ಬರಲಿದೆ ಬೇಬೋಗೊಂದು ಬೇಬಿ!
ಬಾಲಿವುಡ್‌ನಲ್ಲಿ ಬೇಬೋ ಕರೀನಾ ಕಪೂರ್ ಬೇಬಿ ಬಂಪ್ ಜೊತೆ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದಳು. ಈ ಕ್ಷಣಗಳಲ್ಲಿ ಆಕೆ ಭಾವುಕಳಾಗಿ, ಈ ರಾಂಪ್ ವಾಕ್ ನನಗೆ ಸದಾ ಸ್ಮರಣೀಯ. ಏಕೆಂದರೆ ಮೊದಲ ಬಾರಿ ನಾನು ಗರ್ಭವತಿಯಾಗಿ ಹೀಗೆ ಕ್ಯಾಟ್‌ವಾಕ್ ಮಾಡುತ್ತಿದ್ದೇನೆ, ಎಂದಳು. ಕರೀನಾ ಡಿಸೈನರ್ ಸಬ್ಯಸಾಚಿಯ ಹಾಲಿಯಾ ಸಂಗ್ರಹದಿಂದ ಈ ಡ್ರೆಸ್ ಧರಿಸಿ ರಾಂಪ್ ವಾಕ್ ಮಾಡಿದ್ದಳು. ಭಾರೀ ಕಸೂತಿಯ ಹಸಿರು ಲಹಂಗಾ ಮತ್ತು ಕುರ್ತಿ ಸ್ಟೈಲ್ ಚೋಲಿ ಧರಿಸಿದ್ದಳು, ತಲೆಗೊಂದು ದುಪಟ್ಟಾ. ಇದರಲ್ಲಿ ಆಕೆ ರಾಜಮನೆತನದ ವಧುವಂತೆ ಶೋಭಿಸುತ್ತಿದ್ದಳು.
ವರುಣ್ ಜೊತೆ ಇಬ್ಬಿಬ್ಬರು
ಹಾಟ್‌ರಲ್ಲಿ ಬಂದಿದ್ದ `ಜುಡ್ವಾ' ಹಿಟ್ ಎನಿಸಿತ್ತು. ಅದರ ಸೀಕ್ವೆಲ್`ಜುಡ್ವಾ-2' ಈಗ ಬರುತ್ತಿದೆ. ಮೊದಲ ಚಿತ್ರ ಜ್ಯಾಕಿಚಾನ್‌ನ `ಟ್ವಿನ್ ಡ್ರಾಗನ್' ಆಧರಿಸಿತ್ತು. ಅಲ್ಲಿನ ಸಲ್ಮಾನ್ ಪಾತ್ರವನ್ನು ಈಗ ವರುಣ್ ನಿಭಾಯಿಸುತ್ತಿದ್ದಾನೆ. ಈತ ಈಗ ಪರಿಣಿತಿ ಹಾಗೂ ಜ್ಯಾಕಲೀನ್ ಇಬ್ಬರೊಂದಿಗೂ ಡಬಲ್ ರೋಲ್ ನಲ್ಲಿ ರೊಮಾನ್ಸ್ ನಡೆಸಲಿದ್ದಾನೆ. ಇವರಿಬ್ಬರೂ `ಡಿಶುಂ' ಚಿತ್ರದಲ್ಲಿ ಈಗಾಗಲೇ ವರುಣ್ ಜೊತೆ ನಟಿಸಿದ್ದಾರೆ, ಆದರೆ ಬೇರೆ ಪಾತ್ರಗಳಲ್ಲಿ. ಈಗ ಈ ಚಿತ್ರದ ಮುಖಾಂತರ ವರುಣ್‌ಗೆ ಪೂರ್ಣ ಪ್ರಮಾಣದ ನಾಯಕಿಯರಾಗಿದ್ದಾರೆ. ಅಂತೂ ಇಬ್ಬರು ಹಾಟಿಯರ ನೆಚ್ಚಿನ ನಾಯಕ ಆಗಲಿದ್ದಾನೆ ವರುಣ್.
ತಾಪಸಿ ಆಗಲಿದ್ದಾಳೆ ಇರೋಮ್
ಶರ್ಮಿಳಾ`ಬೇಬಿ' ಚಿತ್ರದ ಆ್ಯಕ್ಷನ್ ಪಾತ್ರದಿಂದ ಹೆಚ್ಚಿನ ಚರ್ಚೆಗೆ ಬಂದ ದಕ್ಷಿಣದ ನಟಿ ತಾಪಸಿ ಪನ್ನು `ಪಿಂಕ್' ಚಿತ್ರದಲ್ಲೂ ಒಳ್ಳೆಯ ಹೆಸರು ಗಳಿಸಿದ್ದಾಳೆ. `ಅಲಿಗ್' ತಯಾರಿಸುತ್ತಿರುವ ಹಸನ್ ಮೆಹ್ತಾ, ಮಣಿಪುರದ ಐರನ್ ಲೇಡಿ ಇರೋಮ್ ಶರ್ಮಿಳಾಳ ಕುರಿತಂತೆ `ಇಂಫಾಲ್' ಚಿತ್ರ ತಯಾರಿಸಲಿದ್ದಾರೆ. ಇದಕ್ಕಾಗಿ ತಾಪಸಿಯನ್ನು ಶರ್ಮಿಳಾ ಪಾತ್ರಕ್ಕಾಗಿ ಆರಿಸಿದರಂತೆ. ನಂಬಲರ್ಹ ಮೂಲಗಳ ಪ್ರಕಾರ ತಾಪಸಿ ಬಲು ಖುಷಿಯಿಂದ ಶರ್ಮಿಳಾಳ ಬಯೋಪಿಕ್ ಚಿತ್ರಕ್ಕೆ ಒಪ್ಪಿದ್ದಾಳಂತೆ.ಇಷ್ಟು ಕೋಪ ಏಕೆ?
ಇತ್ತೀಚೆಗೆ ಬಾಲಿವುಡ್‌ನಲ್ಲಿ ನಾನ್ ಗ್ಲಾಮರಸ್
ಹುಡುಗಿಯರ ಬಗ್ಗೆ ಮಾತನಾಡುವುದಾದರೆ ಅದರಲ್ಲಿ ಕೃಷ್ಣಸುಂದರಿ ರಾಧಿಕಾ ಆಫ್ಟೆ ಮೊದಲಿಗಳು. ತನ್ನ ಆ್ಯಕ್ಟಿಂಗ್ ಕಾರಣದಿಂದಲೇ ಇಂಡಸ್ಟ್ರಿಯಲ್ಲಿ ಒಂದು ಸ್ಥಾನ ಪಡೆದಿರುವ ರಾಧಿಕಾ, ಕೇವಲ ತನ್ನ ಚಿತ್ರಗಳು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ ಕ್ಲಿಪ್‌ನಿಂದಲೂ ಚರ್ಚೆಯಲ್ಲಿದ್ದಳು. ಈಕೆಯ ಹೊಸ ವಿವಾದ ಎಂದರೆ `ಪಾರ್ಚೂನ್ಡ್' ಚಿತ್ರದ ಇಂಟಿಮೇಟ್‌ದೃಶ್ಯಗಳು. ಒಬ್ಬ ರಿಪೋರ್ಟರ್ ಈ ಬಗ್ಗೆ ಆಕೆಯನ್ನು ಕೆಣಕಿದಾಗ, ``ಆ ಕ್ಲಿಪ್ಸ್ ಲೀಕ್ ಆದದ್ದು ಅಲ್ಲ ಅಂತ ನೆನಪಿಡಿ. ಇದು ವಿಶ್ವವಿಡೀ ರಿಲೀಸ್ ಆದ ಚಿತ್ರ. ಆ ಕುರಿತಾಗಿ ಸರಿಯಾಗಿ ತಿಳಿದುಕೊಳ್ಳಿ,'' ಎಂದು ಖಾರವಾಗಿ ಗುಡುಗಿದ್ದಾಳೆ.
ಸನೀ ಬಗ್ಗೆ ಕತ್ತಿ ಮಸೆದ ರಾಖಿ
ಸನೀ ಲಿಯೋನ್ ಬಾಲಿವುಡ್‌ನಲ್ಲಿ ತನ್ನ ಹಾಟ್ ದೃಶ್ಯಗಳಿಂದ ರಂಗೇರಿಸಿದಂತೆ ರಾಖಿ ಸಾವಂತ್‌ಗೆ ಮೈಯೆಲ್ಲ ಉರಿದುರಿದು ಹೋಗುತ್ತಿದೆ! ಅವಳನ್ನು ಕೇಳುವವರೇ ಇಲ್ಲದೆ, ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಗಳಲ್ಲಿ ಮುಖ ತೋರಿಸುತ್ತಿದ್ದಾಳೆ. ಈ ಬಾರಿ ರಾಖಿ ನೇರವಾಗಿ ಸನ್ನಿ ಹಾಗೂ ಸೆನ್ಸಾರ್ ಮಂಡಳಿ ಇಬ್ಬರನ್ನೂ ಝಾಡಿಸಿದ್ದಾಳೆ. ಇವಳ `ಏಕ್ ಥಿ ಜೂಲಿ' ಚಿತ್ರಕ್ಕೆ ` ' ಸರ್ಟಿಫಿಕೇಟ್ ಕೊಟ್ಟಿದ್ದಕ್ಕೇ ಇಷ್ಟೆಲ್ಲ ರಾದ್ಧಾಂತ. ರಾಖಿ ಸೆನ್ಸಾರ್ ಮಂಡಳಿ ಅಧ್ಯಕ್ಷರನ್ನೇ ಕೆಲಸಕ್ಕೆ ಲಾಯಕ್ಕಿಲ್ಲ ಎಂದು ಕಿಡಿಕಾರಿದ್ದಾಳೆ. ಅವರನ್ನು ಇಳಿಸಿ, ಅವರಿಗಿಂತ ಬೆಟರ್ ಆಗಿ ನಾನು ಆವ ಕೆಲಸ ನಿರ್ವಹಿಸಿ ತೋರಿಸುವೆ ಅಂತಾಳೆ! ತಾನು ಐಟಂ ಗರ್ಲ್ ಆದ್ದರಿಂದ ಬೇಕೆಂದು ಹೀಗೆ ಸರ್ಟಿಫಿಕೇಟ್‌ಕೊಟ್ಟಿದ್ದಾರೆ, ಆದರೆ ನಾನು ಪೋರ್ನ್ ಸ್ಟಾರ್ ಅಲ್ಲ ಎಂದು ಅವರು ಗಮನದಲ್ಲಿ ಇಟ್ಟುಕೊಳ್ಳಲಿ ಅಂತಾಳೆ. ಅದು ಯಾರನ್ನು ಕುರಿತದ್ದು ಎಂಬುದು ಎಲ್ಲರಿಗೂ ಗೊತ್ತು. ಬಾಯಿಬಡುಕಿ ರಾಖಿ ಕೈಲಿ ಸಿಕ್ಕಿಕೊಂಡರ ಗತಿ....!