ಬೇಸಿಗೆಕಾಲ ತ್ವಚೆಗೆ ಹೆಚ್ಚು ಪ್ರಭಾವಕಾರಿಯಾಗಿದೆ. ತಾಪಮಾನ ಹೆಚ್ಚಿದಂತೆಲ್ಲಾ ಉಷ್ಣತೆಯನ್ನು ತಡೆದುಕೊಳ್ಳಲಾಗುವುದಿಲ್ಲ. ಹೀಗಿರುವಾಗ ತ್ವಚೆಯ ಸುರಕ್ಷತೆಗಾಗಿ ನಿಮ್ಮನ್ನು ಹೈಡ್ರೇಟೆಡ್‌ ಆಗಿಟ್ಟುಕೊಂಡು ತ್ವಚೆಯನ್ನು ಸೂರ್ಯನ ನೇರ ಸಂಪರ್ಕದಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ.

ತೀಕ್ಷ್ಣ ಬಿಸಿಲಿನ ಪ್ರಭಾವ ಬೇಸಿಗೆಯಲ್ಲಿ ಉಷ್ಣ ಬಹಳ ತೀಕ್ಷ್ಣವಾಗಿರುತ್ತದೆ. ಇದರಿಂದ ತ್ವಚೆಯ ಮೇಲೆ ಕೆಂಪು ದದ್ದುಗಳಾಗುತ್ತವೆ. ಅವುಗಳಿಂದ ಉರಿಯುಂಟಾಗುತ್ತದೆ. ಸಂವೇದನಾಶೀಲ ತ್ವಚೆಯವರಿಗೆ ಇದು ಹೆಚ್ಚಾಗುತ್ತದೆ. ಅದರಿಂದ ಪಾರಾಗಲು ಸಾಧ್ಯವಾದಷ್ಟೂ ಬಿಸಿಲಿನ ನೇರ ಸಂಪರ್ಕಕ್ಕೆ ಬರಬೇಡಿ. ಜೊತೆಗೆ ತ್ವಚೆಯ ಮೇಲೆ ನಿಯಮಿತವಾಗಿ ಸನ್‌ಸ್ಕ್ರೀನ್‌ ಹಚ್ಚಿ. ನಿಮ್ಮ ಮುಖ, ಕತ್ತು ಮತ್ತು ಕೈಗಳ ಮೇಲೆ ಹೊರಗೆ ಹೋಗುವ 20 ನಿಮಿಷಗಳ ಮೊದಲು ಯಾವುದಾದರೂ ಸನ್‌ ಬ್ಲಾಕ್‌ ಕ್ರೀಮನ್ನು ಚೆನ್ನಾಗಿ ಹಚ್ಚಿ. ಬಿಸಿಲಿನಲ್ಲಿ ಹೊರಡುವ ಮುಂಚೆ ಶರೀರವನ್ನು ಪೂರ್ತಿ ಮುಚ್ಚಿಕೊಳ್ಳಿ. ಈ ಸೀಸನ್‌ನಲ್ಲಿ ಹತ್ತಿ ಬಟ್ಟೆಯನ್ನು ಧರಿಸಿ. ತ್ವಚೆಯ ಉಷ್ಣತೆಯನ್ನು ಶಾಂತಗೊಳಿಸಲು ಸಂಜೆಯ ಹೊತ್ತು ಆ್ಯಲೊವೇರಾ ಜೆಲ್‌ನ ಫೇಸ್‌ಪ್ಯಾಕ್‌ನ್ನು ಉಪಯೋಗಿಸಿ. ಟ್ಯಾನಿಂಗ್‌ ಪ್ರಾಬ್ಲಂನಾ ಸೂರ್ಯನ ಅಲ್ಟ್ರಾ ವೈಲೆಟ್‌ ಕಿರಣಗಳು ಸಂಪರ್ಕಕ್ಕೆ ಬಂದಾಗ ತ್ವಚೆಯ ಮೆಲನಿನ್‌ ಒಂದು ಸುರಕ್ಷಾತ್ಮಕ ಕವರ್‌ ಉಂಟುಮಾಡುತ್ತದೆ. ಈ ಮೆಲನಿನ್‌ನಿಂದಾಗಿಯೇ ಗಾಢವಾದ ಕಲೆಗಳು ಉಂಟಾಗುತ್ತವೆ. ಅವು ಇಡೀ ಮುಖದಲ್ಲಿ ಸಮಾನವಾಗಿ ಕಂಡುಬರುತ್ತವೆ ಅಥವಾ ಮಚ್ಚೆಗಳ ರೂಪದಲ್ಲಿರುತ್ತವೆ. ಇದನ್ನು ಸ್ಕಿನ್‌ ಟ್ಯಾನಿಂಗ್‌ ಎನ್ನುತ್ತಾರೆ. ಆದ್ದರಿಂದ ಆಗಾಗ್ಗೆ  30 ಎಸ್‌ಪಿಎಫ್‌ನ ಸನ್‌ಸ್ಕ್ರೀನ್‌ ಹಚ್ಚುವುದು ಅಗತ್ಯ. ಟ್ಯಾನಿಂಗ್‌ನ ಪ್ರಭಾವ ಕೊನೆಗೊಳಿಸಲು ಲೇಸರ್‌ ಸ್ಕಿನ್‌ ರಿಜುವಿನೇಶನ್‌, ಕೆಮಿಕಲ್ ಪೀಲ್ಸ್ ಅಥವಾ ಮೈಕ್ರೋಡರ್ಮಾಬ್ರೇಶನ್‌ನಂತಹ ಪ್ರೊಸೀಜರ್‌ ಮಾಡಿಸಿ.

ಈ ಸಣ್ಣಪುಟ್ಟ ಆದರೆ ಮಹತ್ವಪೂರ್ಣ ವಿಷಯಗಳನ್ನು ನಿಮ್ಮದಾಗಿಸಿಕೊಂಡು ನೀವು ಹೊರಗೆ ಮುಕ್ತವಾಗಿ ಸುತ್ತಾಡಿ ಆನಂದ ಹೊಂದಬಹುದು ಹಾಗೂ ಆರೋಗ್ಯವಾದ ಕಾಂತಿಯುತ ಚರ್ಮವನ್ನೂ ಪಡೆಯಬಹುದು.

ಡೀಹೈಡ್ರೇಶನ್ಗೆ ಪರಿಹಾರ

ಡೀ ಹೈಡ್ರೇಶನ್‌ನ ಪ್ರಭಾವ ಬರೀ ಶರೀರವಷ್ಟೇ ಅಲ್ಲ, ತ್ವಚೆಯಲ್ಲೂ ಸಹ ತಡೆದುಕೊಳ್ಳಬೇಕು. ಸತತವಾಗಿ ಬೆವರು ಬರುವುದರಿಂದ ಶರೀರಕ್ಕೆ ನೀರಿನ ಕೊರತೆಯುಂಟಾಗುತ್ತದೆ. ಅದರ ಪೂರೈಕೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಲಿಕ್ವಿಡ್‌ತೆಗೆದುಕೊಳ್ಳದಿದ್ದರೆ ತ್ವಚೆ ಶುಷ್ಕ ಹಾಗೂ ನಿರ್ಜೀವವಾಗುತ್ತದೆ. ತುಟಿ ಒಡೆಯುತ್ತದೆ, ಅಲ್ಲಲ್ಲಿ ಕಲೆಗಳಾಗುತ್ತವೆ. ಅವುಗಳಿಂದ ಪಾರಾಗಲು ಚೆನ್ನಾಗಿ ನೀರು ಕುಡಿಯಿರಿ. ಪ್ರತಿ ಅರ್ಧ ಗಂಟೆಗೊಮ್ಮೆ ಅಗತ್ಯವಾಗಿ ನೀರು ಕುಡಿಯಿರಿ. ಬೇಸಿಗೆಯಲ್ಲಿ ಕಲ್ಲಂಗಡಿ, ಕರಬೂಜದಂತಹ ಹಣ್ಣುಗಳನ್ನು ಸೇವಿಸುವುದು ಉಪಯುಕ್ತ. ಅವುಗಳಲ್ಲಿ ಬಹಳಷ್ಟು ನೀರು ಇರುತ್ತದೆ. ಕೆಲವು ಡೀಪ್‌ ಹೈಡ್ರೇಟಿಂಗ್‌ ಟ್ರೀಟ್‌ಮೆಂಟ್‌ ಕೂಡ ಪಡೆಯಬಹುದು. ಅವೆಂದರೆ ಹೈಡ್ರೇಟಿಂಗ್‌ ಎಲೆಕ್ಟ್ರೋಪೋರೆಶನ್‌ ಥೆರಪಿ, ಆಕ್ಸಿಜನ್‌ ಥೆರಪಿ, ಜುವೆಡರ್ಮ್ ರಿಫೈನ್‌ ಇತ್ಯಾದಿ.

- ಪಿ. ವಿನುತಾ

ಮೊಡವೆಗಳ ಸಮಸ್ಯೆ

ಬೆವರು ನಮ್ಮ ತ್ವಚೆಯನ್ನು ಧೂಳು ಹಾಗೂ ಮಾಲಿನ್ಯಕ್ಕೆ ಚುಂಬಕದಂತೆ ಮಾಡಿಬಿಡುತ್ತದೆ. ಉಷ್ಣತೆ ಹಾಗೂ ಕೊಳೆಯ ಸೇರುವಿಕೆ ಮೊಡವೆಗಳು ಏಳುವುದಕ್ಕೆ ಉತ್ತಮ ಪರಿಸ್ಥಿತಿ ಉಂಟುಮಾಡುತ್ತದೆ. ಕೊಳೆಯಿಂದ ತ್ವಚೆಯ ರೋಮರಂಧ್ರಗಳು ಮುಚ್ಚಿಹೋಗುತ್ತವೆ. ಒಳಗಿನಿಂದ ಉಷ್ಣತೆ ಹೆಚ್ಚಿದಾಗ ಬ್ಯಾಕ್ಟೀರಿಯಾ ವೇಗವಾಗಿ ಉತ್ಪತ್ತಿಯಾಗುತ್ತವೆ. ಮೊಡವೆಗಳ ಸಮಸ್ಯೆ ಕಡಿಮೆ ಮಾಡಲು ತ್ವಚೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ನಿಮ್ಮೊಂದಿಗೆ ಸದಾ ಫೇಸ್‌ ವಾಶ್‌ ಇಟ್ಟುಕೊಳ್ಳಿ. ತ್ವಚೆಯನ್ನು ಸ್ವಚ್ಛಗೊಳಿಸಲು ದಿನಕ್ಕೆ ಕನಿಷ್ಠ 3 ಬಾರಿ ಮುಖವನ್ನು ತೊಳೆಯಿರಿ. ತ್ವಚೆಯ ರೋಮರಂಧ್ರಗಳು ಮುಚ್ಚಿಹೋಗದಂತೆ ಪ್ರತಿ ಸಂಜೆ ಯಾವುದಾದರೂ ಒಳ್ಳೆಯ ಕ್ವಾಲಿಟಿಯ ಸ್ಕಿನ್‌ ಕ್ಲೆನ್ಸರ್‌ ಅಥವಾ ಆ್ಯಂಟಿ ಬ್ಯಾಕ್ಟೀರಿಯಲ್ ಫೇಸ್‌ ವಾಶ್‌ ಉಪಯೋಗಿಸಿ. ರಾತ್ರಿ ಮುಖಕ್ಕೆ ಮುಲ್ತಾನಿ ಮಿಟ್ಟಿ ಅಥವಾ ಗಂಧದ ಪೇಸ್ಟ್ ಲೇಪಿಸಿ. ಅದರಿಂದ ತ್ವಚೆ ತಂಪಾಗಿರುತ್ತದೆ. ಒಂದು ವೇಳೆ ನಿಮ್ಮ ಸಮಸ್ಯೆ ಮನೆ ಮದ್ದುಗಳಿಂದ ಸರಿಹೋಗದಿದ್ದರೆ ತ್ವಚೆಯ ತಜ್ಞರನ್ನು ಭೇಟಿ ಮಾಡಿ ನಿಮಗೆ ಹಾರ್ಮೋನ್‌ ಕರೆಕ್ಷನ್‌ಅಗತ್ಯವಿರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ