- ರಾಘವೇಂದ್ರ ಅಡಿಗ ಎಚ್ಚೆನ್.
ಬೆಳ್ಳಿ ಪರದೆ ಮೇಲೆ ಯುವ ಪ್ರತಿಭೆಗಳ ತಂಡ ನಿರ್ಮಾಣದ ವಿಭಿನ್ನ ಪ್ರಯತ್ನದ "ಆಸ್ಟಿನ್ ನ ಮಹನ್ಮೌನ" ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನ ಜಿ ಟಿ ಮಾಲ್ ನಲ್ಲಿರುವ ಎಂ. ಎಂ .ಬಿ ಲೆಗಸಿಯಲ್ಲಿ ಆಯೋಜನೆ ಮಾಡಿದ್ದು , ಖ್ಯಾತ ನಿರ್ಮಾಪಕ ಕೆ. ಮಂಜು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಚಿತ್ರದ ಟ್ರೈಲರ್ ಬಿಡುಗಡೆಗು ಮುನ್ನ , ಸಂಗೀತ ನಿರ್ದೇಶಕ ವಿಶ್ವಿ ಹಾಗೂ ತಂಡದ ವತಿಯಿಂದ ಸಿನಿಮಾದ ಹಾಡುಗಳ ಲೈವ್ ಇನ್ಸ್ಟ್ರುಮೆಂಟಲ್ ಪ್ರದರ್ಶನ ನಡೆಸಲಾಯಿತು. ನಮ್ಮ ನಾಡು ಕಂಡ ಪ್ರಖ್ಯಾತ ಕವಿ , ತತ್ವಜ್ಞಾನಿ , ಬರಹಗಾರ ಡಿವಿಜಿ ರವರ ಮೊಮ್ಮಗ ಸುಬ್ರಮಣಿ ರವರು ಬಂದಿದ್ದು ಮತ್ತೊಂದು ವಿಶೇಷ . ಇವರು ಈ ಚಿತ್ರದ ನಟ , ನಿರ್ದೇಶಕ , ನಿರ್ಮಾಪಕ
ವಿನಯ್ ಕುಮಾರ್ ವೈದ್ಯನಾಥನ್ ಸೋದರ ಮಾವ ಕೂಡ ಹೌದು. ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ಟ್ರೈಲರ್ ಬಿಡುಗಡೆ ಮಾಡಿದ ನಂತರ ನಿರ್ಮಾಪಕ ಕೆ. ಮಂಜು ಮಾತನಾಡುತ್ತಾ ನಾನು ಈ ಕಾರ್ಯಕ್ರಮಕ್ಕೆ ಬರಲು ಮುಖ್ಯ ಕಾರಣ ನಮ್ಮ ಗುರುಗಳಾದ ಸುಬ್ರಮಣಿ , ಇವರು ಬೇರೆ ಯಾರು ಅಲ್ಲ ಡಿವಿಜಿ ಅವರ ಮೊಮ್ಮಗ, ಅವರ ಅಳಿಯ ನಟಿಸಿ , ನಿರ್ಮಿಸುತ್ತಿರುವ ಈ ಚಿತ್ರದ ಟ್ರೈಲರ್ ಬಹಳ ವಿಭಿನ್ನವಾಗಿ ಬಂದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳು ಯಶಸ್ಸನ್ನ ಗಳಿಸುತ್ತಿದೆ. ಆ ಸಾಲಿನಲ್ಲಿ ಈ ಚಿತ್ರವು ಸಾಗಲಿ. ನಟ ವಿನಯ್ ಬಹಳಷ್ಟು ಕಲಿತುಕೊಂಡಿದ್ದಾನೆ , ಸಿನಿಮಾ ಬಗ್ಗೆ ಚೆನ್ನಾಗಿ ತಿಳಿದುಕೊಂಡು ವರ್ಷಗಟ್ಟಲೆ ಕೆಲಸ ಮಾಡಿದ್ದಾನೆ.
ಈ ಚಿತ್ರವನ್ನು ಕೆ ಆರ್ ಜಿ ಫಿಲಂಸ್ ರಿಲೀಸ್ ಮಾಡುತ್ತಿದ್ದು , ಹೆಚ್ಚು ಮಲ್ಟಿಪ್ಲೆಕ್ಸ್ ನಲ್ಲೆ ರಿಲೀಸ್ ಮಾಡು ಎಂದಿದ್ದೇನೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು. ಇನ್ನು ನಟ ವಿನಯ್ ಸೋದರಮಾವ ಸುಬ್ರಮಣಿ ಮಾತನಾಡುತ್ತಾ ನನ್ನ ತಂಗಿಯ ಮಗ ಇಂಜಿನಿಯರ್ ಓದಿದ್ದು , ಈ ಸಿನಿಮಾ ಕ್ಷೇತ್ರಕ್ಕೆ ಯಾಕೆ ಬಂದ ಎಂಬ ಪ್ರಶ್ನೆ ನನ್ನಲ್ಲಿ ಇತ್ತು. ಬರವಣಿಗೆ , ಸಾಹಿತ್ಯದ ಬಗ್ಗೆ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಿದ್ದಾನೆ. ವಿಲಿಯಮ್ಸ್ ಶೇಕ್ಸ್ಪಿಯರ್ ಮಾತಿನಂತೆ ' literature index of life'... ಎನ್ನುವಂತೆ ನಮ್ಮ ಹುಡುಗನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಕೊಡಿ , ಚಿತ್ರವನ್ನ ಯಶಸ್ವಿಗೊಳಿಸಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ನಟ , ನಿರ್ದೇಶಕ , ನಿರ್ಮಾಪಕನಾದ ವಿನಯ್ ಕುಮಾರ್ ವೈದ್ಯನಾಥನ್ ಮಾತನಾಡುತ್ತಾ ನಾನು ಎಲೆಕ್ಟ್ರಿಕಲ್ ಇಂಜಿನಿಯರ್ ಮುಗಿಸಿದ ನಂತರ ಸಿನಿಮಾ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದೆ. ಬಹಳಷ್ಟು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದು , ನಂತರ ಕಿರು ಚಿತ್ರಗಳನ್ನ ನಿರ್ದೇಶಿಸಿ ತನ್ನ 13 ವರ್ಷದ ನಿರಂತರ ಶ್ರಮದ ಫಲವಾಗಿ ಈಗ AVV ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಾಯಕ ನಟನಾಗಿ ಅಭಿನಯಿಸಿ , ನಿರ್ಮಿಸುವ ಮೂಲಕ ನಿರ್ದೇಶನವನ್ನ ನಿಭಾಯಿಸಿದ್ದಾನೆ. ಅದರಲ್ಲೂ ನಾನು ಪುನೀತ್ ರಾಜಕುಮಾರ್ ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ಚಿತ್ರಗಳಲ್ಲಿ ಕೆಲಸ ಮಾಡಿ ಬಹಳಷ್ಟು ಕಲ್ತಿದ್ದೇನೆ. ಈ ನಮ್ಮ "ಆಸ್ಟಿನ್ ನ ಮಹನ್ಮೌನ" ಚಿತ್ರದಲ್ಲಿ ಲವ್, ಥ್ರಿಲ್ಲಿಂಗ್ ಹಾಗೂ ಭಾವನಾತ್ಮಕ ಕಥೆಯನ್ನು ಒಳಗೊಂಡಿದೆ. ಈ ಮಹಾ ಮೌನದ ಹಿಂದಿರುವ ಘಟನೆಯೇ ಇಡಿ ಚಿತ್ರದ ಹೈಲೈಟ್. 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು ಒಳಗೊಂಡಿದೆ. ಪ್ಯೂರ್ ಎಮೋಷನಲ್ ಚಿತ್ರವಾಗಿದ್ದು, ಈ ಚಿತ್ರವು ಕೆಆರ್‌ಜೆ ಫಿಲಂಸ್ ಮೂಲಕ ಇದೇ ಸೆಪ್ಟೆಂಬರ್ 05ರಂದು ರಾಜ್ಯದ್ಯಂತ ರಿಲೀಸ್ ಮಾಡುತಿದ್ದೇವೆ, ನಮ್ಮ ಚಿತ್ರವನ್ನು ಥಿಯೇಟರ್ ಗೆ ಬಂದು ನೋಡಿ ಬೆಂಬಲಿಸಿ ಎಂದರು.