ಜಾಗೀರ್ದಾರ್*

ಕನ್ನಡ ಚಿತ್ರರಂಗದ ಡೈರೆಕ್ಟರ್ಸ್‌ಗಳ ಡೈರೆಕ್ಟರ್ಸ್‌ ಎನಿಸಿಕೊಂಡಿರುವ ರಿಯಲ್‌ ಸ್ಟಾರ್‌ ಉಪೇಂದ್ರ ಈಗ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ ಬೆನ್ನತ್ತಿದ್ದಾರೆ. ಉಪೇಂದ್ರ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರಕ್ಕೆ ʼನೆಕ್ಸ್ಟ್‌ ಲೆವೆಲ್‌ʼ ಎಂಬ ಟೈಟಲ್‌ ಇಡಲಾಗಿದೆ. ಇದು ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಅರವಿಂದ್‌ ಕೌಶಿಕ್‌ ನಿರ್ದೇಶನದಲ್ಲಿ ತರುಣ್‌ ಶಿವಪ್ಪ ನಿರ್ಮಾಣದಲ್ಲಿ ನೆಕ್ಸ್ಟ್‌ ಲೆವೆಲ್‌ ಸಿನಿಮಾ ಮೂಡಿ ಬರುತ್ತಿದೆ.

panindia

ಉಪೇಂದ್ರ ಅವರ ಸಿನಿಮಾಗಳು ಅಂದ್ರೆ ನೆಕ್ಸ್ಟ್‌ ಲೆವೆಲ್‌ ಇರುತ್ತದೆ. ಈಗ ನೆಕ್ಸ್ಟ್‌ ಲೆವೆಲ್‌ ಸಿನಿಮಾವನ್ನು ಮತ್ತೊಂದು ಲೆವೆಲ್‌ಗೆ ತಯಾರಿಸಲು ಚಿತ್ರತಂಡ ಸಜ್ಜಾಗಿದೆ. ನಿರ್ಮಾಪಕ ತರುಣ್‌ ಶಿವಪ್ಪ ಅವರ ತರುಣ್‌ ಸ್ಟುಡಿಯೋಸ್‌ ಬ್ಯಾನರ್‌ ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಂಸ್ಥೆಯಡಿ ತಯಾರಾಗುತ್ತಿರುವ ಚೊಚ್ಚಲ ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಪ್ಯಾನ್‌ ಪ್ರೇಕ್ಷಕರನ್ನು ಗುರಿಯಾಗಿ ಇಟ್ಟುಕೊಂಡೆ ಸಿನಿಮಾ ಮಾಡಲಾಗುತ್ತದೆ.

ನೆಕ್ಸ್ಟ್‌ ಲೆವೆಲ್‌ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ಮಾಪಕ ತರುಣ್‌ ಶಿವಪ್ಪ, "ತರುಣ್‌ ಸ್ಟುಡಿಯೋಸ್‌ ಬ್ಯಾನರ್‌ ನಡಿ ನಿರ್ಮಾಣವಾಗುತ್ತಿರುವ ಆರನೇ ಚಿತ್ರವಿದು. ಬಾಲಿವುಡ್‌ ತೆಲುಗು, ತಮಿಳು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ ಎ, ಉಪೇಂದ್ರ ಸ್ಟೈಲ್‌ನಲ್ಲಿ ನೆಕ್ಸ್ಟ್‌ ಲೆವೆಲ್‌ ಸಿನಿಮಾ ಇರಲಿದೆ. ಸದ್ಯ ಪ್ರೀ ಪ್ರೊಡಕ್ಷನ್‌ ವರ್ಕ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ" ಎಂದು ತಿಳಿಸಿದ್ದಾರೆ.

ರೋಸ್, ಮಾಸ್ ಲೀಡರ್, ವಿಕ್ಟರಿ-2, ಖಾಕಿ, ಛೂ ಮಂತರ್‌ ಸಿನಿಮಾಗಳನ್ನು ತರುಣ್‌ ಶಿವಪ್ಪ ನಿರ್ಮಾಣ ಮಾಡಿದ್ದಾರೆ. 'ನಮ್ ಏರಿಯಾಲ್ ಒಂದಿನ', 'ತುಗ್ಲಕ್', 'ಹುಲಿರಾಯ' ಹಾಗೂ 'ಶಾರ್ದೂಲʼ ಚಿತ್ರಗಳನ್ನು ಅರವಿಂದ್‌ ಕೌಶಿಕ್‌ ನಿರ್ದೇಶಿಸಿದ್ದರು. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವ ಬುದ್ಧಿವಂತ ನಿರ್ದೇಶಕ ಉಪೇಂದ್ರ ಜೊತೆ ಅರವಿಂದ್‌ ಕೌಶಿಕ್‌ ಹಾಗೂ ತರುಣ್‌ ಶಿವಪ್ಪ ಕೈ ಜೋಡಿಸಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ