ಈ ಚಿತ್ರದಲ್ಲಿ ಹೊಸ ರೀತಿಯ ಪ್ರೇಮಕಥೆ ಹೇಳಲು ಹೊರಟಿದ್ದಾರೆ. ಸಾಮಾನ್ಯವಾಗಿ ಪ್ರೀತಿಯಲ್ಲಿ ಗೆಲ್ಲಬೇಕು ಎಂದು ಆಸೆಪಡುವುದು ಸಹಜ. ಆದರೆ ಈ ಚಿತ್ರದ ನಾಯಕನಿಗೆ ಪ್ರೀತಿ ಸೋಲಲಿ ಎಂಬ ಆಸೆ. ಯಾಕೆ ಹೀಗೆ ಅಂತ ಕೇಳಿದರೆ ಅದನ್ನು ನೀವು ಸಿನಿಮಾ ನೋಡಿದಾಗಲೇ ಸ್ಪಷ್ಟವಾಗುತ್ತದೆ ಅಂತಾರೆ ನಿರ್ದೇಶಕರು. `ಸಿಂಪಲ್ಲಾಗೊಂದು ಲವ್ ಸ್ಟೋರಿ’ ಚಿತ್ರದ ನಂತರ ಸಿಂಪಲ್ ಸುನಿ ಎಂದೇ ಜನಪ್ರಿಯವಾಗಿರುವ ನಿರ್ದೇಶಕ ಸುನಿ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೊಸ ಅಲೆಯನ್ನು ಸೃಷ್ಟಿಸಿದಂಥ ಯುವ ನಿರ್ದೇಶಕ. `ಸಿಂಪಲ್ಲಾಗ್‌ ಇನ್ನೊಂದು ಲವ್ ಸ್ಟೋರಿ’ ಅಂತಾನೂ ಮಾಡಿದ್ದರು. `ಬಹುಪರಾಕ್‌, ಆಪರೇಷನ್‌ ಅಲಮೇಲಮ್ಮ’ ಒಳ್ಳೆ ಹೆಸರು ತಂದುಕೊಟ್ಟಿತು. `ಚಮಕ್‌’  ಸಿನಿಮಾ ಮಾಡಿ ಚಮಕ್‌ ಕೊಟ್ಟರು. ಇದೀಗ `ಬಜಾರ್‌’ ಎನ್ನುವ ಚಿತ್ರ ರೆಡಿ ಮಾಡಿದ್ದಾರೆ.

ಈ ಬಾರಿ ಸುನೀ ಜನಪ್ರಿಯ ತಾರೆಯರ ಬದಲು ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ಈಗಾಗಲೇ, ಕಿರುತೆರೆಯಲ್ಲಿ ಹೆಸರು ಮಾಡಿರೋ ಅದಿತಿ ಪ್ರಭುದೇವ್ ಈ ಚಿತ್ರದ ನಾಯಕಿ. ಟ್ರೇಲರ್‌, ಟೀಸರ್‌, ಆಡಿಯೋ ಸಾಕಷ್ಟು ಜನಪ್ರಿಯಗೊಳಿಸುತ್ತಿದೆ. ಟೀಸರ್‌ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ `ಬಜಾರ್‌’ ಚಿತ್ರಕ್ಕೆ ದರ್ಶನ್‌ ಕೂಡಾ ಸಾಥ್‌ ನೀಡಿರುವುದರಿಂದ ಚಿತ್ರ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಹೊಸ ನಾಯಕ ಧನ್ವೀರ್‌ ಹಾಗೂ ನಾಯಕಿ ಅದಿತಿ ಪ್ರಭುದೇವ್‌ ಹೊಸಬರಾದರೂ ಅದ್ಭುತವಾಗಿ ನಟಿಸಿದ್ದಾರೆ. ಅದಿತಿ ಪ್ರತಿಭಾವಂತೆ. ಟೋಟಲ್ ಆಗಿ ಸಿನಿಮಾ ಚೆನ್ನಾಗಿ ಬಂದಿದೆ. ನನಗೂ ಒಂಥರಾ ಕ್ಯೂರಿಯಾಸಿಟಿ ಹೆಚ್ಚಾಗಿದೆ ಅಂತ ಸುನಿ ಹೇಳುತ್ತಾರೆ.

`ಬಜಾರ್‌’ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದಾರೆ ನಿರ್ದೇಶಕ ಸುನಿ?

ಈ ಚಿತ್ರದಲ್ಲಿ ಹೊಸ ರೀತಿಯ ಪ್ರೇಮಕಥೆ ಹೇಳಲು ಹೊರಟಿದ್ದಾರೆ. ಸಾಮಾನ್ಯವಾಗಿ ಪ್ರೀತಿಯಲ್ಲಿ ಗೆಲ್ಲಬೇಕು ಎಂದು ಆಸೆಪಡುವುದು ಸಹಜ. ಆದರೆ ಈ ಚಿತ್ರದ ನಾಯಕನಿಗೆ ಪ್ರೀತಿ ಸೋಲಲಿ ಎಂಬ ಆಸೆ. ಯಾಕೆ ಹೀಗೆ ಅಂತ ಕೇಳಿದರೆ ಅದನ್ನು ನೀವು ಸಿನಿಮಾ ನೋಡಿದಾಗಲೇ ಸ್ಪಷ್ಟವಾಗುತ್ತದೆ ಅಂತಾರೆ ನಿರ್ದೇಶಕರು. ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಪಾರಿವಾಳಗಳನ್ನು ಬಳಸಿರೋದು.

ಸಿನಿಮಾದ ಟ್ರೇಲರ್‌ ನೋಡುವಾಗ ಇದೊಂದು ಮಾಸ್‌ ಸಿನಿಮಾ ಅಂತನಿಸುತ್ತೆ. ಮೊದಲ ಬಾರಿಗೆ ಸುನಿ ಮಚ್ಚು ಲಾಂಗು ಬಳಸಿದ್ದಾರೆ ಅಂತಾನೇ ಹೇಳಬಹುದು. ಬಹುಶಃ ಇದು ಅವರ ಮೊದಲ ಆ್ಯಕ್ಷನ್‌ ಚಿತ್ರವಾಗಬಹುದು. ರಿಲೀಸಿಗೆ ಮೊದಲೇ ಚಿತ್ರದ ಡಬ್ಬಿಂಗ್‌ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿರೋದು ಸಹ ತಂಡಕ್ಕೆ ಖುಷಿ ತಂದಿದೆ!

ಲವ್ ಸ್ಟೋರಿ ಜೊತೆ ಪಾರಿವಾಳ ರೇಸ್‌ ಕೂಡಾ ಇರೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದೆಲ್ಲದರ ಜೊತೆಗೆ ನವ ನಟ ಧನ್ವೀರ್‌ ಸಿಕ್ಸ್ ಪ್ಯಾಕ್‌ನಲ್ಲಿ ಈಗಾಗಲೇ ಸಾಕಷ್ಟು ಮಿಂಚುತ್ತಿದ್ದಾನೆ. `ಬಜಾರ್‌’ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್‌ ಅಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಸಂತೋಷ್‌ ರೈ ಪತಾಜೆ ಕ್ಯಾಮೆರಾ ವರ್ಕ್ಸ್ ಇದೆ. ಈಗಾಗಲೇ ಕೆ.ಜಿ.ಎಫ್‌ ಚಿತ್ರದ ಮೂಲಕ ಆಲ್ ಇಂಡಿಯಾ ಫೇಮಸ್‌ ಆಗಿರುವ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ಇನ್ನು ಅದಿತಿ ಪ್ರಭುದೇವ್‌ ಬಗ್ಗೆ ಹೇಳಬೇಕೆಂದರೆ…… ಬಹಳಷ್ಟಿದೆ.

`ಧೈರ್ಯಂ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಕಿರುತೆರೆಯಲ್ಲಿ ನಾಗಕನ್ನಿಕೆಯಾಗಿ ಮೂಡಿ ಬಂದು ಈಗ `ಬಜಾರ್’ ಚಿತ್ರದ ಮೂಲಕ ಮಿಂಚಲು ಬರುತ್ತಿದ್ದಾಳೆ. ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ಹೊಸ ವರ್ಷ ನನ್ನ ಪಾಲಿಗೆ ಹರ್ಷದಾಯಕವಾಗಿದೆ. ನನ್ನೆಲ್ಲ ಪರಿಶ್ರಮದ ಫಲ ಮುಂದೆ ಸಿಗುತ್ತೆ ಎನ್ನುವ ನಂಬಿಕೆ.

`ಬಜಾರ್‌’ ನನ್ನ ಪಾಲಿಗೆ ಬಹು ನಿರೀಕ್ಷಿತ ಚಿತ್ರ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದರೂ ಸಿನಿಮಾರಂಗದಲ್ಲಿ ನನ್ನ ವೃತ್ತಿಯನ್ನು ಮುಂದುವರಿಸಲು ಇಷ್ಟಪಡುತ್ತೀನಿ ಎನ್ನುತ್ತಾಳೆ ಅದಿತಿ. ನನಗೆ ಸಾಕಷ್ಟು ಆಫರ್ಸ್‌ ಬಂದಿತ್ತು. ಸ್ಕ್ರಿಪ್ಟ್ ಸಹ ಓದಿದ್ದೆ. ಆದರೆ `ಬಜಾರ್‌’ ಚಿತ್ರವನ್ನು ತುಂಬಾನೆ ಇಷ್ಟಪಟ್ಟು ಒಪ್ಪಿಕೊಂಡೆ. ಕಾರಣ ಅದರಲ್ಲಿರುವ ಕಥೆ ಹಾಗೂ ನನ್ನ ಪಾತ್ರ ಎನ್ನುತ್ತಾಳೆ ಈಕೆ.

ಅದಿತಿ ಗ್ರಾಜ್ಯುಯೇಟ್‌ ಆಗಿ ಬ್ಯಾಂಕ್‌ ಮ್ಯಾನೇಜರ್‌ ಆಗಬೇಕೆಂದು ಬಯಸಿದ್ದಳು. ಆದರೆ ದಾವಣಗೆರೆ ಹುಡುಗಿ ಸಿನಿಮಾರಂಗಕ್ಕೆ ಬಂದದ್ದು ಆಕಸ್ಮಿಕ.

`ಬಜಾರ್‌’ ಚಿತ್ರ ತನ್ನ ತಾರಾ ವೃತ್ತಿಗೆ ಹೊಸ ರೂಪ ತಂದುಕೊಡುವುದೆಂಬ ನಂಬಿಕೆ ಬಲವಾಗಿದೆ. 

 

Tags:
COMMENT