- ರಾಘವೇಂದ್ರ ಅಡಿಗ ಎಚ್ಚೆನ್.

ಬೆಳ್ಳಿ ಪರದೆ ಮೇಲೆ ಮತ್ತೊಂದು ಯುವ ಪಡೆಗಳ ತಂದ ವಿಭಿನ್ನ ಶೀಷಿಕೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ.

ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ , ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿರುವಂತಹ " ಆಸ್ಟಿನ್ ನ ಮಹನ್ಮೌನ " ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ  ಕಾರ್ಯಕ್ರಮವನ್ನು ಮಲ್ಲೇಶ್ವರಂ ನ ಎಸ್. ಆರ್. ವಿ ಪ್ರೀವ್ಯೂ ಥಿಯೇಟರ್ ನಲ್ಲಿ ಯೋಜನೆ ಮಾಡಿತ್ತು.

IMG-20250808-WA0010

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ , ನಿರ್ದೇಶಕ ಹಾಗೂ ನಿರ್ಮಾಪಕ ವಿನಯ್ ಕುಮಾರ್ ವೈದ್ಯನಾಥನ್ ಮಾತನಾಡುತ್ತಾ ನಾನು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಗಿಸಿದ ನಂತರ ಚಿತ್ರರಂಗದ ಬಗೆ  ಆಸಕ್ತಿ ಇದ್ದಿದ್ರಿಂದ , ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಹಲವು ವಿಭಾಗಗಳಲ್ಲಿ ಕೆಲಸ  ಮಾಡಿದ ಅನುಭವವಿದೆ, ಹಾಗೆಯೇ ಪುನೀತ್ ರಾಜಕುಮಾರ್ ಚಿತ್ರದಲ್ಲೂ  ಕೆಲಸ ಮಾಡಿದ್ದೆ. ನಂತರ ಕಿರು ಚಿತ್ರಗಳನ್ನ ನಿರ್ದೇಶನ ಮಾಡುತ್ತಾ ತಾಂತ್ರಿಕ ವಿಭಾಗದಲ್ಲಿ ಹೆಚ್ಚು ಅನುಭವವನ್ನು ಪಡೆದು ಕೊಂಡಿದ್ದೇನೆ. ಸುಮಾರು 13 ವರ್ಷಗಳ ನಂತರ ನನ್ನ ಕನಸು ಈಗ ನನಸಾಗುತ್ತಿದೆ. ಈ ಚಿತ್ರದಲ್ಲಿ ನಾನೇ ನಟಿಸಿ , ನಿರ್ದೇಶನದ  ಜೊತೆ ನಿರ್ಮಾಣ ಕೂಡ ಮಾಡಿದ್ದೇನೆ. ಈ ಚಿತ್ರದ ಟೈಟಲ್  ಕಥೆಗೆ ಸೂಕ್ತವಾಗಿದ್ದು , ಹಾಗಾಗಿ ಅದನ್ನೇ ಇಟ್ಟಿದ್ದೇನೆ. ಇಲ್ಲಿ ಯಾವುದೇ ಜಾತಿ , ಧರ್ಮದ ಕಥೆ ಒಳಗೊಂಡಿಲ್ಲ , ಇದೊಂದು ಪ್ಯೂರ್ ಎಮೋಷನಲ್ , ಲವ್ , ಥ್ರಿಲ್ಲಿಂಗ್  ಕಥೆಯನ್ನು ಒಳಗೊಂಡಿದೆ. ಆಸ್ಟಿನ್ ಎನ್ನುವುದು ನಾಯಕನ ಪಾತ್ರದ ಹೆಸರು, ಈ ಚಿತ್ರದಲ್ಲಿ ನನ್ನದು ಎರಡು ಶೇಡ್ ಗಳಲ್ಲಿ ಬರುವಂತಹ ಪಾತ್ರ. ಅದು ಯಾಕೆ ಏನು ಎಂಬುದನ್ನು ನೀವು ತಿಳಿಯ ಮೇಲೆ ನೋಡಬೇಕು. ಈ ಚಿತ್ರದಲ್ಲಿ ಇರುವ ಎಲ್ಲಾ  ಪಾತ್ರಗಳು ಕ್ರಿಶ್ಚಿಯನ್ ಧರ್ಮದಾಗಿದ್ದು , 90ರ ಕಾಲಘಟ್ಟದಲ್ಲಿ ನಡೆಯುವ  ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು  ಒಳಗೊಂಡಿದೆ.

2023 ರಲ್ಲಿ ಆರಂಭಗೊಂಡ ಈ ಚಿತ್ರ ಮೈಸೂರು , ಹೊನ್ನಾವರ ಹಾಗೂ ಚಿಕ್ಕಮಗಳೂರು ಸೇರಿದಂತೆ ಸುಮಾರು 23 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡದಿದ್ದೇವೆ. ನಮ್ಮ ಚಿತ್ರ ಸೆಪ್ಟಂಬರ್ 5ರಂದು  ರಾಜ್ಯದ್ಯಂತ ಕೆ .ಆರ್. ಜೆ  ಫಿಲ್ಮ್ಸ್  ಮೂಲಕ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ. ನನ್ನ ಬಹುದಿನದ ಶ್ರಮದ ಚಿತ್ರ ಇದಾಗಿದ್ದು , ನಿಮ್ಮೆಲ್ಲರ ಪ್ರೀತಿ , ಸಹಕಾರ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.

IMG-20250808-WA0013

ಈ ಚಿತ್ರದ ನಾಯಕಿ ರಿಷಾ ಗೌಡ ಮಾತನಾಡುತ್ತಾ ನಾನು ಮೂಲತಃ ಮೈಸೂರಿನವಳು , ಕಲಾ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡಿಕೊಂಡು  ಬಂದಿದ್ದೇನೆ. ಇದು ನನ್ನ ಮೂರನೇ ಚಿತ್ರ. ಹೀರೋಯಿನ್ ಗಳನ್ನು ಗ್ಲಾಮರಸ್ ಪಾತ್ರಗಳಿಗೆ ಹೆಚ್ಚು ಬಳಸಿಕೊಳ್ಳುತ್ತಾರೆ, ಆದರೆ ಈ ಚಿತ್ರದಲ್ಲಿ ನಿರ್ದೇಶಕರು ನನಗೆ ಒಂದು ಉತ್ತಮ ಪಾತ್ರ ನೀಡಿದ್ದು , ಹೋಮ್ಲಿ ಹುಡುಗಿಯಾಗಿ ಅಭಿನಯಿಸಿದ್ದೇನೆ. ಚಿತ್ರದ ಕಂಟೆಂಟ್ ನೋಡಿ  ಒಪ್ಪಿಕೊಂಡಿದ್ದೆ.  ಚಿತ್ರ ಸೊಗಸಾಗಿ ಬಂದಿದೆ , ನಮ್ಮನ್ನ  ಹರಸಿ , ಬೆಳೆಸಿ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ