ಕನ್ನಡ ಚಿತ್ರರಂಗದ ಕರ್ಣ ಅಂತಾನೇ ಕರೆಸಿಕೊಂಡಿದ್ದ.. ಕನ್ನಡಿಗರ ರೆಬೆಲ್​ ಸ್ಟಾರ್​​​ ಅಂತಾನೇ
ಬಿರುದು ಪಡೆದಿದ್ದ.. ಚಿತ್ರರಂಗದ ದೊಡ್ಡಣ್ಣ ಅಂತಾನೇ ದೊಡ್ಡತನ ತೋರಿದ್ದ ರೆಬೆಲ್​ ಸ್ಟಾರ್​
ಅಂಬರೀಶ್​ ಇವತ್ತು ನಮ್ಮೊಂದಿಗಿಲ್ಲ. ಆದ್ರೆ, ಅವರು ಬಿಟ್ಟು ಹೋಗಿರುವ ಬಾಂಧವ್ಯ ಯಾವತ್ತಿಗೂ
ಕನ್ನಡಿಗರಿಗೆ ಎವರ್​ಗ್ರೀನ್​​. ಪತ್ನಿ ಹಾಗೂ ಮಾಜಿ ಸಂಸದೆ ಸುಮಲತಾ ಹಾಗೂ ಪುತ್ರ ಅಭಿಷೇಕ್
ಅಂಬರೀಶ್​​​ ಅವರ ಮೂಲಕ ಅಂಬಿ ಆದರ್ಶಗಳು ಮುಂದುವರಿಯುತ್ತಿವೆ. ಇಂಥಾ ಹೊತ್ತಿನಲ್ಲಿ ಅಂಬಿ
ಮನೆಯಲ್ಲಿ ದೊಡ್ಡ ಕಾರ್ಯಕ್ರಮವೊಂದು ನೆರವೇರಿತು. ಅದುವೇ ಅಂಬಿ ಮೊಮ್ಮಗನ ನಾಮಕರಣ.


ಅಂಬರೀಶ್, ಸುಮಲಾತಾ ದಂಪತಿ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಸೊಸೆ ಅವಿವಾ ದಂಪತಿಯ
ಐದು ತಿಂಗಳ ಮಗುವಿಗೆ ಅದ್ದೂರಿ ನಾಮಕರಣ ಮಹೋತ್ಸವ ನೆರವೇರಿತು. ತಾಯಿ ಸುಮಲತಾ
ಅಂಬರೀಶ್ ಈ ನಾಮಕರಣ ಶಾಸ್ತ್ರವನ್ನ ಪೂರ್ಣಗೊಳಿಸಿದರು. ಬೆಂಗಳೂರಿನ ಪಂಚತಾರಾ ಹೋಟೆಲ್
ಗಳಲ್ಲಿ ಒಂದಾದ ತಾಜ್ ವೆಸ್ಟೆಂಡ್​ನಲ್ಲಿ ನಡೆದ ನಾಮಕರಣ ಮಹೋತ್ಸವದಲ್ಲಿ ರೆಬೆಲ್ ಸ್ಟಾರ್
ಅಂಬರೀಶ್ ಮೊಮ್ಮಗನಿಗೆ ‘ರಾಣಾ ಅಮರ್ ಅಂಬರೀಶ್’ ಅಂತ ಅಧಿಕೃತವಾಗಿ ಹೆಸರು ಇಡಲಾಯ್ತು.


ಇಷ್ಟಕ್ಕೂ ‘ರಾಣಾ ಅಮರ್ ಅಂಬರೀಶ್’​​​ ಅನ್ನೋ ಅಷ್ಟು ದೊಡ್ಡ ಹೆಸರು ಯಾಕೆ ಇಟ್ಟುದ್ದು
ಅನ್ನೋ ಪ್ರಶ್ನೆ ಹುಟ್ಟೋದು ಸಾಮಾನ್ಯ. ಅದ್ರೆ ಅಮರ್ ಅನ್ನೋದು ರಾಣಾಗೆ ತಾತನ ಮೂಲ
ಹೆಸರು. ಅಲ್ಲದೆ ತನ್ನ ತಂದೆ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾದ ಹೆಸರು ‘ರಾಣಾ’ ಕೂಡ
ಹೌದು. ಹಾಗಾಗಿಯೇ ರಾಣಾ ಜೊತೆ ‘ಅಮರ್’ ‘ಅಂಬರೀಶ್’ ಕೂಡ ಸೇರಿಸಲಾಗಿದೆ. ಇಷ್ಟಕ್ಕೂ ರಾಣಾ
ಅಂದ್ರೆ ರಾಜ, ಕಿಂಗ್ ಎಂದರ್ಥ. ನಮ್ಮ ಭಾರತದಲ್ಲಿ ರಾಣಾ ಎಂಬ ಹೆಸರನ್ನ ಮೂಲತಃ ನಮ್ಮ
ಹಿಂದೂ ರಜಪೂತ ದೊರೆಗಳು ಬಳಸಿದ ಬಿರುದು ಕೂಡ ಹೌದು. ಹಾಗಾಗಿ ರೆಬೆಲ್ ಸ್ಟಾರ್ ಕಿಂಗ್
ಡಮ್ ಗೆ ರಾಣಾನೇ ಈಗ ಯುವರಾಜ. ಸೋ ಈ ಹೆಸರು ಕೇಳಿ ಇಡೀ ಅಂಬರೀಶ್ ಅಭಿಮಾನಿ ಬಳಗ
ದಿಲ್ ಖುಷ್ ಆಗಿದೆ. ಮಂಡ್ಯ ಜನತೆ ಜೊತೆಗೆ ಇಡೀ ಕರುನಾಡೇ ಆ ಮಗುವಿಗೆ ಶುಭವಾಗಲಿ ಅಂತಿದೆ.
ರಾಣಾ ಅಮರ್ ಅಂಬರೀಶ್ ನಾಮಕರಣ ಮಹೋತ್ಸವದಲ್ಲಿ ಸುಮಲತಾ ಫ್ಯಾಮಿಲಿ ಹಾಗೂ
ಪ್ರಸಾದ್ ಬಿದ್ದಪ್ಪ ಫ್ಯಾಮಿಲಿ ಕಂಪ್ಲೀಟ್ ಆಗಿ ಭಾಗವಹಿಸಿ, ಸಂಭ್ರಮಿಸಿದೆ. ಬಾದ್ ಷಾ ಕಿಚ್ಚ
ಸುದೀಪ್ ದಂಪತಿ, ಯಶ್ ದಂಪತಿ, ರಾಕ್ ಲೈನ್ ವೆಂಕಟೇಶ್, ಗುರುಕಿರಣ್ ದಂಪತಿ ಸೇರಿದಂತೆ
ಚಿತ್ರರಂಗದ ಸಾಕಷ್ಟು ಮಂದಿ ಗಣ್ಯರು ಈ ಶುಭಕಾರ್ಯಕ್ಕೆ ಸಾಕ್ಷಿಯಾದ್ರು. ಇನ್ನು ನಟ ದರ್ಶನ್ ಈ
ಫಂಕ್ಷನ್ ಗೆ ಬಾರದೇ ಇರೋದು ಹೊಸ ಚರ್ಚೆಗೆ ನಾಂದಿ ಹಾಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ