ಕೇವಲ 500 ರೂ.ಗಳಲ್ಲಿ ಮಯಾನಗರದಲ್ಲಿ ವಾಸಿಸಿದ್ದೆವು
ಟೈಗರ್ ಶ್ರಾಫ್‌ನ `ರಿಯಲ್ ವೈಫ್, ಗರ್ಲ್ ಫ್ರೆಂಡ್, ಬಾಗಿ-2' ಚಿತ್ರಗಳ ಸಹನಟಿ ದಿಶಾ, ಇತ್ತೀಚೆಗೆ 100 ಕೋಟಿ ಕ್ಲಬ್ ಸೇರಿದ `ಬಾಗಿ' ಚಿತ್ರದ ಯಶಸ್ಸಿನಿಂದ ಹೆಮ್ಮೆಯಿಂದ ಬೀಗುತ್ತಿದ್ದಾಳೆ. ಇದಕ್ಕೆ ಮೊದಲು ಇವಳು `ಬೇಫಿಕ್ರೆ, ಧೋನಿ' ಚಿತ್ರಗಳಲ್ಲೂ ಹೆಸರು ಗಳಿಸಿದ್ದಳು. ಆದರೆ ನಾಯಕಿ ಎನಿಸಿದ್ದು `ಬಾಗಿ' ಚಿತ್ರದಲ್ಲಿ. ``ನಾನು ಮೊದಲು ಮುಂಬೈಗೆ ಬಂದಾಗ ಪರ್ಸ್‌ನಲ್ಲಿ ಕೇವಲ 500/ ರೂ. ಇತ್ತು. ಇಂಥ ನಗರಿಯಲ್ಲಿ ಬಾಳುವುದಾದರೂ ಹೇಗೆ? ಒಬ್ಬಂಟಿಯಾಗಿ ಇದ್ದುಕೊಂಡು ಹೇಗೋ ನಿಭಾಯಿಸಿದೆ. ಆಡಿಷನ್‌ನಲ್ಲಿ ಸೆಲೆಕ್ಟ್ ಆಗದ್ದಿದರೆ ಊರಿನ ರೈಲಿಗೆ ವಾಪಸ್ಸು ಹೊರಡುವುದೇ ಎಂದುಕೊಂಡಿದ್ದೆ,'' ಎನ್ನುತ್ತಾಳೆ ದಿಶಾ.
ಐಶ್‌ಬೇಬಿಯ ಹೊಸ ಚಿತ್ರ
ತನ್ನ ಅದ್ಭುತ ಸೌಂದರ್ಯದಿಂದ ವಿಶ್ವಸುಂದರಿ ಎನಿಸಿದ್ದ ಐಶ್ವರ್ಯಾ, ತಾಯಿಯಾದ ಮೇಲೆ ಈಗಲೂ ಬಾಲಿವುಡ್‌ನಲ್ಲಿ ಅಷ್ಟೇ ಬೇಡಿಕೆ ಹೊಂದಿದ್ದಾಳೆ. 60ರ ದಶಕದ `ರಾತ್ ಔರ್ ದಿನ್, ವೋ ಕೌನ್ ಥಿ?' ಚಿತ್ರಗಳನ್ನು ಇದೀಗ ಹೊಸದಾಗಿ ರೀಮೇಕ್ ಮಾಡಲು ಹೊರಟಿರುವ ಸಂಜಯ್‌ದತ್ತ್, ಇದಕ್ಕಾಗಿ ಐಶ್ ಬೇಬಿಯೇ ನಾಯಕಿ ಎಂದಿದ್ದಾನೆ. ಇಷ್ಟರಲ್ಲಿ ಈ ಚಿತ್ರಗಳು ಸೆಟ್ಟೇರಲಿವೆ. ``ಈ 2 ಚಿತ್ರಗಳ ಕಥೆ ಅದ್ಭುತ! ನರ್ಗಿಸ್, ಸಾಧನಾರಂಥ ಕ್ಲಾಸಿಕ್ ನಟಿಯರ ಪಾತ್ರಗಳನ್ನು ನಿಭಾಯಿಸುವ ಸೌಭಾಗ್ಯ ನನ್ನದು,'' ಎನ್ನುತ್ತಾಳೆ ಐಶ್.
ಶಾಹಿದ್ ಆಡಲಿದ್ದಾನೆ ಕಬಡ್ಡಿ
`ಪದ್ಮಾವತ್' ಚಿತ್ರದಲ್ಲಿ ಶಾಹಿದ್ ಕಪೂರ್‌ನ ಪಾತ್ರ ಚಿಕ್ಕದೇ ಆದರೂ, ಈ ಚಿತ್ರದ ನಂತರ ಈತನ ಫಿಲ್ಮಿ ಕೆರಿಯರ್ ಗ್ರಾಫ್ ಮೇಲಕ್ಕೇರಿದೆ. ಇದೀಗ ರಾಕೇಶ್ ಓಂಪ್ರಕಾಶ್‌ರ `ಕಬಡ್ಡಿ' ಚಿತ್ರದಲ್ಲಿ ಶಾಹಿದ್ ನಟಿಸಲಿದ್ದಾನೆ ಎಂಬುದು ಖಚಿತವಾಗಿದೆ. ಮೊದಲು ಇದಕ್ಕೆ ಹೃತಿಕ್ ಆಯ್ಕೆಯಾಗಿದ್ದ, ಇದೀಗ ಶಾಹಿದ್. ಈಗಷ್ಟೇ ಈತ `ಬತ್ತೀ ಗುಲ್ ಮೀಟರ್ ಚಾಲೂ' ಚಿತ್ರದ ಶೂಟಿಂಗ್ ಮುಗಿಸಿದ್ದಾನೆ. ಅಷ್ಟೇ ಅಲ್ಲ, 60ರ ದಶಕದ `ವೋ ಕೌನ್ ಥೀ' ರೀಮೇಕ್ ಚಿತ್ರದಲ್ಲಿ ಐಶ್ವರ್ಯಾ ಜೊತೆ ನಟಿಸಲಿದ್ದಾನೆ! ಹಿಂದೆ ಮನೋಜ್ ಕುಮಾರ್ ಸಾಧನಾ ಆ ಪಾತ್ರಗಳನ್ನು ನಿಭಾಯಿಸಿದ್ದರು.
ಶೆಟ್ಟಿ-ಕುಮಾರ್ ಮತ್ತೊಮ್ಮೆ ಒಟ್ಟಿಗೆ
ಬಾಲಿವುಡ್‌ನಲ್ಲಿ ಹಲವು ಜೋಡಿಗಳು ಮುಂದುವರಿದಿವೆ, ಮುರಿದೂ ಬಿದ್ದಿವೆ. ಆದರೆ 1993ರಲ್ಲಿ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್‌ಹಾಗೂ ಸುನೀಲ್ ಶೆಟ್ಟಿಯ ಜೋಡಿ ದಶಕಗಳ ಕಾಲ ಸತತ ಹಿಟ್ ಚಿತ್ರಗಳನ್ನು ನೀಡಿದೆ. ಇದೀಗ ಈ ಜೋಡಿ `ಹೌಸ್‌ಫುಲ್-4' ಚಿತ್ರದಲ್ಲಿ ಕಾಣಿಸಲಿದೆ.
ನಮ್ಮ ಮಧ್ಯೆ ಅಂಥದ್ದೇನೂ ಇಲ್ಲ
`ಸೋನು ಕೇ ಟೀಟೂ ಕೀ ಸ್ವೀಟಿ' ಚಿತ್ರದಲ್ಲಿ ನಟಿಸಿದ್ದ ನುಸ್ರತ್ ಭರೂಚಾ ತನ್ನ ಪ್ರತಿಭೆಯಿಂದ ಎಲ್ಲೆಡೆ ಪ್ರಶಂಸೆ ಪಡೆಯುತ್ತಿದ್ದಾಳೆ. ಅದೇ ತರಹ `ಪ್ಯಾರ್ ಕಾ ಪಂಚನಾಮಾ' ಚಿತ್ರದಲ್ಲೂ ಒಳ್ಳೆಯ ಹೆಸರು ಬಂತು. ಈ ಎರಡೂ ಚಿತ್ರಗಳಲ್ಲಿ ಇವಳ ಕೋಸ್ಟಾರ್ ಕಾರ್ತೀಕ್ ಆರ್ಯನ್ ಜೊತೆ ಇದೀಗ ರೊಮಾನ್ಸ್ ಜೋರಾಗಿದೆಯಂತೆ. ಆದರೆ ಇಬ್ಬರೂ ಈ ಸುದ್ದಿಯನ್ನು ಬರೀ ಗಾಸಿಪ್ ಎಂದು ತಳ್ಳಿಹಾಕಿದ್ದಾರೆ. ಇಬ್ಬರೂ ಒಂದು ಪತ್ರಿಕಾ ಗೋಷ್ಠಿಯಲ್ಲಿ, ``ನಾವಿಬ್ಬರೂ ಒಟ್ಟೊಟ್ಟಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದೇವೆ. ಹಾಗೆಂದ ಮಾತ್ರಕ್ಕೆ ಲವ್ ಅಫೇರ್ ಅಂದುಬಿಡುವುದೇ? ಕೇವಲ ಫ್ರೆಂಡ್‌ಶಿಪ್ ಅಷ್ಟೆ,'' ಎಂದು ತಿಪ್ಪೆ ಸಾರಿಸಿದ್ದಾರೆ. ಮುಂದೆ ನೋಡೋಣ!