ಇವನ್ನು ಅನುಸರಿಸಿ ನಿಮ್ಮ ಚಿರಯೌವನ ಉಳಿಸಿಕೊಳ್ಳಿ :

ಪ್ರೀ ಮೇಕಪ್‌ ಟಿಪ್ಸ್ : ವಯಸ್ಸು 40+ ಇರಲಿ, ನಾಲ್ಕು ಹಂತಗಳನ್ನು ಮೇಕಪ್‌ಗೆ ಮೊದಲು ಅನುಸರಿಸಬೇಕಾದುದು ಅನಿವಾರ್ಯ. 40+ ನಂತರ ಚರ್ಮ ಸಾಮಾನ್ಯವಾಗಿ ಡ್ರೈ ಆಗುತ್ತದೆ. ಕ್ಲೆನ್ಸಿಂಗ್‌ಗಾಗಿ ಕೇವಲ ನರಿಶಿಂಗ್‌ ಕ್ಲೆನ್ಸಿಂಗ್‌ ಮಿಲ್ಕ್ ಯಾ ಕ್ಲೆನ್ಸಿಂಗ್‌ ಕ್ರೀಂ ಅಷ್ಟನ್ನೇ ಬಳಸಬೇಕು. ಇದು ಚರ್ಮವನ್ನು ಡ್ರೈ ಮಾಡದೆಯೇ ಡೀಪ್‌ ಕ್ಲೀನಿಂಗ್‌ ಮಾಡುತ್ತದೆ. ಹೆಚ್ಚುತ್ತಿರುವ ವಯಸ್ಸಿನ ಕುರುಹಾಗಿ ಕಾಡು ದೊಡ್ಡ ಸಮಸ್ಯೆ ಎಂದರೆ ಓಪನ್‌ ಪೋರ್ಸ್‌ನದು. ಕಾಲ ಕಳೆದಂತೆ ಈ ಪೋರ್ಸ್‌ ದೊಡ್ಡದಾಗುತ್ತದೆ. ಈ ಕಾರಣ ಸ್ಕಿನ್‌ ಮೇಲೆ ಏಜಿಂಗ್‌ ಸ್ಪಷ್ಟ ಗೋಚರಿಸುತ್ತದೆ. ಈ ಪೋರ್ಸ್‌ನ್ನು ಮಿನಿಮೈಸ್‌ ಮಾಡಲು ಕ್ಲೆನ್ಸಿಂಗ್‌ ನಂತರ ಅಗತ್ಯ ಟೋನಿಂಗ್‌ ಮಾಡಿಸಿ. ಮಾಯಿಶ್ಚರ್‌ನ ಕೊರತೆಯ ಕಾರಣ ಮುಖದಲ್ಲಿ ರಿಂಕಲ್ಸ್ ಕಾಣಿಸುತ್ತದೆ. ಆದ್ದರಿಂದ ಸ್ಕಿನ್‌ ಮೇಲೆ ಅಗತ್ಯ ಮಾಯಿಶ್ಚರೈಸರ್‌ ಹಚ್ಚಿರಿ. ಸೂರ್ಯನ ಹಾನಿಕಾರಕ UV ಕಿರಣಗಳು ಅತ್ತ ಚರ್ಮವನ್ನು ನಿರ್ಜೀವಗೊಳಿಸುವುದು ಮಾತ್ರವಲ್ಲದೆ, ಅದರಲ್ಲಿ ಬ್ರೌನ್‌ ಸ್ಪಾಟ್ಸ್, ಸುಕ್ಕುಗಳನ್ನೂ ಹೆಚ್ಚಿಸುತ್ತವೆ. ಹೀಗಾಗಿ ಬಿಸಿಲಿಗೆ ಹೊರಡುವ ಮುನ್ನ ಸನ್‌ಸ್ಕ್ರೀನ್‌ ಹಚ್ಚಿ, ಚರ್ಮವನ್ನು ಈ ಹಾನಿಕಾರಕ ಕಿರಣಗಳಿಗೆ ಬಲಿಯಾಗದಂತೆ ತಡೆಯಿರಿ.

ಫೇಸ್‌ ಮೇಕಪ್‌ : ಮೇಕಪ್‌ನ ಪರ್ಫೆಕ್ಟ್ ಆರಂಭಕ್ಕಾಗಿ ಎಲ್ಲಕ್ಕೂ ಮೊದಲು ಮುಖಕ್ಕೆ ಪ್ರೈಮರ್‌ ಹಚ್ಚಿರಿ. ಇದರಲ್ಲಿ ಸಿಲಿಕಾನ್‌ ಇರುವುದರಿಂದ, ಅದು ಮುಖದಲ್ಲಿನ ಫೈನ್‌ ಲೈನ್ಸ್  ರಿಂಕಲ್ಸ್ ಭಾಗವನ್ನು ತುಂಬಿಸುತ್ತದೆ. ಮೇಕಪ್‌ ನಂತರ ಏಜಿಂಗ್‌ ಸೈನ್ಸ್ ಸ್ಪಷ್ಟ ಗೋಚರಿಸುವುದರಿಂದ, ಇಂಥವನ್ನು ಮೇಕಪ್‌ಗೆ ಮೊದಲೇ ಫಿಲ್ ‌ಮಾಡಿಬಿಡಬೇಕು. CC ಕ್ರೀಂ ಅಂದ್ರೆ ಡ್ಯಾಮೇಜ್ ಡಿಫೈಯಿಂಗ್‌ ಕ್ರೀಮಿನಿಂದ ಮುಖಕ್ಕೆ ಸ್ಮೂತ್‌ ಟೆಕ್ಸ್ ಚರ್‌ ಕೊಡಿ. ಈ ಕ್ರೀಮಿನಲ್ಲಿರುವ ವಿಟಮಿನ್ಸ್  ಮಿನರಲ್ಸ್ ಸ್ಕಿನ್‌ನ್ನು ರಿಂಕಲ್ಸ್ ನಿಂದ ರಕ್ಷಿಸುತ್ತವೆ. ಮುಖದಲ್ಲಿ ಹಾಗೂ ನಿಮಗೆ ಮಾರ್ಕ್ಸ್ ಸ್ಕಾರ್ಸ್‌ ಉಳಿದಿದ್ದರೆ, ಅವನ್ನು ಲಿಕ್ವಿಡ್‌ ಕನ್ಸೀಲರ್‌ ನೆರವಿನಿಂದ ಕವರ್‌ಮಾಡಿ. ಕಂಗಳ ಕೆಳಗೆ ಸಣ್ಣ ಸಣ್ಣ ತೂತುಗಳಿದ್ದರೆ (ದೋಸೆ ಹೊಯ್ದಂಥ ಮುಖ) ಆ ಭಾಗಕ್ಕೆ ಲೈಟ್‌ ಡಿಫ್ಯೂಝರ್‌ ಪೆನ್‌ ಬಳಸಿರಿ. ಇದರಿಂದ ಆ ಭಾಗ ತುಂಬಿಕೊಂಡಂತೆ ಕಾಣಿಸುತ್ತದೆ. ಐ ಮೇಕಪ್‌ ಕಡೆ ತಿರುಗುವ ಮೊದಲು, ಮುಖಕ್ಕೆ ಲೂಸ್‌ ಪೌಡರ್‌ ಹಚ್ಚಿ ಫೇಸ್‌ ಮೇಕಪ್‌ನ್ನು ಫಿಕ್ಸ್ ಮಾಡಿ. ವಯಸ್ಸಿನ ಈ ಹಂತ ತಲುಪುವಷ್ಟರಲ್ಲಿ ಮುಖ ಹಿಂದಿಗಿಂತ ತೆಳ್ಳಗೆ ಆಗಿರುತ್ತದೆ. ಹೀಗಾದಾಗ ನಿಮ್ಮ ಫೇಸ್‌ ಫೀಚರ್ಸ್‌ನ್ನು ಹೈಡ್‌ ಮಾಡಬೇಡಿ, ಬದಲಿಗೆ ಹೈಲೈಟ್‌ ಮಾಡಿ. ಇದಕ್ಕಾಗಿ ಚೀಕ್‌ ಬೋನ್ಸ್ ಮೇಲೆ, ಐ ಬ್ರೋಸ್

ಕೆಳಗೆ ಹಾಗೂ ಬ್ರಿಜ್‌ ಆಫ್‌ ದಿ ನೋಸ್‌ ಮೇಲೆ ಹೈಲೈಟರ್‌ ಬಳಸಿರಿ. ನಂತರ ಚೀಕ್‌ ಬೋನ್ಸ್ ಮೇಲೆ ಕ್ರೀಂ ಬೇಸ್ಡ್ ಬ್ಲಶ್‌ ಆನ್

ಹಚ್ಚಿರಿ. ಇದು ಚರ್ಮವನ್ನು ಹೈಡ್ರೇಟ್‌ಗೊಳಿಸುತ್ತದೆ. ಜೊತೆಗೆ ಮೇಕಪ್‌ಗೆ ಗ್ಲೋ ನೀಡುತ್ತದೆ.

ಐ ಮೇಕಪ್‌ : ವಯಸ್ಸಿನ ಒಂದು ಹಂತದ ನಂತರ ಐ ಬ್ರೋಸ್‌ ಬಾಗುತ್ತಾ, ಹಗುರಾಗುತ್ತಾ ಹೋಗುತ್ತದೆ. ಇಂಥ ಕಂಗಳನ್ನು ಎತ್ತರಿಸಿದಂತೆ ತೋರಿಸಲು, ಐ ಪೆನ್ಸಿಲ್ ‌ನೆರವಿನಿಂದ ಆರ್ಕ್‌ ಮಾಡಿ. ಆರ್ಕ್‌ ಮಾಡಿದ ನಂತರ ತುಸು ಎತ್ತರಿಸಿದಂತೆ ಹಾಗೂ ದೊಡ್ಡದಾದಂತೆ ಅನಿಸುತ್ತದೆ. ಐ ಮೇಕಪ್‌ಗಾಗಿ ಶಿಮರ್‌,  ಗ್ಲಿಟರ್‌ ಹಾಗೂ ಬಹು ಹೆಚ್ಚಿನ ಮಟ್ಟದ ಲೌಡ್‌ ಶೇಡ್ಸ್ ಬಳಸದಿರಿ. ಏಕೆಂದರೆ ಇದರಿಂದ ರಿಂಕಲ್ಸ್ ಮತ್ತಷ್ಟು ಹೆಚ್ಚಾಗಿ ರಿಫ್ಲೆಕ್ಟ್  ಆಗುತ್ತವೆ. ಐ ಶ್ಯಾಡೋಗಾಗಿ ಸಾಫ್ಟ್ ಪೇಸ್ಟ್‌ ಶೇಡ್ಸ್ ಬಳಸಬಹುದು. ಇದರ ಜೊತೆಯಲ್ಲೇ ಕಂಗಳ ಔಟರ್‌ ಕಾರ್ನರ್‌ನಲ್ಲಿ ಡಾರ್ಕ್‌ ಬ್ರೌನ್‌ ಶೇಡ್ಸ್ ನಿಂದ ಅಗತ್ಯ ಕಾಂಟೂರಿಂಗ್‌ ಮಾಡಿ. ಇದರಿಂದ ಕಂಗಳು ಡೀಪ್ಲಿ ಸೆಟ್‌ಯಂಗ್‌ ಅನಿಸುತ್ತದೆ.

ಚರ್ಮದಲ್ಲಿ ಸಹಜ ಆರ್ದ್ರತೆ ಮತ್ತು ಬಳಕುವಿಕೆಯಲ್ಲಿ ಕೊರತೆ ಆದಾಗ, ಕಂಗಳು ತಾನಾಗಿ ಕುಗ್ಗಿದಂತೆ ಅನಿಸುತ್ತದೆ. ಹೀಗಾದಾಗ, ಲಿಕ್ವಿಡ್‌ ಐ ಲೈನರ್‌ ಬದಲು ಪೆನ್ಸಿಲ್ ‌ಐ ಲೈನರ್‌ ಯಾ ಐ ಲ್ಯಾಶ್‌ ಜಾಯಿನರ್‌ ಬಳಸುವುದು ಸೂಕ್ತವಾಗುತ್ತದೆ. ಐ ಲೈನರ್‌ನ  ಒಂದು ತೆಳು ಲೈನ್‌ ಎಳೆದು ಸ್ಮಜ್‌ ಮಾಡಿ.  ಆದರೆ ಅದರಿಂದ ಡ್ರೂಪಿಂಗ್‌ ಆಗಬಾರದು, ಎತ್ತರಿಸಿದಂತೆ ಕಾಣಿಸಬೇಕು. ಈ ಏಜ್ ನಲ್ಲಿ ಕಂಗಳಿಗೆ ಕಲರ್ಡ್‌ ಲೈನರ್‌ ಹಚ್ಚಲೇಬೇಡಿ. ಐ ಲ್ಯಾಶೆಸ್‌ ಮೇಲೆ ವಾಲ್ಯುಮನೈಸಿಂಗ್‌ ಮಸ್ಕರಾದ ಡಬಲ್ ಕೋಟ್‌ನ್ನು ಅಗತ್ಯ ಹಚ್ಚಿರಿ. ಈ ವಯಸ್ಸಿಗೆ ಬರುವಷ್ಟರಲ್ಲಿ ಹೆಚ್ಚು ಕಡಿಮೆ ಎಲ್ಲರ ಕಂಗಳೂ ಸಣ್ಣದಾಗಿಯೇ ಕಾಣಿಸುತ್ತವೆ. ಆದ್ದರಿಂದ ವಾಟರ್

ಲೈನ್‌ ಮೇಲೆ ಲೈಟ್‌ ಪೆನ್ಸಿಲ್ ‌ಹಚ್ಚಿರಿ, ಆಗ ಕಂಗಳು ಸಹಜವಾಗಿ ದೊಡ್ಡದೆನಿಸುತ್ತವೆ. ತುಟಿಗಳಿಗೆ ಬ್ರೈಟ್‌ ಶೇಡ್‌ನ ಲಿಪ್‌ಸ್ಟಿಕ್

ತೀಡಿ, ಹೆಚ್ಚು ಯಂಗ್‌ ಆಗಿ ಕಾಣುವಿರಿ.

– ಸಿ. ಭವ್ಯಾ

Tags:
COMMENT