- ರಾಘವೇಂದ್ರ ಅಡಿಗ ಎಚ್ಚೆನ್.

ರಾಕಿಂಗ್ ಸ್ಟಾರ್ ಯಶ್  ಕ್ರೇಜ್ ಎಲ್ಲೆಡೆ ಇದೆ. ಲೇಡಿ ಫ್ಯಾನ್ಸ್ ಕೂಡ ಇದ್ದಾರೆ. ಆದರೆ, ನಿಮ್ಮನ್ನೆ ಮದ್ವೆ ಆಗ್ತೀನಿ ಅಂತ ಯಾವ ಹುಡುಗಿನೂ ಇಲ್ಲಿವರೆಗೂ ದುಂಬಾಲು ಬಿದ್ದಿರಲಿಲ್ಲ. ಹಾಗಿರೋವಾಗ ಇಲ್ಲೊಬ್ಬ ಹುಡಿಗಿ ಇದ್ದಾಳೆ. ಈ ಬೆಡಗಿಯ ಕನಸು ಒಂದೇನೆ ಇದೆ. ಶಾಲಾ ದಿನಗಳಿಂದಲೂ ಈಕೆಯದ್ದು ಒಂದೇ ಆಸೆ. ಅದು ಜೀವನದ ಪರಮ ಗುರಿ ಕೂಡ ಆಗಿದೆ. ನಿಜ, ಈ ಹುಡುಗಿಯ ಹೆಸರು ಲಲಿತಾ ಅಂತಲೇ ಇದೆ. ಆದರೆ, ಇದು ಸೀರಿಯಲ್ ಕಥೆ ನೋಡಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ  ಬರ್ತಿರೋ ಹೊಸ ಸೀರಿಯಲ್ ಇದಾಗಿದೆ. ಇದರ ಕಂಪ್ಲೀಟ್ ಹೆಸರು ಜೈಲಲಿತಾ ಅಂತಲೇ ಇದೆ. ಇದರ ಪ್ರೋಮೋ ಸಖತ್ ಆಗಿದೆ..

suvarna 1

ಜೈಲಲಿತಾ ಸೀರಿಯಲ್ ಕಾನ್ಸೆಪ್ಟ್ ವಿಶೇಷವಾಗಿದೆ. ರಾಕಿಂಗ್ ಸ್ಟಾರ್ ಯಶ್ ಮದ್ವೆ ಆಗ್ಬೇಕು ಅನ್ನುವ ಹುಡ್ಗಿಯ ಕಥೆ ಇದಾಗಿದೆ. ಬಾಲ್ಯದಲ್ಲಿ ನೀನು ಏನ್ ಆಗ್ಬೇಕು ಅಂತ ಕೇಳುವ ಟೀಚರ್‌ಗೆ ಆ ಹುಡುಗಿ ಏನ್ ಹೇಳ್ತಾರೆ ಗೊತ್ತೇ? ಹೌದು, ನಾನು ದೊಡ್ಡವಳಾದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಮದ್ವೆ ಆಗ್ತೀನಿ ಅಂತಲೇ ಹೇಳುವ ಅಪ್ಪಟ್ಟ ಫ್ಯಾನ್ ಈ ಹುಡುಗಿ.
ಈ ಹುಡುಗಿಯ ಹೆಸರು ಲಲಿತಾ ಅಂತಲೇ ಇದೆ. ಜೈಲಲಿತಾ ಯಾವಾಗ ಆಗ್ತಾಳೆ ಅನ್ನೋದು ಮುಂದಿನ ದಿನಗಳಲ್ಲಿಯೇ ತಿಳಿಯುತ್ತದೆ. ಸ್ಟಾರ್ ಸ್ಟುವರ್ಣ ವಾಹಿನಿ ಈ ಒಂದು ಜೈಲಲಿತಾ ಸೀರಿಯಲ್‌ನ ಪ್ರೋಮೋವನ್ನ ಅಧಿಕೃತವಾಗಿಯೇ ಈಗ ರಿಲೀಸ್ ಮಾಡಿದೆ. ಈ ಮೂಲಕ ನಮ್ಮ ಮುಂದಿನ ಹೊಚ್ಚ ಹೊಸ ಸೀರಿಯಲ್ ಇದೇ ನೋಡಿ ಅಂತಲೂ ಹೇಳಿದೆ.

suvarna 2

ಜೈಲಲಿತಾ ಸೀರಿಯಲ್ ಅಲ್ಲಿರೋ ಲಲಿತಾ ಪಾತ್ರವನ್ನ ಮನಸ್ವಿ ಮಾಡಿದ್ದಾರೆ. ಮನಸ್ವಿ ಈ ಹಿಂದೆ ಉದಯ ಟಿವಿಯಲ್ಲಿ ಬರ್ತಿದ್ದ ನಾತಿಚರಾಮಿ ಸೀರಿಯಲ್ ನಾಯಕಿ ಆಗಿದ್ದರು.
ಈಗ ಜೈಲಲಿತ ಮಾಡುತ್ತಿದ್ದಾರೆ. ಈ ಒಂದು ಸೀರಿಯಲ್ ಅಲ್ಲಿ ಇವರ ಪಾತ್ರ ವಿಭಿನ್ನವಾಗಿಯೇ ಇದೆ. ತರ್ಲೆ, ತಮಾಷೆ, ಕಾಮಿಡಿ, ಬೋಲ್ಡ್‌ ಹೀಗೆ ಎಲ್ಲವೂ ಆಗಿರೋ ಪಾತ್ರದ ಈ ಸೀರಿಯಲ್, ಸ್ಟಾರ್ ಸುವರ್ಣದ ವಸುದೇವ ಕುಟುಂಬ ಲಾಂಚ್ ಆದ್ಮೇಲೆ ಶುರು ಆಗುತ್ತಿದೆ.
ಜೈಲಲಿತಾ ಸೀರಿಯಲ್ ಅನ್ನ ದರ್ಷಿತ್ ಭಟ್ ಡೈರೆಕ್ಷನ್ ಮಾಡುತ್ತಿದ್ದಾರೆ. ಶ್ರೀನಿಧಿ ಡಿ.ಎಸ್. ಈ ಸೀರಿಯಲ್ ಅನ್ನ ನಿರ್ಮಿಸುತ್ತಿದ್ದಾರೆ. ಹಾಗೇನೆ ಈ ಸೀರಿಯಲ್ ವಿಶೇಷವಾಗಿಯೇ ಇದೆ ಅನಿಸುತ್ತಿದೆ. ಸೀರಿಯಲ್‌ನ ಈ ಹಿಂದಿನ ಆ ಎಲ್ಲ ಫಾರ್ಮ್ಯಾಟ್ ಅನ್ನ ಬಿಟ್ಟು ಬರ್ತಿರೋ ಸೀರಿಯಲ್ ಇದಾಗಿದೆ.
ಇದನ್ನ ವಿಭಿನ್ನವಾಗಿಯೇ ಹೇಳುವ ಕೆಲಸ ಇಲ್ಲಾಗುತ್ತಿದೆ. ಸೀರಿಯಲ್ ಪ್ರೋಮೋ ನೋಡಿದ್ರೇನೆ ಅದು ಅರ್ಥ ಆಗುತ್ತದೆ. ಅದು ಬಿಟ್ಟರೆ ಈ ಸೀರಿಯಲ್‌ ತನ್ನ ಪ್ರೋಮೋದಿಂದಲೇ ಈಗಲೇ ಗಮನ ಸೆಳೆಯುತ್ತಿದೆ ಅಂತಲೇ ಹೇಳಬಹುದು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ