Sj*

ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ (ಆಗಸ್ಟ್ 22) ಅಂಗವಾಗಿ ‘ಮೆಗಾ 158’ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ‘ವಾಲ್ತೇರು ವೀರಯ್ಯ’ ಚಿತ್ರದ ಯಶಸ್ಸಿನ ನಂತರ ಮೆಗಾಸ್ಟಾರ್ ಚಿರಂಜೀವಿ ಮತ್ತು ಮಾಸ್ ಕಮರ್ಷಿಯಲ್ ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಟೈಟಲ್ ಗ್ಲಿಂಪ್ಸ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ.

ಈ ಚಿತ್ರಕ್ಕೆ ‘ಕಾಕಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಗ್ಲಿಂಪ್ಸ್‌ನಲ್ಲಿ ಚಿರಂಜೀವಿ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಮ್ಮಾಜಿ ಆಕ್ವಾ ಇಂಡಸ್ಟ್ರೀಸ್’ನಲ್ಲಿ ಸತ್ಯಂ ಎಂಬ ಹೆಸರಿನ ಸೌಮ್ಯ ಸ್ವಭಾವದ ಸೂಪರ್‌ವೈಸರ್ ಆಗಿ ಕೆಲಸ ಮಾಡುವ ಅವರು, ಎಲ್ಲರೂ ತೆರಳಿದ ನಂತರ ನೀರಿನಲ್ಲಿ ಬಚ್ಚಿಟ್ಟಿದ್ದ ಬಂದೂಕುಗಳನ್ನು ಹೊರತೆಗೆಯುತ್ತಾರೆ. ಗ್ಲಿಂಪ್ಸ್‌ನಲ್ಲಿ ಗೆಟಪ್ ಶ್ರೀನು ಎಸೆದ ಕೀಚೈನ್ ನೀರಿನಲ್ಲಿ ಬೀಳಲಿದ್ದು, ಅದರ ಮೇಲೆ ‘ಐ ಲವ್ ಯೂ ಡ್ಯಾಡಿ’ ಎಂಬ ಅಕ್ಷರಗಳಿವೆ. ಇದನ್ನು ನೋಡಿದರೆ ಚಿತ್ರದಲ್ಲಿ ತಂದೆ-ಮಗಳ ಸೆಂಟಿಮೆಂಟ್ ಪ್ರಮುಖ ಹೈಲೈಟ್ ಆಗಿರಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಆರಂಭದಲ್ಲಿ ಸೌಮ್ಯವಾಗಿ ಕಾಣುವ ಚಿರಂಜೀವಿ, ಗ್ಲಿಂಪ್ಸ್‌ನ ಕೊನೆಯಲ್ಲಿ ಗುಂಡಿನ ಮಳೆಯೊಂದಿಗೆ ಶತ್ರುಗಳನ್ನು ಧ್ವಂಸ ಮಾಡುವ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಈ ಚಿತ್ರವನ್ನು 2027ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ, ಜನವರಿ 13ರಂದು ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ.

Chiranjeevi

ಈ ಹಿಂದೆ ಸಂಕ್ರಾಂತಿ ಉಡುಗೊರೆಯಾಗಿ ಬಂದಿದ್ದ ‘ವಾಲ್ತೇರು ವೀರಯ್ಯ’ ₹200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಮೆಗಾಸ್ಟಾರ್ ಅವರ ವಿಂಟೇಜ್ ಮಾಸ್ ಎನರ್ಜಿಯನ್ನು ತೆರೆಯ ಮೇಲೆ ತರುವಲ್ಲಿ ನಿರ್ದೇಶಕ ಬಾಬಿ ಸಂಪೂರ್ಣ ಯಶಸ್ವಿಯಾಗಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದರಿಂದ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿದೆ. ಚಿತ್ರದ ಶೇಕಡಾ 50ಕ್ಕೂ ಹೆಚ್ಚು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸುಮಾರು 40 ದಿನಗಳ ಶೆಡ್ಯೂಲ್‌ ಮುಕ್ತಾಯವಾಗಿದೆ.

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಈ ಪ್ರಾಜೆಕ್ಟ್ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ, ಯಾವುದೇ ರಾಜಿ ಇಲ್ಲದೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹೈ-ವೋಲ್ಟೇಜ್ ಆ್ಯಕ್ಷನ್ ಸಿನಿಮಾದಲ್ಲಿ ಮಲಯಾಳಂ ನಟಿ ಅನಸ್ವರ ರಾಜನ್ ಹಾಗೂ ನಿವೇದಾ ಪೇತುರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್. ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ