ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದಲೇ ಅಳಿಸಿ ಹಾಕಬೇಕು ಎಂದು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಪಾಕ್ ವಿರುದ್ಧ ಕಿಡಿಕಾರಿದ್ದಾರೆ.
ನಟಿ, ನಿರ್ದೇಶಕಿ, ನಿರ್ಮಾಪಕಿ ಕಂಗನಾ ರಣಾವತ್ ಈಗ ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ. ಬಿಜೆಪಿಯಿಂದ ಸಂಸದೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿರೋ ಕಂಗನಾ ರಣಾವತ್ ಅಪಾರ ದೇಶಭಕ್ತೆಯೂ ಹೌದು. ಹಿಂದುತ್ವ ಹಾಗೂ ದೇಶದ ಪರ ಸದಾ ಧ್ವನಿ ಎತ್ತುವಂತಹ ಬಹುಮುಖ ಪ್ರತಿಭೆ.
ಸದ್ಯ ಸಿನಿಮಾ ಹಾಗೂ ರಾಜಕಾರಣ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ಕಂಗನಾ, ಆಪರೇಷನ್ ಸಿಂದೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಗ್ರರ ಪಹಲ್ಗಾಮ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದರು. ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆಯ ನಡೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಂಗನಾ ಸಹ ದಿನಕ್ಕೊಂದು ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಪಾಕಿಸ್ತಾನವನ್ನು ಭಯೋತ್ಪಾದಕರ ನಾಡು ಎಂದು ಕರೆದಿರುವರ ಕಂಗನಾ, ಕ್ವೀನ್, ಪಾಕ್ ಅನ್ನು ವಿಶ್ವದ ಭೂಪಟದಿಂದಲೇ ಅಳಿಸಿ ಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಪಾಕಿಸ್ತಾನ ರಕ್ತಸಿಕ್ತ ಜಿರಳೆಗಳಿಂದ ಕೂಡಿದೆ. ಭಯೋತ್ಪಾದಕರಿಂದ ಕೂಡಿರುವ ಭಯಾನಕ, ಅಸಹ್ಯ ರಾಷ್ಟ್ರ. ವಿಶ್ವ ಭೂಪಟದಿಂದಲೇ ಅದನ್ನು ಅಳಿಸಿಹಾಕಬೇಕು’ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ನೈಜ ಘಟನೆ ಆಧಾರಿತ ಸಿನಿಮಾಗಳು, ಐತಿಹಾಸಿಕ ಚಿತ್ರಗಳು ಹಾಗೂ ಬಯೋಪಿಕ್‌ಗಳನ್ನ ಮಾಡುವುದರಲ್ಲಿ ಕಂಗನಾ ಸದಾ ಮುಂದು. ಅವರ ಸಿನಿಮಾಗಳು ಹಾಗೂ ಪಾತ್ರಗಳಲ್ಲಿ ಒಂದು ಕಿಚ್ಚು ಇರುತ್ತದೆ. ಅಂತೆಯೇ ಒಂದೊಂದು ಸ್ಟೇಟ್‌ಮೆಂಟ್ ಕೂಡ ಸಂಚಲನ ಮೂಡಿಸುತ್ತವೆ. ಅದರಲ್ಲೂ ಎಂ.ಪಿ ಆದ ಬಳಿಕ ಈಕೆಯ ಮಾತುಗಳಿಗೂ ಒಂದು ತೂಕ ಬಂದಿದೆ. ಹಾಗಾಗಿ ಈಕೆ ಸದ್ಯ ನೀಡುತ್ತಿರುವ ಪಾಕ್ ವಿರುದ್ಧದ ಹೇಳಿಕೆಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಕಂಗನಾ ಮಾತುಗಳಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ಕೂಡ ವ್ಯಕ್ತವಾಗುತ್ತಿವೆ. ನಿಜಕ್ಕೂ ಪಾಕಿಸ್ತಾನ ರಕ್ತಬೀಜಾಸುರರಂತಹ ಜಿರಳೆಗಳಿಂದ ಕೂಡಿರೋ ಪರಮ ಅಸಹ್ಯ ರಾಷ್ಟ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನ ವರ್ಲ್ಡ್ ಮ್ಯಾಪ್‌ನಿಂದ ಅಳಿಸಿ ಹಾಕಬೇಕು ಅನ್ನೋ ಕಂಗನಾ ಮಾತಿಗೆ ಸಾಕಷ್ಟು ಮಂದಿ ಸಾಥ್ ನೀಡುತ್ತಿದ್ದಾರೆ.
ಇಂದಿರಾ ಗಾಂಧಿ ಕುರಿತ ಎಮರ್ಜೆನ್ಸಿ ಸಿನಿಮಾದ ಬಳಿಕ ಹಿಂದಿ ಹಾಗೂ ತಮಿಳು ಎರಡೂ ಭಾಷೆಯಲ್ಲೂ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಂಗನಾ, ರಾಜಕಾರಣಿ ಆದ ಬಳಿಕವೂ ಬಣ್ಣದಲೋಕಕ್ಕೂ ಸಾಕಷ್ಟು ಸಮಯ ಕೊಡುತ್ತಿದ್ದಾರೆ.