ಶರತ್ ಚಂದ್ರ 

15 ವರ್ಷಗಳ ಹಿಂದೆ ಅರವಿಂದ್ ಕೌಶಿಕ್ ಎಂಬ ಯುವಕ ದೊಡ್ಡ ನಿರ್ದೇಶಕನಾಗುವ ಕನಸು ಕಟ್ಟಿಕೊಂಡು ಗಾಂಧಿ ನಗರಕ್ಕೆ ಬಂದಿದ್ದರು ಆ ಟೈಮ್ ನಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದ್ದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಅನೀಶ್ ತೇಜೇಶ್ವರ್ ಈ ಮೂರು ಜನಕ್ಕೆ ಮೊದಲ ಬಾರಿ ತಮ್ಮ ಚಿತ್ರದ ಅವಕಾಶ ನೀಡಿದ್ದರು. ಆ ಚಿತ್ರ ದ ನಂತರ ಅರವಿಂದ್ ಕೌಶಿಕ್ ನಿರ್ದೇಶಿಸಿದ ತುಘಲಕ್ ಎಂಬ ಚಿತ್ರದಲ್ಲಿ ಮತ್ತೆ ರಿಷಬ್ ಮತ್ತು ರಕ್ಷಿತ್ ಗೆ ಅವಕಾಶ ನೀಡಿದ್ದರು.ನಂತರ ಅವರಿಬ್ಬರೂ ಬೇರೆ ಬೇರೆ ಚಿತ್ರಗಳಲ್ಲಿ ಅಭಿನಯಿಸಿ, ಸ್ಟಾರ್ ನಟರಾಗಿ ನಿರ್ದೇಶಕರಾಗಿ ಮೆರೆದದ್ದು ನಿಮಗೆಲ್ಲ ಗೊತ್ತಿದೆ.

1000608052

ಅರವಿಂದ್  ಪರಿಚಯಿಸಿದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ  ಇವತ್ತಿಗೆ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಬಹು ಎತ್ತರಕ್ಕೆ ಬೆಳೆದಿದ್ದಾರೆ 15ವರ್ಷಗಳಲ್ಲಿ.ಅರವಿಂದ್ ಅವರಿಗೆ ಹೇಳಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ.ಒಂದಷ್ಟು  ಬೆರಳೆಣಿಕೆಯ ಚಿತ್ರಗನ್ನು ನಿರ್ದೇಶಿಸಿದ ನಿರ್ದೇಶಕ ಅರವಿಂದ್ ಅವರಿಗೆ ಹೇಳಿಕೊಳ್ಳುವಂತ ಯಶಸ್ಸು ಸಿಕ್ಕಿರಲಿಲ್ಲ. ಸಮಯ ಸಿಕ್ಕಾಗ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿದ್ದ ಅರವಿಂದ್ ಕೌಶಿಕ್

ಕಳೆದ ವರ್ಷ ನಿರ್ದೇಶಿಸಿದ ಬಿಗ್ ಬಾಸ್ ಜೋಡಿ ಅರವಿಂದ್ ಮತ್ತು ದಿವ್ಯಾ ಉರುಡಗಾ ನಟಿಸಿದ 'ಅರ್ಧಂ ಭರ್ದ ಪ್ರೇಮ ಕಥೆ ' ಚಿತ್ರದ ಸೋಲು ಅರವಿಂದ ಕೆರಿಯರ್ ಎಂಡ್ ಆಯಿತೇನೋ ಅಂತ ಸ್ವತ: ಅರವಿಂದ್ ಗೆ ಅನಿಸಿರಬೇಕು.

1000608824

ಆದರೆ ಅರವಿಂದ್ ಕೌಶಿಕ್ ಅವರ ಜೀವನದಲ್ಲಿ ಹೊಸ ಬೆಳಕು ಮೂಡಿದೆ. ವಿಭಿನ್ನ ಕಥಯೊಂದನ್ನು ಉಪೇಂದ್ರ ಅವರಿಗೆ ಹೇಳಿ ಅವರನ್ನು ಒಪ್ಪಿಸಿದ್ದಾರೆ. ಚಿತ್ರದ ಪೋಸ್ಟರ್ ಅನ್ನು ನಿರ್ಮಾಪಕರು  ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ನೆಕ್ಸ್ಟ್ ಲೆವೆಲ್ ಎಂದು ಹೆಸರಿಡಲಾಗಿದೆ.

ಸ್ಕ್ರಿಪ್ಟ್ ನ್ನು ಉಪೇಂದ್ರ ಅವರು ಓಕೆ ಮಾಡುವುದರಿಂದ ಬಹುಶಃ ಸಿನಿಮಾ ಕೂಡ ನೆಕ್ಸ್ಟ್ ಲೆವೆಲ್ ನಲ್ಲಿ ಮೂಡಿ ಬರಬಹುದೇನೋ ಎಂದು ಅಭಿಮಾನಿಗಳು ನೀರೀಕ್ಷೆ ಮಾಡಿದ್ದಾರೆ.

1000608822

ಅಂದ ಹಾಗೆ ಈ ಚಿತ್ರಕ್ಕೆ ಈ ಹಿಂದೆ ಮಾಸ್ ಲೀಡರ್,ರಾಂಬೊ 2 ಹಾಗೂ ಈ ವರ್ಷದ ಆದಿಯಲ್ಲಿ ಬಂದ ಛೂ ಮಂತರ್ ಎಂಬ ಹಿಟ್ ಚಿತ್ರ ನೀಡಿದ ತರುಣ್ ಸ್ಟುಡಿಯೋನ ತರುಣ್ ಶಿವಪ್ಪ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಉಪೇಂದ್ರ ನಟಿಸುತ್ತಿರುವ ಸೂರಪ್ಪ ಬಾಬು ನಿರ್ಮಾಣದ ನಾಗಣ್ಣ ನಿರ್ದೇಶಿಸುತ್ತಿರುವ ಭಾರ್ಗವ ಚಿತ್ರದ ಚಿತ್ರೀಕರಣ ಮುಗಿದ ಕೂಡಲೇ ಈ ಆರಂಭವಾಗಲಿದೆಯಂತೆ.

ಒಟ್ಟಿನಲ್ಲಿ ಅರವಿಂದ್ ಕೌಶಿಕ್ ಎನ್ನುವ ಪ್ರತಿಭಾವಂತ ನಿರ್ದೇಶಕರಿಗೆ ಉಪೇಂದ್ರ ಕಾಲ್ ಶೀಟ್ ನೀಡುವುದರ ಮೂಲಕ ಅವರ ಪ್ರತಿಭೆ ಗುರುತಿಸಲು ಅವಕಾಶ ನೀಡಿದ್ದಾರೆ. ಒಬ್ಬ ನಿರ್ದೇಶಕ ಇನ್ನೊಬ್ಬ ನಿರ್ದೇಶಕರನ್ನು ಪ್ರೋತ್ಸಾಹಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ