ರಾಗಿಣಿ ಸಿ.ಎಂ.

ಸಿನಿಮಾ ತಾರೆಯರು ರಾಜಕೀಯಕ್ಕೆ ಜಂಪ್‌ ಮಾಡೋದು ಅಪರೂಪವೇನಲ್ಲ. ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ರಾಜಕೀಯ ರಂಗದಿಂದಲೇ ಇವರುಗಳಿಗೆ ಬುಲಾವ್ ‌ಶುರುವಾಗುತ್ತೆ. ರಮ್ಯಾ, ರಕ್ಷಿತಾ, ಭಾವನಾ, ಪೂಜಾಗಾಂಧಿ.... ಇದೀಗ ರಾಗಿಣಿ ದ್ವಿವೇದಿ ರಾಜಕೀಯಕ್ಕೆ ಬರಲು ರಿಹರ್ಸಲ್ ನಡೆಸುತ್ತಿದ್ದಾಳೆ. `ನಾನೇ ಸಿ.ಎಂ.' ಎನ್ನುತ್ತಾ ತೆರೆ ಮೇಲೆ ಮಿಂಚಲು ಹೊರಟಿರುವ ರಾಗಿಣಿಗೆ ಇತ್ತೀಚೆಗೆ ನೀವು ರಾಜಕೀಯಕ್ಕೆ ಬರ್ತಿದ್ದೀರಂತೆ ಹೌದಾ? ಎಂದು ಕೇಳಿದಾಗ.... ಹಾಗಂತ ನಾನು ಎಲ್ಲಿಯೂ ಹೇಳಿಲ್ಲ. ಇನ್ನು ಏಳೆಂಟು ವರ್ಷ ನಾನು ಸಿನಿಮಾರಂಗದಲ್ಲಿ ಬಿಝಿ. ಸದ್ಯಕ್ಕಂತೂ ಬಿಡುವು ಸಿಗದಷ್ಟು ಬಿಝಿಯಾಗಿದ್ದೇನೆ ಎಂದಾಗ ಕೇಳಿದವರೇ ಬೆಚ್ಚಿಬಿದ್ದರು. ರಾಗಿಣಿ ಚಿತ್ರಗಳೆಲ್ಲ ಸಾಲು ಸಾಲಾಗಿ ಗಿರ್ಕಿ ಹೊಡೆಯುತ್ತಿರುವಾಗ ಇನ್ನೆಂಥ ಬಿಝಿಯಪ್ಪ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದರಂತೆ. ಅದೇನೇ ಇರಲಿ, ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲೇ ಸಿ.ಎಂ. ಪಟ್ಟ ಗಿಟ್ಟಿಸಿದ್ದಾಳೆ. ಸಿನಿಮಾದಲ್ಲಾದರೇನಂತೆ.... ಅಲ್ಲವೇ?

ಕನ್ನಡದ ಮಗಳು

ಒಳ್ಳೆ ಕಥೆ, ಒಳ್ಳೆ ಪಾತ್ರ, ಒಳ್ಳೆ ತಂಡವಿದ್ದರೆ ಸಾಕು ತಮ್ಮನ್ನು ತಾವೇ ಮರೆತು ಕೆಲಸ ಮಾಡುವುದರಲ್ಲಿ ಸೈ ಎನಿಸಿಕೊಳ್ಳುವ ನಟಿ ಸುಹಾಸಿನಿ.. `ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ಪ್ರಮುಖ ಪಾತ್ರ ನಹಿಸುತ್ತಿರುವ ಸುಹಾಸಿನಿ, ಕಾಡಿನ ಮಧ್ಯೆ ಸೆಟ್‌ ಹಾಕಿದ್ದರಿಂದ ಪ್ರತಿನಿತ್ಯ ಕಾಲುದಾರಿಯಲ್ಲಿ ಎರಡು ಕಿ.ಮೀ. ನಡೆದು, ಶೂಟಿಂಗ್‌ ಸ್ಥಳಕ್ಕೆ ತಲುಪುತ್ತಿದ್ದರಂತೆ. ಸಂಜೆಯಾದ ಕೂಡಲೇ ಮಳೆ. ಅದು ನಿಲ್ಲುವವರೆಗೂ ಕಾಯ್ದುಕೊಂಡಿದ್ದು ಹೋಗುತ್ತಿದ್ದರಂತೆ. ಹೊಸಬರ ಜೊತೆ ನಟಿಸುತ್ತಾ ಸಹಕಾರ ನೀಡಿದ ಸುಹಾಸಿನಿಯನ್ನು ಇಡೀ ತಂಡ ನೆನಪಿಸಿಕೊಳ್ಳುತ್ತದೆ. ಹದಿನೈದು ದಿನ ಸತತವಾಗಿ ಕಾಡಿನಲ್ಲಿ ಚಿತ್ರೀಕರಣ. ಹನ್ನೊಂದು ದಿನ ಸುಹಾಸಿನಿ ಚಿತ್ರೀಕರಣದಲ್ಲಿ ಭಾಗವಹಿಸಿ, ಈಕೆ ನಿಜಕ್ಕೂ ಕನ್ನಡದ ಮಗಳು ಅಂತ ಹೊಗಳಿಕೆಗೆ ಪಾತ್ರರಾಗಿದ್ದಾರೆ.

ಬಿಝಿ ದೇವರಾಜ್

ಪ್ರತಿಭೆ ಇದ್ದವರನ್ನು ಚಿತ್ರರಂಗ ಸುಮ್ಮನೆ ಇರುವುದಕ್ಕೆ ಬಿಡುವುದಿಲ್ಲ ಎನ್ನುವುದಕ್ಕೆ ದೇವರಾಜ್‌ ಉತ್ತಮ ನಿದರ್ಶನ. ಇತ್ತೀಚೆಗೆ ದೇವರಾಜ್‌ ಕನ್ನಡ ಚಿತ್ರಗಳಲ್ಲಿ ಬಹಳ ಬಿಝಿ. `ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ. ಸುಹಾಸಿನಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ನೆನಪುಗಳನ್ನು ಜೊತೆಯಲ್ಲೇ ಇಟ್ಕೊಂಡು ಹೋಗುವಂಥ ಛಲಗಾರ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ದೇವರಾಜ್‌ ಅವರಿಗೆ ಬಹಳ ಕುತೂಹಲವಿದೆ. ಎಂಥದ್ದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವ ದೇವರಾಜ್‌ಈ ಚಿತ್ರದಲ್ಲಿ ಸುಹಾಸಿನಿಯರ ಪತಿಯಾಗಿ ಅಭಿನಯಿಸುತ್ತಿದ್ದಾರೆ. ಹೊಸ ರೀತಿಯಲ್ಲಿ ಕಥೆ ಹೇಳುತ್ತಾ ಹೋಗುವ `ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ದೇವರಾಜ್‌-ಸುಹಾಸಿನಿ ಜೋಡಿ ಬಗ್ಗೆ ಅಷ್ಟೇ ಕುತೂಹಲವಿದೆ.

ಸೂರಿ ಗಿರಿ

`ಆರ್‌.ಎಕ್ಸ್. ಸೂರಿ....' ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ತಮ್ಮ ಪ್ರೀತಿಯ ಅಭಿಮಾನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ, ಆತ ತನ್ನ ಕಡೆಯ ಆಸೆ ವಿಜಿಯವರ `ಆರ್‌.ಎಕ್ಸ್. ಸೂರಿ....' ಚಿತ್ರ ನೋಡಲೇಬೇಕೆಂದು ಬಯಸಿದಾಗ ವಿಜಿ ಮತ್ತು ನಿರ್ಮಾಪಕ ಸುರೇಶ್‌ ಅವರು ಆತನಿಗಾಗಿ ಪ್ರತ್ಯೇಕ ಶೋ ಏರ್ಪಡಿಸಿ ಆ್ಯಂಬುಲೆನ್ಸ್ ನಲ್ಲಿ ಕರೆತಂದು ವೈದ್ಯರ ಸಮ್ಮುಖದಲ್ಲಿ `ಆರ್‌.ಎಕ್ಸ್. ಸೂರಿ....' ಚಿತ್ರ ತೋರಿಸಿದರಂತೆ. ಆಂಧ್ರದ ಪ್ರಖ್ಯಾತ ರೌಡಿಯೊಬ್ಬನ ಕಥೆ ಎಂದು ಹೇಳಲಾಗುತ್ತಿದ್ದು, ಆ ಪಾತ್ರದಲ್ಲಿ ವಿಜಯ್ ಜಬರ್ದಸ್ತಾಗಿ ನಟಿಸಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟು 250 ಚಿತ್ರ ಮಂದಿರಗಳಲ್ಲಿ ಸೂರಿ ಬಿಡುಗಡೆಯಾಗುತ್ತಿದೆ. ವಿಜಯ್ ಅಭಿನಯದ ಈ ಚಿತ್ರ ಅವರ ವೃತ್ತಿಯಲ್ಲೇ ಮೊದಲ ಬಾರಿಗೆ ಇಷ್ಟೊಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು. ಯಾವುದೇ ಪರಭಾಷೆಯ ಚಿತ್ರದ ಪೈಪೋಟಿ ಇಲ್ಲದೆ  `ಆರ್‌.ಎಕ್ಸ್. ಸೂರಿ....' ಖಡಕ್ಕಾಗಿದೆಯಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ