ಜಾಗೀರ್ದಾರ್*

ಸಲಗ, ಭೀಮ ಚಿತ್ರದ ಬಳಿಕ ಸಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶನದ ಮೂರನೇ ಚಿತ್ರ "ಸಿಟಿ ಲೈಟ್ಸ್" ಸೆಪ್ಟೆಂಬರ್ 18 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ 4ನೇ ಹಾಡು ಬಿಡುಗಡೆಯಾಗಿದ್ದು ಪ್ರೀತಿಯ ಕುರಿತ ಹಾಡು ಗಮನ ಸೆಳೆದಿದೆ. ಈ ಹಾಡಿನಲ್ಲಿ ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ಜೋಡಿಗಳ ಮೇಲೆ ಚಿತ್ರವಾಗಿದೆ..

‘ಅವರಿವರ ಮಾತು ಕೇಳಿ ಪ್ರೀತಿ ಕಳೆದುಕೊಳ್ಳಬೇಡಿ.. ಪ್ರೀತಿ ಅಪರೂಪ ಅದನ್ನು ಕಳೆದುಕೊಳ್ಳಬೇಡಿ....ಇವನ ಕಂಡ್ರೆ ಅವಳು ಪಿಧಾ.. ಇವಳಾ ಕಂಡ್ರೆ ಅವನು ಫಿದಾ..’ ಎನ್ನುವ ಹಾಡು ಇದಾಗಿದ್ದು ಈ ಹಾಡನ್ನು ಯುವ ಕಲಾವಿದರಾದ ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ, ಸುಧಾಕರ್ ಗೌಡ ಬಿಡುಗಡೆ ಮಾಡಿ ಶುಭ ಹಾರೈಸಿದರು..

ವಿಜಯ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ "ಸಿಟಿ ಲೈಟ್ಸ್ " ಚಿತ್ರದ ಗೀತೆಗೆ ಚರಣ್ ರಾಜ್ ಸಂಗೀತ ಸಂಯೋಜನೆಯ ಮಾಡಿದ್ದು ನಾಗಾರ್ಜುನ್ ಶರ್ಮಾ ಸಾಹಿತ್ಯವಿದೆ, ಈ ಹಾಡನ್ನು ಅಂಥೋಣಿ ದಾಸ್ ಹಾಡಿದ್ದಾರೆ..

ಯುವ ನಟ ಸಿದ್ದು ಮೂಲಿಮನಿ ಮಾತನಾಡಿ ಹಾಡು ಮುದ್ದಾಗಿ ಮೂಡಿ ಬಂದಿದೆ. ಹಾಡು ನೋಡುವಾಗ ಪತ್ನಿ ನೆನಪಾದ್ರು.. ‌ಕಂದಮ್ಮ ಹಾಡು ಹೀಗಾಗಲೇ ಗಮನ ಸೆಳೆದಿದೆ. ನಮ್ಮ ಕಾರ್ಯಕ್ರಮದಲ್ಲಿ ನಮ್ಮನ್ನು ಗುರುತಿಸುವುದಿಲ್ಲ. ಅದರಲ್ಲಿ ದೊಡ್ಡ ವೇದಿಕೆಯಲ್ಲಿ ಅವಕಾಶಕ್ಕೆ ನೀಡಿದಕ್ಕೆ ಧನ್ಯವಾದ ಎಂದರು..

city1

ಪಾಯಲ್ ಚೆಂಗಪ್ಪ ಮಾತನಾಡಿ ಕಂದಮ್ಮ ಹಾಡಿನ ರೀತಿಯಲ್ಲಿ ಈ ಹಾಡನ್ನು ಜನರು ಮೆಚ್ಚುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಧಾಕರ್ ಗೌಡ ಮಾತನಾಡಿ ಪ್ರತಿಭೆ ಇದ್ದರೆ ಬಣ್ಣ ಮುಖ್ಯವಾಗಲ್ಲ. ಮನೆಯಲ್ಲಿ ಅನುಮತಿ ಪಡೆಯಬೇಕಾದರೆ ವಿಜಯ್ ಸರ್ ಅವರ ಹೆಸರು ಹೇಳಬೇಕು. ಯುವ ಜನರಿಗೆ ದೊಡ್ಡ ಸ್ಪೂರ್ತಿ . ನಾಯಕಿಯರನ್ನು ಹುಡುಕುವುದೇ ಕಷ್ಟ, ಕಥೆಯನ್ನೇ ಕೇಳವುದಿಲ್ಲ ಎಂದರು.

ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ ‘ಯುವ ಕಲಾವಿದರು ಚಿತ್ರರಂಗವನ್ನು ಮುನ್ನೆಡೆಸುವರು. ನಿಮ್ಮ ಜೊತೆ ನಾವು ಬರ್ತಾ ಇದ್ದೇವೆ. ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗಿ... ಹಾಡಿನಲ್ಲಿ ಬದುಕು ಕಟ್ಟಿಕೊಂಡ ಜೋಡಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅವರು ನಮಗೆ ಸ್ಪೂರ್ತಿ . ತಾಯಿ- ತಂದೆ ಕಣ್ಣಿಗೆ ಕಾಣುವ ದೇವರು. ಹೀಗಾಗಿಯೇ ಅಪ್ಪ- ಅಮ್ಮನ ಪೋಟೋ ಕೂಡ ಹಾಕಿದ್ದೇನೆ’ ಎಂದರು.

ಸಿನಿಮಾ ಮತ್ತು ಸಂಗೀತ ಎಂದೂ ಮೋಸ ಮಾಡಲ್ಲ. ಹೀಗಾಗಿ ಕಷ್ಟಪಟ್ಟು ಸಿನಿಮಾ ಮಾಡ್ತಾ ಇದ್ದೇ‌ನೆ. ಹಾಡಿನಲ್ಲಿ ಬಳಸಿಕೊಂಡ ಜೋಡಿಗಳು ಬದುಕು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಜೋಡಿಗಳನ್ನು ಬಳಸಿಕೊಳ್ಳಲಾಗಿದೆ. ಅವರ ಜೀವನದ ಜೋಡಿಗಳನ್ನು ಹುಡುಕಿ ಹುಡುಕಿ ಪೋಟೋ ತೆಗೆಸಿಕೊಳ್ಳಲಾಗಿದೆ .‌ಈ ಹಾಡು ಸಿನಿಮಾದಲ್ಲಿ ಇರುವುದಿಲ್ಲ. ಯೂ ಟೂಬ್ ನಲ್ಲಿ ಲಭ್ಯವಿರಲಿದೆ ಎಂದರು.

‘ಸಲಗ ,ಭೀಮ ಚಿತ್ರದ ಮಾದರಿಯಲ್ಲಿ ಇಡೀ ತಂಡ ಕಷ್ಟಪಟ್ಟಿದ್ದೇವೆ. ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಗೌರವ ತರುವ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ