– ರಾಘವೇಂದ್ರ ಅಡಿಗ ಎಚ್ಚೆನ್.
ನಿವೇದಿತಾ ಗೌಡ ಜೊತೆಗೆ ವಿಚ್ಛೇದನದ ಬಳಿಕ ಚಂದನ್ ಶೆಟ್ಟಿ ಕರಿಯರ್ ಕಡೆ ಗಮನ ಹರಿಸಿದ್ದಾರೆ. ಸಿನಿಮಾ ನಟನೆ, ಆಲ್ಬಂಗಳ ಕಡೆ ಗಮನ ಹರಿಸಿದ್ದಾರೆ. ಅವರ ನಟನೆಯ ‘ಸೂತ್ರಧಾರಿ’ ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಂಜನಾ ಆನಂದ್ ಕೂಡ ಕಾಣಿಸಿಕೊಂಡಿದ್ದಾರೆ. ಸಂಜನಾ ಮತ್ತು ಚಂದನ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ಬಗ್ಗೆ ಸ್ವತಃ ಸಂಜನಾ ಹಾಗೂ ಚಂದನ್  ಸ್ಪಷ್ಟನೆ ನೀಡಿದ್ದಾರೆ.  ಈ ಗಾಸಿಪ್‌ ಹೇಗೆ ಶುರುವಾಯ್ತು ಗೊತ್ತಿಲ್ಲ. ಈ  ವಿಚಾರ ಸುಳ್ಳು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
“ಈ ರೀತಿ ಸುದ್ದಿ ಹರಿದಾಡೋದು ಕಾಮನ್. ಯಾರು ಗಾಸಿಪ್ ಶುರು ಮಾಡಿದ್ರು ಗೊತ್ತಿಲ್ಲ. ಈಗಿನ ಸೋಶಿಯಲ್ ಮೀಡಿಯಾ ಆ ರೀತಿ ಇದೆ. ಏನು ಮಾಡೋಕೆ ಆಗಲ್ಲ. ಯಾರೋ ಏನೋ ಒಂದು ಪೋಸ್ಟ್ ಹಾಕಿದ್ರೆ, ಅದನ್ನೇ ನಿಜ ಎಂದು ಜನ ನಂಬುತ್ತಾರೆ. ಆದರೆ ಈ ವಿಚಾರ ನನ್ನ ವೈಯಕ್ತಿಕ ಜೀವನಕ್ಕೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಪಬ್ಲಿಕ್ ಫಿಗರ್ ಅಂದಾಗ ಹೀಗೆ ಸುದ್ದಿ ಹಬ್ಬೋದು ಕಾಮನ್, ಈ ವಿಚಾರ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.” ಎಂದು ಚಂದನ್ ಹೇಳಿದ್ದಾರೆ.
ಇನ್ನು ಸಲಗ ಬೆಡಗಿ ಸಂಜನಾ ಮಾತನಾಡಿ ಎಲ್ಲರೂ ಕಾಲ್ ಮಾಡಿ, ಚಂದನ್ ಜೊತೆ ಮದುವೆನಾ? ಎಂದೆಲ್ಲಾ ಕೇಳುತ್ತಿದ್ದರು. ಆ ರೀತಿ ನಮ್ಮ ನಡುವೆ ಏನೂ ಇಲ್ಲ ಎಂದಿದ್ದಾರೆ.
ನವರಸನ್ ನಿರ್ಮಾಣದ , ಕಿರಣ್ ಕುಮಾರ್ ನಿರ್ದೇಶನದ , ಚಂದನ್ ಶೆಟ್ಟಿ , ಅಪೂರ್ವ & ಸಂಜನಾ ಆನಂದ್ ಮುಖ್ಯ ಪಾತ್ರದಲ್ಲಿ ನಟಿಸಿರುವ  ಈಗಾಗಲೇ ತನ್ನ ಹಾಡುಗಳಿಂದ ಜನರ ಮನಗೆದ್ದಿರುವ  ” ಸೂತ್ರಧಾರಿ ” ಸಿನಿಮಾ ಮೇ 9 ರಂದು ರಾಜ್ಯಾದಾದ್ಯಂತ ಬಿಡುಗಡೆಯಾಗಲಿದೆ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ