದ ಈ ಸಮಸ್ಯೆ ನಿಮ್ಮನ್ನು ಕಾಡದು. ಇನ್ನೊಂದು ವಿಧಾನ ಎಂದರೆ, ನೀವು ಬರ್ಸ್ಟ್ ಮೋಡ್‌ನಲ್ಲಿ ಫೋಟೋ ಕ್ಲಿಕ್ಕಿಸಿ.

ಮಹತ್ವಪೂರ್ಣ ಬ್ಯಾಕ್‌ಗ್ರೌಂಡ್‌ : ಸೆಲ್ಛಿಯಲ್ಲಿ ಕೇವಲ ನೀವೊಬ್ಬರೇ ಬ್ಯೂಟಿಫುಲ್ ಆಗಿ ಬಂದುಬಿಟ್ಟರೆ ಸಾಲದು, ಸೂಟೆಬಲ್ ಬ್ಯಾಕ್‌ಗ್ರೌಂಡ್‌ ಇರಬೇಕಾದುದೂ ಮುಖ್ಯ. ಅಸ್ತವ್ಯಸ್ತ ಬೆಡ್‌ರೂಂ ಅಥವಾ ಬಾತ್‌ರೂಮಿನಲ್ಲಿ ತೆಗೆದುಕೊಂಡ ಸೆಲ್ಛಿ, ಖಂಡಿತಾ ಹೆಚ್ಚು ಜನರಿಗೆ ಅಪೀಲ್ ಆಗಲಾರದು. ನಿಮ್ಮ ಡ್ರೆಸ್‌ಗೆ ಹೊಂದುವಂಥ ಬ್ಯಾಕ್‌ಗ್ರೌಂಡ್‌ನ್ನೇ ಆರಿಸಿಕೊಳ್ಳಿ. ಆಗ ನಿಮ್ಮ ಸೆಲ್ಛಿ ದಿ ಬೆಸ್ಟ್ ಎನಿಸುತ್ತದೆ.

ಸಮರ್ಪಕ ಕ್ಯಾಮೆರಾ ಆ್ಯಂಗಲ್ : ಡಬಲ್ ಚಿನ್‌ ಎಫೆಕ್ಟ್ ನಿಂದ ತಪ್ಪಿಸಿಕೊಳ್ಳಲು, ಕ್ಯಾಮೆರಾವನ್ನು ನಿಮ್ಮ ಗದ್ದದ ಕೆಳಗೆ ಎಂದೂ ಇರಿಸಿಕೊಳ್ಳಬೇಡಿ. ತಲೆಯನ್ನು ಲಘುವಾಗಿ ತಿರುಗಿಸಿ ಪೋಸ್‌ ನೀಡಿ, ಆಗ ಸ್ಟೈಲಿಶ್‌ ಫೋಟೋ ಬರುತ್ತದೆ. ಎಂದೂ ಸೆಲ್ಛಿಯಲ್ಲಿ ಕಂಪ್ಲೀಟ್‌ ಬಾಡಿ ಪೋಸ್‌ಗೆ ಪ್ರಯತ್ನಿಸಬೇಡಿ, ಆಗ ಬಾಡಿ ತುಸು ಡಿಫೆಕ್ಟಿವ್‌ ಆಗಿ ಬರುತ್ತದೆ. ಸೆಲ್ಛಿ ಕ್ಲಿಕ್ಕಿಸುವಾಗ ಆಕರ್ಷಕ ಆ್ಯಕ್ಸೆಸರೀಸ್‌ ಬಳಸಲು ಮರೆಯದಿರಿ, ಅದರಿಂದ ಎಕ್ಸ್ ಟ್ರಾ ಗ್ಲಾಮರ್‌ ಸಿಗುತ್ತದೆ. ಅಂದರೆ ಸ್ಕಾರ್ಫ್‌, ಆಕ್ಸಿಡೈಸ್ಡ್ ಜ್ಯೂವೆಲರಿ ಪೀಸ್‌, ಗಾಗಲ್ಸ್, ಹ್ಯಾಟ್‌. ಆದರೆ ಒಮ್ಮೆಲೇ 2 ಕ್ಕಿಂತ ಹೆಚ್ಚು ಆ್ಯಕ್ಸೆಸರೀಸ್‌ ಬೇಡ.

ಸಮರ್ಪಕ ಫಿಲ್ಟರ್‌ನ ಬಳಕೆ : ಆದಷ್ಟೂ ಇದನ್ನು ಕಡಿಮೆ ಬಳಸಿ. ಮುಖದಲ್ಲಿನ ಕಲೆ ಸುಕ್ಕುಗಳನ್ನು ಮರೆಮಾಚಲು ಅಥವಾ ವಿಶೇಷವಾಗಿ ನಿಮ್ಮ ತುಟಿ ಅಥವಾ ಕಂಗಳ ಬಳಿ ಫೋಕಸ್‌ ಮಾಡಲು ಸರಿ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಫಿಲ್ಟರ್‌ ಬಳಸುವುದರಿಂದ ಸಹಜತೆ ಹೋಗಿಬಿಡುತ್ತದೆ.

ನಿಮ್ಮ ಖುಷಿ ಅಥವಾ ಮಜಾಗೋಸ್ಕರ ಸೆಲ್ಛಿ ಕ್ಲಿಕ್ಕಿಸಿ. ಇದನ್ನು ನಿಮ್ಮ ಚಟ ಆಗಿಸಬೇಡಿ ಅಥವಾ ಇದನ್ನು ಅಪ್‌ಲೋಡ್‌ ಮಾಡಿದ ನಂತರ ನಿಮ್ಮ ಬಗ್ಗೆ ಯಾರಾದರೂ ಕಮೆಂಟ್‌ ಮಾಡಿದ್ದರೆ ಅದನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳಬೇಡಿ. ಎಲ್ಲಕ್ಕೂ ಮುಖ್ಯವಾದುದು…. ಸೆಲ್ಛಿಗಾಗಿ ನಿಮ್ಮ ಜೀವವನ್ನು ಎಂದೂ ಅಪಾಯಕ್ಕೆ ಸಿಲುಕಿಸಬೇಡಿ!

– ಎನ್‌. ನಿರ್ಮಲಾ

Tags:
COMMENT