ಇಲಿಯಾನಾಳಿಗೆ ತನ್ನ ಮೇಲೆಯೇ ಅತಿ ಪ್ರೀತಿ

ಯಾವ ರಿಲೇಶನ್‌ ಶಿಪ್‌ ಸ್ಟೇಟಸ್‌ ಇನ್ನೂ ರಹಸ್ಯವಾಗಿಯೇ ಉಳಿದಿದೆಯೋ ಅಂಥ ಕೆಲವು ನಟಿಯರ ಪೈಕಿ ಇಲಿಯಾನಾ ಕ್ರೂಸ್ ಸಹ ಒಬ್ಬಳು. ಅವಳ ಲೈಫ್ ನಲ್ಲಿ ಏನಾದರೂ ಸ್ಪೆಷಲ್ ಇದೆಯೋ ಇಲ್ಲವೋ ಸುದ್ದಿ ಸಂಗ್ರಾಹಕರಿಗೆ ಅದು ನಿಗೂಢವಾಗಿಯೇ ಉಳಿದಿದೆ. ಹೀಗಿರುವಾಗ ಫ್ಯಾನ್ಸ್ ಅತಿ ಉತ್ಸುಕರಾಗಿ ಅದನ್ನು ತಿಳಿಯ ಬಯಸಿದರೆ ಅದರಲ್ಲಿ ತಪ್ಪೇನು? ಇತ್ತೀಚೆಗೆ ಒಂದು ಸಮಾರಂಭದಲ್ಲಿ ಫ್ಯಾನ್ಸ್ ಅವಳನ್ನು ನಿನ್ನ ಜೀವನದಲ್ಲಿ ಏನೂ ವಿಶೇಷವಿಲ್ಲವೇ ಎಂದು ನೇರವಾಗಿ ಕೇಳಿದರಂತೆ. ಆಗ ಇಲಿಯಾನಾ ಅವರೆಲ್ಲ ಬೆರಗಾಗುವಂತೆ, ನನಗೆ ಬೇರೆ ಯಾವುದೇ ಸ್ಪೆಷಲ್ ಅಗತ್ಯವೇ ಇಲ್ಲ. ಏಕೆಂದರೆ ನನ್ನ ಮೇಲೆಯೇ ನನಗೆ ಅತಿ ಪ್ರೀತಿ! ನನ್ನೊಂದಿಗೆ ನಾನು ಆನಂದವಾಗಿ ಸಮಯ ಕಳೆಯಬಲ್ಲೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಇದು ಸರಿ ಇರಬಹುದಮ್ಮ, ಆದರೆ ಬಾಲಿವುಡ್‌ನ ಗಾಸಿಪ್‌ ಕಲ್ಚರ್‌ಗೆ ಗೊಬ್ಬರ ಹಾಕಲಿಕ್ಕಾದರೂ ಒಬ್ಬ ಬಾಯ್‌ಫ್ರೆಂಡ್‌ ಬೇಕಲ್ಲವೇ.... ಎನ್ನುತ್ತಾರೆ ಹಿತೈಷಿಗಳು.

ಹೇಗಿದ್ದದ್ದು ಹೇಗಾಯ್ತು ಗೊತ್ತಾ......?

ಲಾಕ್‌ಡೌನ್‌ ತುಸು ಸಡಿಲಗೊಂಡದ್ದೇ ದೇಶಾದ್ಯಂತ ತಾರೆಯರು ಬಂಧನದಿಂದ ಬಿಡುಗಡೆ ಆದಂತಾಗಿದೆ. ಕೆಲವರು ಮೋಜುಮಸ್ತಿಗಿಳಿದರೆ, ಹಲವರು ಸೀರಿಯಸ್‌ ಆಗಿ ಕೆಲಸಕ್ಕಿಳಿದಿದ್ದಾರೆ. ಹೀಗೆ ಸ್ಟಾರ್ಸ್‌ ಮನೆಯಿಂದ ಹೊರಬಿದ್ದ ಮೇಲೆ ಸುದ್ದಿ ಸಂಗ್ರಾಹಕರು ಅವರ ಬೆನ್ನು ಬೀಳದೆ ಇರುತ್ತಾರೆಯೇ? ಏಕೆಂದರೆ ಇಷ್ಟು ದಿನ ಇವರ ದಂಧೆ ಬಿಲ್ ಕುಲ್‌ ಬಂದ್‌ ಆಗಿತ್ತು. ಹಿಂದೆಲ್ಲ ತಾರೆಯರು ಯಾವ ಸುದ್ದಿಗಾರರನ್ನು ನೋಡಿ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರೋ ಇಂದು ಅವರೇ ಇವರುಗಳ ಕ್ಯಾಮೆರಾಗೆ ಕೈ ಮುಗಿದು ಪೋಸ್‌ ನೀಡುತ್ತಿದ್ದಾರೆ. ಇವರುಗಳು ತಮ್ಮ ಬಗ್ಗೆ ಹೀಗೆಲ್ಲ ಗಾಸಿಪ್‌ ಹರಡದಿದ್ದರೆ, ತಾವು ಜನರ ಮನಸ್ಸಲ್ಲಿ ಉಳಿಯುವುದಾದರೂ ಹೇಗೆ ಎಂಬ ಆತಂಕ ಕಾಣಿಸಿದೆ.

ಸಕ್ಸೆಸ್‌ ಸ್ಕಿನ್‌ಟೋನ್‌ ಬಣ್ಣ ನೋಡೋಲ್ಲ

ಇತ್ತೀಚೆಗೆ ಒಂದು ಪ್ರಸಿದ್ಧ ಬ್ರಾಂಡ್‌ ತನ್ನ ಕ್ರೀಂ ಹೆಸರಿನ ಹಿಂದೆ ಫೇರ್‌ ಎಂಬುದನ್ನು ರದ್ದುಪಡಿಸಿತು. ಆ ಬ್ರಾಂಡ್‌ನ ಈ ನಿರ್ಧಾರವನ್ನು ಹಲವು ತಾರೆಯರು ಸಮರ್ಥಿಸಿದ್ದಾರೆ. ಆಗ ಕಿಂಗ್‌ ಖಾನ್‌ನ ಮಗಳು ಸುಹಾನಾ ಆ ಬ್ರಾಂಡ್‌ನ ಈ ನಿರ್ಧಾರದಿಂದ ಹೆಚ್ಚು ಪ್ರಭಾವಿತಳಾದಳು. ಅವಳು ಇದಕ್ಕೆ ಪ್ರತಿಕ್ರಿಯಿಸುತ್ತಾ, ಯಾರು ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೋ ಅವರಿಗೆ ಬಣ್ಣ ಎಂದೂ ಅಡ್ಡಿಯಾಗದು. ಫೇರ್‌ ಅಲ್ಲದ ಎಷ್ಟೋ ಮಂದಿ ಯಶಸ್ವಿಗಳಾಗಿರುವುದೇ ಇದಕ್ಕೆ ಸಾಕ್ಷಿ. ಸುಹಾನಾ ಸಹ ಹಾಲಿವುಡ್‌ಗೆ ಜಿಗಿಯಲು ಆತುರದಿಂದ್ದಾಳೆ, ಹೀಗಾಗಿ ಬೇಕಾದ ಎಲ್ಲಾ ತಯಾರಿ ಬಿರುಸಿನಿಂದ ನಡೆಸುತ್ತಿದ್ದಾಳೆ.

ಪರದೆ ಹಿಂದೆ ಆದರೂ ಸರಿ

ಅತ್ತ ಹಿರಿಯ ನಟ ಧರ್ಮೇಂದ್ರರ ಮಗ ಸನ್ನಿ ಡಿಯೋಲ್‌ ಪರದೆ ಹಿಂದಿನಿಂದ ಬಂದು ಬೆಳ್ಳಿ ತೆರೆಯಲ್ಲಿ ಮತ್ತೆ ಮಿಂಚಲು ಯತ್ನಿಸಿದರೆ, ಇತ್ತ ವಿವೇಕ್‌ ಓಬಿರಾಯ್‌ ಪರದೆ ಹಿಂದೆ ಸರಿಯುವ ಯತ್ನ ನಡೆಸಿದ್ದಾನೆ. ಹೌದು, ವಿವೇಕ್‌ ಈಗ ನಿರ್ಮಾಪಕನಾಗಲು ಹೊರಟಿದ್ದಾನೆ. ಬೇರೆ ಯಾವ ನಿರ್ಮಾಪಕ ನಿರ್ದೇಶಕರೂ ಈತನಿಗೆ ಮಣೆ ಹಾಕದಿದ್ದಾಗ ಇವನು ತಾನೇ ಏನು ಮಾಡಿಯಾನು? ಆದರೆ ಯಾರು ಯಾವ ಕೆಲಸ ಮಾಡಬೇಕೋ ಅವರೇ ಮಾಡಿದರೆ ಸರಿ ಅಲ್ಲವೇ? ಎಷ್ಟೋ ನಟನಟಿಯರು ನಿರ್ಮಾಣಕ್ಕೆ ಕೈ ಹಾಕಿ ದಿವಾಳಿಗಳಾದದ್ದು ವಿವೇಕನ ವಿವೇಕಕ್ಕೆ ಏಕೆ ಎಟುಕುತ್ತಿಲ್ಲ......?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ