ಮೊದಲು `ಬಿಗ್‌ ಬಾಸ್‌' ನಂತರ `ಫಿಯರ್‌ ಫ್ಯಾಕ್ಟರ್‌' ಶೋಗಳಲ್ಲಿ ನಟಿಸಿದ ನಿಕ್ಕಿ ತಂಬೋಲಿ, ಪಡ್ಡೆ ಹುಡುಗರ ಅಚ್ಚುಮೆಚ್ಚಿನ ಗ್ಲಾಮರಸ್‌ ಗೊಂಬೆಯಾದಳು. ಮಹಾರಾಷ್ಟ್ರದ ಜೌರಂಗಾಬಾದ್‌ ನ 27 ವರ್ಷದ ಈಕೆ ದಕ್ಷಿಣದ ಜೊತೆ ಬಾಲಿವುಡ್‌ ನಲ್ಲೂ ಮುಖ ತೋರಿಸಿದ್ದಿದೆ. ಇತ್ತೀಚೆಗೆ ನಿಕ್ಕಿ, FB ‌ಮುಖಾಂತರ ಅಭಿಮಾನಿಗಳಿಗೆ ತನ್ನ ಬೋಲ್ಡ್ ಅವತಾರ ಪ್ರದರ್ಶಿಸ ತೊಡಗಿದ್ದಾಳೆ. ಒಮ್ಮೆ ಬ್ಯಾಕ್‌ ಲೆಸ್‌, ಒಮ್ಮೊಮ್ಮೆ ಡೀಪ್‌  ನೆಕ್‌ ಡ್ರೆಸೆಸ್‌ ಧರಿಸಿ ನಿಕ್ಕಿ FB‌ನಲ್ಲಿ ಮಿಂಚಿದ್ದೇ ಮಿಂಚಿದ್ದು! ಈಕೆ ಉರ್ಫಿಗೆ ಪೈಪೋಟಿ ನೀಡುತ್ತಿಲ್ಲ ತಾನೇ?

Nai_seequal_queen_to_nahi_Ananya

ಅನನ್ಯಾ ಈಗ ಹೊಸ ಸೀಕ್ವೆಲ್ ಕ್ವೀನಾ....

`ಡ್ರೀಂ ಗರ್ಲ್' ಚಿತ್ರವಂತೂ ಆಯುಷ್ಮಾನ್‌ ಖುರಾನಾದೇ ಯಶಸ್ವಿ ಚಿತ್ರ ಎಂದು ಹೆಸರು ಗಳಿಸಿತ್ತು. ಇದರಲ್ಲಿ ಅನನ್ಯಾಳಿಗೆ ಹೆಸರಿಗಷ್ಟೇ ಮರ ಸುತ್ತುವ ನಾಯಕಿ ಬೇಕು ಅಂತ ಆ ಪಟ್ಟ ಕಟ್ಟಿದ್ದರು. ಇದೀಗ ಸುದ್ದಿಗಾರರ ಹೊಸ ಸರದಿ ಎಂದರೆ ಈಕೆ `ಪತಿ ಪತ್ನಿ ಔರ್‌ ವೋ-2' ಚಿತ್ರದಲ್ಲೂ ಕಾಣಿಸಲಿದ್ದಾಳಂತೆ! ಅಂದ್ರೆ ಅನನ್ಯಾ ಸೀಕ್ವೆಲ್ ‌ಕ್ವೀನ್‌ ಆಗಲು ಹೊರಟಿದ್ದಾಳಾ? ಅಂದಹಾಗೆ  ಇದುವರೆಗಿನ ಇವಳ ಕೆರಿಯರ್‌ ನಲ್ಲಿ ಇವಳದೇ ಛಾಪು ಮೂಡಿಸುವಂಥ ಒಂದೇ ಒಂದು ಚಿತ್ರ ಬಂದಿಲ್ಲ ಎಂಬುದು ದುರಂತವಾದರೂ ನಿಜ! ಹೋ ಅನನ್ಯಾ ಡಿಯರ್‌, ಸ್ವಲ್ಪ ಯೋಚಿಸಿ ಎಚ್ಚೆತ್ತುಕೋ.... ನಿನ್ನ ಸಮಕಾಲೀನರಾದ ಜಾಹ್ನವಿ, ಸಾರಾ ನಿನಗಿಂತ ಎಷ್ಟೋ ಮುಂದೆ ಹೋಗಿಬಿಟ್ಟಿದ್ದಾರೆ ಎಂಬುದು ನೆನಪಿರಲಿ, ಎನ್ನುತ್ತಾರೆ ಹಿತೈಷಿಗಳು.

Bharose_ke_sath_khilwad

ನಂಬಿಕೆಗೆ ಎಸಗಲಾದ ದ್ರೋಹ

ನಟನಿಂದ ನೇತಾರ ಆಗಿದ್ದ ಸನೀಡಿಯೋಲ್‌, ಇದೀಗ ಬ್ಯಾಕ್‌ ಟು ಪೆವಿಲಿಯನ್‌ ಅಂತಿದ್ದಾನೆ. ಪಂಜಾಬಿನ ಗುರುದಾಸ್‌ ಪುರ್‌ ನ ಸಂಸದನಾದ ಸನೀ ಇತ್ತೀಚೆಗೆ ಹೇಳಿದ್ದೆಂದರೆ, ಸಾಕಪ್ಪ ಈ ಎಲೆಕ್ಷನ್‌ ಗೋಳು ಅಂತ! ನಮ್ಮ ದೇಶದ ರಾಜಕೀಯದ ಆಗುಹೋಗು ಗಮನಿಸುತ್ತಾ, ಇದನ್ನು ದೇಶ ಮತ್ತು ದೇಶವಾಸಿಗಳಿಗೆ ಮಾಡಲಾಗುತ್ತಿರುವ ದ್ರೋಹ ಅಲ್ಲದೆ ಮತ್ತೇನು? ಅಂತಾನೆ. ಈತನ ನಟನೆಯ ಕೆರಿಯರ್‌ ಪಾತಾಳಕ್ಕಿಳಿದಾಗ ಇದೇ ರಾಜಕೀಯ ಈತನಿಗೆ ಅತಿ ಪ್ರಿಯವಾಗಿತ್ತು. ರಾಜಕೀಯದಲ್ಲಿ ಯಾರಿಗೇನೂ ಜವಾಬ್ದಾರಿ ನಿರ್ವಹಿಸಬೇಕಾದ ಅಗತ್ಯ ಇಲ್ಲವಲ್ಲ? ಈತನ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ನಡು ನೀರಿನಲ್ಲೇ ಬಿಟ್ಟು ಬಂದವನಲ್ಲ.... ಅವರ ಗತಿ ಏನು? ಮುಂದೆ 5 ವರ್ಷ ಅವರು ಅದನ್ನು ಯಾರಿಗೆ ಹೇಳಬೇಕಂತೆ? ಇಂಥ ಮಹೋದಯ ಸಂಸದರು ಆಗಾಗ ಕ್ಷೇತ್ರದಿಂದ ಸಿನಿಮಾಗೋಸ್ಕರ ಮಾಯವಾಗುತ್ತಿದ್ದರೆ ಅಲ್ಲಿನವರ ಗೋಳೇನು? ವೋಟ್‌ ಹಾಕುವ ಮಂದಿ ಸರಿಯಾದ ನಾಯಕರನ್ನು ಆರಿಸದಿದ್ದರೆ ಈ ಅಧೋಗತಿ ತಪ್ಪಿದ್ದಲ್ಲ!

6_Inch_se_70_MM_tak

6 ಇಂಚಿನಿಂದ 70 ಇಂಚಿಗೆ

ಯೂಟ್ಯೂಬ್‌ ನಿಂದ ಯುವಜನರ ಮಧ್ಯೆ ಫೇಮಸ್‌ ಆಗಿರುವ ಎಲ್ವಿಶ್‌ ಯಾದವ್ ಗೆ ಐಡೆಂಟಿಟಿ ಸಿಕ್ಕಿದ್ದು `ಬಿಗ್‌ ಬಾಸ್‌'ನಿಂದ. OTT ಯ ಲೇಟೆಸ್ಟ್ ಸೀಸನ್ನಿನ ವಿನ್ನರ್‌ ಆಗಿ ಐಡೆಂಟಿಟಿ ಸಿಕ್ಕ ನಂತರ ಕೈ ತುಂಬಾ ಸಿನಿಮಾಗಳು ಸಿಕ್ಕ. ಇದು ಈತನಿಗೂ ಅಷ್ಟೇ ಆಶ್ಚರ್ಯಕರ! ಊರ್ವಶಿ ರೊತೇಲಾಳ ಜೊತೆ ಇಷ್ಟರಲ್ಲಿ ಈತ ಒಂದು ಹೊಸ ಆಲ್ಬಂನಲ್ಲಿ ಕಾಣಿಸಲಿದ್ದಾನೆ. ಸುದ್ದಿಗಾರರ ಪ್ರಕಾರ ವರ್ಷಾಂತ್ಯದ ಹೊತ್ತಿಗೆ ಈತನಿಗೆ ಇನ್ನಷ್ಟು ಸಿನಿಮಾ ಸಿಗಲಿದೆ! ಹೊಸ ಚಿತ್ರದ ಶೂಟಿಂಗ್‌ ಗಾಗಿ ಈಗಾಗಲೇ ವಿದೇಶ ತಲುಪಿದ್ದೂ ಆಯ್ತು. ರಾಜಸ್ಥಾನದ ಆಳ್ವಾರ್‌ ಜಿಲ್ಲೆಯ ಯಾವುದೋ ಗ್ರಾಮದ ನಿವಾಸಿ ಇದೀಗ ಬಾಲಿವುಡ್‌ ನಲ್ಲಿ ಎಲ್ಲರಿಗೂ ಬೇಕಾಗಿದ್ದಾನೆ! ಇದು ಕೇವಲ ವದಂತಿ ಅಷ್ಟೆ. ಸುದ್ದಿಗಾರರು ಸ್ಟಾರ್‌ ಗಳ ಬೆನ್ನುಹತ್ತಿ ಫೋಟೋ ಸೆರೆಹಿಡಿಯುವುದು ಮಾತ್ರವಲ್ಲ, ಇತ್ತೀಚೆಗೆ ಈ ಕ್ಯಾಮೆರಾ ವೀರರು, ರಿತೇಶ್‌ಜೆನೆಲಿಯಾರ ಬೆನ್ನುಹತ್ತಿ ಫೋಟೋ ಹಿಡಿಯುತ್ತಿದ್ದಾಗ, ಆಕೆ ತನ್ನ ಹೊಟ್ಟೆ ಕವರ್‌ ಆಗುವ ಹಾಗೆ ಕೈ ಒಡ್ಡಿದಳು. ಈಕೆ ಈಗ ತುಸು ಮೈ ಕೈ ತುಂಬಿಕೊಂಡಿರುವುದೂ ನಿಜ. ಅವಳ ಡ್ರೆಸ್ಸಿನ ಸ್ಟೈಲೂ ಡಿಫರೆಂಟ್‌ ಆಗಿತ್ತು. ಇನ್ನೇನು? ಈ ಸುದ್ದಿಗಾರರ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು! ಜೆನೆಲಿಯಾ 3ನೇ ಸಲ ಗರ್ಭಿಣಿ ಅಂತ ಡಂಗೂರ ಸಾರಿಯೇಬಿಟ್ಟರು. ಸಿಟ್ಟಿಗೆದ್ದ ರಿತೇಶ್‌, ಹಾಗೇನಲ್ಲ ಸುಮ್ಮನಿರಿ ಅಂತ ಗುಡುಗಿದಾಗ, ಇವರು ತೆಪ್ಪಗಾದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ