- ರಾಘವೇಂದ್ರ ಅಡಿಗ ಎಚ್ಚೆನ್.
ಯಕ್ಷಗಾನದ ವೇಷಭೂಷಣ ನೋಡುವುದಕ್ಕೆ ಬಹಳ ಚೆಂದ. ಆ ಕಾರಣಕ್ಕಾಗಿಯೇ ಇರಬೇಕು ಟಿವಿ ಶೋ, ಸಿನಿಮಾ ಹಾಡು, ಯಾವುದೋ ಉದ್ಘಾಟನೆ ಹೀಗೆ ಸಂಬಂಧವೇ ಇಲ್ಲದ ಅನೇಕ ಕಡೆಗಳಲ್ಲಿ ಬಳಕೆಯಾಗಿದೆ. ಹೀಗೆ ಅಪಸವ್ಯ ರೀತಿಯಲ್ಲಿ ಬಳಕೆಯಾಗಿದ್ದೆ ಹೆಚ್ಚು, ಇದೇ ಮೊದಲಬಾರಿಗೆ ಎಲ್ಲಿಯೂ ಅಪಸವ್ಯಗಳಿಲ್ಲದೇ, ಶುದ್ಧ ಸಂಪ್ರದಾಯದಲ್ಲಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದೆ.
ನಮ್ಮ ಯಕ್ಷಗಾನದ ಹಿರಿಮೆ ದೊಡ್ಡದು. ಕನ್ನಡವನ್ನೆ ಉಸಿರಾಡುವ ಕರ್ನಾಟಕದ ಏಕೈಕ ಕಲೆ. ಆಟ ಅಥವಾ ತಾಳಮದ್ದಳೆ ನೋಡಿದರೆ ಕನ್ನಡಿಗರಾಗಿ ನೀವು ಈ ತನಕ ಕೇಳಿರದ ಹಲವಾರು ಅಪರೂಪದ ಕನ್ನಡ ಪದಗಳು ನಿಮ್ಮ ಅವಗಾಹನೆಗೆ ಬರಬಹುದು. ಪುರಾಣದ ಕತೆಗಳು ಬಹುಚೆಂದವಾಗಿ ಈ ಪೀಳಿಗೆಗೆ ದಾಟಿಸುವ ನಮ್ಮ ಹೆಮ್ಮೆಯ ಕಲೆ ಯಕ್ಷಗಾನ. ಇದರ ವ್ಯಾಪ್ತಿ ಹೆಚ್ಚಬೇಕು. ಕರ್ನಾಟಕದಾದ್ಯಂತ ಯಕ್ಷಗಾನದ ಶ್ರೀಮಂತಿಕೆ ಹಬ್ಬಬೇಕು. ಇಂತಹ ಆಶಯಕ್ಕೆ ಪೂರಕಾಗಿ ರವಿ ಬಸ್ರೂರು ಅವರು ಯಕ್ಷಗಾನದ ಕತೆಯನ್ನು, ಯಕ್ಷಗಾನ ರೂಪದಲ್ಲೇ ಸಿನಿಮಾ ಮಾಡಿದ್ದಾರೆ. ನಮ್ಮದೇ ಯಕ್ಷಗಾನ ಕಲಾವಿದರ ಜೊತೆಗೆ ಸ್ಯಾಂಡಲ್‌ವುಡ್‌ನ ಭಾಕ್ಸ್ ಆಫೀಸ್ ಕಿಂಗ್‌ಗಳು ಕೂಡ ಯಕ್ಷಗಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮ ಕಲೆಯೊಂದು ವ್ಯಾಪ್ತಿ ವಿಸ್ತಾರಗೊಳ್ಳುತ್ತ ದೊಡ್ಡ ಪರದೆಯ ಮೇಲೆ ಕಾಣುವ ಖುಷಿ, ಸಮಸ್ತ ಯಕ್ಷಾಭಿಮಾನಿಗಳಿಗೆ ಹೆಮ್ಮೆ. ರವಿ ಬಸ್ರೂರು ಅವರ ಈ ಮಹಾ ಪ್ರಯತ್ನವನ್ನು ನಾವೆಲ್ಲರೂ ಬೆಂಬಲಿಸಿ, ಪ್ರೋತ್ಸಾಹಿಸೋಣ.
ಹ್ಯಾಕೇವಲ ನಾಲ್ಕೈದು ಜಿಲ್ಲೆಗಷ್ಟೆ ಸೀಮಿತವಾಗಿರುವ ಯಕ್ಷಗಾನವನ್ನು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ, ದೇಶದ ಎಲ್ಲಾ ರಾಜ್ಯಗಳಿಗೆ, ದೇಶದಾಚೆಗೂ ದೊಡ್ಡ ಬೆಳ್ಳಿ ಪರದೆಯ ಮೇಲೆ ಪರಿಚಯಿಸಲು BGM ಕಿಂಗ್ ರವಿ ಬಸ್ರೂರ್ ಅವರು ಹೊರಟಿದ್ದಾರೆ. ನಾವೆಲ್ಲರೂ ಜೊತೆ ನಿಲ್ಲೋಣ.
ಸಂಪೂರ್ಣ ಯಕ್ಷಗಾನದ ಸಿನಿಮಾ ಈ ತನಕ ಬಂದಿಲ್ಲ. ಈ ತನಕದ ಸಿನಿಮಾದಲ್ಲಿ ಯಕ್ಷಗಾನವನ್ನು ಅಭಾಸವಾಗಿ ತೋರಿಸಿದ್ದೆ ಹೆಚ್ಚು, ಆದರೆ ಇಲ್ಲಿ ಒಂದಿಂಚೂ ಅಪಸವ್ಯಗಳಿಲ್ಲ ಎಂಬುದಕ್ಕೆ ನಾನೇ ಗ್ಯಾರಂಟಿ. ಇನ್ನೊಂದು ವಿಶೇಷವೆಂದರೆ ಯಕ್ಷಗಾನದ ವೇಷದ ಹೊರತಾಗಿ ಯಾವುದೇ ಬೇರೆ ವೇಷಗಳೇ ಇಲ್ಲ. ಈ ಪ್ರಯತ್ನವನ್ನು ಕಲಾಭಿಮಾನಿಗಳು ಪ್ರೋತ್ಸಾಹಿಸಿ, ಯಕ್ಷಗಾನವನ್ನು ಗೆಲ್ಲಿಸಿ.
ಹ್ಯಾಟ್ರಿಕ್ ಹೀರೋ ಶಿವಣ್ಣ( ಡಾ. ಶಿವರಾಜ್ ಕುಮಾರ್) ವಿಶೇಷ ಪಾತ್ರವಾಗಿ ರಜತಪರದೆಯ ರಂಗಸ್ಥಳದಲ್ಲಿ ಕಂಗೊಳಿಸಿದ್ದಾರೆ.. ಶಿವಣ್ಣನೊಂದಿಗೆ ಸಿನಿಮಾ ಲೋಕದ ಖ್ಯಾತ ನಾಮ ನಟಶ್ರೇಷ್ಟರೂ ವಿವಿಧ ಭೂಮಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಇದೊಂದು ಹೊಸ ಅಧ್ಯಾಯದ ಆರಂಭವಾದರೆ ಯಕ್ಷ ರಂಗದಲ್ಲಿ ನವ ಮನ್ವಂತರದ ಶುಭೋದಯ. ಸಂಪೂರ್ಣ ಯಕ್ಷಗಾನವನ್ನು ವಿಶಿಷ್ಟ ತಂತ್ರಜ್ಞಾನದಲ್ಲಿ ಸಿನಿಮಾ ಹಾಗೂ ಯಕ್ಷಗಾನದ ಹೃದಯದಿಂದ ನೋಡುವುದಕ್ಕೆ ಇದೊಂದು ಮಾದರಿ ಯತ್ನ.
ಕೇವಲ ನಾಲ್ಕೈದು ಜಿಲ್ಲೆಗಷ್ಟೆ ಸೀಮಿತವಾಗಿರುವ ಯಕ್ಷಗಾನವನ್ನು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ, ದೇಶದ ಎಲ್ಲಾ ರಾಜ್ಯಗಳಿಗೆ, ದೇಶದಾಚೆಗೂ ದೊಡ್ಡ ಬೆಳ್ಳಿ ಪರದೆಯ ಮೇಲೆ ಪರಿಚಯಿಸಲು BGM ಕಿಂಗ್ ರವಿ ಬಸ್ರೂರ್ ಅವರು ಹೊರಟಿದ್ದಾರೆ.
ಸಂಪೂರ್ಣ ಯಕ್ಷಗಾನದ ಸಿನಿಮಾ ಈ ತನಕ ಬಂದಿಲ್ಲ. ಈ ತನಕದ ಸಿನಿಮಾದಲ್ಲಿ ಯಕ್ಷಗಾನವನ್ನು ಅಭಾಸವಾಗಿ ತೋರಿಸಿದ್ದೆ ಹೆಚ್ಚು, ಆದರೆ ಇಲ್ಲಿ ಒಂದಿಂಚೂ ಅಪಸವ್ಯಗಳಿಲ್ಲ ಎಂಬುದಕ್ಕೆ ನಾನೇ ಗ್ಯಾರಂಟಿ. ಇನ್ನೊಂದು ವಿಶೇಷವೆಂದರೆ ಯಕ್ಷಗಾನದ ವೇಷದ ಹೊರತಾಗಿ ಯಾವುದೇ ಬೇರೆ ವೇಷಗಳೇ ಇಲ್ಲ. ಈ ಪ್ರಯತ್ನವನ್ನು ಕಲಾಭಿಮಾನಿಗಳು ಪ್ರೋತ್ಸಾಹಿಸಿ, ಯಕ್ಷಗಾನವನ್ನು ಗೆಲ್ಲಿಸಿ.