ಗ್ಲಾಮರಸ್ ಚೆಲುವೆ ಅಂಜಲಿ ಅನೀಶ್
ಯೋಗರಾಜ್ ಭಟ್ಟರ `ಮನದ ಕಡಲು, ಪದವಿ ಪೂರ್ವ' ಸಿನಿಮಾಗಳಲ್ಲಿ ಮಿಂಚಿದ್ದ ಕ್ಯೂಟ್ ಹಾಗೂ ಗ್ಲಾಮರಸ್ ಚೆಲುವೆ ಅಂಜಲಿ ಅನೀಶ್. ನಟ ರಿಷಿ ಅಭಿನಯದ `ಅನಂತ ಪದ್ಮನಾಭ' ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಪಕ್ಕದ್ಮನೆ ಹುಡುಗಿ ಪಾತ್ರದಲ್ಲಿ ಗಮನ ಸೆಳೆದರು. ಸಾಲು ಸಾಲು ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಿಗೆ ನಾಯಕಿಯಾಗುತ್ತಿರುವ ಅಂಜಲಿ, ನಾನು ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ. ನಿಧಾನವಾದರೂ ಪರವಾಗಿಲ್ಲ, ಗಟ್ಟಿತನದ ನಟನೆಗೆ ಅವಕಾಶ ನೀಡುವ ಪಾತ್ರಗಳನ್ನಷ್ಟೇ ಆಯ್ಕೆ ಮಾಡುತ್ತೇನೆ, ಎನ್ನುತ್ತಾರೆ ಈ ಗ್ಲಾಮರಸ್ ಬೊಂಬೆ.

ಎಲ್ಲಾ ಪಾತ್ರಕ್ಕೂ ಸೂಟ್ ಆಗುವ ಹೃತಿಕಾ
ಸ್ಯಾಂಡಲ್ ವುಡ್ ಟಾಲಿವುಡ್ ನಲ್ಲಿ ಏಕಕಾಲಕ್ಕೆ ಬ್ಯುಸಿಯಾದ ಕನ್ನಡತಿ ಹೃತಿಕಾ ಶ್ರೀನಿವಾಸ್, `ಸೌಂಡ್ ಪಾರ್ಟಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕನ್ನಡದ ಜೊತೆ ತೆಲುಗಿನ `ಅಲ್ಲಂಥ ದೂರಾವಾ' ಸೇರಿದಂತೆ ಇನ್ನೂ ಹಲವು ಸಿನಿಮಾಗಳ ಆಫರ್ ಅವರ ಕೈಯಲ್ಲಿವೆ. ಹೃತಿಕಾ ಶ್ರೀನಿವಾಸ್‌ಇದೀಗ `ಜಾಕಿ 42' ಸಿನಿಮಾದ ನಾಯಕಿ. ಮಾಡರ್ನ್ ಹಾಗೂ ಹೋಮ್ಲಿ ಪಾತ್ರಗಳಿಗೂ ಸೂಟ್ ಆಗುವ ಹೃತಿಕಾ, ಇದಕ್ಕೂ ಮುನ್ನ ಯೋಗರಾಜ್ ಭಟ್ ನಿರ್ಮಾಣದ `ಉಡಾಳ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಭಿಷೇಕ್ ಶೆಟ್ಟಿ ನಿರ್ದೇಶನದ `ನಮ್ ಗಣಿ ಬಿಕಾಂ ಪಾಸ್' ಚಿತ್ರದ ಸೀಕ್ವೆಲ್ ನಲ್ಲೂ ನಟಿಸಿದ್ದಾರೆ.

ಬಿಂದಾಸ್ ಬೆಡಗಿ ಸಂಗೀತಾ
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಸಂಗೀತಾ ಭಟ್, ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ `ಪಂಜರದ ಗಿಣಿ, ಭಾಗ್ಯವಂತರು, ಚಂದ್ರಚಕೋರಿ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿ, `ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ, ಕಿಸ್ಮತ್, ಅಳಿದು ಉಳಿದವರು, ಕಪಟ ನಾಟಕ ಪಾತ್ರಧಾರಿ, ಅನುಕ್ತಾ, ಆದ್ಯಾ, ಕ್ಲಾಂತಾ' ಚಿತ್ರಗಳಲ್ಲಿ ಅಭಿನಯಿಸಿದ್ದು, ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸಂಗೀತಾ ಭಟ್ ಗೆ ಹೆಸರು ತಂದುಕೊಟ್ಟ ಚಿತ್ರ `ಎರಡನೇ ಸಲ.'

ಚಿಕ್ಕೆಜಮಾನಿಯಾದ ಅಕ್ಷತಾ ದೇಶಪಾಂಡೆ
ಕಿರುತೆರೆಯ `ಅಮೃತವರ್ಷಿಣಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಕ್ಷತಾ ದೇಶಪಾಂಡೆ, `ಮತ್ತೆ ವಸಂತ, ಕಾವ್ಯಾಂಜಲಿ, ಕಥೆಯೊಂದು ಶುರುವಾಗಿದೆ,' ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದರು. `ಕಥೆಯೊಂದು ಶುರುವಾಗಿದೆ' ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಅಕ್ಷತಾ, ಇದೀಗ `ಚಿಕ್ಕೆಜಮಾನಿ' ಸೀರಿಯಲ್ ಮೂಲಕ ಕಿರುತೆರೆಗೆ ಮತ್ತೆ ಮರಳಿದ್ದಾರೆ. ತೆಲುಗಿನ `ನಿನ್ನು ಕೋರಿ' ಸೀರಿಯಲ್ ನಲ್ಲೂ ಅಭಿನಯಿಸಿದ ಅಕ್ಷತಾ, ತಮಿಳಿನ `ಅನಾಮಿಕ' ಧಾರಾವಾಹಿಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಕಾಂತಾರಾದ ಸೈಲೆಂ ಟ್ ಸುಂದರಿ ಆಯ್ರಾ ಕೃಷ್ಣ
ಬ್ಲಾಕ್ ಬಸ್ಟರ್ `ಕಾಂತಾರಾ ಚಾಪ್ಟರ್-1' ಸಿನಿಮಾದಲ್ಲಿ ಒಂದೇ ಒಂದು ಡೈಲಾಗ್ ಹೇಳದೆ, ತಮ್ಮ ಕಣ್ಣೋಟದಿಂದಲೇ ಹಲವರ ಗಮನಸೆಳೆದ ಚೆಲುವೆ. ರಾಜ ಕುಲಶೇಖರನ ಪತ್ನಿ ಪಾತ್ರಧಾರಿ ನಟಿ ಆಯ್ರಾ ಕೃಷ್ಣ. ಸ್ಯಾಂಡಲ್ ವುಡ್ ನಲ್ಲಿ `ಧರಣಿಮಂಡಲ ಮಧ್ಯದೊಳಗೆ, ನನ್ನ ಪ್ರಕಾರ, ನೋಡಿದವರು ಏನಂತಾರೆ,' ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಅವರ ಥ್ರಿಲ್ಲರ್ ಡ್ರಾಮ ಬಿಡುಗಡೆಯಾಗಬೇಕಿದೆ. ಕನ್ನಡದಲ್ಲಿ ಉತ್ತಮ ಚಿತ್ರಗಳು ಬರಬೇಕು. ಅದರಲ್ಲಿ ತಾನು ನಟಿಸುವ ಇರಾದೆಯೂ ಇದೆ ಎನ್ನುತ್ತಾರೆ ಆಯ್ರಾ ಕೃಷ್ಣ.





