– ರಾಘವೇಂದ್ರ ಅಡಿಗ ಎಚ್ಚೆನ್.
ಪ್ರೀತಿಯಿಂದ ತಾಯಿ ಹೊಡೆಯೋ ಏಟು ಬೇರೆ. ಪಕ್ಕದ ಮನೆಯವ್ರು ಹೊಡೆಯೋ ಏಟೇ ಬೇರೆ. ನೀವು ಕಪಾಳಕ್ಕೆ ಹೊಡೆದ್ರೆ ಹೊಡೆಸಿಕೊಳ್ಳಲ್ಲ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ‘ಕ್ಲಾಸ್ ಫ್ಯಾನ್ಸ್’ ಕಂಪ್ಲೇಂಟ್ಗೆ ಕೌಂಟರ್ ನೀಡಿರುವ ಸುದೀಪ್, ಹೇಳಿದವ್ರಿಗೆ ಗೊತ್ತು ಆರಂಭ ಆಗಿದ್ದೆಲ್ಲಿ ಎಂದು. ಯಾರೋ ಮಾಡಿದ ತಪ್ಪಿಗೆ ನಮ್ಮನ್ನ ಹೊಣೆಗಾರಿಕೆ ಮಾಡೋದು ಸರಿಯಲ್ಲ ಎಂದಿದ್ದಾರೆ.
ನಾನು ಸಿನಿಮಾಗೆ ಬಂದಿದ್ದು ಗಲಾಟೆ ಮಾಡಿಕೊಳ್ಳೋದಕ್ಕೆ ಅಲ್ಲ. ಮೇಕಪ್ ಹಾಕಿಕೊಂಡು ಜನರ ನಗಿಸೋಕೆ, ರಂಜಿಸೋದಕ್ಕೆ. ನಮಗೆ ಯಾರಿಗೂ ಯುದ್ಧ, ಪದ್ದ ಅಲ್ಲ ಬರೋದಿಲ್ಲ. ಏನೋ ತಪ್ಪುಗಳು ಗೊತ್ತಾದಾಗ ಮುಂದೆ ಬಂದು ಮಾಡಬೇಡಿ ಎಂದು ಹೇಳಿದ್ದಿದೆ. ಅದರಲ್ಲಿ ತಪ್ಪೇನಿದೆ? ಗೌರವವನ್ನು ದುಡ್ಡು ಕೊಟ್ಟು ತೆಗೆದುಕೊಳ್ಳಲು ಆಗೋದಿಲ್ಲ. ನಾನು ರೀತಿ ನಡೆದುಕೊಂಡಿರೋದಕ್ಕೆ ಕರ್ನಾಟಕದಲ್ಲಿ ಗೌರವ ಸಿಗ್ತಿರೋದು. ನಂದನ್ನು ನಾನು ಮಾತನ್ನಾಡಬಲ್ಲೆ. ಮಿಕ್ಕದನ್ನ, ಯಾರು ಹಾಕಿದ್ದಾರೆ ಅದನ್ನು ಅವರ ಬಳಿಯೇ ಕೇಳಬೇಕು.
ಸರಿಪಡಿಸಿಕೊಳ್ಳೋದು, ಬಿಡೋದು ಅವರ ಇಷ್ಟ. ನಾನು ಹೇಳೋದು ಏನೆಂದರೆ, ನನ್ನ ಜೊತೆಗೆ ಇರೋ ಹುಡುಗರು ತಪ್ಪು ಮಾಡಿದ್ರೆ ಬುದ್ಧಿ ಹೇಳಬಹುದು. ಅವ್ರು ಯಾರಿಗೆ ಹೇಳಿದ್ದಾರೆ ಗೊತ್ತಿಲ್ಲ. ಅವ್ರು ಯಾರಿಗೆ ಹೇಳಿದ್ದಾರೆ ಎಂದು ಹೆಸರು ಹೇಳಿದ್ರೆ ಚಂದ ಎಂದಿದ್ದಾರೆ.

ವೇಸ್ಟ್ ನನ್ಮಕ್ಳ ಬಗ್ಗೆ ಮಾತಾಡಿ ಟೈಮ್ ವೇಸ್ಟ್ ಮಾಡಲ್ಲ
ಕಿತ್ತೊಗಿರೊ ಕಾಮೆಂಟ್ಸ್ ಬಗ್ಗೆ ನಾನು ತಲೆ ಕೆಡಿಸ್ಕೊಳೋದಿಲ್ಲ. ಅದಕ್ಕೆ ಪ್ರತಿಕ್ರಿಯೆ ನೀಡಿದ್ರೆ, ನಾವು ಚೀಪ್ ಆಗ್ತೀವಿ. ಸೆಲೆಬ್ರೇಶನ್ ಬಗ್ಗೆ ಮಾತಾಡೋಣ, ಕರುನಾಡಿನಾದ್ಯಂತ ತಾಯಂದಿರು ಮೆಚ್ಚುಗೆ ಬಗ್ಗೆ ಮಾತಾಡೋಣ. ನೆಗೆಟಿವ್, ಕೆಟ್ಟದಾಗಿ ಟ್ರೋಲ್ ಮಾಡೋರ ಬಗ್ಗೆ ನಾನು ಮಾತಾಡಿ ನನ್ನ ಟೈಮ್ ಯಾಕೆ ವೇಸ್ಟ್ ಮಾಡ್ಲಿ ವೇಸ್ಟ್ ನನ್ ಮಕ್ಳು ನನ್ನ ಮಗಳು ನಾನು ಫೇಸ್ ಮಾಡಿರೋದರ ಹತ್ತರಷ್ಟು ಫೇಸ್ ಮಾಡ್ತಾಳೆ, ನನಗಿಂತ ದೊಡ್ಡದಾಗಿ ಬೆಳಿತಾಳೆ ಅನ್ನೋ ಭರವಸೆ ನನಗಿದೆ. ಕನ್ನಡ ಇಂಡಸ್ಟ್ರಿಗೆ ಅವಳನ್ನ ಸ್ವಾಗತಿಸಿದ್ದಾರೆ. ಅವಳು ಹಾಡಿರುವ ಹಾಡು ಮೆಚ್ಚಿಕೊಂಡಿದ್ದಾರೆ ಅದಕ್ಕೆ ನಾನು ಎಲ್ಲರಿಗೂ ಧನ್ಯವಾದ ಹೇಳ್ತಿನಿ ಎಂದಿದ್ದಾರೆ ಕಿಚ್ಚ ಸುದೀಪ್.
ಮಾರ್ಕ್ ಗೆ ಪೈರಸಿ ಕಾಟ
ಮಾರ್ಕ್ ಸಿನಿಮಾಗೆ ಪೈರಸಿ ಮಹಾಮಾರಿ ಕಂಟಕವಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ತೆರೆಕಂಡು ಎರಡೇ ದಿನಕ್ಕೆ ಬರೋಬ್ಬರಿ 9 ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನ ತೆಗೆಸಿದ್ದಾರಂತೆ. ಹೀಗಾದ್ರೆ ಕಷ್ಟಪಟ್ಟು, ಕೋಟಿ ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡಿದವ್ರ ಗತಿ ಏನು ಅನ್ನೋ ಆತಂಕ ಕಾಡುತ್ತಿದೆ. ಕಳೆದ ಬಾರಿ ಮ್ಯಾಕ್ಸ್ ಸಿನಿಮಾಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಕೆಲವರನ್ನು ಪೊಲೀಸರು ಹಿಡಿದಿದ್ದರು. ಆಗ ಸುಮ್ಮನೆ ಬಿಟ್ಟು ಕಳುಹಿಸಿದ್ದೆವು. ಈ ಬಾರಿ ಮುಲಾಜೇ ಇಲ್ಲ ಸಿಕ್ಕರೇ ಕಠಿಣ ಕ್ರಮ ಜರುಗಿಸ್ತೀವಿ ಎಂದಿದ್ದಾರೆ ಕಿಚ್ಚ ಸುದೀಪ್. 45 ಸಿನಿಮಾ ನಿರ್ಮಾಪಕರ ಮಾತು ಕೇಳಿ ಬೇಜಾರಾಯ್ತು, ಶಿವಣ್ಣ ಆರೋಗ್ಯ ಸರಿ ಇಲ್ಲದಾಗಲೂ ಬಂದು ಸಿನಿಮಾ ಮಾಡಿದ್ದಾರೆ. ಮೂರು ವರ್ಷ ಶ್ರಮ ಹಾಕಿ ಮಾಡಿದ ಸಿನಿಮಾಗೆ ಹೀಗಾದ್ರೆ ಬೇಜಾರಾಗುತ್ತೆ ಎಂದಿದ್ದಾರೆ ಸುದೀಪ್.

‘ಅವರಿಬ್ಬರ ನಡುವೆ ವೈಮನಸ್ಸು ಇಲ್ಲ’ – ನಟಿ ತಾರಾ
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ಗೆ ಸಂಬಂಧಿಸಿದಂತೆ ಹಿರಿಯ ನಟಿ ತಾರಾ ಮಾತನಾಡಿ, ನಮಗೆಲ್ಲರಿಗೋ ಒಂದೇ ಸ್ಟಾರ್.. ಅದು ಕನ್ನಡ ಸಿನಿಮಾ.. ಅದು ಮಾತ್ರ ಪರ್ಮನೆಂಟ್ ಸ್ಟಾರ್.. ಅವರಿಬ್ಬರು ಒಳ್ಳೆಯವರು. ನನಗೆ ಗೊತ್ತಿರುವ ರೀತಿ ಅವರ ನಡುವೆ ಆ ರೀತಿಯಾಗಿ ಏನು ಇಲ್ಲ. ಇಬ್ಬರು ಒಬ್ಬರನೊಬ್ಬರು ಗೌರವಿಸಿಕೊಳ್ತಾರೆ. ಇಬ್ಬರಲ್ಲೂ ಆ ರೀತಿಯ ವೈಮನಸ್ಸು ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ನನಗೆ ಇದರಲೆಲ್ಲ ನಂಬಿಕೆ ಇಲ್ಲ… ನಮಗಿರುವುದು ಒಳ್ಳೆಯ ಸಿನಿಮಾ ಬರಬೇಕು.. ಒಳ್ಳೆಯ ಸಿನಿಮಾನ ಪ್ರೋತ್ಸಾಹ ಮಾಡೋಣ ಎಂದಿದ್ದಾರೆ.





