ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಚರ್ಮದ ಆಳಕ್ಕಿಳಿದು ತೊಂದರೆ ಕೊಡಲಾರ, ಹಾಗಿರುವಾಗ ಸನ್ಸ್ಕ್ರೀನ್ಏಕೆ ಬೇಕು ಎಂದು ನೀವು ಭಾವಿಸಿದ್ದರೆ, ಕೆಳಗಿನ ಸಲಹೆಗಳು ನಿಮಗೆ ಅತ್ಯಗತ್ಯ ಬೇಕು……!

ಚಳಿಗಾಲದಲ್ಲಿ ಚುರು ಚುರು ಬಿಸಿಲಿಗೆ ಮೈ ಚಾಚಿ ಕೂರುವುದು ಎಲ್ಲರಿಗೂ ಇಷ್ಟ. ಈ ಬಿಸಿಲಿಗೆ ಆಸೆಪಟ್ಟು ನಾವು ನಮ್ಮ ಚರ್ಮದ ಕಾಳಜಿಯತ್ತ ನಿರ್ಲಕ್ಷ್ಯ ವಹಿಸುತ್ತೇವೆ. ಈ ಕಾರಣ ಚರ್ಮಕ್ಕೆ ಸೂರ್ಯನ ಹಾನಿಕಾರಕ UV ಕಿರಣಗಳ ಕಾಟ ತಪ್ಪದು. ಇದರಿಂದ ಚರ್ಮ ನಿರ್ಜೀವ, ಒರಟಾಗುತ್ತದೆ. ಹೀಗಾಗಿ ಚಳಿಗಾಲದಲ್ಲೂ UV ಕಿರಣಗಳಿಂದ ಬಚಾಾಗಲು ಸನ್‌ ಸ್ಕ್ರೀನ್‌ ಲೋಶನ್‌ ಅತ್ಯಗತ್ಯ. ಹಾಗೆಯೇ ಇನ್ನಿತರ ಯಾವ ಪ್ರಾಡಕ್ಟ್ಸ್ ಬಳಸಬೇಕು ಎಂದು ವಿವರವಾಗಿ ಗಮನಿಸೋಣವೇ?

ಗ್ರೀನ್ಬೆರಿ ಆರ್ಗ್ಯಾನಿಕ್ಸ್ ಸ್ಪ್ರೇ

ಈ ಲೋಶನ್‌ ನಲ್ಲಿ SPF ಅಡಗಿರುವುದರಿಂದ, ಚಳಿಗಾಲದಲ್ಲಿ ಸೂರ್ಯನ ತೀಕ್ಷ್ಣ ಕಿರಣಗಳ ವಿರುದ್ಧ ಹೋರಾಡಲು ಇದು ಸಮರ್ಥ. ಇದನ್ನು ನ್ಯಾಚುರಲ್ ಆ್ಯಂಟಿಆಕ್ಸಿಡೆಂಟ್ಸ್ ಕಿವೀ ಎಕ್ಸ್ ಟ್ರಾಕ್ಟ್ಸ್ ನಿಂದ ತಯಾರಿಸಲಾಗಿದೆ. ಇದು ಫ್ರೀರಾಡಿಕಲ್ಸ್ ನಿಂದ ಚರ್ಮವನ್ನು ರಕ್ಷಿಸುವ ಜೊತೆಗೆ, ಸ್ಕಿನ್‌ ಸೆಲ್ಸ್ ನ್ನು ನ್ಯಾಚುರಲಿ ಹೈಡ್ರೇಟ್‌ ಗೊಳಿಸುತ್ತದೆ. ಇದು ಪ್ಯಾರಾಬೆನ್‌ಸಲ್ಫೇಟ್‌ ಫ್ರೀ ಸಹ ಹೌದು. ವಿಶೇಷವಾಗಿ ಈ ಲೋಶನ್‌ ನ್ನು ಡ್ರೈ ಸ್ಕಿನ್‌ ಗಾಗಿಯೇ ರೂಪಿಸಲಾಗಿದೆ.

ನ್ಯೂಟ್ರೊಜೆನಾ ಹೈಡ್ರೋ ಬೂಸ್ಟ್

ಈ ಸನ್‌ ಸ್ಕ್ರೀನ್‌ ಹೈಡ್ರೋ ಬೂಸ್ಟ್ ಫಾರ್ಮುಲಾ ಆಧಾರಿತವಾಗಿದ್ದು, ಹಾಲೂರೋವಿಕ್‌ ಆ್ಯಸಿಡ್‌, ಗ್ಲಿಸರಿನ್‌ ನಂಥ ಪವರ್‌ ಫುಲ್ ಘಟಕಗಳನ್ನು ಹೊಂದಿದೆ. ವಿಂಟರ್‌ ನ ಶುಷ್ಕ ಹವೆಯಿಂದ ಚರ್ಮವನ್ನು ರಕ್ಷಿಸುವಲ್ಲಿ ಇದು ಸದಾ ಮುಂದು. ಇದರಲ್ಲಿ ಹೈಡ್ರೋ ಬೂಸ್ಟ್ SPF ಫಾರ್ಮುಲಾ ಅಡಗಿದ್ದು, ಅದು ಸೂರ್ಯನ UV ಕಿರಣಗಳಿಂದಲೂ ರಕ್ಷಿಸುತ್ತದೆ. ಚಳಿಗಾಲದಲ್ಲಿ ಚರ್ಮಕ್ಕೆ ಹೆಚ್ಚುವರಿ ರಕ್ಷಣೆ ನೀಡಲು ನೀವು ಹ್ಯೂಮೆಕ್ಟೆಂಟ್ಸ್ ಯುಕ್ತ ಸೀರಂ ಜೊತೆಗೆ ಇದನ್ನು ಬಳಸಿದರೆ, ಇದು ನಿಮ್ಮ ಚರ್ಮವನ್ನು ರಕ್ಷಿಸುವ ಜೊತೆಗೆ ಹೆಲ್ದಿ, ಸಾಫ್ಟ್ ಸ್ಮೂಥ್‌ ಸಹ ಮಾಡುತ್ತದೆ. ಇದರ ವಿಶೇಷ ಅಂದ್ರೆ, ಇದು ಎಲ್ಲಾ ಬಗೆಯ ಚರ್ಮಕ್ಕೂ ಹೊಂದಿಕೊಳ್ಳುತ್ತದೆ.

ದಿ ಬಾಡಿಶಾಪ್ವಿಟಮಿನ್ಮಾಯಿಶ್ಚರೈಸಿಂಗ್ಕ್ರೀಂ : ಚಳಿಗಾಲದಲ್ಲಿ ಈ ವಿಟಮಿನ್‌ಯುಕ್ತ ಕ್ರೀಂ ನಿಮ್ಮ ಚರ್ಮವನ್ನು ಹೈಡ್ರೇಟ್ ಗೊಳಿಸುವುದಲ್ಲದೆ, ಫುಲ್ ಪ್ರೊಟೆಕ್ಷನ್‌ ಸಹ ನೀಡುತ್ತದೆ. ಅಸಲಿಗೆ ಇದರ ಹಾಲೂರೋನಿಕ್‌ ಆ್ಯಸಿಡ್‌ ಯುಕ್ತ ಫಾರ್ಮುಲಾ, ಚರ್ಮಕ್ಕೆ ಎಕ್ಸ್ ಟ್ರಾ ಹೈಡ್ರೇಶನ್‌ ನೀಡುವುದರ ಜೊತೆಗೆ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್‌ ರಿಚ್‌ ರಾಸ್‌ ಬೆರಿ ಎಕ್ಸ್ ಟ್ರಾಕ್ಟ್ ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡುವುದರ ಜೊತೆ, ಸೂಪರ್‌ ಸ್ಮೂಥ್‌ ಮಾಡುವಲ್ಲೂ ಮುಂದು! ಇದರಲ್ಲಿ ವಿಟಮಿನ್‌ಗುಣಗಳಿದ್ದು, ಚರ್ಮವನ್ನು UV ಕಿರಣಗಳಿಂದ ಕಾಪಾಡುತ್ತಾ ಸ್ಕಿನ್‌ ಟ್ಯಾನ್‌, ಡಾರ್ಕ್‌ ಪ್ಯಾಚೆಸ್‌, ರಿಂಕಲ್ಸ್ ನಿಂದಲೂ ಮುಕ್ತಿ ಕೊಡಿಸುತ್ತದೆ.

ಬಾಟ್ನಿಕಾ ವಿಟಮಿನ್

ಇದರಲ್ಲಿ ವಿಟಮಿನ್‌ ಇ ಮತ್ತು SPF ಗುಣಗಳೆರಡೂ ಇದ್ದು, ಇದು ಚರ್ಮಕ್ಕೆ ಮ್ಯಾಜಿಕ್‌ ಟ್ರೀಟ್‌ ಮೆಂಟ್‌ ನೀಡುತ್ತದೆ. ಇದರ ಕ್ವಿಕ್ ಸ್ಕಿನ್‌ ಅಬ್‌ ಸಾರ್ಬಿಂಗ್‌ ಫಾರ್ಮುಲಾ, ಚರ್ಮದ ಪದರಗಳಲ್ಲಿ ಆಳಕ್ಕಿಳಿದು, ಅದನ್ನು ಅತಿ ನುಣುಪಾಗಿಸಿ, ಇಡೀ ದಿನ ಅದನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಇದರಲ್ಲಿ  ಝಿಂಕ್‌ಟೈಟೇನಿಯಂ ಆಕ್ಸೈಡ್‌ ಗಳಿದ್ದು ಚರ್ಮದ Ph ಲೆವೆಲ್ ಬ್ಯಾಲೆನ್ಸ್ ಗೊಳಿಸಲು ಪೂರಕ. ಇಡೀ ದಿನ ಬೀಚ್‌ ನಲ್ಲಿ (ಬಿಸಿಲಿದ್ದರೂ) ಎಂಜಾಯ್‌ ಮಾಡಿ ಅಥವಾ ಚಳಿಗಾಲದ ಚುಮು ಚುಮು ಚಳಿಯಲ್ಲಿ ಬಿಸಿಲಿಗೆ ಮೈ ಕಾಯಿಸಿಕೊಳ್ಳಿ, ಜೊತೆಗೆ ಈ ಪರ್ಫೆಕ್ಟ್ ಸನ್‌ ಸ್ಕ್ರೀನ್‌ ಬಳಸಲು ಮರೆಯದಿರಿ.

ಅಲ್ಟ್ರಾ ರಿಪೇರ್ಪ್ಯೂರ್ಮಿನರ್ಸನ್ಸ್ಕ್ರೀನ್ಮಾಯಿಶ್ಚರೈಸರ್‌ : ಈ ಚಳಿಗಾಲದಲ್ಲಿ ಚರ್ಮದ ಕಾಳಜಿ ವಹಿಸದಿದ್ದರೆ ಚರ್ಮ ರೆಡ್, ಡ್ರೈ, ಫ್ಲೇಕಿ ಆಗುವುದರ ಜೊತೆ ಸ್ಕಿನ್‌ ಟ್ಯಾನಿಂಗ್‌ ಗೂ ಗುರಿಯಾಗುತ್ತದೆ. ಹೀಗಿರುವಾಗ ಈ ಸನ್‌ ಸ್ಕ್ರೀನ್‌ ಯುಕ್ತ ಮಾಯಿಶ್ಚರೈಸರ್‌ ನಲ್ಲಿ ಓಟ್‌ ಮೀಲ್ ನ ಉತ್ತಮಿಕೆಗಳು ಇರುವುದರಿಂದ, ಇದು ಚರ್ಮಕ್ಕೆ ನವೆ ಉರಿ ಆಗುವುದನ್ನು ತಪ್ಪಿಸುತ್ತದೆ. ಜೊತೆಗೆ ಚರ್ಮದಿಂದ ಡೆಡ್‌ ಸೆಲ್ಸ್, ಆಯಿಲ್ ‌ನ್ನು ರಿಮೂವ್ ‌ಮಾಡುತ್ತದೆ. ಇದರ UV ಬ್ಲಾಕರ್‌ ಫಾರ್ಮುಲಾ ಸನ್ ಪ್ರೊಟೆಕ್ಷನ್‌ ನೀಡಿ ಚರ್ಮವನ್ನು ಮಾಯಿಶ್ಚರೈಸ್‌ ಗೊಳಿಸುತ್ತಾ, ಹೊಳೆ ಹೊಳೆಯುವಂತೆಯೂ ಮಾಡುತ್ತದೆ.

ಕ್ಯಾಟಾಫಿಲ್ ‌ SPF ಮಾಯಿಶ್ಚರೈಸರ್‌ ಈ 30 SPF ಫೇಶಿಯಲ್ ಮಾಯಿಶ್ಚರೈಸರ್‌ ಚರ್ಮಕ್ಕೆ ಹೆಚ್ಚಿನ ಕಾಂತಿ ನೀಡುವುದರ ಜೊತೆಗೆ ಚರ್ಮದ ಪ್ರತಿ ಪದರಕ್ಕೂ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಇದರ ವೈಶಿಷ್ಟ್ಯ ಎಂದರೆ, ಇದರಲ್ಲಿ ಓಲಿಯೋಸಂ ಟೆಕ್ನಾಲಜಿ ಬಳಸಲಾಗಿದ್ದು, ಅದರಲ್ಲಿ ಸನ್‌ ಸ್ಕ್ರೀನ್‌ ಫಿಲ್ಟರ್ಸ್‌ ಕಡಿಮೆ ಬಳಸಲಾಗಿರುವುದರಿಂದ, ಇದು ಚರ್ಮವನ್ನು ಇರಿಟೇಟ್‌ ಮಾಡದೆಯೇ ಸೂಪರ್‌ ಹೈಡ್ರೇಟ್‌ ಗೊಳಿಸಬಲ್ಲದು. ಇದು ವಿಶೇಷವಾಗಿ ಸೆನ್ಸಿಟಿವ್ ‌ಸ್ಕಿನ್‌ ಗೆ ಹೆಚ್ಚು ಪೂರಕ!

ಪ್ರೀತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ