Sj*

ದೈಜಿ - ಇದು ರಮೇಶ್ ಅರವಿಂದ್ ಸರ್ ರವರ 106ನೇ ಚಿತ್ರ. ಇದರಲ್ಲಿ ನಾಯಕಿ ನಟಿಯಾಗಿ ರಾಧಿಕಾ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಅನೇಕ ವಿದೇಶಿ ಕಲಾವಿದರುಗಳು ಇದರಲ್ಲಿ ನಟಿಸಿದ್ದಾರೆ. ದಿಗಂತ್ ರವರು ಕೂಡ ಒಂದು ಮಹತ್ವವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿರುವವರು ಶಿವಾಜಿ ಸೂರತ್ಕಲ್ 1 ಹಾಗೂ 2 ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರು ಹಾಗೂ ಇದರ ನಿರ್ಮಾಪಕರು ರವಿ ಕಶ್ಯಪ್ ರವರು. ರವಿ ಕಶ್ಯಪ್ ರವರ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಚಿತ್ರಕಥೆ ಬರೆದು ಆಕಾಶ್ ಶ್ರೀವತ್ಸ ರವರು ಇದನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವು ಸಂಪೂರ್ಣ ವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದ ವಿ.

daiji

ಎಫ್.ಎಕ್ಸ್. , ರೀ ರೆಕಾರ್ಡಿಂಗ್, ಕೆಲಸಗಳು ನಡೆಯುತ್ತಿದ್ದು ಇನ್ನೇನು ಕೆಲವೇ ತಿಂಗಳುಗಳಲ್ಲಿ ತೆರೆಗೆ ಬರಲಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಮುಗಿಯುತ್ತಿದ್ದಂತೆ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಬಹಿರಂಗ ಪಡಿಸಲಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ ವನ್ನು ಶ್ರೀಶ ಕೂದುವಳ್ಳಿ ಯವರು ಮಾಡಿದ್ದು, ಹಿನ್ನೆಲೆ ಸಂಗೀತ vannu ಜೂಡಾ ಸ್ಯಾಂಡಿ ರವರು ಮಾಡುತ್ತಿದ್ದಾರೆ. ಈ ಚಿತ್ರದ ವಿಶೇಷತೆ ಎಂದರೆ ದೇಶ ವಿದೇಶದ ಅನೇಕ ಜಾಗದಲ್ಲಿ ಚಿತ್ರೀಕರಣವಾಗಿದೆ - ಇಂಗ್ಲೆಂಡ್ ನ ಬಾರ್ನ್ಮೌತ್, ಸ್ಕಾಟ್ ಲ್ಯಾಂಡ್ ನ ಎಡಿನ್ಬರೋ ನಲ್ಲಿ, ವಾರಣಾಸಿ, ಸಕಲೇಶಪುರ, ಮಡಿಕೇರಿ, ಬೆಂಗಳೂರಿನಲ್ಲಿ ಹೀಗೆ ಸಾಕಷ್ಟು ಬೇರೆ ಬೇರೆ ತಾಣದಲ್ಲಿ ಚಿತ್ರಿತ ವಾಗಿದೆ. ಇದೊಂದು ವಿಭಿನ್ನ ಶೈಲಿಯ ಚಿತ್ರವಾಗಿ ಮೂಡಿಬಂದಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ