ಸ್ಯಾಂಡಲ್ ವುಡ್ನಲ್ಲೀಗ ಹೊಸ ಹೊಸ ಪ್ರಯೋಗಗಳು ಆಗುತ್ತಿವೆ. ಪ್ರೇಕ್ಷಕ ಮಹಾಪ್ರಭುಗಳು ಅಪರೂಪಕ್ಕೆ ಅಂಥ ಹೊಸತನಗಳನ್ನು
ಸ್ವೀಕರಿಸುತ್ತಿರುವುದೇ ಸಂತಸದ ಸಂಗತಿ. ಹಾಗಾಗಿ ನಿರ್ಮಾಪಕರು ಸ್ಟಾರ್ಗಳಿಗಷ್ಟೇ ಹಣ ಹೂಡಬೇಕು ಎನ್ನುವ ಸೂತ್ರದಿಂದ
ಹೊರಬಂದು ಒಂದೊಳ್ಳೆ ಸಿನಿಮಾ ಮಾಡಿದರೆ ಜನ ಖಂಡಿತ ನೋಡುತ್ತಾರೆ ಎನ್ನುವ ಫಾರ್ಮುಲಾಗೆ ಒಗ್ಗಿಕೊಳ್ಳುತ್ತಿದ್ದಾರೆ.
`ರಂಗಿ ತರಂಗ,' `ಕೆಂಡಸಂಪಿಗೆ,' ಪಾತ್ರಗಳ ಯಶಸ್ಸಿನ ನಂತರ ಇದೀಗ ಹೊಸ ಟ್ರೆಂಡ್ ಶುರುವಾಗಿದೆ. ಇದೇ ನಿಟ್ಟಿನಲ್ಲಿ `ಅಕಿರ' ಚಿತ್ರ
ಕೂಡಾ ಹೊಸತನದೊಂದಿಗೆ ತಯಾರಾಗುತ್ತಿದ್ದು, ನಿರ್ಮಾಣದ ಶೈಲಿ ಎಲ್ಲರಲ್ಲೂ ಅಚ್ಚರಿ ಹುಟ್ಟಿಸುತ್ತಿದೆ.
`ಅಕಿರ' ಎಂದಕೂಡಲೇ ಇದೇನು ರಷ್ಯನ್ ಹೆಸರೇ ಎಂದು ಆಶ್ಚರ್ಯಪಡಬಹುದು. ಆದರೆ ಸಿನಿಮಾದಲ್ಲಿ ಇದು ನಾಯಕನ

ಹೆಸರಾಗಿರುತ್ತದೆ. ಹೆಸರಿಗೂ ಒಂದು ಹಿನ್ನೆಲೆ ಇರುತ್ತೆ ಎನ್ನುತ್ತಾರೆ ಚಿತ್ರದ ನಾಯಕ ಅನೀಶ್.
ಅನೀಶ್ ಸಿನಿಮಾರಂಗಕ್ಕೆ ಹೊಸಬರೇನಲ್ಲ. ಈಗಾಗಲೇ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾಗಿದೆ. `ನಮ್ ಏರಿಯಾದಲ್ಲೊಂದಿನ,'
`ಎಂದೆಂದಿಗೂ' ಇತ್ತೀಚೆಗಷ್ಟೇ ಬಿಡುಗಡೆಯಾಯ್ತು. `ಅಕಿರ' ಅನೀಶ್ರ ಆರನೇ ಚಿತ್ರವಾಗಲಿದೆ.
``ನನ್ನನ್ನು ಬಿಟ್ಟರೆ ಎಲ್ಲರೂ ಹೊಸಬರೇ.... ಇದೊಂದು ಹೊಸ ಟೀಮ್. ನಿರ್ದೇಶಕರು ನವೀನ್ ರೆಡ್ಡಿ ಕೂಡಾ ಮೊದಲ ಬಾರಿಗೆ
ನಿರ್ದೇಶನ ಮಾಡ್ತಿದ್ದಾರೆ.
``ನಿರ್ಮಾಪಕರಾದ ಚೇತನ್ ಕುಮಾರ್, ಸೋಮಶೇಖರ್ ರೆಡ್ಡಿ ಅವರಿಗಿದು ಮೊದಲ ಚಿತ್ರ. ಹಾಗಾಗಿ ನಾನು ಎಲ್ಲದರಲ್ಲೂ ಇನ್
ವಾಲ್ವ್ ಆದೆ. ಸಿನಿಮಾರಂಗದಲ್ಲಿ ಕಾಂಟ್ರಾಕ್ಟ್ ಇದ್ದುದರಿಂದ ನಾನು ಗೈಡ್ ಮಾಡುತ್ತಿದ್ದೆ. ನಿರ್ಮಾಪಕರ ಬಗ್ಗೆ ಹೇಳಬೇಕೆಂದರೆ,
ಅವರು ಒಳ್ಳೆ ಕ್ವಾಲಿಟಿ ಚಿತ್ರ ನೀಡಬೇಕೆಂದು ಆಸೆಪಡುವಂಥವರು. ನಮ್ಮ ಭಾಷೆಯ ಚಿತ್ರ ಪರಭಾಷೆ ಚಿತ್ರಕ್ಕಿಂತ ಒಂದು ಹೆಜ್ಜೆ
ಮುಂದಿರಬೇಕು ಎನ್ನುವ ಉತ್ಸಾಹ.
``ಖರ್ಚು ಜಾಸ್ತಿ ಮಾಡಬೇಡಿ ಅಂತ ಹೇಳಿದರೂ ಅವರು ಯಾವುದೇ ವಿಷಯಕ್ಕೂ ಕಾಂಪ್ರಮೈಸ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿ
ಬರಬೇಕು ಅಂತ ಹೇಳ್ತಾರೆ . ಹೈದರಾಬಾದ್ನಲ್ಲಿ ಒಂದು ಹಾಡಿನ ಚಿತ್ರೀಕರಣಕ್ಕೆ ನಲತ್ತೈದು ಲಕ್ಷ ಖರ್ಚು ಮಾಡಿದ್ದಾರೆ. ಜನಪ್ರಿಯ
ಕೊರಿಯಾ ಗ್ರಾಫರ್ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರ ನಿಜಕ್ಕೂ ಅದ್ಧೂರಿಯಾಗಿ ಮೂಡಿಬಂದಿದೆ!
``ನನ್ನ ದೃಷ್ಟಿಯಲ್ಲಿ ಅವರೇ ನನ್ನ ಗಾಡ್ ಫಾದರ್. ಈ ಸಿನಿಮಾ ಬಗ್ಗೆ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದೀನಿ. ಈ `ಅಕಿರ' ಚಿತ್ರದ
ಮತ್ತೊಂದು ವಿಶೇಷತೆ ಎಂದರೆ ನಾರ್ವೆನಲ್ಲಿ ಹಾಡಿನ ಚಿತ್ರೀಕರಣ ಮಾಡಲಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಈ
ದೇಶದಲ್ಲಿ ಚಿತ್ರೀಕರಣ ಆಗುತ್ತಿರೋದು ನಿಜಕ್ಕೂ ಗ್ರೇಟ್! ಅತ್ಯದ್ಭುತವಾದ ಪ್ರಕೃತಿ ಸೌಂದರ್ಯವನ್ನು ನಾರ್ವೇನಲ್ಲಿ ಕಾಣಬಹುದು.
ಇಡೀ ತಂಡ ಹಾಡಿನ ಚಿತ್ರೀಕರಣಕ್ಕಾಗಿ ತೆರಳುತ್ತಿದ್ದೇನ. ಗೋನೈದಲ್ಲಿ ಶೂಟಿಂಗ್ ಮುಗಿದ ಕೂಡಲೇ ಸಿನಿಮಾ ಪೂರ್ಣಗೊಳ್ಳುತ್ತದೆ.
ನವೆಂಬರ್ನಲ್ಲಿ ಆಡಿಯೋ ಬಿಡುಗಡೆ ಮಾಡಲಿದ್ದೇವೆ,'' ಎಂದು `ಅಕಿರ' ಚಿತ್ರದ ಬಗ್ಗೆ ನಾಯಕ ನಟ ಸಂಪೂರ್ಣ ಮಾಹಿತಿ ನೀಡಿದರು.

ಚಿತ್ರಕ್ಕೆ ಅಜಿನೀಶ್ ಆರು ಹಾಡುಗಳನ್ನು ಕಂಪೋಸ್ ಮಾಡಿದ್ದಾರಂತೆ. `ಡವ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದಿತಿ ರಾವ್
ಚಿತ್ರದ ನಾಯಕಿ, ಮತ್ತೊಬ್ಬ ನಾಯಕಿ ಕ್ರಿಶಿ. ಅದಿತಿ ರಾವ್ `ಅಕಿರ' ಬಗ್ಗೆ ಮಾತನಾಡುತ್ತಾ, ತನ್ನ ಪರಿಚಯ ಮಾಡಿಕೊಂಡಳು.
``ನನಗೆ ಮೊದಲಿನಿಂದಲೂ ಸೆಲೆಬ್ರಿಟಿಯಾಗುವ ಆಸೆ. ಶಾಲೆಯಲ್ಲಿದ್ದಾಗ ಪೈಲಟ್ ಆಗಬೇಕು ಅನಿಸಿತ್ತು. ದೊಡ್ಡವಳಾದಂತೆ ಜನಪ್ರಿಯ
ವ್ಯಕ್ತಿಯಾಗಬೇಕು, ನನ್ನ ಫೋಟೋಗಳು ಪತ್ರಿಕೆಯಲ್ಲಿ ಮಿಂಚಬೇಕು. ಒಟ್ಟಿನಲ್ಲಿ ಫೇಮಸ್ ಆಗ್ಬೇಕು ಎನ್ನುವ ಕ್ರೇಜ್. ಇಂದು ನಾನು
ನನ್ನ ಕನಸಿನ ಜೊತೆ ಬೆಳೆಯುತ್ತಿದ್ದೇನೆ. ಸಾಧನೆಯ ಹುರುಪಿನಲ್ಲಿ ಮೊದಲ ಹೆಜ್ಜೆ ಇಟ್ಟಾಗಿದೆ. ಒಂದು ರೀತಿಯಲ್ಲಿ ನಾನು ತುಂಬಾನೇ
ಲಕ್ಕಿ... ಸಿಕ್ಕಿರುವ ಟೀಮ್ ನವರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಒಂದು ಸ್ವಲ್ಪ ತೊಂದರೆಯಾಗಿಲ್ಲ. ಒಳ್ಳೆ ಜನ
ಸಿಕ್ಕಿದ್ದಾರೆ.''
ಅದಿತಿ ಮುಂದುವರಿಸುತ್ತಾ, ``ಇನ್ನು `ಅಕಿರಾ' ಬಗ್ಗೆ ಹೇಳಬೇಕೆಂದರೆ... ನಾನು ಸ್ವಲ್ಪ ತಡವಾಗಿಯೇ ಈ ತಂಡದೊಳಗೆ ಸೇರಿಕೊಂಡೆ.
ಕ್ರಿಶಿ ಆಗಲೇ ಆಯ್ಕೆ ಆಗಿದ್ದಳು. ಕೊನೆ ಘಳಿಗೆಯಲ್ಲಿ ನಾನು ಸೇರಿಕೊಂಡೆ. ನಮ್ಮ ನಿರ್ದೇಶಕರಾದ ನವೀನ್ ರೆಡ್ಡಿ ಹೊಸಬರು ಅಂತ
ಅನಿಸೋದಿಲ್ಲ. ಎಲ್ಲ ಪಕ್ಕಾ ಆಗುವವರೆಗೂ ಟೇಕ್ ಓ.ಕೆ. ಮಾಡೋದಿಲ್ಲ.
``ನನ್ನ ಪಾತ್ರ... ತುಂಬಾ ಪ್ರತಿಭೆ ಇರೋಂಥ ಹುಡುಗಿ. ಸಮಾಜಸೇವೆ ಮಾಡುವ ಪ್ರವೃತ್ತಿ. ವೃದ್ಧಾಶ್ರಮಕ್ಕೆ ವಯಸ್ಸಾದವರಿಗೆ
ಸಹಾಯ ಮಾಡ್ತೀನಿ, ನಾನು ಹೆಚ್ಚು ಮಾತನಾಡೋದಿಲ್ಲ... ಒಂಥರಾ ನನ್ನ ರಿಯಲ್ ಕ್ಯಾರೆಕ್ಟರ್ನಂತೆ ಇದೆ. ಇದೊಂದು
ವಿಭಿನ್ನವಾದಂಥ ಲವ್ ಸ್ಟೋರಿ. ಪ್ರೀತಿ, ಕೋಪ ಇದೆಲ್ಲದರ ನಡುವೆ ಬದುಕಿನ ನಿಜವಾದ ವ್ಯಾಲ್ಯೂ ಅತಿ ಸಣ್ಣ ವಿಷಯಕ್ಕೆ ಹೇಗೆ
ಕಳೆದುಕೊಳ್ತೀವಿ ಎನ್ನುವುದರ ಬಗ್ಗೆ ಪ್ರತಿಬಿಂಬಿಸುತ್ತಾ ಹೋಗುತ್ತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ