– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: “ಕಮಲ್ ಶ್ರೀದೇವಿ”
ನಿರ್ಮಾಣ: ಸ್ವರ್ಣಂಬಿಕಾ ಪಿಕ್ಚರ್ಸ್ ಬ್ಯಾನರ್ – ಧನಲಕ್ಷ್ಮಿ ಬಿ ಕೆ, ರಾಜವರ್ಧನ್
ನಿರ್ದೇಶನ: ವಿ. ಎ ಸುನಿಲ್ ಕುಮರ್
ತಾರಾಂಗಣ: ಸಚಿನ್ ಚೆಲುವರಾಯಸ್ವಾಮಿ, ಸಂಗೀತಾ ಭಟ್, ಕಿಶೋರ್ , ರಮೇಶ್ ಇಂದಿರಾ, ಮಿತ್ರ, ಉಮೇಶ್ ಮೊದಲಾದವರು
ರೇಟಿಂಗ್: 3.5/5
ಸಸ್ಪೆನ್ಸ್ ಥ್ರಿಲ್ಲರ್ “ಕಮಲ್ ಶ್ರೀದೇವಿ” ಚಿತ್ರ ಇಂದಿನಿಂದ – ಸೆ.19 ರಾಜ್ಯದಾದ್ಯಂತ ತೆರೆಗೆ ಬಂದಿದೆ. ಇದೊಂದು ಸ್ತ್ರೀ ಪ್ರಧಾನ ಚಿತ್ರ ಸ್ವರ್ಣಂಬಿಕಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧನಲಕ್ಷ್ಮಿ ಬಿ ಕೆ ನಿರ್ಮಾಣ ಮಾಡಿದ್ದು, ನಟ ರಾಜವರ್ಧನ್ ಅವರ ಬಾರ್ನ್ ಸ್ವಾಲೋ “ಕಮಲ್ ಶ್ರೀದೇವಿ” ಸಿನಿಮಾವನ್ನು ಸಹ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ವಿ. ಎ ಸುನಿಲ್ ಕುಮರ್ ಚಿಕ್ತ್ರಕ್ಕೆ ನಿರ್ದೇಶನ ಮಾಡಿದ್ದು ಸಚಿನ್ ಚೆಲುವರಾಯಸ್ವಾಮಿ, ಸಂಗೀತಾ ಭಟ್, ಕಿಶೋರ್ ಮುಂತಾದವರು ನಟಿಸಿದ್ದಾರೆ. ‘ಕಮಲ್ ಶ್ರೀದೇವಿ’ ಸಿನಿಮಾ ತನ್ನ ಶೀರ್ಷಿಕೆಯಿಂದಲೇ ಕೌತುಕ ಮೂಡಿಸಿತ್ತು. ಹಾಗಿದ್ದರೆ ಚಿತ್ರ ಹೇಗಿದೆ? ಪ್ರೇಕ್ಷಕರಿಗೆ ಇಷ್ಟವಾಗುವ ಅಂಶವೇನು ನೊಡಿ..
ನಗರದ ಕೇಂದ್ರ ಭಾಗದ ಲಾಡ್ಜ್ ನಲ್ಲಿ ಒಂದು ಮಹಿಳೆಯ ಕೊಲೆ ಆ ಕೊಲೆ ಮಾಡಿರುವವರು ಆಯ್ರು ಎನ್ನುವುದರ ತನಿಖೆ ಇದುವೇ “ಕಮಲ್ ಶ್ರೀದೇವಿ” ಸಿನಿಮಾದ ಒಂದೆಳೆಯ ಕಥೆ. ಆದರೆ ಈ ಕಥೆಯಲ್ಲಿ ಸಾಕಷ್ತು ಥ್ರಿಲ್ಲಿಂಗ್ ಅಂಶಗಳಿದೆ. ಇಲ್ಲಿ ಏಳು ಪಾತ್ರಗಳಿದ್ದು ಒಂದು ಮಹಿಳೆಯ ಸುತ್ತಾ ಅವು ನಾನಾ ಸ್ವರೂಪದಲ್ಲಿ ಹೆಣೆದುಕೊಂಡಿದೆ. ಅವುಗಳ ಪೈಕಿ ಶ್ರೀದೇವಿ ಅಲಿಯಾಸ್ ದೇವಿಕಾ (ಸಂಗೀತಾ ಭಟ್) ಕೇಂದ್ರ ಪಾತ್ರವಾಗಿದ್ದು ಆಕೆ ಪರಿಸ್ಥಿತಿಯ ಅನಿವಾರ್ಯತೆಗೆ ಸಿಕ್ಕು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ. ಇನ್ನೊಬ್ಬ ಕಮಲ್ (ಸಚಿನ್ ಚೆಲುವರಾಯಸ್ವಾಮಿ, ) ಓರ್ವ ಸಿನಿಮಾ ನಿರ್ದೇಶಕ, ಅವನಿಗೆ ತನ್ನವರೆನ್ನುವವರು ಯಾರೂ ಇಲ್ಲ, ತಾನು ಮಾಡಿದ ಚಿತ್ರ ಸತತ ಸೋಲು ಕಂಡು ಆರ್ಥಿಕ ಸ್ಂಅಕ್ಷ್ಟದಲ್ಲಿರುತ್ತಾನೆ ಆತ್ಮಹತ್ಯೆಗೆ ನಿರ್ಧರಿಸಿದ್ದ ಅವನಿಗೆ ಸ್ನೇಹಿತನು ಶ್ರೀದೇವಿಯನ್ನು ಭೇಟಿಯಾಗುವಂತೆ ಸೂಚಿಸುತ್ತಾನೆ. ಹಾಗೆ ಕಮಲ್ ಶ್ರೀದೇವಿ ಭೇಟಿಯಾಗಿದೆ. ಅವರ ಆ ಭೇಟಿಯ ನಂತರದಲ್ಲಿ ಶ್ರೀದೇವಿಯ ಕೊಲೆ ನಡೆದಿದೆ. ಹಾಗಿದ್ದರೆ ಆ ಕೊಲೆ ಮಾಡಿದವರು ಯಾರು? ಕೊಲೆಯಾದ ಶ್ರೀದೇವಿಯ ಕಥೆ ಏನು? ತಿಳಿಯಲು ನೀವು ಚಿತ್ರಮಂದಿರದಲ್ಲಿ ‘ಕಮಲ್ ಶ್ರೀದೇವಿ’ಯನ್ನೊಮ್ಮೆ ನೋಡಬೇಕು.
ಕಥೆ ಮೊದಲಿಂದ ಕಡೆಯವರೆಗೂ ಬಿಗಿಯಾಗಿದ್ದು ಚಿತ್ರಕಥೆ, ನಿರೂಒಅಣೆಯೂ ಸಹ ಎಲ್ಲಿಯೂ ಬೇಸರ ತರಿಸುವುದಿಲ್ಲ ಎನ್ನುವುದು ಚಿತ್ರ ನಿರ್ದೇಶಕರ ಸಾಮರ್ಥ್ಯವನ್ನು ತೋರಿಸುತ್ತದೆ.
ಪಾತ್ರದ ವಿಷಯಕ್ಕೆ ಬಂದರೆ ಸಂಗೀತಾ ಭಟ್ ಇಡೀ ಚಿತ್ರದ ಹೈಲೈಟ್. ವೇಶ್ಯಾವೃತ್ತಿ ಮಾಡುವ ಮಹಿಖೆಯಾಗಿ ಅವರ ಪಾತ್ರ ಚಿತ್ರ ಮುಗಿದ ನಂತರವೂ ಸಾಕಷ್ಟು ಸಮಯ ಮನಸ್ಸಿನಲ್ಲಿ ಉಳಿಯಲಿದೆ. ಸಚಿನ್ ಚೆಲುವರಾಯಸ್ವಾಮಿ ಸಹ ತಮ್ಮ ಮೊದಲ ಚಿತ್ರಗಳಿಗಿಂತ ಹೆಚ್ಚು ಪಕ್ವವಾದ ಅಭಿನಯ ಕೊಟ್ಟಿದ್ದಾರೆ. ಅನುಭವಿ ನಟರಾದ ಕಿಶೋರ್ ತಮ್ಮ ಎಲ್ಲಾ ಹಿಂದಿನ ಚಿತ್ರಗಳಂತೆಯೇ ಇಲ್ಲಿಯೂ ಖಡಕ್ ಪೋಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಉಳಿದಂತೆ ರಮೇಶ್ ಇಂದಿರಾ, ಮಿತ್ರ, ಉಮೇಶ್ ಸೇರಿದಂತೆ ಹಿರಿ ಕಿರಿಯ ಕಲಾವಿದರು ಕಥೆಗೆ ಪೂರಕವಾಗಿ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ಹಾಡುಗಳು ಸಹ ಸನ್ನಿವೇಶಕ್ಕೆ ತಕ್ಕಂತೆ ಬಂದು ಹೋಗುತ್ತದೆ. ಛಾಯಾಗ್ರಾಹಕ ಕೆವಿನ್ ಶೆರ್ವಿನ್ ಮಸ್ಕರೇನ್ಹಸ್ ಕ್ಯಾಮೆರಾದಲ್ಲಿ ಕೆ.ಆರ್. ಮಾರ್ಕೆಟ್ ಹಾಗೂ ನಗರದ ಇತರೆ ದೃಶ್ಯಗಳನ್ನು ಸುಂದರವಾಗಿ ತೋರಿಸಲಾಗಿದೆ. ಒಟ್ಟಾರೆಯಾಗಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಇಷ್ಟ ಪಡುವ ಪ್ರೇಕ್ಷಕರಿಗೆ ಈ ವಾರ “ಕಮಲ್ ಶ್ರೀದೇವಿ” ಮೊದಲ ಆಯ್ಕೆ ಆಗಬಹುದು.