ಅದಿತಿ ಪ್ರಭುದೇವ್

ಬೆಣ್ಣೆ ದೋಸೆಗೆ ದಾವಣೆಗೆರೆ ಫೇಮಸ್‌. ಅಲ್ಲಿಂದಲೇ ಬಂದಿರುವ ಬೆಡಗಿ ಅದಿತಿ ಪ್ರಭುದೇವ್‌. ನಮ್ಮ ಅಚ್ಚ ಕನ್ನಡದ ಹುಡುಗಿ. ಧೈರ್ಯವಾಗಿ ಸಿನಿಮಾರಂಗಕ್ಕೆ ಮುನ್ನುಗ್ಗಿದ ಅದಿತಿಗೆ ಸಿಕ್ಕ ಮೊದಲ ಚಿತ್ರ `ಧೈರ್ಯಂ.' ಅಜೇಯ್‌ ರಾವ್‌ ನಾಯಕನಿಗೆ ಜೋಡಿಯಾದಳು. ``ನಾನು ಬೆಳೆದು ಬಂದ ಕುಟುಂಬದಲ್ಲಿ ಸಿನಿಮಾ ನಟನೆ ಎಂಬುದು ಬಹುದೂರದ ಮಾತಾಗಿತ್ತು. ಆದರೆ ನನ್ನ ಅದೃಷ್ಟ ನೋಡಿ. `ಧೈರ್ಯಂ' ಚಿತ್ರವೇ ನನ್ನ ಮೊದಲ ಚಿತ್ರವಾಯಿತು. ಸಿನಿಮಾ ರಂಗದ ಬಗ್ಗೆ ಇದ್ದಂಥ ತಪ್ಪು ಕಲ್ಪನೆ ಇಲ್ಲಿಗೆ ಬಂದ ಮೇಲೆ ಅರಿವಾಯಿತು. ನನಗೆ ಇದು   ವರೆಗೂ ಬೇಸರ ಪಟ್ಟುಕೊಳ್ಳುವಂಥ ಘಟನೆಗಳು ನಡೆದಿಲ್ಲ. ಒಳ್ಳೆಯ ಸ್ವಾಗತವೇ ಸಿಕ್ಕಿತು, ಎನ್ನುತ್ತಾಳೆ ಅದಿತಿ.

``ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದ್ದಾಗ ಡಾ. ರಾಜ್‌ ಸಮಾಧಿಯ ಸಮೀಪದಲ್ಲಿ ಶೂಟಿಂಗ್‌ನಡೆಯುತ್ತಿರಲಿಲ್ಲ ಎಂದು ಸಮಾಧಿ ಬಳಿ ಹೋಗಿ ಆಶೀರ್ವಾದ ಪಡೆದುಬಂದೆ,'' ಎಂದು ಹೇಳುವ ಅದಿತಿ ಜೊತೆ ಒಂದಿಷ್ಟು ಹರಟೆ.

ದಾವಣಗೆರೆ ಹುಡುಗಿಗೆ ಮೇಕಪ್‌, ನಟನೆ, ಸ್ಟುಡಿಯೋ ಬಗ್ಗೆ ಏನಾದರೂ ಗೊತ್ತಾ?

ನಿಜ ಹೇಳಬೇಕೆಂದರೆ, ಮೇಕಪ್‌ ಕಿಟ್‌ ಒಳಗೆ ಏನೇನಿರುತ್ತೆ ಅನ್ನೋದು ಗೊತ್ತಿರಲಿಲ್ಲ. ಲಿಪ್‌ಸ್ಟಿಕ್‌ ಹೇಗೆ ಹಚ್ಚಿಕೊಳ್ಳಬೇಕು ಅಂತಾನೂ ಗೊತ್ತಿರಲಿಲ್ಲ. ನಾನೊಂಥರ ಟಾಮ್ ಬಾಯ್‌ ತರಹ ಇದ್ದೆ. `ನಾಗಕನ್ನಿಕೆ' ಸೀರಿಯಲ್‌ನಲ್ಲಿ ನಟಿಸುವಾಗಲೇ ನಾನು ಮೇಕಪ್‌ ಹಾಕಿದ್ದು, ಎಂಬುದು ಅದಿತಿಯ ಉತ್ತರ. ಟೆಕ್ಸ್ ಟೈಲ್ ‌ಕಂಪನಿಯಲ್ಲಿ ಜಾಬ್‌ ಮಾಡುತ್ತಿರುವಾಗಲೇ ಕಾಂಪೈರಿಂಗ್‌ ಶೋ ಮಾಡುವಾಗ ನಟ, ನಿರ್ದೇಶಕ ನವೀನ್‌ ಕೃಷ್ಣ ಅದಿತಿಯಲ್ಲಿದ್ದ ಪ್ರತಿಭೆ ಗುರುತಿಸಿ, `ಗುಂಡ್ಸಾನ್‌ ಹೆಂಡತಿ' ಸೀರಿಯಲ್‌ನಲ್ಲಿ ಅವಕಾಶ ನೀಡಿದರು. ನಾಗಕನ್ನಿಕೆಯಾಗಿ ಸಾಕಷ್ಟು ಜನಪ್ರಿಯಳಾಗಿರುವ ಅದಿತಿ ಕೈಯಲ್ಲೀಗ ಸಾಕಷ್ಟು ಅವಕಾಶಗಳಿವೆ. ಸುನಿಲ್ ಅವರ `ಬಜಾರ್‌' ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾಳೆ.

ಕಿರುತೆರೆಯಾಗಲಿ, ಬಿಗ್‌ ಸ್ಕ್ರೀನ್‌ ಆಗಿರಲಿ. ನಟನೆಗೆ ಹೆಚ್ಚು ಒತ್ತು ಕೊಡುವಂಥ ಪಾತ್ರಗಳನ್ನು ಮಾಡಲು ಆಸೆಪಡುವ ಅದಿತಿಗೆ  ಬರೀ ಗ್ಲಾಮರಸ್ಸಾಗಿ ಮೆರೆದು ಜನಪ್ರಿಯಳಾಗಬೇಕೆಂಬ ಗುಂಪಿಗೆ ಸೇರಲು ಸುತಾರಾಂ ಇಷ್ಟವಿಲ್ಲವಂತೆ.

ನಾನೊಬ್ಬ ನಾರ್ಮಲ್ ಹುಡುಗಿಯಾಗಿ ಜೀವನ ನಡೆಸಬೇಕು ಎಂದು ಅದಿತಿ ನೇರವಾಗಿ ಹೇಳುತ್ತಾಳೆ. ಸರಳತೆಯೇ ಇವಳ ವೈಶಿಷ್ಟ್ಯ!

- ಸರಸ್ವತಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ