ಇತ್ತೀಚಿನ ವರದಿಗಳ ಪ್ರಕಾರ ಯುವತಿಯರೇ ಈ ಭೀಕರ ರೋಗಕ್ಕೆ ಈಡಾಗುತ್ತಿರುವುದು ನಿಜಕ್ಕೂ ಶಾಕ್‌ ತರಿಸುನ ವಿಚಾರವಾಗಿದೆ. 27 ವರ್ಷದ ಚಂದ್ರಿಕಾ ರಾವ್ ‌ಗೆ ತನಗೆ ಬ್ರೆಸ್ಟ್ ಕ್ಯಾನ್ಸರ್‌ ಇದೆ ಎಂದು ಖಾತ್ರಿಯಾದಾಗ ಅವಳ ಜಂಘಾಬಲವೇ ಉಡುಗಿಹೋಯಿತು. ದೊಡ್ಡ ಕಂಪನಿಯಲ್ಲಿ ಉನ್ನತ ಪದವಿಯಲ್ಲಿದ್ದ ಅವಳಿಗೆ ಕಳೆದ ತಿಂಗಳಷ್ಟೇ ಮದುವೆ ಖಾತ್ರಿಯಾಗಿತ್ತು. ಮೊದ ಮೊದಲು ಅವಳಿಗೆ ಇದರ ಬಗ್ಗೆ ಗೊತ್ತಾಗಲೇ ಇಲ್ಲ. ಆದರೆ ನಿಯಮಿತವಾಗಿ ಮುಟ್ಟಾಗದೆ ಅದು ಮುಂದೂಡಲ್ಪಟ್ಟಾಗ ತುಸು ಗಾಬರಿಗೊಂಡಳು. ತನ್ನ ಫ್ಯಾಮಿಲಿ ಡಾಕ್ಟರ್‌ ಬಳಿ ಪರೀಕ್ಷಿಸಿಕೊಂಡು, ಔಷಧಿ ಪಡೆದಳು. ಅದೇನೋ ಸರಿ ಹೋಯಿತು, ಆದರೆ ಊಟತಿಂಡಿಯಲ್ಲಿ ಅವಳಿಗೆ ಯಾವುದೇ ರುಚಿ ಕಾಣಿಸದೆ, ಆಹಾರ ಕಂಡೊಡನೆ ವಾಕರಿಗೆ ಬರುವಂತಾಗುತ್ತಿತ್ತು.

ಒಂದು ಸಲ ಸ್ನಾನ ಮಾಡುವಾಗ ಅವಳಿಗೆ ತನ್ನ ಬಲ ಸ್ತನದಲ್ಲಿ ಸಣ್ಣ ಗಂಟು ಇರುವಂತೆ ಭಾಸವಾಯಿತು. ತಕ್ಷಣ ಅವಳು ವೈದ್ಯರ ಬಳಿ ಹೋದಳು. ಇದನ್ನು ಮಸಲ್ಸ್ ಮಧ್ಯೆ ಮೂಡುವ ಗಡ್ಡೆ ಎಂದು ಅವರು ಔಷಧಿ ಕೊಟ್ಟರು. ಹೀಗೇ ಹಲವು ತಿಂಗಳು ಕಳೆದವು.

ಏನೂ ವ್ಯತ್ಯಾಸ ಆಗಲಿಲ್ಲ. ಆಗ ಕ್ಯಾನ್ಸರ್‌ ತಜ್ಞರ ಬಳಿ ಹೋಗಿ ಅದರ ಪರೀಕ್ಷೆ ಮಾಡಿಸಿ, ಮೆಮೊಗ್ರಫಿ ಸಹ ಮಾಡಿಸಿದಳು. ಅವಳ ಎರಡೂ ಸ್ತನಗಳಲ್ಲಿ ಕ್ಯಾನ್ಸರ್‌ ಗಡ್ಡೆ ಬೆಳೆಯುತ್ತಿರುವುದು ಖಾತ್ರಿಯಾಯಿತು. ಅಂತೂ ಸಕಾಲಕ್ಕೆ ಚಿಕಿತ್ಸೆ ಪಡೆದದ್ದರಿಂದ ಅವಳು ಅಪಾಯದಿಂದ ಪಾರಾದಳು. ಮುಂದೂಡಲ್ಪಟ್ಟಿದ್ದ ಅವಳ ಮದುವೆ 6 ತಿಂಗಳ ನಂತರ ಸುಸೂತ್ರ ನಡೆದು, ಅವಳಿಂದು ಸುಖೀ ಗೃಹಿಣಿ ಎನಿಸಿದ್ದಾಳೆ.

ಸ್ತನ ಕ್ಯಾನ್ಸರ್‌ ಇದು ಅಸಾಮಾನ್ಯ ಜೀವಕೋಶಗಳ ಒಂದು ಕಡೆ ಒತ್ತಾಗಿ ಅನಿಯಮಿತವಾಗಿ ವೃದ್ಧಿಗೊಳ್ಳುವಿಕೆ. ಇದು ಸ್ತನದ ಯಾವುದೇ ಭಾಗದಲ್ಲಿ ಮೂಡಬಹುದು. ಇದು ಮೊಲೆ ತೊಟ್ಟಿಗೆ ಹಾಲು ಒದಗಿಸುವ ನಾಳಗಳಿಂದ ಹಿಡಿದು, ಹಾಲು ಉತ್ಪಾದಿಸುವ ಸಣ್ಣ ಜೀವಕೋಶಗಳು ಹಾಗೂ ಗ್ರಂಥಿರಹಿತ ಟಿಶ್ಯುಗಳಲ್ಲೂ ಕಾಣಿಸಬಹುದು. ಹಳ್ಳಿ ಹೆಂಗಸರಿಗಿಂತ ನಗರದ ಹೆಂಗಸರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ಮಹಾರಾಷ್ಟ್ರದಲ್ಲಿ ಇದು ಅತಿ ಹೆಚ್ಚು. 1 ಲಕ್ಷ ಹೆಂಗಸರಲ್ಲಿ ಸರಾಸರಿ 27 ಮಂದಿ ಇದರಿಂದ ಪೀಡಿತರು. ಅದೇ ಹಳ್ಳಿಗಳಲ್ಲಿ 1 ಲಕ್ಷಕ್ಕೆ 78 ಮಂದಿ ಮಾತ್ರ ಕಂಡು ಬರುತ್ತಾರೆ. ಇತ್ತೀಚೆಗೆ ಇದು ನಡು ವಯಸ್ಸು, ಅಧಿಕ ವಯಸ್ಸಾದವರಿಗಿಂತ ತಾರುಣ್ಯದಲ್ಲಿರುವವರನ್ನು ಕಾಡುವುದೇ ಹೆಚ್ಚು. ಹಿಂದೆಲ್ಲ 40+ ನವರಿಗೆ ಮಾತ್ರ ಈ ಕಾಟವಿತ್ತು. ಈಗೆಲ್ಲ 30+ ಅಥವಾ 20+ನವರಲ್ಲಿಯೂ ಇದು ಮಾಮೂಲಿ ಆಗಿದೆ. ಎಲ್ಲರೂ ನೌಕರಿ ಹುಡುಕಿ ಹೊರಗೆ ಹೊರಡುವುದರಿಂದ, ಹೊರಗಡೆ ಅವರು ಅನೇಕ ರಿಸ್ಕ್ ಪ್ಯಾಕ್ಟರ್ಸ್ ಎದುರಿಸಬೇಕಾಗುತ್ತದೆ.

ಸಾಮಾನ್ಯವಾಗಿ 5% ಹೆಂಗಸರಿಗೆ ಆನುವಂಶಿಕವಾಗಿ ಈ ರೋಗ ಬಂದಿರುತ್ತದೆ. ಬೆಚ್ಚಿ ಬೀಳಿಸುವ ವಿಷಯ ಎಂದರೆ, ವಯಸ್ಸಾದವರ ತರಹ ಅಲ್ಲದೆ, ಯುವತಿಯರನ್ನು ಕಾಡುವ ಈ ಸಮಸ್ಯೆ, ಎರಡೂ ಸ್ತನಗಳಲ್ಲಿ ಒಮ್ಮೆಲೆ ಕಾಣಿಸಿಕೊಂಡು ಗೆಡ್ಡೆಗಳಾಗಿ ಬೆಳೆಯಲಾರಂಭಿಸುತ್ತವೆ. ಇದಕ್ಕೆ ಮೂಲಕಾರಣ ನಮ್ಮ ಆಧುನಿಕ ಜೀವನಶೈಲಿ. ಪಾಶ್ಚಿಮಾತ್ಯರ ಅಂಧಾನುಕರಣೆ ಇದನ್ನು ಹೆಚ್ಚಿಸಿದೆ. ಅಧಿಕ ಸ್ಯಾಚುರೇಟೆಡ್‌ ಆಯಿಲ್ ‌ಸೇವನೆಯೇ ಇದರ ಮೂಲ. ವ್ಯಾಯಾಮದ ಕಾಳಜಿಯೇ ಇಲ್ಲ. ಸದಾ ಟೆನ್ಶನ್‌ನಲ್ಲೇ ಕೆಲಸ ಮಾಡುತ್ತಾರೆ. 30+ ನಂತರದ ಲೇಟ್‌ ಮದುವೆಯೂ ಮತ್ತೊಂದು ಕಾರಣ. ಮಗುವಿಗೆ ಸ್ತನ್ಯಪಾನ ಮಾಡಿಸದಿರುವುದೂ ಒಂದು ನೆಪ ಆಗಬಹುದು. ಹೀಗಾಗಿ ಸಕಾಲಕ್ಕೆ ಬೇಗ ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಇವರು ಪರಿಹಾರ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ