ದೀಪಾ ಅಯ್ಯರ್‌ ಟಿ.ವಿ. ಕಲಾವಿದೆ. ನಾಗತಿಹಳ್ಳಿಯವರ `ಅಪಾರ್ಟ್‌ಮೆಂಟ್‌,' ಟಿ.ಎನ್‌. ಸೀತಾರಾಂ ಅವರ `ಮುಕ್ತ ಮುಕ್ತ' ಅವರಿಗೆ ಹೆಸರು ತಂದುಕೊಟ್ಟ ಧಾರಾವಾಹಿಗಳು. ಪ್ರಸ್ತುತ `ಮಂದಾರ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರ ಮಗಳು 14 ವರ್ಷದ ಸಾನಿಯಾ ಬಾಲಕಲಾವಿದೆ. ಎಲ್.ಕೆ.ಜಿ.ಯಲ್ಲಿರುವಾಗಲೇ `ಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದಳು. ಆಕೆ ಅಭಿನಯಿಸಿದ ಶೇಷಾದ್ರಿ ನಿರ್ದೇಶನದ `ವಿಮುಕ್ತಿ' ಚಿತ್ರಕ್ಕೆ ಪ್ರಶಸ್ತಿ ಕೂಡ ಬಂದಿತು. `ನಮ್ಮಮ್ಮ ಶಾರದೆ,' `ಪುಟ್ಟ ಗೌರಿ,' `ಡ್ಯಾನ್ಸಿಂಗ್‌ ಸ್ಟಾರ್‌'ನಿಂದ ಆಕೆಗೆ ಒಳ್ಳೆಯ ಹೆಸರು ಬಂದಿತು. ಮಗಳ ಜೊತೆಗಿನ ಒಡನಾಟದ ಬಗ್ಗೆ ದೀಪಾ ಅಯ್ಯರ್‌ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನಿಮ್ಮ ಮತ್ತು ಮಗಳ ಸಂಬಂಧ ಹೇಗಿದೆ?

ನಾವಿಬ್ಬರೂ ತಾಯಿಮಗಳು ಅನ್ನುವುದಕ್ಕಿಂತ ಸ್ನೇಹಿತೆಯರ ಹಾಗೆ ಅನ್ಯೋನ್ಯವಾಗಿದ್ದೇವೆ. ಅವಳ ಅಭ್ಯಾಸ ಅಥವಾ ಅಭಿನಯದ ವಿಷಯವೇ ಆಗಿರಬಹುದು, ನಾನು ಅವಳ ಮೇಲೆ ಏನನ್ನೂ ಹೇರಲು ಹೋಗುವುದಿಲ್ಲ. 8ನೇ ತರಗತಿಗೆ ಬರುತ್ತಿದ್ದಂತೆ ಯಾವುದೇ ಧಾರಾವಾಹಿಯಲ್ಲೂ ನಟಿಸಬಾರದೆಂದು ನಾವೆಲ್ಲರೂ ನಿರ್ಧರಿಸಿದ್ದೆ. ಅದೇ ಸಮಯಕ್ಕೆ ಅವಳಿಗೆ `ಪುಟ್ಟ ಗೌರಿ'ಯಲ್ಲಿ ಅಭಿನಯಿಸಲು ಕರೆಬಂದಿತು. ನಾವು ಬೇಡ ಎಂದು ಹೇಳಿದರೂ ನಿರ್ಮಾಪಕರು ಅವಳೇ ಬೇಕು ಎಂದು ಪಟ್ಟುಹಿಡಿದರು. ಹೀಗಾಗಿ ಅನಿವಾರ್ಯವಾಗಿ ಒಪ್ಪೀಬೇಕಾಯ್ತು. ಹೀಗಿದ್ದಾಗ್ಯೂ ಅವಳು 7ನೇ ತರಗತಿಯಲ್ಲಿ ಶೇ.75 ರಷ್ಟು ಅಂಕ ಪಡೆದು ಉತ್ತೀರ್ಣಳಾದಳು. ಅವಳ ವಿದ್ಯಾರ್ಜನೆಗೆ ನಾನು ಸಾಧ್ಯವಿದ್ದಷ್ಟು ಮಟ್ಟಿಗೆ ಸಮಯ ಕೊಡಲು ಪ್ರಯತ್ನಿಸುತ್ತೇನೆ.

ಮಗಳ ಜೊತೆಗಿನ ಯಾವುದಾದರೂ ಸ್ವಾರಸ್ಯಕರ ಘಟನೆಯ ಬಗ್ಗೆ ಹೇಳ್ತೀರಾ?

ನನಗೆ ಮೊದಲಿನಿಂದಲೂ ಟ್ರೆಕ್ಕಿಂಗ್‌ ಮಾಡುವ ಹವ್ಯಾಸ. ಮಂಜುನಾಥ್‌ ಭಟ್‌ ವಿಶ್ವನಾಥ್‌ ಅವರ ತಂಡದಲ್ಲಿ ನಾನು, ನನ್ನ ಪತಿ, ಮಗಳು ಸೇರಿಕೊಂಡು ಆಗಾಗ ಪಶ್ಚಿಮ ಘಟ್ಟಕ್ಕೆ ಟ್ರೆಕ್ಕಿಂಗ್‌ ಹೋಗುತ್ತಿರುತ್ತೇವೆ. ಅದೊಂದು ಸಲ ಕುದುರೆಮುಖದ ಸಮೀಪ ಟ್ರೆಕ್ಕಿಂಗ್‌ ಹೋಗಿದ್ದೆ. 15 ಕಿ.ಮೀ. ನಡೆದು ಇನ್ನೇನು ವಾಪಸ್‌ ಬರಬೇಕು ಎನ್ನುವಷ್ಟರಲ್ಲಿ ಜೋರು ಮಳೆ ಶುರುವಾಯಿತು. ಎಲ್ಲೆಲ್ಲೂ 2 ಅಡಿಗಳಷ್ಟು ನೀರು ನಿಂತು ನಮ್ಮ ದಾರಿಗೆ ಬ್ರೇಕ್‌ ಹಾಕಿತು. ಸಂಜೆ ಆಗುತ್ತಲಿತ್ತು. ಜಿಗಣೆಗಳು, ಕಾಡು ಪ್ರಾಣಿಗಳ ಕಾಟ. ಎಲ್ಲಿಯೂ ಕುಳಿತುಕೊಳ್ಳುವ ಹಾಗಿರಲಿಲ್ಲ. ಆಗ ಸಾನಿಯಾ ತನ್ನ ಪಾಡಿಗೆ ತಾನು ಆಟ ಆಡುತ್ತಾ, ``ಅಮ್ಮ, ಎಂತಹ ರೋಮಾಂಚನ! ನಿನಗೂ ಇದು ಇಷ್ಟ ಅಲ್ವ?'' ಎಂದು ಹೇಳಿದಳು. ಅವಳ ಆ ಮಾತು ಕೇಳಿ ನನ್ನ ಭಯ ಹೊರಟುಹೋಯಿತು. ಯೋಗಾಯೋಗ ಎಂಬಂತೆ ಮಳೆ ನಿಂತು ನೀರೆಲ್ಲ ಇಳಿದು ಹೋಗಿದ್ದರಿಂದ ನಾವು ಪುನಃ ವಾಪಸ್‌ ಬಂದೆ. ಅವಳು ಆಡಿದ ಆ ಮಾತು ನನಗೆ ಯಾವಾಗಲೂ ನೆನಪಿಗೆ ಬರ್ತಾ ಇರುತ್ತೆ.

- ಸರಸ್ವತಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ