ಸಾಮನ್ಯವಾಗಿ ಒಂದು ದೊಡ್ಡ ಮರದ ಕೆಳಗೆ ಚಿಗುರುವ ಸಣ್ಣ ಗಿಡಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಗುವುದಿಲ್ಲ. ಬಹಳಷ್ಟು ಸಮಯದಲ್ಲಿ ಆಂತಹ ಗಿಡಗಳನ್ನು ಕಳೆ ಎಂದು ಭಾವಿಸಿ ಕಿತ್ತು ಹಾಕುವುದೇ ರೂಢಿಯಲ್ಲಿದೆ. ಆದರೆ  ಕೆಲವೊಂದು ಬಾರಿ ಅಂತಹ ಎಲ್ಲಾ ಅಡೆತಡೆಗಳನ್ನೂ ಮೀರಿ ಗಿನ್ನಿಸ್ ದಾಖಲೆ ಮಾಡುವಷ್ಟು ಎತ್ತರಕ್ಕೆ ಬೆಳೆದರೂ ಎಲೆಮರೆ ಕಾಯಿಯಂತೆಯೇ ಜೀವಿಸಿದ ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ  ಶ್ರೀಮತಿ ಆಶಾ ಭೋಸ್ಲೆ  2026ರ ಏಪ್ರಿಲ್ 12ರ  ಮಧ್ಯಾಹ್ನ ತಮ್ಮ 92 ವರ್ಷ ವಯಸ್ಸಿನಲ್ಲಿ ವಯೋ ಸಜಹ ಖಾಯಿಲೆಗಳಿದಾಗಿ ನಿಧನ ಹೊಂದುವ ಮೂಲಕ ಭಾರತೀಯ ಸಂಗೀತಲೋಕದ ಧೃವತಾರೆಯೊಂದು ಮರೆಯಾಗಿ ಹೋಗಿದೆ.

ಸೆಪ್ಟೆಂಬರ್ 8, 1993ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ ಗೋರ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ, ಖ್ಯಾತ ಸಂಗೀತಗಾರು ಮತ್ತು ರಂಗಭೂಮಿ ಕಲಾವಿದರಾಗಿದ್ದ ಶ್ರೀ ದೀನಾನಾಥ್ ಮಂಗೇಶ್ಕರ್ ಕುಟುಂಬದ ಐದು ಜನ ಮಕ್ಕಳಲ್ಲಿ ಎರಡನೇ ಮಗಳಾಗಿ ಆಶಾ ಅವರ ಜನನವಾಗುತ್ತದೆ. ಆಕೆಗೆ ಕೇವಲ ಒಂಬತ್ತು ವರ್ಷ ವಯಸ್ಸಿನಲ್ಲೇ ಅವರ ತಂದೆಯವರ ಅಕಾಲಿಕ ಮರಣಹೊಂದಿದಾಗ, ಪೂನಾ ದಿಂದ ಕೊಲ್ಹಾಪೂರ್‌ಗೆ ಮತ್ತು ಅಲ್ಲಿಂದ ಮುಂಬಯಿಗೆ ವಲಸೆ ಬರುತ್ತದೆ. ಕುಟುಂಬದ ನಿರ್ವಹಣೆಗಾಗಿ ಆಶಾ ಅವರ ಸಹೋದರಿ ಲತಾ ಮಂಗೇಶ್ಕರ್ ಸಣ್ಣ ವಯಸ್ಸಿನಲ್ಲಿಯೇ ಚಲನ ಚಿತ್ರಗಳಲ್ಲಿ  ಹಾಡುವುದು ಮತ್ತು  ನಟಿಸುವುದನ್ನು ಪ್ರಾರಂಭಿಸಿದಾಗ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತೆ ಆಶಾ ಆವರೂ ಸಹಾ ತನ್ನ ಅಕ್ಕನಂತೆಯೇ ದೈವದತ್ತವಾಗಿ ಬಂದಿದ್ದ ಕಂಠಸಿರಿ ಮತ್ತು ಸಂಗೀತ ಜ್ಞಾನದಿಂದ ಹಂಸರಾಜ್ ಅವರ  ಬೆಲ್ಹ್‌ರ ಚುನಾರಿಯಾ (1948) ಚಿತ್ರಕ್ಕಾಗಿ ಸಾವನ್ ಆಯಾ ಗೀತೆಯ ಮೂಲಕ  ಹಿಂದಿ ಚಲನ ಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿ ರಾತ್ ಕಿ ರಾಣಿ (1949) ಚಿತ್ರದಲ್ಲಿ ಸ್ವತ್ರಂತ್ರ ಗಾಯಕಿಯಾಗುತ್ತಾರೆ.

ಅಕ್ಕ ತಂಗಿಯರ ಗಾಯನ ಮತ್ತು ನಟನೆಯಿಂದಾಗಿ ಅವರ ಕೌಟುಂಬಿಕೆ ಜೀವನ ಎಲ್ಲವೂ ಒಂದು ಹಂತಕ್ಕೆ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ, ಹುಚ್ಚು ಕೋಡಿ ಮನಸ್ಸು  ಹದಿರಾರರ ವಯಸ್ಸು ಎನ್ನುವಂತೆ ಸಂಪ್ರದಾಯಸ್ಥ ಮನತನದ ಕೇವಲ 16 ವರ್ಷ ವಯಸ್ಸಿನ ಆಶಾ, ತನ್ನ ಆಕ್ಕ ಲತಾ ಮಂಗೇಶ್ಕರ್ ಅವರ ಮ್ಯಾನೇಜರ್ ಆಗಿದ್ದ ಮತ್ತು ತಮಗಿಂತ 15 ವರ್ಷ ದೊಡ್ಡವರಾಗಿದ್ದ ಗಣಪತ್‌ರಾವ್ ಭೋಸ್ಲೆ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಅವರ ಮನೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸುತ್ತದೆ. ತಂಗಿಯ ಈ ವರ್ತನೆಯಿಂದ ಬೇಸರಗೊಂಡ ಅಕ್ಕ ಲತಾ ಮಂಗೇಶ್ಕರ್ ಅವರು ಬಹಳ ವರ್ಷಗಳ ಕಾಲ ತನ್ನ ತಂಗಿಯೊಂದಿಗೆ ಸಂಬಂಧ ಬಿಡಿ ಮಾತನಾಡುವುದನ್ನೂ ನಿಲ್ಲಿಸಿರುತ್ತಾರೆ.

ಹೀಗೆ ಕೇವಲ 16 ವರ್ಷದಲ್ಲೇ ಆಶಾ ಮಂಗೇಶ್ಕರ್ ಆಶಾ ಭೋಸ್ಲೆಯಾಗಿ ಗಣಪತ್‌ರಾವ್  ಅವರ ಮನೆಗೆ ಬಂದಾಗ ಆ ಮನೆಯವರೂ ಸಹಾ  ಸಂಪ್ರದಾಯವಾದಿಗಳಾಗಿದ್ದರಿಂದ, ಸಿನಿಮಾ ಕ್ಷೇತ್ರದಲ್ಲಿ ಬೆಳೆಯುತ್ತಿದ್ದ ಒಬ್ಬ ಗಾಯಕಿಯನ್ನು ಸೊಸೆಯಾಗಿ ಸ್ವೀಕರಿಸಲು  ನಿರಾಕರಿಸಿದಾಗ, ದಾಂಪತ್ಯದ ಕಹಿ ಅನುಭವ ಅವರಿಗೆ ಅನುಭವಕ್ಕೆ ಬರುತ್ತದೆ. ಅವರ ಪತಿ ಗಣಪತ್‌ರಾವ್ ಅವರಿಗೆ ಆಶಾ  ತನ್ನ ತವರು ಮನೆಯವರೊಂದಿಗೆ ಅಥವಾ ಲತಾ ಮಂಗೇಶ್ಕರ್ ಅವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದನ್ನು ಇಷ್ಟಪಡುತ್ತಿರಲಿಲ್ಲವಾದ್ದರಿಂದ ತನ್ನ ಅತ್ತೆಯ ಮನೆಯಲ್ಲಿ ಆಗುತ್ತಿದ್ದ ದೌರ್ಜನ್ಯವನ್ನು ಸಹಾ ತನ್ನ ತವರು ಕುಟುಂಬದೊಂದಿಗೆ ಹೇಳಿಕೊಳ್ಳಲಾಗದಂತಹ ಕೆಟ್ಟ ಪರಿಸ್ಥಿತಿಯನ್ನು ಆಶಾ ಅವರು ಅನುಭವಿಸಬೇಕಾಗುತ್ತದೆ. ಇಷ್ಟರ ಮಧ್ಯದಲ್ಲೇ  ಮಗ  ಹೇಮಂತ್ ಮತ್ತು ಮಗಳು ವರ್ಷಾ  ಅವರ ಜನನವಾಗಿ ಮೂರನೇ ಮಗು ಆನಂದ್ ನೀರೀಕ್ಷೆಯಲ್ಲಿದ್ದ ಗರ್ಭಿಣಿ  ಆಶಾ ಅವರನ್ನು ಆಕೆಯ ಪತಿಯ ಮನೆಯವರು ಮನೆಯಿಂದ ಹೊರಹಾಕಿದಾಗ, ಮತ್ತೆ ತಮ್ಮ ತವರಿನ ಆಶ್ರಯಕ್ಕೆ ಬರುತ್ತಾರೆ. ಹೀಗೆ ತನ್ನ ಮೊದಲ ಪತಿಯ ಮನೆಯಿಂದ ಅವಮಾನಕ್ಕೆ ಒಳಗಾದರೂ  ಅದನ್ನು ಎಂದಿಗೂ ಯಾರೊಂದಿಗೂ ಎತ್ತಿ ತೋರಿಸಿಕೊಳ್ಳದೇ ಜೀವನ ಪೂರ್ತಿ ತಮ್ಮ ಮೊದಲ ಗಂಡನ ಹೆಸರಿನೊಂದಿಗೆಯೇ ಆಶಾ ಭೋಸ್ಲೆಯಾಗಿಯೇ ಜೀವಿಸಿದ್ದು ಆಕೆಯ ಹೆಗ್ಗಳಿಕೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ